ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಮುಂದಿನ ಪಂದ್ಯ ಯಾವಾಗ? ಸೂಪರ್-8 ಮ್ಯಾಚ್‌ ದಿನಾಂಕ, ಸಮಯ ಹಾಗೂ ಸ್ಥಳದ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಮುಂದಿನ ಪಂದ್ಯ ಯಾವಾಗ? ಸೂಪರ್-8 ಮ್ಯಾಚ್‌ ದಿನಾಂಕ, ಸಮಯ ಹಾಗೂ ಸ್ಥಳದ ವಿವರ

ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಮುಂದಿನ ಪಂದ್ಯ ಯಾವಾಗ? ಸೂಪರ್-8 ಮ್ಯಾಚ್‌ ದಿನಾಂಕ, ಸಮಯ ಹಾಗೂ ಸ್ಥಳದ ವಿವರ

ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಕ್ರಿಕೆಟ್‌ ತಂಡವು ಸೂಪರ್‌-8 ಹಂತದ ಪಂದ್ಯಗಳನ್ನಾಡಲು ಸಜ್ಜಾಗಿದೆ. ಈವರೆಗೆ ಅಮೆರಿಕದಲ್ಲಿ ಪಂದ್ಯಗಳನ್ನಾಡಿದ್ದ ರೋಹಿತ್‌ ಶರ್ಮಾ ಬಳಗವು, ಮುಂದಿನ ಪಂದ್ಯಗಳಿಗಾಗಿ ವೆಸ್ಟ್‌ ಇಂಡೀಸ್‌ಗೆ ಬರಲಿದೆ.

ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಮುಂದಿನ ಪಂದ್ಯ ಯಾವಾಗ
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಮುಂದಿನ ಪಂದ್ಯ ಯಾವಾಗ (BCCI-X)

ಟಿ20 ವಿಶ್ವಕಪ್ 2024ರಲ್ಲಿ ಭಾರತ ತಂಡದ ಗ್ರೂಪ್‌ ಹಂತದ ಎಲ್ಲಾ ಪಂದ್ಯಗಳು ಮುಕ್ತಾಯಗೊಂಡಿವೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ಟೂರ್ನಿಯ ಮೊದಲು ಮೂರು ಪಂದ್ಯಗಳನ್ನಾಡಿದ ಭಾರತ, ಕೊನೆಯ ಪಂದ್ಯವನ್ನು ಫ್ಲೋರಿಡಾದ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ಆಬೇಕಿತ್ತು. ಕೆನಡಾ ಮತ್ತು ಭಾರತ ತಂಡಗಳ ನಡುವಿನ ಪಂದ್ಯವು ರದ್ದಾಯ್ತು. ಪಂದ್ಯಕ್ಕೂ ಮುನ್ನ ಫ್ಲೋರಿಡಾದಲ್ಲಿ ಮಳೆ ಸುರಿದ ಕಾರಣದಿಂದಾಗಿ ಮೈದಾನ ಒದ್ದೆಯಾಗಿತ್ತು. ಹೀಗಾಗಿ ಔಟ್‌ಫೀಲ್ಡ್‌ ಒಣಗಿಸಲು ಮೈದಾನದ ಸಿಬ್ಬಂದಿ ಎಷ್ಟೇ ಪ್ರಯತ್ನ ಪಟ್ಟರೂ ಅದು ಸಫಲವಾಗಲಿಲ್ಲ. ಅಂತಿಮವಾಗಿ ಅಂಫೈರ್‌ಗಳು ಪಂದ್ಯವನ್ನು ರದ್ದುಪಡಿಸಿದರು.

ಕೆನಡಾ ವಿರುದ್ಧದ ಪಂದ್ಯ ರದ್ದಾಗುವುದರೊಂದಿಗೆ ಭಾರತದ ಗುಂಪು ಹಂತದ ಎಲ್ಲಾ ಪಂದ್ಯಗಳು ಅಂತ್ಯಗೊಂಡಿದೆ. ಎ ಗುಂಪಿನಿಂದ ಅಗ್ರಸ್ಥಾನಿಯಾಗಿ ಭಾರತವು ಸೂಪರ್‌ 8 ಹಂತಕ್ಕೆ ಲಗ್ಗೆ ಹಾಕಿದೆ. ಭಾರತದೊಂದಿಗೆ ಎ ಗುಂಪಿನಿಂದ ಯುಎಸ್‌ಎ ಕೂಡಾ ಮುಂದಿನ ಹಂತ ಪ್ರವೇಶಿಸಿದೆ. ಇದೇ ವೇಳೆ ಪಾಕಿಸ್ತಾನ ಹಾಗೂ ಐರ್ಲೆಂಡ್‌ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.

