Shreyas Iyer: ಬಿಸಿಸಿಐ ಗುತ್ತಿಗೆ ಒಪ್ಪಂದ ಮರಳಿ ಪಡೆಯಲು ಶ್ರೇಯಸ್ ಅಯ್ಯರ್ ಮಾಡಬೇಕಾದ ಕೆಲಸವೇನು?-what should shreyas iyer do to get his bcci central contract again after with sri lanka odi series comeback prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  Shreyas Iyer: ಬಿಸಿಸಿಐ ಗುತ್ತಿಗೆ ಒಪ್ಪಂದ ಮರಳಿ ಪಡೆಯಲು ಶ್ರೇಯಸ್ ಅಯ್ಯರ್ ಮಾಡಬೇಕಾದ ಕೆಲಸವೇನು?

Shreyas Iyer: ಬಿಸಿಸಿಐ ಗುತ್ತಿಗೆ ಒಪ್ಪಂದ ಮರಳಿ ಪಡೆಯಲು ಶ್ರೇಯಸ್ ಅಯ್ಯರ್ ಮಾಡಬೇಕಾದ ಕೆಲಸವೇನು?

Shreyas Iyer: ಶ್ರೀಲಂಕಾ ಪ್ರವಾಸಕ್ಕೆ ಏಕದಿನ ಸರಣಿಗೆ ಸ್ಥಾನ ಪಡೆದಿರುವ ಶ್ರೇಯಸ್ ಅಯ್ಯರ್​, ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್​​ನಲ್ಲಿ ಅವಕಾಶ ಪಡೆಯಲು ಏನು ಮಾಡಬೇಕು?

ಬಿಸಿಸಿಐ ಗುತ್ತಿಗೆ ಒಪ್ಪಂದ ಮರಳಿ ಪಡೆಯಲು ಶ್ರೇಯಸ್ ಅಯ್ಯರ್ ಮಾಡಬೇಕಾದ ಕೆಲಸವೇನು?
ಬಿಸಿಸಿಐ ಗುತ್ತಿಗೆ ಒಪ್ಪಂದ ಮರಳಿ ಪಡೆಯಲು ಶ್ರೇಯಸ್ ಅಯ್ಯರ್ ಮಾಡಬೇಕಾದ ಕೆಲಸವೇನು?

ರಣಜಿ ಆಡುವಂತೆ ಸೂಚಿಸಿದ್ದರೂ ಮುಂಬೈ ಪರ ಕಣಕ್ಕಿಳಿಯದೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೇಯಸ್ ಅಯ್ಯರ್​ ಕೊನೆಗೂ ಭಾರತ ತಂಡಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿಸಿಐ ಆದೇಶ ನಿರ್ಲಕ್ಷಿಸಿದ್ದ ಕಾರಣ ಭಾರತ ತಂಡದಲ್ಲಿ ಮತ್ತು ಗುತ್ತಿಗೆ ಒಪ್ಪಂದದ ಪಟ್ಟಿಯಿಂದಲೂ ಹೊರ ಬಿದ್ದಿದ್ದರು. ಈಗ ಫೆಬ್ರವರಿ ನಂತರ ಅಯ್ಯರ್​ ಕಾಣಿಸಿಕೊಂಡಿರುವ ಅಯ್ಯರ್ ಅವರಿಗೆ ಇಂಗ್ಲೆಂಡ್ ವಿರುದ್ಧದ ರಾಜ್​ಕೋಟ್​ ಟೆಸ್ಟ್​​​ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

ಗೌತಮ್ ಗಂಭೀರ್ ನೂತನ ಕೋಚ್ ಆಗಿ ನೇಮಕಗೊಂಡ ನಂತರ ಅಯ್ಯರ್​ ಅವರನ್ನು ತಂಡಕ್ಕೆ ವಾಪಸ್ ಕರೆಸಿಕೊಂಡರು. ಇದೀಗ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸ್ಥಾನ ಪಡೆದ ಅಯ್ಯರ್​ 23 ಎಸೆತಗಳಲ್ಲಿ 4 ಬೌಂಡರಿ ಸಹಿತ 23 ರನ್ ಗಳಿಸಿದರು. 2ನೇ ಏಕದಿನ ಪಂದ್ಯಕ್ಕೂ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಮೆನ್​ ಇನ್ ಬ್ಲ್ಯೂಗೆ ಮರಳುವಲ್ಲಿ ಯಶಸ್ವಿಯಾಗಿರುವ ಅಯ್ಯರ್​, ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್​​ನಲ್ಲಿ ಮತ್ತೆ ಸ್ಥಾನ ಪಡೆಯಲಿದ್ದಾರೆಯೇ?

