ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ರಿಕೆಟ್​​​ನಲ್ಲಿ ಆಟಗಾರರು ಧರಿಸುವ ನೆಕ್ ಡಿವೈಸ್ ಅಥವಾ ಕ್ಯೂ-ಕಾಲರ್​ ಎಂದರೇನು; ಪ್ರಯೋಜನ ಮತ್ತು ಬೆಲೆ ಎಷ್ಟು?

ಕ್ರಿಕೆಟ್​​​ನಲ್ಲಿ ಆಟಗಾರರು ಧರಿಸುವ ನೆಕ್ ಡಿವೈಸ್ ಅಥವಾ ಕ್ಯೂ-ಕಾಲರ್​ ಎಂದರೇನು; ಪ್ರಯೋಜನ ಮತ್ತು ಬೆಲೆ ಎಷ್ಟು?

What Is The Q-Collar : ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರ ಧರಿಸಿದ್ದ ಕ್ಯೂ-ಕಾಲರ್ ಅಥವಾ ನೆಕ್ ಡಿವೈಸ್ ಎಂದರೇನು? ಈ ಪರಿಕರ ಪ್ರಯೋಜನ ಮತ್ತು ಬೆಲೆ ಎಷ್ಟು? ಇಲ್ಲಿದೆ ವಿವರ.

ಕ್ರಿಕೆಟ್​​​ನಲ್ಲಿ ಆಟಗಾರರು ಧರಿಸುವ ನೆಕ್ ಡಿವೈಸ್ ಅಥವಾ ಕ್ಯೂ-ಕಾಲರ್​ ಎಂದರೇನು; ಪ್ರಯೋಜನ ಮತ್ತು ಬೆಲೆ ಎಷ್ಟು?
ಕ್ರಿಕೆಟ್​​​ನಲ್ಲಿ ಆಟಗಾರರು ಧರಿಸುವ ನೆಕ್ ಡಿವೈಸ್ ಅಥವಾ ಕ್ಯೂ-ಕಾಲರ್​ ಎಂದರೇನು; ಪ್ರಯೋಜನ ಮತ್ತು ಬೆಲೆ ಎಷ್ಟು?

ಐಪಿಎಲ್-2024 ಮುಕ್ತಾಯದ ಹಂತ ತಲುಪಿದ್ದು,​ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಎರಡು ತಂಡಗಳು ಪ್ಲೇಆಫ್​ ಟಿಕೆಟ್​​​ ಅನ್ನು ಅಧಿಕೃತಗೊಳಿಸಿದ್ದರೆ, ಉಳಿದ ಎರಡು ಸ್ಥಾನಗಳಿಗಾಗಿ ಸಿಎಸ್​ಕೆ, ಆರ್​​ಸಿಬಿ ಮತ್ತು ಎಸ್​ಆರ್​ಹೆಚ್ ತಂಡಗಳ ನಡುವೆ ಸಿಕ್ಕಾಪಟ್ಟೆ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಟೂರ್ನಿಯ ಆರಂಭದಲ್ಲಿ ಸತತ ಗೆಲುವು ಕಂಡ ರಾಜಸ್ಥಾನ್ ರಾಯಲ್ಸ್, ಕೊನೆಯಲ್ಲಿ ಸತತ ಸೋಲುಗಳನ್ನು ಕಾಣುತ್ತಿದೆ. ಮೇ 15ರಂದೂ ಮತ್ತೊಂದು ಪಂದ್ಯದಲ್ಲಿ ಶರಣಾಯಿತು.

