ಚಾಂಪಿಯನ್ಸ್ ಟ್ರೋಫಿ ಆಯ್ತು, ಈಗ ಮುಂದಿನ ಐಸಿಸಿ ಟೂರ್ನಿ ಯಾವಾಗ, ಎಲ್ಲಿ? 2031ರ ತನಕ ದೊಡ್ಡ ಕಾರ್ಯಕ್ರಮ​ಗಳ ಪಟ್ಟಿ ಇದು!
ಕನ್ನಡ ಸುದ್ದಿ  /  ಕ್ರಿಕೆಟ್  /  ಚಾಂಪಿಯನ್ಸ್ ಟ್ರೋಫಿ ಆಯ್ತು, ಈಗ ಮುಂದಿನ ಐಸಿಸಿ ಟೂರ್ನಿ ಯಾವಾಗ, ಎಲ್ಲಿ? 2031ರ ತನಕ ದೊಡ್ಡ ಕಾರ್ಯಕ್ರಮ​ಗಳ ಪಟ್ಟಿ ಇದು!

ಚಾಂಪಿಯನ್ಸ್ ಟ್ರೋಫಿ ಆಯ್ತು, ಈಗ ಮುಂದಿನ ಐಸಿಸಿ ಟೂರ್ನಿ ಯಾವಾಗ, ಎಲ್ಲಿ? 2031ರ ತನಕ ದೊಡ್ಡ ಕಾರ್ಯಕ್ರಮ​ಗಳ ಪಟ್ಟಿ ಇದು!

When Is The Next ICC Tournament: ಚಾಂಪಿಯನ್ಸ್ ಟ್ರೋಫಿ 2025 ಆಯ್ತು, ಈಗ ಮುಂದಿನ ಐಸಿಸಿ ಟೂರ್ನಿಗಳು ಯಾವಾಗ, ಎಲ್ಲಿ ನಡೆಯಲಿವೆ? 2031ರ ತನಕ ಐಸಿಸಿ ಈವೆಂಟ್​ಗಳ ಪಟ್ಟಿ ಇಲ್ಲಿದೆ.

ಚಾಂಪಿಯನ್ಸ್ ಟ್ರೋಫಿ ಆಯ್ತು, ಈಗ ಮುಂದಿನ ಐಸಿಸಿ ಟೂರ್ನಿ ಯಾವಾಗ, ಎಲ್ಲಿ? 2031ರ ತನಕ ದೊಡ್ಡ ಕಾರ್ಯಕ್ರಮ​ಗಳ ಪಟ್ಟಿ ಇದು!
ಚಾಂಪಿಯನ್ಸ್ ಟ್ರೋಫಿ ಆಯ್ತು, ಈಗ ಮುಂದಿನ ಐಸಿಸಿ ಟೂರ್ನಿ ಯಾವಾಗ, ಎಲ್ಲಿ? 2031ರ ತನಕ ದೊಡ್ಡ ಕಾರ್ಯಕ್ರಮ​ಗಳ ಪಟ್ಟಿ ಇದು!

ದುಬೈನಲ್ಲಿ ನಡೆದ 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಭಾರತ ತಂಡ ಏಕದಿನ ಸ್ವರೂಪದಲ್ಲಿ ಐಸಿಸಿ ಟ್ರೋಫಿ ಬರ ಕೊನೆಗೊಳಿಸಿದೆ. ಇದು ಭಾರತದ ಮೂರನೇ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯಾಗಿದ್ದು, ಆಸ್ಟ್ರೇಲಿಯಾದ 2 ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಮೀರಿಸಿದೆ. ಕಳೆದ ಜೂನ್‌ನಲ್ಲಿ ಟಿ20 ವಿಶ್ವಕಪ್‌ ಜಯಿಸಿದ್ದ ಮೆನ್ ಇನ್ ಬ್ಲೂ ಸತತ ಎರಡನೇ ಪ್ರಶಸ್ತಿಗೆ ಮುತ್ತಿಕ್ಕಿತು. ಇದೀಗ ಭಾರತದ ಖಾತೆಗೆ 2 ಏಕದಿನ ವಿಶ್ವಕಪ್ ಪ್ರಶಸ್ತಿ, 2 ಟಿ20 ವಿಶ್ವಕಪ್, 3 ಚಾಂಪಿಯನ್ಸ್ ಟ್ರೋಫಿಗಳು ಸೇರಿವೆ. ಮುಂದಿನ ಐಸಿಸಿ ಟೂರ್ನಿ ಯಾವಾಗ, ಎಲ್ಲಿ? 2031ರ ತನಕ ಯಾವ ಯಾವ ಐಸಿಸಿ ಟೂರ್ನಿಗಳು ನಡೆಯಲಿವೆ? ಜಾಗತಿಕ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಮುಂದಿನ ದೊಡ್ಡ ಕಾರ್ಯಕ್ರಮಗಳ ನೋಟ ಇಲ್ಲಿದೆ.