ಬಿಸಿಸಿಐ ಹೇಳಿದ್ದನ್ನು ಅಚ್ಚುಕಟ್ಟಾಗಿ ಪಾಲಿಸಬೇಕು

ಶ್ರೀಲಂಕಾ ಸರಣಿಯಲ್ಲಿ ಆಡುತ್ತಿರುವ ಅಯ್ಯರ್, ಮುಂದಿನ ಆವೃತ್ತಿಯ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಅವಕಾಶ ಪಡೆಯಲು ಅತ್ಯುತ್ತಮ ಪ್ರದರ್ಶನ ನೀಡಬೇಕು. ಹಾಗೆಯೇ ಬಿಸಿಸಿಐ ಹೇಳಿದ್ದನ್ನು ಅಚ್ಚುಕಟ್ಟಾಗಿ ಪಾಲಿಸಬೇಕು. ಆಯ್ಕೆಗಾರರ ​​ಗಮನ ಸೆಳೆಯಲು ದೇಶೀಯ ಕ್ರಿಕೆಟ್‌ನಲ್ಲಿ ರಣಜಿಯನ್ನೂ ಆಡಬೇಕಾಗುತ್ತದೆ. ಸಿಕ್ಕ ಅವಕಾಶದಲ್ಲಿ ಗಮನಾರ್ಹ ಪ್ರದರ್ಶನ ನೀಡಿದರೆ ಮಾತ್ರ, 2025-26ರ ಸೆಂಟ್ರಲ್ ಕಾಂಟ್ರ್ಯಾಕ್ಟ್​ನಲ್ಲಿ ತನ್ನ ಹೆಸರನ್ನು ಸೇರಿಸಲು ಸಾಧ್ಯವಾಗುತ್ತದೆ.

ಇದೇ ಫೆಬ್ರವರಿಯಲ್ಲಿ ನಡೆದಿದ್ದ ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​​ನಲ್ಲಿ ಅಯ್ಯರ್​ ಕಳಪೆ ಫಾರ್ಮ್​ ಮುಂದುವರೆಸಿದ ಕಾರಣ ಮುಂಬೈ ಪರ ರಣಜಿ ಆಡುವಂತೆ ಬಿಸಿಸಿಐ ಸೂಚಿಸಿತ್ತು. ಹೀಗಾಗಿ ಉಳಿದ 3 ಟೆಸ್ಟ್​​ ಪಂದ್ಯಗಳಿಂದ ಹೊರಬಿದ್ದಿದ್ದರು. ಆದರೆ ರಣಜಿ ಕಡೆ ಮುಖ ಮಾಡದ ಕಾರಣ ಬಿಸಿಸಿಐ ಕೋಪಗೊಂಡಿತ್ತು. ಅದರ ನಂತರ, ಬಿಸಿಸಿಐ ಶ್ರೇಯಸ್ ಅಯ್ಯರ್ ಅವರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ತೆಗೆದುಹಾಕಿತು. ಈ ವೇಳೆ ಇಶಾನ್ ಕಿಶನ್​​ಗೂ ಶ್ರೀಮಂತ ಕ್ರಿಕೆಟ್ ಮಂಡಳಿ ಶಿಕ್ಷೆ ವಿಧಿಸಿತ್ತು.

