ಟಿ20 ವಿಶ್ವಕಪ್ ಸೂಪರ್-8ನಲ್ಲಿ ಭಾರತ ಪಂದ್ಯಗಳು ಯಾವಾಗ, ಎಲ್ಲಿ, ಯಾರ ವಿರುದ್ಧ? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ
India T20 World Cup Fixtures: ಐಸಿಸಿ ಮೆನ್ಸ್ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಸೂಪರ್-8ನಲ್ಲಿ ಭಾರತದ ಪಂದ್ಯಗಳು ಯಾವಾಗ, ಎಲ್ಲಿ, ಯಾರ ವಿರುದ್ದ ಇಲ್ಲಿದೆ ಮಾಹಿತಿ.

ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ (T20 World Cup 2024) ಟೀಮ್ ಇಂಡಿಯಾ (Team India) ಭರ್ಜರಿ ಪ್ರದರ್ಶನ ನೀಡುತ್ತಿದೆ. ಕಠಿಣ ಪಿಚ್ಗಳಲ್ಲೂ ತನ್ನ ಆಲ್ರೌಂಡ್ ಪರ್ಫಾಮೆನ್ಸ್ನಿಂದ 3ಕ್ಕೆ ಮೂರು ಗೆಲುವು ಸಾಧಿಸಿ ಸೂಪರ್-8 ಹಂತಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ. ಎ ಗುಂಪಿನಲ್ಲಿ ಮೊದಲ ತಂಡವಾಗಿ ಮುಂದಿನ ಹಂತಕ್ಕೆ ಹೋಗಿದೆ. ಇದೀಗ ಲೀಗ್ನಲ್ಲಿ ತನ್ನ ಕೊನೆಯ ಪಂದ್ಯಕ್ಕೆ ಸಜ್ಜಾಗಿದೆ. ಹಾಗಾದರೆ, ಸೂಪರ್-8 ಹಂತದಲ್ಲಿ ಭಾರತ ಯಾರ ವಿರುದ್ಧ, ಯಾವಾಗ, ಎಲ್ಲಿ ನಡೆಯಲಿವೆ ಎಂಬುದರ ವಿವರ ಇಲ್ಲಿದೆ.
ಎ ಗುಂಪಿಯನಲ್ಲಿ ಭಾರತ ಸೂಪರ್-8 ಪ್ರವೇಶಿಸಿದೆ. ಮೂರಕ್ಕೆ 3 ಗೆದ್ದು 6 ಅಂಕ ಸಂಪಾದಿಸಿ ಅಗ್ರಸ್ಥಾನ ಪಡೆದುಕೊಂಡಿದೆ. ಉಳಿದ ಒಂದು ಪಂದ್ಯದಲ್ಲಿ ಕೆನಡಾ ವಿರುದ್ಧ ಜೂನ್ 15ರಂದು ಕಾದಾಟ ನಡೆಸಲಿದೆ. ಈ ಪಂದ್ಯವು ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಟರ್ಫ್ ಗ್ರೌಂಡ್ನಲ್ಲಿ ನಡೆಯಲಿದೆ. ಸೂಪರ್ 8 ಹಂತದಲ್ಲೂ ಮೊದಲ ಗುಂಪಿನಲ್ಲೇ ಅವಕಾಶ ಪಡೆದಿದೆ. ಈ ಗುಂಪಿನಲ್ಲಿ ಘಟಾನುಘಟಿ ತಂಡಗಳೇ ಅವಕಾಶ ಪಡೆದಿವೆ.
ಸೂಪರ್-8ನಲ್ಲಿ ಭಾರತದ ವೇಳಾಪಟ್ಟಿ
ಸೂಪರ್-8ರಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡದೊಂದಿಗೆ ಸೆಣಸಾಟ ನಡೆಸಲಿದೆ. ಅಂದರೆ ವೆಸ್ಟ್ ಇಂಡೀಸ್ ಅಥವಾ ಅಫ್ಘಾನಿಸ್ತಾನ (ಒಂದು ವೇಳೆ ಅರ್ಹತೆ ಪಡೆದರೆ) ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ಏಕೆಂದರೆ ವಿಂಡೀಸ್ಗಿಂತಲೂ ರನ್ರೇಟ್ ಚೆನ್ನಾಗಿದೆ. ಈ ಪಂದ್ಯವು ಜೂನ್ 20ರಂದು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ.
