What is RTM Rules: ಆರ್​​ಟಿಎಂ ಎಂದರೇನು, ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಈ ನಿಯಮವನ್ನು ಹೇಗೆ ಬಳಸಲಿವೆ?
ಕನ್ನಡ ಸುದ್ದಿ  /  ಕ್ರಿಕೆಟ್  /  What Is Rtm Rules: ಆರ್​​ಟಿಎಂ ಎಂದರೇನು, ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಈ ನಿಯಮವನ್ನು ಹೇಗೆ ಬಳಸಲಿವೆ?

What is RTM Rules: ಆರ್​​ಟಿಎಂ ಎಂದರೇನು, ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಈ ನಿಯಮವನ್ನು ಹೇಗೆ ಬಳಸಲಿವೆ?

RTM Rules: ಇಂಡಿಯನ್ ಪ್ರೀಮಿಯರ್ ಲೀಗ್​ 2025 ಮೆಗಾ ಹರಾಜಿನಲ್ಲಿ 2018ರ ಬಳಿಕ ಆರ್​ಟಿಎಂ ನಿಯಮವನ್ನು ಬಳಕೆ ಮಾಡಲಾಗುತ್ತಿದೆ. ಹಾಗಾದರೆ ಆರ್​ಟಿಎಂ ಎಂದರೇನು? ಫ್ರಾಂಚೈಸಿಗಳನ್ನು ಈ ನಿಯಮವನ್ನು ಹೇಗೆ ಬಳಸಲಿವೆ? ಇಲ್ಲಿದೆ ವಿವರ.

ಆರ್​​ಟಿಎಂ ಎಂದರೇನು, ಈ ನಿಯಮದ ಪ್ರಕಾರ ಆಟಗಾರರನ್ನು ಖರೀದಿಸುವುದು ಹೇಗೆ?
ಆರ್​​ಟಿಎಂ ಎಂದರೇನು, ಈ ನಿಯಮದ ಪ್ರಕಾರ ಆಟಗಾರರನ್ನು ಖರೀದಿಸುವುದು ಹೇಗೆ?

ಐಪಿಎಲ್ 2025 ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ರೈಟ್ ಟು ಮ್ಯಾಚ್ (RTM) ಕಾರ್ಡ್ ಬಳಸಿ ಆಟಗಾರರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುತ್ತಿವೆ. ಈ ಬಾರಿ ಎಲ್ಲಾ ತಂಡಗಳಿಗೂ ಒಂದು ಆರ್​ಟಿಎಂ ಕಾರ್ಡ್ ಬಳಸಲು ಅವಕಾಶ ನೀಡಲಗಿದೆ. ಆದರೆ, ಹರಾಜು ವೀಕ್ಷಣೆ ಮಾಡುತ್ತಿರುವ ಬಹುತೇಕರಿಗೆ ಈ ನಿಯಮದ ಕುರಿತು ಅರ್ಥವಾಗಿಲ್ಲ. ಅಂದಹಾಗೆ, ಆರ್​​ಟಿಎಂ ಅನ್ನು ಕೊನೆಯ ಬಾರಿಗೆ 2018ರ ಮೆಗಾ ಹರಾಜಿನಲ್ಲಿ ಬಳಸಲಾಗಿತ್ತು. ಆದರೆ ಫ್ರಾಂಚೈಸಿಗಳ ಬೇಡಿಕೆಗೆ ಅನುಗುಣವಾಗಿ 2025ರ ಐಪಿಎಲ್​ ಮೆಗಾ ಹರಾಜಿಗೆ ಸೇರಿಸಿದೆ. ಹರಾಜಿಗೆ ಬಿಡುಗಡೆ ಮಾಡಿರುವ ಆಟಗಾರರನ್ನು ಆರ್​ಟಿಎಂ ಅಡಿಗೆ ಸೇರಿಸಿ ಮತ್ತೆ ಖರೀದಿಸಲು ಅವಕಾಶ ಇದೆ. ಆದರೆ ಇದು ಅಲ್ಲದೆ, ಫ್ರಾಂಚೈಸಿ ತನ್ನ ನೆಚ್ಚಿನ ಖರೀದಿಗೆ ಈ ಕಾರ್ಡ್ ಬಳಸಬಹುದು. ಆದರೆ ಇದು ಫ್ರ್ಯಾಂಚೈಸ್ ಮಾಲೀಕರಿಗೆ ದೊಡ್ಡ ಸಮಸ್ಯೆ ಆಗಬಹುದು ಎಂದರೆ ತಪ್ಪಾಗಲ್ಲ. ಆರ್​​ಟಿಎಂ ನಿಯಮ ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ಈ ಮುಂದೆ ನೋಡೋಣ.

