ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್-2025 ಆರಂಭ ಯಾವಾಗ, ಎಲ್ಲಿ, ಉದ್ಘಾಟನಾ ಪಂದ್ಯ ಯಾರ ನಡುವೆ, ಮೆಗಾ ಆಕ್ಷನ್ ಎಂದು? ಎಲ್ಲದಕ್ಕೂ ಇಲ್ಲಿದೆ ಉತ್ತರ

ಐಪಿಎಲ್-2025 ಆರಂಭ ಯಾವಾಗ, ಎಲ್ಲಿ, ಉದ್ಘಾಟನಾ ಪಂದ್ಯ ಯಾರ ನಡುವೆ, ಮೆಗಾ ಆಕ್ಷನ್ ಎಂದು? ಎಲ್ಲದಕ್ಕೂ ಇಲ್ಲಿದೆ ಉತ್ತರ

When is IPL 2025 Start : 2025ರಲ್ಲಿ ನಡೆಯುವ 18ನೇ ಆವೃತ್ತಿಯ ಐಪಿಎಲ್ ಯಾವಾಗ, ಎಲ್ಲಿ? ಉದ್ಘಾಟನಾ ಪಂದ್ಯ ಯಾವ ತಂಡಗಳ ನಡುವೆ ನಡೆಯುತ್ತದೆ, ಮೆಗಾ ಹರಾಜು ಜರುಗುವುದು ಯಾವಾಗ? ಇಲ್ಲಿದೆ ವಿವರ.

ಐಪಿಎಲ್-2025 ಆರಂಭ ಯಾವಾಗ, ಎಲ್ಲಿ, ಉದ್ಘಾಟನಾ ಪಂದ್ಯ ಯಾರ ನಡುವೆ, ಮೆಗಾ ಆಕ್ಷನ್ ಎಂದು? ಎಲ್ಲದಕ್ಕೂ ಇಲ್ಲಿದೆ ಉತ್ತರ
ಐಪಿಎಲ್-2025 ಆರಂಭ ಯಾವಾಗ, ಎಲ್ಲಿ, ಉದ್ಘಾಟನಾ ಪಂದ್ಯ ಯಾರ ನಡುವೆ, ಮೆಗಾ ಆಕ್ಷನ್ ಎಂದು? ಎಲ್ಲದಕ್ಕೂ ಇಲ್ಲಿದೆ ಉತ್ತರ

When is IPL 2025 Start: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2025) ಜಪ ಮುಗಿಯಿತು. ಫೈನಲ್‌ ಪಂದ್ಯದಲ್ಲಿ ಸನ್​​ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಕೋಲ್ಕತಾ ನೈಟ್ ರೈಡರ್ಸ್ (KKR vs SRH) 17ನೇ ಆವೃತ್ತಿಯ ಚಾಂಪಿಯನ್ ಪಟ್ಟಕ್ಕೇರಿತು. ಆ ಮೂಲಕ 3ನೇ ಟ್ರೋಫಿ ಒಲಿಸಿಕೊಂಡಿತು. ಎಲ್ಲರೂ ಟಿ20 ವಿಶ್ವಕಪ್ ಟೂರ್ನಿಯ (T20 World Cup 2024) ಕಡೆಗೆ ಗಮನ ಹರಿಸುತ್ತಿರುವ ವೇಳೆ ಮುಂದಿನ ಅಂದರೆ 2025ರ 18ನೇ ಆವೃತ್ತಿಯ ಐಪಿಎಲ್ (IPL 202) ಯಾವಾಗ? ಎಲ್ಲಿ ನಡೆಯುತ್ತದೆ? ಮೊದಲ ಪಂದ್ಯ ಯಾರೊಂದಿಗೆ ಜರುತ್ತದೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಮುಂದಿನ ಐಪಿಎಲ್ ಎಲ್ಲಿ? ಯಾವಾಗ? (ಐಪಿಎಲ್ 2025)

17ನೇ ಆವೃತ್ತಿ ಮುಕ್ತಾಯಗೊಂಡಿದೆ. ಆದರೆ, 18 ಸೀಸನ್ ಐಪಿಎಲ್ ಆರಂಭಕ್ಕೆ ಇನ್ನೂ ಒಂದು ವರ್ಷ ಬಾಕಿಯಿದ್ದರೂ ಈಗಲೇ ಕುತೂಹಲ ಕೆರಳಿಸಿದೆ. ಮುಂದಿನ ಸಲದ ಟೂರ್ನಿಯೂ ಭಾರತದಲ್ಲೇ ಜರುಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಅನಿವಾರ್ಯ ಇದ್ದರೆ ಮಾತ್ರ ವಿದೇಶದಲ್ಲಿ ಆಡಿಸಬಹುದು. ಆದರೆ ಅಂತಹ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಬಹುದು. ಫೆಬ್ರವರಿ ಮಧ್ಯದಿಂದ ಮಾರ್ಚ್​ ಮಧ್ಯವರೆಗೂ ಮಹಿಳಾ ಪ್ರೀಮಿಯರ್ ಲೀಗ್​ ನಡೆಯಲಿದೆ.

