Explained: ಕ್ರಿಕೆಟ್​ನಲ್ಲಿ ಡ್ರಾಪ್ ಇನ್ ಪಿಚ್​ ಎಂದರೇನು; ಇದು ಸಾಮಾನ್ಯ ಪಿಚ್​ಗಿಂತ ಹೇಗೆ ಭಿನ್ನ?
ಕನ್ನಡ ಸುದ್ದಿ  /  ಕ್ರಿಕೆಟ್  /  Explained: ಕ್ರಿಕೆಟ್​ನಲ್ಲಿ ಡ್ರಾಪ್ ಇನ್ ಪಿಚ್​ ಎಂದರೇನು; ಇದು ಸಾಮಾನ್ಯ ಪಿಚ್​ಗಿಂತ ಹೇಗೆ ಭಿನ್ನ?

Explained: ಕ್ರಿಕೆಟ್​ನಲ್ಲಿ ಡ್ರಾಪ್ ಇನ್ ಪಿಚ್​ ಎಂದರೇನು; ಇದು ಸಾಮಾನ್ಯ ಪಿಚ್​ಗಿಂತ ಹೇಗೆ ಭಿನ್ನ?

What is drop-in pitch: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಅಳವಡಿಸಲಾದ ಡ್ರಾಪ್ ಇನ್ ಪಿಚ್ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಹಾಗಾದರೆ ಡ್ರಾಪ್ ಇನ್ ಪಿಚ್ ಎಂದರೇನು? ಇಲ್ಲಿದೆ ವಿವರ.

Explained: ಕ್ರಿಕೆಟ್​ನಲ್ಲಿ ಡ್ರಾಪ್ ಇನ್ ಪಿಚ್​ ಎಂದರೇನು; ಇದು ಸಾಮಾನ್ಯ ಪಿಚ್​ಗಿಂತ ಹೇಗೆ ಭಿನ್ನ?
Explained: ಕ್ರಿಕೆಟ್​ನಲ್ಲಿ ಡ್ರಾಪ್ ಇನ್ ಪಿಚ್​ ಎಂದರೇನು; ಇದು ಸಾಮಾನ್ಯ ಪಿಚ್​ಗಿಂತ ಹೇಗೆ ಭಿನ್ನ?

ಬಹುನಿರೀಕ್ಷಿತ 2024ರ ಟಿ20 ಕ್ರಿಕೆಟ್ ವಿಶ್ವಕಪ್ ಆರಂಭಗೊಂಡಿದೆ. ಆದರೆ, ಯಾಕೋ ಅಭಿಮಾನಿಗಳಿಗೆ ಮಜವೇ ನೀಡುತ್ತಿಲ್ಲ. ವೀಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ. ದೊಡ್ಡದೊಡ್ಡ ಪಂದ್ಯಗಳಿಗೆ ಅಭಿಮಾನಿಗಳನ್ನು ಹುಡುಕುವಂತಾಗಿದೆ. ಫುಟ್ಬಾಲ್​ನಂತೆ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್​ ವಿಸ್ತರಿಸಲು, ಜನಪ್ರಿಯತೆ ಹೆಚ್ಚಿಸಲು ಐಸಿಸಿ 20 ತಂಡಗಳಿಗೆ ಆಡಲು ಅವಕಾಶ ನೀಡಿದೆ. ಆದರೆ, ಮನರಂಜನೆಗಿಂತ ನಿರಾಸೆಯೇ ಹೆಚ್ಚಾಗಿದೆ. ಇದರ ನಡುವೆ ನ್ಯೂಯಾರ್ಕ್​​ನ ಡ್ರಾಪ್ ಇನ್ ಪಿಚ್ (Drop-in Pitch) ಬಗ್ಗೆ ಚರ್ಚೆಯಾಗುತ್ತಿದೆ.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಜೊತೆಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸುತ್ತಿದೆ. ಯುಎಸ್​​ಎ 3 ಸ್ಥಳಗಳಲ್ಲಿ 16 ಪಂದ್ಯ ಆಯೋಜಿಸುತ್ತಿವೆ. ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ಪಾರ್ಕ್, ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ ಮತ್ತು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸುತ್ತಿವೆ. ಆದರೆ, ನ್ಯೂಯಾರ್ಕ್​ ಪಿಚ್ ಬಗ್ಗೆ​​ ಮಾತ್ರ ಹೆಚ್ಚು ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಅದು ಡ್ರಾಪ್​ ಇನ್ ಪಿಚ್ ಆಗಿರುವುದು. ಡ್ರಾಪ್ ಇನ್ ಪಿಚ್ ಎಂದರೇನು? ಇದರ ವಿಶೇಷತೆಗಳು ಹೇಗಿವೆ? ಇಲ್ಲಿದೆ ವಿವರ.

ಏನಿದು ಡ್ರಾಪ್​ ಇನ್​ ಪಿಚ್​? ಇದರ ವಿಶೇಷತೆಗಳೇನು?

ಡ್ರಾಪ್-ಇನ್ ಪಿಚ್‌ಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಲಾಗುತ್ತದೆ. ಅಚ್ಚರಿ ಅಂದರೆ ಅವುಗಳನ್ನು ಸ್ಥಳದಲ್ಲೇ ಸಿದ್ಧಪಡಿಸುವುದಿಲ್ಲ. ಮೈದಾನದ ಹೊರಗೆ ಕ್ಯುರೇಟ್ ಮಾಡಿದ ನಂತರ ಕ್ರೀಡಾಂಗಣಕ್ಕೆ ರವಾನಿಸಲಾಗುತ್ತದೆ. ಕ್ರಿಕೆಟ್​ ಪಂದ್ಯ ಇದ್ದಾಗ, ರಚಿಸಿದ ಪಿಚ್​​​​ ಅನ್ನು ಕ್ರೇನ್​ ಮೂಲಕ ಪಿಚ್​ ಮೇಲೆ ಡ್ರಾಪ್​ ಮಾಡಲಾಗುತ್ತದೆ. ಸಿಮೆಂಟ್​ ಸ್ಲಾಬ್​​ಗಳ ಮೇಲೆ ಪಿಚ್​ ಕೂರಿಸಿದ ಬಳಿಕ, ಸ್ಟೀಲ್​ ಕೇಸ್​​ ಹೊರ ತೆಗೆಯಲಾಗುತ್ತದೆ. ಈ ಪಿಚ್​​​​​​​​ನಲ್ಲಿ ಬಿರುಕು ಕಾಣಿಸುವುದಿಲ್ಲ.

ಈ ಡ್ರಾಪ್ ಇನ್ ಪಿಚ್ ಹೇಗಿರುತ್ತೆದೆ ಅಂದರೆ ಮೈದಾನದ ಮಧ್ಯೆ 20 ಮೀಟರ್​​ ಉದ್ದ, ಮೂರು ಮೀಟರ್​​​​​ ಅಗಲ, 20 ಸೆಂಟಿ ಮೀಟರ್​​​​ ಆಳದಲ್ಲಿ, ಕ್ರಿಕೆಟ್​​​ ಪಿಚ್​​​ಗೆ ಗುಂಡಿ ತೆಗೆದಿರಲಾಗಿರುತ್ತದೆ. ಗುಂಡಿ ಸುತ್ತಲೂ ಸಿಮೆಂಟ್​ ಸ್ಲಾಬ್ ನಿರ್ಮಿಸಲಾಗುತ್ತದೆ. ಮೈದಾನದ ಹೊರಗೆ ಪಿಚ್​​​​​​ ಅಳತೆಗೆ ತಕ್ಕಂತೆ, ಸ್ಟೀಲ್​​​ ಕೇಸ್​​ ಸಿದ್ಧಪಡಿಸಲಾಗುತ್ತದೆ. ಆ ಕೇಸ್​​ನ ಕೆಳ ಭಾಗದಲ್ಲಿ ಕಪ್ಪುಮಣ್ಣು ಅಥವಾ ಜೇಡಿಮಣ್ಣು ಹಾಕಿದರೆ, ಮೇಲಿನ ಭಾಗದಲ್ಲಿ ಹುಲ್ಲಿನ ಸಂಯೋಜನೆ ಮಾಡಲಾಗುತ್ತದೆ. ಅಥವಾ ಹುಲ್ಲಿನ ಮ್ಯಾಟನ್ನೂ ಹಾಕಲಾಗುತ್ತದೆ.