ಟ್ರೆಂಡಿಂಗ್​ ಸುದ್ದಿ

ಟೂರ್ನಿಯಿಂದಲೇ ಎಲಿಮಿನೇಟ್ ಆಗಿರುವ ಪಂಜಾಬ್​ ಕಿಂಗ್ಸ್, ಕೇವಲ ಔಪಚಾರಿಕ ಪಂದ್ಯಗಳಷ್ಟೇ ಆಡುತ್ತಿದೆ. ತನ್ನ ಕೊನೆಯ ಪಂದ್ಯಗಳಲ್ಲಿ ಗೆದ್ದು ಟೂರ್ನಿ ಮುಗಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಅದರಂತೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್​ 5 ವಿಕೆಟ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಆದರೆ ಸಂಜು ಸ್ಯಾಮ್ಸನ್ ಪಡೆ ತೀವ್ರ ಮುಖಭಂಗಕ್ಕೆ ಒಳಗಾಯಿತು. ಆದರೆ ಈ ಪಂದ್ಯಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಟಾಮ್ ಕೊಹ್ಲರ್ ಕಾಡ್ಮೋರ್ (Tom Kohler-Cadmore) ಧರಿಸಿದ್ದ ನೆಕ್ ಡಿವೈಸ್ (Q-Collar or Neck Device).

ಹೌದು, ಪಿಬಿಕೆಎಸ್​ ವಿರುದ್ಧ ಜೋಸ್ ಬಟ್ಲರ್ ಅವರ ಅಲಭ್ಯತೆಯಲ್ಲಿ ಆರ್​ಆರ್​ ಆರಂಭಿಕ ಬ್ಯಾಟರ್ ಟಾಮ್ ಕೊಹ್ಲರ್ ಕಾಡ್ಮೋರ್ ಧರಿಸಿದ್ದ ನೆಕ್​ ಡಿವೈಸ್ ಎಲ್ಲರ ಕಣ್ಮನ ಸೆಳೆಯಿತು. ಟೂರ್ನಿಯುದ್ದಕ್ಕೂ ಬೆಂಚ್ ಕಾದಿದ್ದ ಕಾಡ್ಮೋರ್ ಕೊನೆಗೂ ಪ್ಲೇಯಿಂಗ್​ನಲ್ಲಿ ಅವಕಾಶ ಪಡೆದು 23 ಎಸೆತಗಳಲ್ಲಿ 18 ರನ್​ ಗಳಿಸಿ ನಿರಾಸೆ ಮೂಡಿಸಿದರೂ ವಿಶೇಷ ಸಾಧನ ಧರಿಸಿ ಕ್ರಿಕೆಟ್​ ಪ್ರಿಯರ ಮೆಚ್ಚುಗೆಗೆ ಕಾರಣವಾಗಿದ್ದಾರೆ. ಎಲ್ಲರಿಗೂ ಈ ಸಲಕರಣೆ ಲಾಭ, ಬೆಲೆ ಕುರಿತು ತಿಳಿಯಲು ಕುತೂಹಲ ಮೂಡಿಸಿದೆ.

ಪಿಬಿಕೆಸ್​ ವಿರುದ್ಧ ಟಾಮ್ ಕೊಹ್ಲರ್ ಧರಿಸಿದ್ದ ಕ್ಯೂ-ಕಾಲರ್ ಸಾಧನ ಯಾವುದು?

ಕ್ಯೂ-ಕಾಲರ್ ಸಾಧನವು (ನೆಕ್​ ಡಿವೈಸ್​) ಮೆದುಳಿಗೆ ಗಾಯ ಆಗುವುದನ್ನು ತಡೆಗಟ್ಟಲು ಕ್ರೀಡಾಪಟುಗಳು ಬಳಸುವ ಸುರಕ್ಷತಾ ಸಾಧನವಾಗಿದೆ. ಪ್ರಮಾಣಿತ ನೆಕ್‌ಬ್ಯಾಂಡ್ ಅನ್ನು ಕ್ಯೂ-ಕಾಲರ್ ಎಂದೂ ಕರೆಯಲಾಗುತ್ತದೆ. ಮೆದುಳಿನಿಂದ ಹೃದಯಕ್ಕೆ ರಕ್ತವನ್ನು ಹಿಂದಿರುಗಿಸುವ ಕಂಠನಾಳಗಳು ಸಾಧನದಿಂದ ಸ್ವಲ್ಪಮಟ್ಟಿಗೆ ಸಂಕುಚಿತಗೊಳ್ಳುತ್ತವೆ. ಈ ಕಾಲರ್ ಬ್ಯಾಂಡ್ ನಮ್ಮ ತಲೆಯ ರಕ್ತದ ಪರಿಮಾಣವನ್ನು ಹೆಚ್ಚಿಸುತ್ತದೆ. ಇದು ಕಡಿಮೆ ಚಲಿಸುವ ಕ್ರೀಡಾಪಟುಗಳು ಯಾವುದೇ ತಲೆ ಆಘಾತದಿಂದ ಮಿದುಳಿನ ಹಾನಿ ತಡೆಯಲು ಉತ್ತಮವಾಗಿ ಸಾಧ್ಯವಾಗುತ್ತದೆ.