ಮುಂಬರುವ ಐಸಿಸಿ ವೇಳಾಪಟ್ಟಿ

2025 - ಚಾಂಪಿಯನ್ಸ್ ಟ್ರೋಫಿ - ಪಾಕಿಸ್ತಾನ (ಮುಕ್ತಾಯ)

2025 - ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ - ಇಂಗ್ಲೆಂಡ್

2025 - ಮಹಿಳಾ ಏಕದಿನ ವಿಶ್ವಕಪ್ - ಭಾರತ

2026 - ಟಿ20 ವಿಶ್ವಕಪ್ - ಭಾರತ ಮತ್ತು ಶ್ರೀಲಂಕಾ

2026 - ಮಹಿಳಾ ಟಿ20 ವಿಶ್ವಕಪ್ - ಇಂಗ್ಲೆಂಡ್

2027 - ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ - ಇಂಗ್ಲೆಂಡ್

2027 - ಏಕದಿನ ವಿಶ್ವಕಪ್ - ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾ

2027 - ಮಹಿಳಾ ಚಾಂಪಿಯನ್ಸ್ ಟ್ರೋಫಿ - ಶ್ರೀಲಂಕಾ

2028 - ಟಿ20 ವಿಶ್ವಕಪ್ - ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್

2029 - ಚಾಂಪಿಯನ್ಸ್ ಟ್ರೋಫಿ - ಭಾರತ

2030 - ಟಿ20 ವಿಶ್ವಕಪ್ - ಇಂಗ್ಲೆಂಡ್, ಐರ್ಲೆಂಡ್, ಸ್ಕಾಟ್ಲೆಂಡ್

2031 - ಏಕದಿನ ವಿಶ್ವಕಪ್ - ಭಾರತ ಮತ್ತು ಬಾಂಗ್ಲಾದೇಶ

ಮುಂದಿನ ಐಸಿಸಿ ಪುರುಷರ ಟೂರ್ನಮೆಂಟ್

ಮುಂದಿನ ಪ್ರಮುಖ ಐಸಿಸಿ ಟೂರ್ನಮೆಂಟ್ ಪುರುಷರ 2026ರ ಐಸಿಸಿ ಟಿ20 ವಿಶ್ವಕಪ್ ಆಗಿದ್ದು, ಫೆಬ್ರವರಿ-ಮಾರ್ಚ್​ನಲ್ಲಿ ನಡೆಯಲಿದೆ. ಈ ಬಹು ನಿರೀಕ್ಷಿತ ಈವೆಂಟ್ ಅನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿವೆ. ಎರಡೂ ಆತಿಥೇಯ ದೇಶಗಳಲ್ಲಿ ಬಹು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. ಟಿ20 ಕ್ರಿಕೆಟ್‌ನ ಅಪಾರ ಜನಪ್ರಿಯತೆ ಗಮನಿಸಿದರೆ, ಈ ಪಂದ್ಯಾವಳಿಯು ಉತ್ಸಾಹವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.

ಮುಂದಿನ ಐಸಿಸಿ ಮಹಿಳಾ ಟೂರ್ನಿ

2025ರಲ್ಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಅನ್ನು ಭಾರತ ಆಯೋಜನೆ ಮಾಡಲಿದೆ. 2013ರ ನಂತರ ಭಾರತವು ಮೊದಲ ಬಾರಿಗೆ ಟೂರ್ನಿ ಆಯೋಜಿಸುತ್ತಿದೆ ಒಟ್ಟಾರೆಯಾಗಿ ಭಾರತವು ಐದನೇ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. 2025ರ ಮಹಿಳಾ ಏಕದಿನ ವಿಶ್ವಕಪ್ ಆವೃತ್ತಿಯು 8 ತಂಡಗಳನ್ನು ಒಳಗೊಂಡಿದ್ದು, ಒಟ್ಟು 31 ಪಂದ್ಯ ನಡೆಯಲಿವೆ. ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ ಭಾಗವಾಗಿ, ವಿಶ್ವಕಪ್‌ಗೆ ಸ್ವಯಂಚಾಲಿತ ಅರ್ಹತೆ ನಿರ್ಧರಿಸುವಲ್ಲಿ ಟೂರ್ನಿಯು ಮಹತ್ವದ್ದಾಗಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner