ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​​ಸಿಬಿ ಈ ವರ್ಷ ಐಪಿಎಲ್ ಟ್ರೋಫಿ ಗೆಲ್ಲಲಿದೆ; 2050ರೊಳಗೆ 3 ಸಲ ಚಾಂಪಿಯನ್ ಆಗಲಿದ್ಯಂತೆ; ಭವಿಷ್ಯ ನುಡಿದ ಚಾಟ್​ಜಿಪಿಟಿ, ಪಟ್ಟಿ ಇಲ್ಲಿದೆ

ಆರ್​​ಸಿಬಿ ಈ ವರ್ಷ ಐಪಿಎಲ್ ಟ್ರೋಫಿ ಗೆಲ್ಲಲಿದೆ; 2050ರೊಳಗೆ 3 ಸಲ ಚಾಂಪಿಯನ್ ಆಗಲಿದ್ಯಂತೆ; ಭವಿಷ್ಯ ನುಡಿದ ಚಾಟ್​ಜಿಪಿಟಿ, ಪಟ್ಟಿ ಇಲ್ಲಿದೆ

ಆರ್​ಸಿಬಿ ಟ್ರೋಫಿ ಗೆಲ್ಲುವ ದಿನಾಂಕವನ್ನು ಚಾಟ್ ​ಜಿಪಿಟಿ ಬಹಿರಂಗಪಡಿಸಿದೆ. ಚಾಟ್​ ಜಿಪಿಟಿ ಮುಂದಿನ 27 ವರ್ಷಗಳಲ್ಲಿ ಅಂದರೆ 2050 ರವರೆಗೂ ಐಪಿಎಲ್​ ಟ್ರೋಫಿ ಜಯಿಸುವ ತಂಡಗಳು ಯಾವುವು ಎಂದು ಭವಿಷ್ಯ ನುಡಿದಿದೆ.

ಆರ್​​ಸಿಬಿ ಈ ವರ್ಷ ಐಪಿಎಲ್ ಟ್ರೋಫಿ ಗೆಲ್ಲಲಿದೆ; 2050ರೊಳಗೆ 3 ಸಲ ಚಾಂಪಿಯನ್ ಆಗಲಿದ್ಯಂತೆ
ಆರ್​​ಸಿಬಿ ಈ ವರ್ಷ ಐಪಿಎಲ್ ಟ್ರೋಫಿ ಗೆಲ್ಲಲಿದೆ; 2050ರೊಳಗೆ 3 ಸಲ ಚಾಂಪಿಯನ್ ಆಗಲಿದ್ಯಂತೆ

17ನೇ ಆವೃತ್ತಿಯ ಐಪಿಎಲ್​ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಟ್ರೋಫಿ ಗೆಲ್ಲುವುದು ಅನುಮಾನವಾಗಿದೆ. ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಸೋತಿರುವ ಆರ್​​ಸಿಬಿ (RCB 2024), ಪಾತಾಳಕ್ಕೆ ಕುಸಿದಿದೆ. ಉಳಿದ 8 ಪಂದ್ಯಗಳಲ್ಲಿ 8 ಅನ್ನೂ ಗೆದ್ದರಷ್ಟೆ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ಏಪ್ರಿಲ್​ 11ರಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧವೂ 7 ವಿಕೆಟ್​ಗಳಿಂದ ಆರ್​ಸಿಬಿ ಪರಾಭವಗೊಂಡಿತು. ಇದರ ಬೆನ್ನಲ್ಲೇ ಆರ್​ಸಿಬಿ, ಯಾವಾಗ ಕಪ್ ಗೆಲ್ಲುತ್ತೋ ಎಂಬ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿ ಹರಿದಾಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಆದರೀಗ ಆರ್​ಸಿಬಿ ಟ್ರೋಫಿ ಗೆಲ್ಲುವ ದಿನಾಂಕವನ್ನು ಚಾಟ್ ​ಜಿಪಿಟಿ ಬಹಿರಂಗಪಡಿಸಿದೆ. ಚಾಟ್​ ಜಿಪಿಟಿ ಮುಂದಿನ 27 ವರ್ಷಗಳಲ್ಲಿ ಅಂದರೆ 2050 ರವರೆಗೂ ಐಪಿಎಲ್ (IPL)​ ಟ್ರೋಫಿ ಜಯಿಸುವ ತಂಡಗಳು ಯಾವುವು ಎಂದು ಭವಿಷ್ಯ ನುಡಿದಿದೆ. ಆದರೆ, ಈ ಪೈಕಿ ಆರ್​ಸಿಬಿ 3 ಬಾರಿ ಟ್ರೋಫಿ ಗೆಲ್ಲಲಿದೆ. ಪ್ರಸಕ್ತ ವರ್ಷ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)​ ಟ್ರೋಫಿ ಜಯಿಸಲಿದೆ ಎಂದು ಚಾಟ್​ಜಿಪಿಟಿ ತಿಳಿಸಿದೆ. ಇದರ ಪ್ರಕಾರ ಆರ್​​ಸಿಬಿ ಇನ್ನೂ ಟ್ರೋಫಿ ಗೆಲ್ಲಲು ನಾಲ್ಕು ವರ್ಷಗಳು ಬೇಕಿವೆಯಂತೆ. 2027ರಲ್ಲಿ ಆರ್​ಸಿಬಿ ತನ್ನ ಮೊದಲ ಟ್ರೋಫಿ ಗೆಲ್ಲಲಿದೆಯಂತೆ.

