ಭಾರತ vs ಆಸ್ಟ್ರೇಲಿಯಾ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ 10 ದಿನ ಗ್ಯಾಪ್; ಎಲ್ಲಿ, ಯಾವಾಗ, ಎಷ್ಟೊತ್ತಿಗೆ ಆರಂಭ?
India vs Australia 2nd Test: ಭಾರತ vs ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಅಥವಾ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಯಾವಾಗ ಆರಂಭವಾಗುತ್ತದೆ. ಎಲ್ಲಿ, ಎಷ್ಟೊತ್ತಿಗೆ ಪ್ರಾರಂಭವಾಗುತ್ತದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ-2025ಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಪರ್ತ್ನ ಆಪ್ಟಸ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 295 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಡಬ್ಲ್ಯುಟಿಸಿ ಫೈನಲ್ ಆಸೆಯನ್ನೂ ಜೀವಂತವಾಗಿರಿಕೊಂಡಿದೆ. ಆದರೆ ಎರಡನೇ ಟೆಸ್ಟ್ ಪಂದ್ಯಕ್ಕೆ 10 ದಿನಗಳ ಅಂತರ ಇದೆ. ಇದು ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದ್ದು ಸಮಯದಲ್ಲಿ ಬದಲಾವಣೆ ಇರಲಿದೆ. ಇಂಡೋ-ಆಸೀಸ್ 2ನೇ ಟೆಸ್ಟ್ ಪಂದ್ಯ ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ.
ಭಾರತ vs ಆಸ್ಟ್ರೇಲಿಯಾ ಮೊದಲ ಟೆಸ್ಟ್ ಸಂಕ್ಷಿಪ್ತ ಸ್ಕೋರ್
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ - 150/10
ಮೊದಲ ಇನ್ನಿಂಗ್ಸ್ ಆಸ್ಟ್ರೇಲಿಯಾ ತಂಡ - 104/10
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ - 487/6 ಡಿಕ್ಲೇರ್
ಎರಡನೇ ಇನ್ನಿಂಗ್ಸ್ ಆಸ್ಟ್ರೇಲಿಯಾ ತಂಡ - 238/10
ಭಾರತೀಯರ ಮಿಂಚಿನ ಆಟ
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಆದರೆ, ಬೌಲಿಂಗ್ನಲ್ಲಿ ತಂಡವನ್ನು ರಕ್ಷಿಸಿದ್ದು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮಿಂಚಿನ ದಾಳಿ ನಡೆಸಿದ ಈ ಜೋಡಿ, 46 ರನ್ಗಳ ಮುನ್ನಡೆ ತಂದುಕೊಟ್ಟರು. ಹರ್ಷಿತ್ ರಾಣಾ ಕೂಡ ಸಾಥ್ ಕೊಟ್ಟರು. 2ನೇ ಇನ್ನಿಂಗ್ಸ್ನಲ್ಲೂ ಈ ಮೂವರು ಮತ್ತೆ ಮಿಂಚಿದರು. 2ನೇ ಇನ್ನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಅದ್ಭುತ ಶತಕಗಳೊಂದಿಗೆ ಆಸ್ಟ್ರೇಲಿಯಾಗೆ ದೊಡ್ಡ ಟಾರ್ಗೆಟ್ ನೀಡಲು ಪ್ರಮುಖ ಪಾತ್ರವಹಿಸಿದರು. ರಾಹುಲ್ 2 ಇನ್ನಿಂಗ್ಸ್ನಲ್ಲಿ ರಕ್ಷಣಾತ್ಮಕ ಆಟದ ಮೂಲಕ ಗಮನ ಸೆಳೆದರು. ಅರ್ಧಶತಕ ಸೇರಿದೆ.
