ಡಬ್ಲ್ಯುಟಿಸಿ 2025 ಫೈನಲ್‌ಗೆ ಅರ್ಹತೆ ಪಡೆಯಲು ಈ ನಾಲ್ಕು ತಂಡಗಳು ಏನು ಮಾಡಬೇಕು, ಎಷ್ಟು ಪಂದ್ಯ ಗೆಲ್ಲಬೇಕು?
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಹಾಗಾದರೆ ಯಾವ ತಂಡಕ್ಕೆ ಎಷ್ಟು ಅವಕಾಶ ಇದೆ? ಇಲ್ಲಿದೆ ವಿವರ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025 ಮೂರನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲು ನಾಲ್ಕು ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಪ್ರಶಸ್ತಿ ಸುತ್ತಿಗೇರಲು ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ಪೈಕಿ ದಕ್ಷಿಣ ಆಫ್ರಿಕಾ ಫೈನಲ್ ಸ್ಥಾನವನ್ನು ಬಹುತೇಕ ಖಚಿತ ಮಾಡಿಕೊಂಡಿದೆ. ಆದರೆ ಆಸ್ಟ್ರೇಲಿಯಾ - ಭಾರತದ ನಡುವೆ ಪೈಪೋಟಿ ಏರ್ಪಟ್ಟಿದ್ದರೆ, ಶ್ರೀಲಂಕಾ ತಂಡವು ಕೊಂಚ ಅವಕಾಶವನ್ನು ಪಡೆದುಕೊಂಡಿದೆ. ಪ್ರಸ್ತುತ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಸೌತ್ ಆಫ್ರಿಕಾ ಅಗ್ರಸ್ಥಾನ ಪಡೆದುಕೊಂಡಿದೆ. ಆಸ್ಟ್ರೇಲಿಯಾ, ಭಾರತ, ಶ್ರೀಲಂಕಾ ಕ್ರಮವಾಗಿ 2, 3, 4ನೇ ಸ್ಥಾನ ಪಡೆದುಕೊಂಡಿವೆ. ಹಾಗಿದ್ದರೆ ಯಾವ ತಂಡಕ್ಕೆ ಎಷ್ಟು ಪಂದ್ಯ ಗೆಲ್ಲಬೇಕು? 4 ತಂಡಗಳ ಮುಂದಿರುವ ಅವಕಾಶ ಏನು? ಇಲ್ಲಿದೆ ವಿವರ.
ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಆಸ್ಟ್ರೇಲಿಯಾ ಮುಂದಿರುವ ಹಾದಿ
- ಟೀಮ್ ಇಂಡಿಯಾ ವಿರುದ್ಧ 4-1 ಅಂತರದಿಂದ ಗೆದ್ದರೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲಿದೆ.
- ಟೀಮ್ ಇಂಡಿಯಾ ವಿರುದ್ಧ 3-1 ಅಂತರದಿಂದ ಗೆದ್ದರೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲಿದೆ.
- ಟೀಮ್ ಇಂಡಿಯಾ ವಿರುದ್ಧ 3-2 ಅಂತರದಿಂದ ಗೆದ್ದರೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲಿದೆ.
- ಟೀಮ್ ಇಂಡಿಯಾ ವಿರುದ್ಧ 2-2ರಲ್ಲಿ ಸಮಬಲ ಸಾಧಿಸಿದರೆ, ಆಸೀಸ್ ಶ್ರೀಲಂಕಾ ವಿರುದ್ಧ ಒಂದು ಪಂದ್ಯ ಗೆಲ್ಲುವುದು ಅಗತ್ಯ.
- ಟೀಮ್ ಇಂಡಿಯಾ ವಿರುದ್ಧ 2-3ರಲ್ಲಿ ಸರಣಿ ಸೋತರೆ, ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ 2-0 ಅಂತರದಲ್ಲಿ ಗೆಲ್ಲುವುದು ಅಗತ್ಯ.
ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಭಾರತ ಮುಂದಿರುವ ಹಾದಿ
- ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಸರಣಿ ಗೆದ್ದರೆ ಡಬ್ಲ್ಯುಟಿಸಿ ಫೈನಲ್ ಟಿಕೆಟ್ ಪಡೆದುಕೊಳ್ಳಲಿದೆ.
- ಆಸ್ಟ್ರೇಲಿಯಾ ವಿರುದ್ಧ 3-1 ಅಂತರದಿಂದ ಸರಣಿ ಗೆದ್ದರೆ ಡಬ್ಲ್ಯುಟಿಸಿ ಫೈನಲ್ ಟಿಕೆಟ್ ಪಡೆದುಕೊಳ್ಳಲಿದೆ.
- ಆಸ್ಟ್ರೇಲಿಯಾ ವಿರುದ್ಧ ಭಾರತ 3-2ರ ಅಂತದಿಂದ ಸರಣಿ ಗೆದ್ದರೂ, ಶ್ರೀಲಂಕಾ ವಿರುದ್ಧ ಆಸೀಸ್ ಒಂದು ಪಂದ್ಯ ಡ್ರಾ ಸಾಧಿಸಬೇಕು.
- ಆಸ್ಟ್ರೇಲಿಯಾ ವಿರುದ್ಧ ಭಾರತ 2-2ರಲ್ಲಿ ಸರಣಿ ಡ್ರಾ ಮಾಡಿಕೊಂಡರೆ, ಶ್ರೀಲಂಕಾ ವಿರುದ್ಧ ಆಸೀಸ್ 1-0 ಅಥವಾ 2-0 ಅಂತರದಲ್ಲಿ ಸರಣಿ ಸೋಲಬೇಕು.
ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಸೌತ್ ಆಫ್ರಿಕಾ ಮುಂದಿರುವ ಹಾದಿ
ಪಾಕಿಸ್ತಾನ ವಿರುದ್ಧದ 2 ಟೆಸ್ಟ್ ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025 ಫೈನಲ್ ಪ್ರವೇಶಿಸಲಿದೆ.
ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಶ್ರೀಲಂಕಾ ಮುಂದಿರುವ ಹಾದಿ
ಆಸ್ಟ್ರೇಲಿಯಾ ವಿರುದ್ದದ ಎರಡು ಟೆಸ್ಟ್ ಪಂದ್ಯಗಳನ್ನೂ ಗೆಲುವು ಸಾಧಿಸಬೇಕಿದೆ. ಅಲ್ಲದೆ, ಉಳಿದ ತಂಡಗಳ ಫಲಿತಾಂಶಗಳ ಮೇಲೂ ಆಧಾರವಾಗಬೇಕಿದೆ.
ಸಂಖ್ಯೆ | ತಂಡ | ಪಂದ್ಯ | ಗೆಲುವು | ಸೋಲು | ಡ್ರಾ | ಅಂಕ | ಗೆಲುವಿನ ಶೇಕಡಾ |
---|---|---|---|---|---|---|---|
1 | ದಕ್ಷಿಣ ಆಫ್ರಿಕಾ | 10 | 6 | 3 | 1 | 76 | 63.33 |
2 | ಆಸ್ಟ್ರೇಲಿಯಾ | 14 | 9 | 4 | 1 | 102 | 60.71 |
3 | ಭಾರತ | 16 | 9 | 6 | 1 | 110 | 57.29 |
4 | ಶ್ರೀಲಂಕಾ | 11 | 5 | 6 | 0 | 60 | 45.45 |
5 | ಇಂಗ್ಲೆಂಡ್ | 21 | 11 | 9 | 1 | 114 | 44.44 |
6 | ನ್ಯೂಜಿಲೆಂಡ್ | 13 | 6 | 7 | 0 | 69 | 47.92 |
7 | ಪಾಕಿಸ್ತಾನ | 10 | 4 | 6 | 0 | 40 | 33.33 |
8 | ಬಾಂಗ್ಲಾದೇಶ (E) | 12 | 4 | 8 | 0 | 45 | 31.25 |
9 | ವೆಸ್ಟ್ ಇಂಡೀಸ್ (E) | 11 | 2 | 7 | 2 | 32 | 24.24 |