ಅಯ್ಯರ್​ ಜೊತೆಗೆ ಇಶಾನ್​ಗೂ ಶಿಕ್ಷೆ

ಶ್ರೇಯಸ್ ಅಯ್ಯರ್​ ಬಿಸಿಸಿಐ ಆದೇಶವನ್ನು ಆರಂಭದಲ್ಲಿ ನಿರ್ಲಕ್ಷಿಸಿ ಕೊನೆಯಲ್ಲಿ ಪಾಲಿಸಿದರು. ರಣಜಿ ನಾಕೌಟ್ ಪಂದ್ಯಗಳಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದರು. ಆದರೆ, ಎಡಗೈ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಇಶಾನ್ ಕಿಶನ್, ಬಿಸಿಸಿಐ ಆದೇಶವನ್ನು ಗಾಳಿಗೆ ತೂರಿದ್ದರು. ಭಾರತ ತಂಡಕ್ಕೆ ಮರಳಲು ರಣಜಿ ಆಡಬೇಕೆಂದು ಪದೇ ಪದೇ ಹೇಳಿದರೂ ಯಾವುದನ್ನೂ ಲೆಕ್ಕಿಸದೆ ರಹಸ್ಯವಾಗಿ ಐಪಿಎಲ್​ಗೆ ಸಿದ್ಧತೆ ನಡೆಸಿದ್ದರು. ಹಾಗಾಗಿ ಭಾರತ ತಂಡಕ್ಕೆ ಮತ್ತೆ ಅವರನ್ನು ಆಯ್ಕೆ ಮಾಡಿಲ್ಲ. ಅಲ್ಲದೆ, ಗುತ್ತಿಗೆ ಪಟ್ಟಿಯಿಂದಲೂ ಹೊರಬಿದ್ದರು.

2023ರ ಅಕ್ಟೋಬರ್ 1ರಿಂದ 2024ರ ಸೆಪ್ಟೆಂಬರ್ 30ರ ತನಕ ಗುತ್ತಿಗೆ ಪಟ್ಟಿ ಇರಲಿದ್ದು, ಈ ಅವಧಿಯಲ್ಲಿ ಕನಿಷ್ಠ 3 ಟೆಸ್ಟ್, 8 ಏಕದಿನ ಅಥವಾ 10 ಟಿ20ಐ ಆಡುವ ಆಟಗಾರರನ್ನು ಅನುಪಾತದ ಆಧಾರದ ಮೇಲೆ ಗ್ರೇಡ್ ಸಿಗೆ ಸೇರಿಸಲಾಗುವುದು ಎಂದು ಬಿಸಿಸಿಐ ಪ್ರಕಟಿಸಿತ್ತು. ಅಯ್ಯರ್ ಈ ಗುತ್ತಿಗೆ ಆವೃತ್ತಿಯಲ್ಲಿ ಮೊದಲ ಏಕದಿನ ಆಡುತ್ತಿದ್ದು, ಅವರು ಒಪ್ಪಂದವನ್ನು ಮರಳಿ ಪಡೆಯಲು ಇನ್ನೂ ಏಳು ಏಕದಿನ, 3 ಟೆಸ್ಟ್ ಅಥವಾ 10 ಟಿ20ಐ ಪಂದ್ಯ ಆಡಬೇಕು.

ಆದರೆ ಶ್ರೀಲಂಕಾ ಸರಣಿಯ ನಂತರ ಮುಂದಿನ ವರ್ಷದವರೆಗೂ ಭಾರತ ಏಕದಿನ ಸರಣಿ ಆಡುವುದಿಲ್ಲ. ಆದರೆ ಹಲವು ಟೆಸ್ಟ್​​ ಸರಣಿಗಳಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ಅಯ್ಯರ್​ ಟೆಸ್ಟ್​ ತಂಡದಲ್ಲೂ ಅವಕಾಶ ಪಡೆದು 3 ಪಂದ್ಯಗಳಲ್ಲಿ ಆಡಿದರೆ ಅವರು ಮತ್ತೆ ಗುತ್ತಿಗೆ ಪಡೆಯಲಿದ್ದಾರೆ. ಹಾಗಾಗಿ ಕೇಂದ್ರ ಗುತ್ತಿಗೆ ಪಡೆಯಲು ಅಯ್ಯರ್ ಇನ್ನೂ ಸ್ವಲ್ಪ ಸಮಯ ಕಾಯಬೇಕು. ಅಲ್ಲದೆ, ಅವರು ಕೋಚ್ ಗಂಭೀರ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಕಾರಣ ಮತ್ತೆ ಸೆಂಟ್ರಲ್ ಕಾಂಟ್ರ್ಯಾಕ್ಟ್​ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.