ಆರ್​ಟಿಎಂ ನಿಯಮದ ಪ್ರಕಾರ ಫ್ರಾಂಚೈಸಿಗಳು ಹರಾಜಿಗೆ ಬಿಡುಗಡೆ ಮಾಡಿದ ಆಟಗಾರನನ್ನು ಉಳಿಸಿಕೊಳ್ಳಲು ಈ ಕಾರ್ಡ್​ ಬಳಸಿಕೊಳ್ಳಬಹುದು. ಬೇರೆ ಯಾವುದೇ ಫ್ರಾಂಚೈಸಿ ತಮ್ಮ ನೆಚ್ಚಿನ ಆಟಗಾರನಿಗೆ ಬಿಡ್ ಮಾಡಿದ್ದರೆ, ಹಳೆಯ ಫ್ರಾಂಚೈಸಿ ಆರ್​​​ಟಿಎಂ ಬಳಸಿ ಆ ಆಟಗಾರರನ್ನು ಮತ್ತೆ ಖರೀದಿಸಲು ಅವಕಾಶ ಇದೆ. ಆದರೆ, ಅವರು ಹೊಸ ಬಿಡ್​ನಷ್ಟೇ ಹಣವನ್ನು ಪಾವತಿಸಬೇಕಾಗುತ್ತದೆ. ಟ್ವಿಸ್ಟ್ ಏನೆಂದರೆ, ಹೊಸ ಫ್ರಾಂಚೈಸಿ ಬಯಸಿದರೆ, ಬಿಡ್ ಮೊತ್ತವನ್ನು ಮತ್ತೆ ಹೆಚ್ಚಿಸುವ ಮೂಲಕ ಆಟಗಾರನನ್ನು ಅವರೇ ಉಳಿಸಿಕೊಳ್ಳಲು ಮುಂದಾಗಬಹುದು. ಹೊಸ ಫ್ರಾಂಚೈಸಿ ಬಿಡ್ ಮಾಡಿದ ಮೊತ್ತ ಘೋಷಿಸಿದ ಬಳಿಕವೂ ಹಳೆ ಫ್ರಾಂಚೈಸಿ ಆತನನ್ನು ಖರೀದಿಸಲು ಬಯಸಿದರೆ ಮತ್ತೆ ಹೊಸ ಹೆಚ್ಚುವರಿ ಬಿಡ್ ಸಲ್ಲಿಸಬೇಕು. ಆಗ ಹೊಸ ಫ್ರಾಂಚೈಸಿ ಅಷ್ಟು ದುಡ್ಡು ಕೊಡಲು ಇಚ್ಛಿಸದಿದ್ದರೆ ಆ ಆಟಗಾರ ಹಳೆಯ ತಂಡದ ಪಾಲಾಗುತ್ತಾರೆ.