ಎ ಗುಂಪಿನಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದ ಭಾರತ, ಒಟ್ಟು 7 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದೆ. ಹಾಗಿದ್ದರೆ, ತಂಡದ ಮುಂದಿನ ಪಂದ್ಯ ಯಾವಾಗ ನಡೆಯಲಿದೆ? ಭಾರತದ ಪಂದ್ಯ ಯಾವಾಗ ಇರಲಿದೆ ಎಂಬ ವಿವರ ನೋಡೋಣ.

ಭಾರತ ತಂಡವು ಸೂಪರ್‌-8 ಹಂತದ ಪಂದ್ಯಗಳೀಗಾಗಿ ಇದೀಗ ಅಮೆರಿಕದಿಂದ ವೆಸ್ಟ್‌ ಇಂಡೀಸ್‌ಗೆ ಹಾರಲಿದೆ. ರೋಹಿತ್‌ ಶರ್ಮಾ ಬಳಗದ ಮುಂದಿನ ಎಲ್ಲಾ ಪಂದ್ಯಗಳು ವಿಂಡೀಸ್‌ನಲ್ಲೇ ನಡೆಯಲಿದೆ.

ಅಫ್ಘಾನಿಸ್ತಾನ ವಿರುದ್ಧ ಮೊದಲ ಪಂದ್ಯ

ಸೂಪರ್​-8 ಹಂತದಲ್ಲಿ ಭಾರತ ತಂಡ ತನ್ನ ಮೊದಲ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಜೂನ್ 20ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್​​ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಸೂಪರ್​-8ರಲ್ಲಿ ಭಾರತ ತನ್ನ ಎರಡನೇ ಪಂದ್ಯವನ್ನು ಜೂನ್ 22ರಂದು ಆಡಲಿದೆ. ಆಂಟಿಗುವಾದ ಸರ್​ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಡಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡದೊಂದಿಗೆ ಭಾರತ ಕಾದಾಟ ನಡೆಸಲಿದೆ. ಬಾಂಗ್ಲಾದೇಶ ತಂಡವು ಭಾರತದ ಎದುರಾಳಿಯಾಗುವುದು ಬಹುತೇಕ ಖಚಿತ. ಬಾಂಗ್ಲಾ ಹೊರತಾಗಿ ಎರಡನೇ ಸ್ಥಾನದ ರೇಸ್‌ನಲ್ಲಿ ನೆದರ್ಲೆಂಡ್ಸ್ ತಂಡವಿದೆ.

ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಆಡಲಿದೆ. ಈ ಪಂದ್ಯವು ಜೂನ್ 24ರಂದು ಸೇಂಟ್ ಲೂಸಿಯಾದ ಡೇರನ್ ಸ್ಯಾಮಿ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಸೆಮಿಫೈನಲ್‌ ಹಂತಕ್ಕೆ ಪ್ರವೇಶಿಸಲು ಈ ಮೂರು ಪಂದ್ಯಗಳ ಪೈಕಿ ಕನಿಷ್ಠ ಎರಡರಲ್ಲಿಯಾದರೂ ಭಾರತ ಗೆಲ್ಲಬೇಕಾಗುತ್ತದೆ. ಜೂನ್‌ 26 ಮತ್ತು 27ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ.

ಸೂಪರ್​​-8ರಲ್ಲಿ ಭಾರತ ತಂಡದ ವೇಳಾಪಟ್ಟಿ

  • ಜೂನ್ 20 - ಭಾರತ vs ಅಫ್ಘಾನಿಸ್ತಾನ, (ಕೆನ್ಸಿಂಗ್ಟನ್ ಓವಲ್​​ ಮೈದಾನ, ಬಾರ್ಬಡೋಸ್​)
  • ಜೂನ್ 22 - ಭಾರತ vs ಬಾಂಗ್ಲಾದೇಶ, (ಸರ್​ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಸ್ಟೇಡಿಯಂ, ಆಂಟಿಗುವಾ)
  • ಜೂನ್ 24 - ಭಾರತ vs ಆಸ್ಟ್ರೇಲಿಯಾ (ಡೇರನ್ ಸ್ಯಾಮಿ ನ್ಯಾಷನಲ್ ಕ್ರಿಕೆಟ್ ಮೈದಾನ, ಸೇಂಟ್ ಲೂಸಿಯಾ)

ಟಿ20 ವಿಶ್ವಕಪ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ವಿರಾಟ್​ ಕೊಹ್ಲಿ ವೈಫಲ್ಯ; ವಿಶ್ವಕಪ್ ಸೂಪರ್​-8 ಪಂದ್ಯಗಳಿಗೂ ಮುನ್ನ ಮಹತ್ವದ ಸಲಹೆ ನೀಡಿದ ಮೊಹಮ್ಮದ್ ಕೈಫ್

Whats_app_banner