ಸದ್ಯ ಚಾಟ್ ಜಿಪಿಟಿ 2024ರಿಂದ 2050ರವರೆಗೆ ಐಪಿಎಲ್ ಟ್ರೋಫಿ ಗೆಲ್ಲುವ ತಂಡಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್​ಸಿಬಿ, 2027ರಲ್ಲಿ ತನ್ನ ಚೊಚ್ಚಲ ಪ್ರಶಸ್ತಿ ಗೆದ್ದ ಬಳಿಕ 2034 ಮತ್ತು 2044ರ ಅವಧಿಯಲ್ಲಿ ಆರ್‌ಸಿಬಿ, ಚಾಂಪಿಯನ್ಸ್‌ ಆಗಲಿದೆ ಎಂದು ತಿಳಿಸಿದೆ. ಹಾಗಾಗಿ ಬೆಂಗಳೂರು ಅಭಿಮಾನಿಗಳು ತಮ್ಮ ಮೊದಲ ಟ್ರೋಫಿಗಾಗಿ ಈ ವರ್ಷವೂ ಸೇರಿ ಇನ್ನೂ ನಾಲ್ಕು ವರ್ಷಗಳ ಕಾಲ ಕಾಯಬೇಕು. 2024ರಿಂದ 2050ರವರೆಗೂ ಯಾವ ತಂಡದ ಯಾವ ವರ್ಷ ಟ್ರೋಫಿ ಗೆಲ್ಲಲಿದೆ ಎಂಬುದನ್ನು ಈ ಮುಂದೆ ನೋಡೋಣ.

ವರ್ಷ ಮತ್ತು ಚಾಂಪಿಯನ್ ತಂಡಗಳು (ಚಾಟ್ ಜಿಟಿಪಿ ಪ್ರಕಾರ)

2024 - ಚೆನ್ನೈ ಸೂಪರ್ ಕಿಂಗ್ಸ್

2025 - ಮುಂಬೈ ಇಂಡಿಯನ್ಸ್

2026 - ಕೋಲ್ಕತ್ತಾ ನೈಟ್ ರೈಡರ್ಸ್

2027 - ರಾಯಲ್ ಚಾಲೆಂಜರ್ಸ್ ಬೆಂಗಳೂರು

2028 - ರಾಜಸ್ಥಾನ ರಾಯಲ್ಸ್

2029 - ಸನ್​​ರೈಸರ್ಸ್ ಹೈದರಾಬಾದ್

2030 - ಗುಜರಾತ್ ಟೈಟಾನ್ಸ್

2031 - ಡೆಲ್ಲಿ ಕ್ಯಾಪಿಟಲ್ಸ್

2032 - ಮುಂಬೈ ಇಂಡಿಯನ್ಸ್

2033 - ಚೆನ್ನೈ ಸೂಪರ್ ಕಿಂಗ್ಸ್

2034 - ರಾಯಲ್ ಚಾಲೆಂಜರ್ಸ್ ಬೆಂಗಳೂರು

2035 - ಕೋಲ್ಕತ್ತಾ ನೈಟ್ ರೈಡರ್ಸ್

2036 - ಲಕ್ನೋ ಸೂಪರ್ ಜೈಂಟ್ಸ್

2037 - ಸನ್​​ರೈಸರ್ಸ್ ಹೈದರಾಬಾದ್

2038 - ಡೆಲ್ಲಿ ಕ್ಯಾಪಿಟಲ್ಸ್

2039 - ಪಂಜಾಬ್ ಕಿಂಗ್ಸ್

2040 - ಮುಂಬೈ ಇಂಡಿಯನ್ಸ್

2041 - ಕೋಲ್ಕತ್ತಾ ನೈಟ್ ರೈಡರ್ಸ್

2042 - ಚೆನ್ನೈ ಸೂಪರ್ ಕಿಂಗ್ಸ್

2043 - ರಾಜಸ್ಥಾನ ರಾಯಲ್ಸ್

2044 - ರಾಯಲ್ ಚಾಲೆಂಜರ್ಸ್ ಬೆಂಗಳೂರು

2045 - ಗುಜರಾತ್ ಟೈಟಾನ್ಸ್

2046 - ಡೆಲ್ಲಿ ಕ್ಯಾಪಿಟಲ್ಸ್

2047 - ಸನ್​ರೈಸರ್ಸ್ ಹೈದರಾಬಾದ್

2048 - ಲಕ್ನೋ ಸೂಪರ್ ಜೈಂಟ್ಸ್

2049 - ಮುಂಬೈ ಇಂಡಿಯನ್ಸ್

2050 - ಚೆನ್ನೈ ಸೂಪರ್ ಕಿಂಗ್ಸ್

IPL_Entry_Point