ಸೂಪರ್-8ರಲ್ಲಿ ಭಾರತ ತನ್ನ ಎರಡನೇ ಪಂದ್ಯವನ್ನು ಜೂನ್ 22ರಂದು ಆಡಲಿದೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಡಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡದೊಂದಿಗೆ ಭಾರತ ಕಾದಾಟ ನಡೆಸಲಿದೆ. ಡಿ ಗುಂಪಿನಲ್ಲಿ ಸೌತ್ ಆಫ್ರಿಕಾ ಮೊದಲ ತಂಡವಾಗಿ ಸೂಪರ್-8 ಪ್ರವೇಶಿಸಿದೆ. ಆದರೆ, ಎರಡನೇ ಸ್ಥಾನಕ್ಕೆ ಬಾಂಗ್ಲಾದೇಶ, ನೆದರ್ಲೆಂಡ್ಸ್, ನೇಪಾಳ, ಶ್ರೀಲಂಕಾ ತಂಡಗಳು ಸೆಣಸಾಟ ನಡೆಸುತ್ತಿವೆ. ಈ ತಂಡಗಳಲ್ಲಿ ಒಂದು ಭಾರತ ತಂಡದ ವಿರುದ್ಧ ಆಡಲಿದೆ.
ಇನ್ನು ಸೂಪರ್-8ರಲ್ಲಿ ಭಾರತ ತನ್ನ 3ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈ ಪಂದ್ಯವು ಜೂನ್ 24ರಂದು ನಡೆಯಲಿದೆ. ಸೇಂಟ್ ಲೂಸಿಯಾದಲ್ಲಿ ಡರೇನ್ ಸ್ಯಾಮಿ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಬಿ ಗುಂಪಿನಲ್ಲಿ ಆಸೀಸ್ ಅಗ್ರಸ್ಥಾನ ಪಡೆದಿದೆ. ಈ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದರೂ ಭಾರತ ಸೆಮಿಫೈನಲ್ಗೆ ಎಂಟ್ರಿಕೊಡಲಿದೆ.
ಸೂಪರ್-8ರಲ್ಲಿ ಭಾರತದ ವೇಳಾಪಟ್ಟಿ ಹೀಗಿರುತ್ತದೆ ನೋಡಿ
- ಜೂನ್ 20 - ಭಾರತ vs ಸಿ1, (ಕೆನ್ಸಿಂಗ್ಟನ್ ಓವಲ್ ಮೈದಾನ, ಬಾರ್ಬಡೋಸ್)
- ಜೂನ್ 22 - ಭಾರತ vs ಡಿ2, (ಸರ್ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಸ್ಟೇಡಿಯಂ, ಆಂಟಿಗುವಾ)
- ಜೂನ್ 24 - ಭಾರತ vs ಆಸ್ಟ್ರೇಲಿಯಾ (ಡರೇನ್ ಸ್ಯಾಮಿ ನ್ಯಾಷನಲ್ ಕ್ರಿಕೆಟ್ ಮೈದಾನ, ಸೇಂಟ್ ಲೂಸಿಯಾ)
ಯಾವ ತಂಡಗಳು ಅರ್ಹತೆ ಪಡೆದಿವೆ?
ಎಲ್ಲಾ 4 ಗುಂಪುಗಳಲ್ಲಿ ತಲಾ 3 ಪಂದ್ಯ ಗೆದ್ದಿರುವ ಭಾರತ (ಗ್ರೂಪ್ ಎ), ಆಸ್ಟ್ರೇಲಿಯಾ (ಗ್ರೂಪ್ ಬಿ), ವೆಸ್ಟ್ ಇಂಡೀಸ್ (ಗ್ರೂಪ್ ಸಿ), ಸೌತ್ ಆಫ್ರಿಕಾ (ಗ್ರೂಪ್ ಡಿ) ತಂಡಗಳು ಸೂಪರ್ 8ಕ್ಕೆ ಅರ್ಹತೆ ಪಡೆದುಕೊಂಡಿವೆ. ಗ್ರೂಪ್ ಬಿನಲ್ಲಿ ನಮೀಬಿಯಾ, ಓಮನ್ ತಂಡಗಳು ಎಲಿಮಿನೇಟ್ ಆಗಿವೆ. ಆದರೀಗ ಇಂಗ್ಲೆಂಡ್, ಪಾಕಿಸ್ತಾನ, ನ್ಯೂಜಿಲೆಂಡ್ ತಂಡಗಳೇ ಹೊರ ಬೀಳುವ ಆತಂಕಕ್ಕೆ ಸಿಲುಕಿವೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