ಇಲ್ಲಿದೆ ಉದಾಹರಣೆ ಸಹಿತ ಸರಳ ವಿವರ

  • ಈ ನಿಯಮವು ಸ್ವಲ್ಪ ಸಂಕೀರ್ಣವಾಗಿದೆ. ಒಂದು ಉದಾಹರಣೆಯೊಂದಿಗೆ ನಿಮ್ಮನ್ನು ಅರ್ಥಮಾಡಿಸುವ ಪ್ರಯತ್ನ ಮಾಡುತ್ತೇವೆ ನೋಡಿ.
  • ವಿರಾಟ್ ಕೊಹ್ಲಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 20 ಕೋಟಿ ರೂಪಾಯಿಗೆ ಹರಾಜು ಹಾಕಿದೆ ಎಂದು ಭಾವಿಸೋಣ. (ಇದು ಉದಾಹರಣೆಯಷ್ಟೆ)
  • ಆಗ ವಿರಾಟ್ ಕೊಹ್ಲಿ ಕೊನೆಯದಾಗಿ ಆಡಿದ್ದ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಆರ್​ಟಿಎಂ ಬಳಸಲು ಬಯಸುತ್ತೀರಾ ಎಂದು ಕೇಳಲಾಗುತ್ತದೆ.
  • ಆರ್​​ಸಿಬಿ ಆರ್​ಟಿಎಂ ಬಳಸಿದರೆ, ಅಂತಿಮ ಬಿಡ್ ಮಾಡಲು ಡೆಲ್ಲಿಗೆ ಮತ್ತೊಂದು ಅವಕಾಶ ನೀಡಲಾಗುವುದು. (ಅಂತಿಮ ರೇಟ್ ಫಿಕ್ಸ್ ಮಾಡುವುದು)
  • ಡೆಲ್ಲಿ 21 ಕೋಟಿ ರೂಪಾಯಿಗೆ ಅಂತಿಮ ಬಿಡ್ ಸಲ್ಲಿಸಿದರೆ, ಆರ್​​ಸಿಬಿ ಆರ್​ಟಿಎಂ ಬಳಸಿ ಕೊಹ್ಲಿ ಅವರನ್ನು ಮತ್ತೆ 21 ಕೋಟಿ ರೂಗೆ ಖರೀದಿಸಬಹುದು.
  • 21 ಕೋಟಿ ನೀಡಲು ಬಯಸಿದರೆ ಮಾತ್ರ ಆರ್​ಟಿಎಂ ಬಳಕೆಯಾಗುತ್ತದೆ. ಇಲ್ಲದಿದ್ದರೆ ಡೆಲ್ಲಿ ಅಷ್ಟೇ ಮೊತ್ತವನ್ನು ಆಟಗಾರನಿಗೆ ಕೊಟ್ಟು ತೆಕ್ಕೆಗೆ ಹಾಕಿಕೊಳ್ಳಲಿದೆ.

ಎಲ್ಲಾ ತಂಡಗಳಿಗೂ ಇರಲ್ಲ ಆರ್​ಟಿಎಂ

ಎಲ್ಲಾ ಐಪಿಎಲ್​ ತಂಡಗಳು ಆರ್​ಟಿಎಂ ಬಳಸುವ ಹಕ್ಕನ್ನು ಹೊಂದಿಲ್ಲ ಎಂಬುದನ್ನು ತಿಳಿಯಬೇಕು. ನಿಯಮಗಳ ಪ್ರಕಾರ, ಫ್ರಾಂಚೈಸಿ ಆರು ಆಟಗಾರರನ್ನು (4 ಕ್ಯಾಪ್ಡ್ ಮತ್ತು ಒಬ್ಬ ಅನ್​ಕ್ಯಾಪ್ಡ್​) ಉಳಿಸಿಕೊಂಡಿದ್ದರೆ, ಮೆಗಾ ಹರಾಜಿನಲ್ಲಿ ಆರ್​​ಟಿಎಂ ಬಳಕೆಗೆ ಅವಕಾಶ ಇರುವುದಿಲ್ಲ. ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳಂತೆ ಒಂದೇ ಒಂದು ಆರ್​ಟಿಎಂ ಅವಕಾಶ ಇಲ್ಲ. ಪಂಜಾಬ್ ಕಿಂಗ್ಸ್ ಅತಿ ಹೆಚ್ಚು 4 ಆರ್​ಟಿಎಂಗಳನ್ನು ಹೊಂದಿದೆ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಸನ್​ರೈಸರ್ಸ್​ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ತಲಾ ಒಂದು ಆರ್​ಟಿಎಂ ಹೊಂದಿದೆ. ರಾಯಲ್ ಚಾಲೆಂಜರ್ಸ್ 3 ಮತ್ತು ಡೆಲ್ಲಿ ಕ್ಯಾಪಿಟಲ್ಸ್ 2 ಆರ್​ಟಿಎಂ ಅವಕಾಶ ಹೊಂದಿದೆ.

Whats_app_banner