ಈ ವೇಳಾಪಟ್ಟಿ ಗಮನಿಸಿಕೊಂಡು ಐಪಿಎಲ್ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಅದರಂತೆ 2025ರ ಮಾರ್ಚ್ ಕೊನೆಯಲ್ಲಿ ಟೂರ್ನಿ ಆರಂಭಗೊಳ್ಳುವ ಸಾಧ್ಯತೆ ಇದೆ. ಮೇ ಅಂತ್ಯದಲ್ಲಿ ಲೀಗ್ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಪ್ರತಿ ವರ್ಷವೂ ಇದೇ ಅವಧಿಯಲ್ಲಿ ನಡೆಯಲಿದೆ. ಈ ಬಾರಿ ಮೆಗಾ ಆಕ್ಷನ್ ನಡೆಯಲಿದ್ದು, ಯಾವ ತಂಡಗಳು ಯಾವ ಆಟಗಾರರನ್ನು ಬಿಡುತ್ತದೆ ಕೈಬಿಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಉದ್ಘಾಟನಾ ಪಂದ್ಯ ಯಾವ ತಂಡಗಳ ವಿರುದ್ಧ?

ವಾಡಿಕೆಯಂತೆ ಕಳೆದ ಸೀಸನ್ ಫೈನಲಿಸ್ಟ್ ತಂಡಗಳನ್ನೇ ಮುಂದಿನ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯಲಿವೆ. ಕೆಲವೊಮ್ಮೆ ಬದಲಾವಣೆ ಕೂಡ ಮಾಡಬಹುದು.‌ ಚಾಂಪಿಯನ್ ತಂಡದ ತವರಿನ ಮೈದಾನದಲ್ಲಿ ಆರಂಭಿಕ ಪಂದ್ಯ ನಡೆಯಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳ ಮಧ್ಯೆ ಉದ್ಘಾಟನಾ ಪಂದ್ಯ ನಡೆಯುವ ನಿರೀಕ್ಷೆ ಇದೆ. ಆದರೆ ಈ ಬಾರಿ 2023ರ ಫೈನಲಿಸ್ಟ್​​ಗಳ ನಡುವೆ ನಡೆದಿರಲಿಲ್ಲ.

ಈ ಬಾರಿ ಕೆಕೆಆರ್ ಚಾಂಪಿಯನ್ ಆದ ಕಾರಣ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನವು 18ನೇ ಆವೃತ್ತಿಯ ಉದ್ಘಾಟನಾ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಅಲ್ಲದೆ, ಫೈನಲ್ ಮತ್ತು ಎರಡನೇ ಕ್ವಾಲಿಫೈಯರ್​ ಪಂದ್ಯಗಳಿಗೂ ಇದೇ ಮೈದಾನ ವೇದಿಕೆ ಕಲ್ಪಿಸಲಿದೆ. ಅಲ್ಲದೆ, ಈ ಬಾರಿಯಂತೆ ಮುಂದಿನ ಸಲವೂ ಹೋಮ್ ಮತ್ತು ಅವೇ ವಿಧಾನವಂತೆ ಪಂದ್ಯಗಳು ನಡೆಯಲಿವೆ.

ಮೆಗಾ ಆಕ್ಷನ್​ ಯಾವಾಗ ನಡೆಯಲಿದೆ?

ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಯಲಿದೆ. 2022ರಲ್ಲಿ ಕೊನೆಯದಾಗಿ ಹರಾಜು ನಡೆದಿತ್ತು. 2025ರ ಐಪಿಎಲ್​ಗೂ ಮುನ್ನ ಈ ಪ್ರಕ್ರಿಯೆ ನಡೆಯಲಿದೆ. ಇದು ಡಿಸೆಂಬರ್​ ಅಥವಾ ಜನವರಿ ಮೊದಲ ವಾರದಲ್ಲಿ ಜರುಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ ಒಬ್ಬರನ್ನು ರಿಟೈನ್ ಮಾಡಿಕೊಳ್ಳಬಹುದು. ಕೆಲವು ವರದಿಗಳು 3 ರಿಂದ ನಾಲ್ವರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು ಎಂದು ಹೇಳುತ್ತಿವೆ. ಆದರೆ ಕಾದುನೋಡಬೇಕಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