ರೋಹಿತ್ ಶರ್ಮಾ ನಾಯಕ
ಮೊದಲ ಟೆಸ್ಟ್ನಲ್ಲಿ ಜಸ್ಪ್ರೀತ್ ಬುಮ್ರಾ ನಾಯಕನಾಗಿದ್ದರು. ರೋಹಿತ್ ಶರ್ಮಾ ಅವರ ಅಲಭ್ಯತೆಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ವೇಗಿ ಭರ್ಜರಿ ಗೆಲುವಿನ ನಗೆ ಬೀರಿದರು. ರೋಹಿತ್ ಪತ್ನಿ ರಿತಿಕಾ ಸಜ್ದೇಹ್ ಎರಡನೇ ಮಗುವಿಗೆ ಜನ್ಮ ನೀಡಿದ ಹಿನ್ನೆಲೆ ಮೊದಲ ಟೆಸ್ಟ್ನಿಂದ ದೂರ ಉಳಿಯಲು ನಿರ್ಧರಿಸಿದ್ದರು. ಹೀಗಾಗಿ ಬುಮ್ರಾ ತಂಡ ಮುನ್ನಡೆಸಿದ್ದರು. ಸದ್ಯ ಭಾರತ ಸೇರಿಕೊಂಡಿರುವ ರೋಹಿತ್, 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
ಪಿಂಕ್ ಬಾಲ್ ಟೆಸ್ಟ್ಗೂ ಮುನ್ನ ಅಭ್ಯಾಸ ಪಂದ್ಯ
ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಮುನ್ನ ನವೆಂಬರ್ 30 ರಿಂದ ಕ್ಯಾನ್‌ಬೆರಾದಲ್ಲಿ 2 ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡವು ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ಅನ್ನು ಎದುರಿಸಲಿದೆ. ಆಟಗಾರರಿಗೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ನೆರವಾಗುತ್ತದೆ.
ಭಾರತ vs ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಯಾವಾಗ?
ಎರಡನೇ ಟೆಸ್ಟ್ ಡಿಸೆಂಬರ್ 6, 2024 ರಂದು ಪ್ರಾರಂಭವಾಗಲಿದೆ. ಇದು ಡಿಸೆಂಬರ್ 10 ರಂದು ಮುಕ್ತಾಯಗೊಳ್ಳಲಿದೆ.
ಭಾರತ vs ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಎಲ್ಲಿ ನಡೆಯಲಿದೆ?
2ನೇ ಟೆಸ್ಟ್ ಅಥವಾ ಪಿಂಕ್ ಬಾಲ್ ಟೆಸ್ಟ್ ಅಡಿಲೇಡ್‌ನ ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ.
ಭಾರತ vs ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?
ಎರಡನೇ ಟೆಸ್ಟ್ ಪಂದ್ಯವು ಭಾರತೀಯ ಕಾಲಮಾನ 09:30ಕ್ಕೆ ಆರಂಭವಾಗಲಿದೆ. ಆಸ್ಟ್ರೇಲಿಯಾ ಕಾಲಮಾನದ ಪ್ರಕಾರ 2.30ಕ್ಕೆ ಅರಂಭವಾಗಲಿದೆ. ಇದು ಪಿಂಕ್ ಬಾಲ್ ಡೇ/ನೈಟ್ ಟೆಸ್ಟ್ ಆಗಿರುತ್ತದೆ.
ಭಾರತ vs ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಅನ್ನು ಎಲ್ಲಿ ವೀಕ್ಷಿಸಬೇಕು?
ಭಾರತದಲ್ಲಿ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಸ್ಟ್ರೀಮ್ ಮಾಡಬಹುದು.
ಆಸ್ಟ್ರೇಲಿಯಾದಲ್ಲಿ 2ನೇ ಟೆಸ್ಟ್ ಅನ್ನು ಚಾನೆಲ್ 7ನಲ್ಲಿ ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಇದನ್ನು ಫಾಕ್ಸ್ ಕ್ರಿಕೆಟ್‌ನಲ್ಲೂ ಲೈವ್ ಇರಲಿದೆ.