ಕ್ಯೂ-ಕಾಲರ್ ಬೆಲೆಯೆಷ್ಟು?

ಕ್ಯೂ30 (ಮಿದುಳು ಸುರಕ್ಷತೆಗೆ ಸಂಬಂಧಿಸಿದ್ದು) ಇನ್ನೋವೇಶನ್ಸ್‌ನಿಂದ ಅಭಿವೃದ್ಧಿಪಡಿಸಿರುವ ಕ್ಯೂ-ಕಾಲರ್ ಪ್ರಮುಖ ಕನ್ಕ್ಯುಶನ್‌ಗಳನ್ನು ತಡೆಗಟ್ಟಲು ಇದು ಕ್ರಿಕೆಟ್ ಆಟಗಾರರಿಗೆ ಸಹಾಯಕ ಸಾಧನವಾಗಿದೆ. ಪ್ರಸ್ತುತ ಆಧುನಿಕ ಕ್ರಿಕೆಟ್ ಹೆಲ್ಮೆಟ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಏಕೆಂದರೆ ತಲೆಗೆ ಬಡಿದ ಚೆಂಡುಗಳಿಂದ ಮೆದುಳಿಗೆ ಹಾನಿಯಾಗುವ ಪ್ರಕರಣಗಳು ಕಡಿಮೆಯಾಗಿವೆ. ಇದರ ಬೆಲೆ 199 ಡಾಲರ್​​. ಅಂದರೆ ಭಾರತೀಯ ಕರೆನ್ಸಿಯಲ್ಲಿ 16 ಸಾವಿರಕ್ಕೂ ಹೆಚ್ಚು.

ಆದಾಗ್ಯೂ, ಫೀಲ್ಡಿಂಗ್​ ಅವಧಿಯಲ್ಲಿ ಚೆಂಡು ತಗುಲಿ, ಚೆಂಡು ತಡೆಯುವ ಸಂದರ್ಭದಲ್ಲಿ ಅಥ್ಲೀಟ್‌ಗಳು ಗಾಯಗೊಂಡ ಉದಾಹರಣೆಗಳಿವೆ. ಆದರೆ, ಈ ಸಾಧನದ ಪರಿಣಾಮಕಾರಿತ್ವ ಬೆಂಬಲಿಸಲು ಹೆಚ್ಚಿನ ಪ್ರಾಯೋಗಿಕ ಡೇಟಾ ಇಲ್ಲ. ಕ್ರಿಕೆಟ್ ಆಟಗಾರರಿಗೆ ಅಗತ್ಯವಿರುವ ಹೆಲ್ಮೆಟ್ ಬಳಕೆಗೆ ಐಸಿಸಿ ನಿರ್ಮಿಸಿದೆ. ಆದಾಗ್ಯೂ, ಅಂತಾರಾಷ್ಟ್ರೀಯ ಪಂದ್ಯಗಳ ಸಂದರ್ಭದಲ್ಲಿ ಕ್ಯೂ-ಕಾಲರ್‌ಗಳಂತಹ ಸಾಧನ ಬಳಕೆಗೆ ನಿಯಂತ್ರಣ ಹೇರುವಂತಿಲ್ಲ. 2014 ರಲ್ಲಿ ಫಿಲ್ ಹ್ಯೂಸ್ ಅವರ ದುರಂತ ಸಾವು ಕ್ರಿಕೆಟ್‌ನಲ್ಲಿ ಭಾರಿ ಕ್ರಾಂತಿಯನ್ನು ತಂದಿತು.

IPL_Entry_Point