ಈ ಫ್ಲಾಟ್​ ಪಿಚ್​​ಗಳು ಬೌಲರ್ ಸ್ನೇಹಿಯಾಗಿದ್ದು, ಬೌಲರ್​​ಗಳು ಪೇಸ್​​​ & ಬೌನ್ಸ್​​​​ ಹಾಕಲು ನೆರವಾಗುತ್ತದೆ. ಆಟಗಾರರಿಗೆ ಯಾವುದೇ ತೊಂದರೆ ಉಂಟಾಗದಂತೆ ತಯಾರಕರು ಎಚ್ಚರ ವಹಿಸುತ್ತಾರೆ. ಆದರೆ ಈ ಪಿಚ್​​ಗಳು ಹೆಚ್ಚು ಬೌನ್ಸ್​​ ಆಗುತ್ತವೆ. ಈ ರೀತಿ ಮೇಲ್ಮೈ ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕ್ರಿಕೆಟ್ ಪಂದ್ಯ ಮುಗಿದ ನಂತರ ಈ ಪಿಚ್​ ಹೊರ ತೆಗೆದು ಫುಟ್ಬಾಲ್​, ರಗ್ನಿಗಳಿಗೆ ಮೈದಾನ ಸಿದ್ಧಪಡಿಸಲಾಗುತ್ತದೆ. ಆಸೀಸ್​ನ ಬಹುತೇಕ ಪಿಚ್​​ಗಳು ಇವೇ ಆಗಿವೆ. ನ್ಯೂಯಾರ್ಕ್​ ಪಿಚ್ ಅನ್ನು ಆಸ್ಟ್ರೇಲಿಯಾದ ಅಡಿಲೇಡ್​ನಿಂದ ರವಾನಿಸಲಾಗಿದೆ.

ಟಿ20 ವಿಶ್ವಕಪ್​ಗೆ ನೀರಸ ಪ್ರತಿಕ್ರಿಯೆ

ಟಿ20 ವಿಶ್ವಕಪ್ ನಡುವೆ ಅತಿ ಹೆಚ್ಚು ಚರ್ಚೆ ಹುಟ್ಟು ಹಾಕಿರುವ ಪಿಚ್​​ಗಳ ಪೈಕಿ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನ. ಹೊಸದಾಗಿ ನಿರ್ಮಿಸಲಾದ ಈ ಪಿಚ್​​ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಮೊದಲ ಪಂದ್ಯವೇ ಅತ್ಯಂತ ನೀರಸವಾಗಿತ್ತು. ಪಿಚ್​ ಹೇಗೆ ಕೆಲಸ ಮಾಡುತ್ತದೆ, ಬ್ಯಾಟರ್​​ಗಳಿಗೆ ಹೇಗೆ ನೆರವಾಗುತ್ತದೆ, ಹೇಗೆ ಸ್ವಿಂಗ್ ಆಗುತ್ತದೆ, ಬೌನ್ಸ್ ಆಗುತ್ತದೆ ಎಂಬುದನ್ನು ಅರಿಯುವಲ್ಲಿ ವಿಫಲರಾದರು. ಅಷ್ಟೆ ಅಲ್ಲ, ಟೀಮ್ ಇಂಡಿಯಾ-ಐರ್ಲೆಂಡ್ ಪಂದ್ಯಕ್ಕೂ ಕ್ರೇಜೇ ಇರಲಿಲ್ಲ.

ಅಮೆರಿಕದಲ್ಲಿ ಕ್ರಿಕೆಟ್​ ಜನಪ್ರಿಯತೆ ಹೆಚ್ಚಿಸುವ ಸಲುವಾಗಿ ಅದೇ ದೇಶಕ್ಕೆ ಸಹ ಆತಿಥ್ಯ ನೀಡಲಾಗಿದೆ. ಟೂರ್ನಿ ಆರಂಭವಾಗಿ ವಾರವಾಗುತ್ತಾ ಬಂದರೂ ರೋಚಕ ಹಣಾಹಣಿಗೆ ಒಂದೂ ಪಂದ್ಯವೂ ಸಾಕ್ಷಿಯಾಗಿಲ್ಲ. ಎದುರಾಳಿಗೆ ಪ್ರತಿರೋಧ ನೀಡಲು ಯಾವ ತಂಡಕ್ಕೂ ಸಾಧ್ಯವಾಗಿಲ್ಲ. ಕ್ರಿಕೆಟ್ ತಜ್ಞರು, ಪಂಡಿತರು, ಮಾಜಿ ಕ್ರಿಕೆಟರ್​ಗಳಿಂದ ಪಿಚ್​​ಗಳ ಕುರಿತು ಆರೋಪಗಳು ಎದುರಾಗಿವೆ. ಜಗತ್ತೇ ಕಾಯುತ್ತಿದ್ದ ಟಿ20 ವಿಶ್ವಕಪ್​​​ ಸಪ್ಪೆಯಾಗಿದ್ದಕ್ಕೆ ಬೇಸರ ಹೊರಹಾಕಿದ್ದಾರೆ.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner