ಇಲ್ಲಿದೆ ಏಕದಿನ ವಿಶ್ವಕಪ್‌ ಪರಿಷ್ಕೃತ ವೇಳಾಪಟ್ಟಿ; ದಿನಾಂಕ, ಸಮಯ ಹಾಗೂ ಆತಿಥ್ಯ ಸ್ಥಳ ಸಹಿತ ಸಂಪೂರ್ಣ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಲ್ಲಿದೆ ಏಕದಿನ ವಿಶ್ವಕಪ್‌ ಪರಿಷ್ಕೃತ ವೇಳಾಪಟ್ಟಿ; ದಿನಾಂಕ, ಸಮಯ ಹಾಗೂ ಆತಿಥ್ಯ ಸ್ಥಳ ಸಹಿತ ಸಂಪೂರ್ಣ ವಿವರ

ಇಲ್ಲಿದೆ ಏಕದಿನ ವಿಶ್ವಕಪ್‌ ಪರಿಷ್ಕೃತ ವೇಳಾಪಟ್ಟಿ; ದಿನಾಂಕ, ಸಮಯ ಹಾಗೂ ಆತಿಥ್ಯ ಸ್ಥಳ ಸಹಿತ ಸಂಪೂರ್ಣ ವಿವರ

ICC ODI World Cup 2023 Schedule: ಐಸಿಸಿ ಏಕದಿನ ವಿಶ್ವಕಪ್‌ಗೆ ಜಗತ್ತಿನ 10 ಬಲಿಷ್ಠ ತಂಡಗಳು ಸಜ್ಜಾಗಿವೆ. ಪಂದ್ಯಾವಳಿ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಅದಕ್ಕೂ ಮುನ್ನ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನೊಮ್ಮೆ ನೋಡಿಕೊಳ್ಳಿ.

ಏಕದಿನ ವಿಶ್ವಕಪ್‌ 2023 ವೇಳಾಪಟ್ಟಿ
ಏಕದಿನ ವಿಶ್ವಕಪ್‌ 2023 ವೇಳಾಪಟ್ಟಿ (ICC Twitter)

ಭಾರತದ ಆತಿಥ್ಯದಲ್ಲಿ ನಡೆಯಲಿರುವ 2023ರ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ (ICC World Cup 2023)ಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಕಳೆದ ಆವೃತ್ತಿಯ ರನ್ನರ್ ಅಪ್ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.

ಕಳೆದ ಜುಲೈ 27ರಂದು ಐಸಿಸಿಯು ವಿಶ್ವಕಪ್‌ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಆ ಬಳಿಕ ವೇಳಾಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ವಿಶ್ವಕಪ್‌ನ ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ. ತಂಡಗಳು, ಪಂದ್ಯ ದಿನಾಂಕ, ಸಮಯ ಹಾಗೂ ಸ್ಥಳದ ವಿವರ ಈ ಕೆಳಗಿನಂತಿವೆ.

2023ರ ಏಕದಿನ ವಿಶ್ವಕಪ್‌ ಸಂಪೂರ್ಣ ವೇಳಾಪಟ್ಟಿ

ಪಂದ್ಯದಿನಾಂಕಸಮಯಸ್ಥಳ
ಇಂಗ್ಲೆಂಡ್ vs ನ್ಯೂಜಿಲೆಂಡ್ಅಕ್ಟೋಬರ್ 5, 20232:00 PMಅಹಮದಾಬಾದ್
ಪಾಕಿಸ್ತಾನ vs ನೆದರ್ಲ್ಯಾಂಡ್ಸ್ಅಕ್ಟೋಬರ್ 6, 20232:00 PMಹೈದರಾಬಾದ್
ಬಾಂಗ್ಲಾದೇಶ vs ಅಫ್ಘಾನಿಸ್ತಾನಅಕ್ಟೋಬರ್ 7, 202310:30 AMಧರ್ಮಶಾಲಾ
ದಕ್ಷಿಣ ಆಫ್ರಿಕಾ vs ಶ್ರೀಲಂಕಾಅಕ್ಟೋಬರ್ 7, 20232:00 PMದೆಹಲಿ
ಭಾರತ vs ಆಸ್ಟ್ರೇಲಿಯಾಅಕ್ಟೋಬರ್ 8, 20232:00 PMಚೆನ್ನೈ
ನ್ಯೂಜಿಲ್ಯಾಂಡ್ vs ನೆದರ್ಲ್ಯಾಂಡ್ಸ್ಅಕ್ಟೋಬರ್ 9, 20232:00 PMಹೈದರಾಬಾದ್
ಇಂಗ್ಲೆಂಡ್ vs ಬಾಂಗ್ಲಾದೇಶಅಕ್ಟೋಬರ್ 10, 202310:30 AMಧರ್ಮಶಾಲಾ
ಪಾಕಿಸ್ತಾನ vs ಶ್ರೀಲಂಕಾಅಕ್ಟೋಬರ್ 10, 20232:00 PMಹೈದರಾಬಾದ್
ಭಾರತ vs ಅಫ್ಘಾನಿಸ್ತಾನಅಕ್ಟೋಬರ್ 11, 20232:00 PMದೆಹಲಿ
ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾಅಕ್ಟೋಬರ್ 12, 20232:00 PMಲಕ್ನೋ
ನ್ಯೂಜಿಲೆಂಡ್ vs ಬಾಂಗ್ಲಾದೇಶಅಕ್ಟೋಬರ್ 13, 20232:00 PMಚೆನ್ನೈ
ಭಾರತ vs ಪಾಕಿಸ್ತಾನಅಕ್ಟೋಬರ್14, 20232:00 PMಅಹಮದಾಬಾದ್
ಇಂಗ್ಲೆಂಡ್ vs ಅಫ್ಘಾನಿಸ್ತಾನಅಕ್ಟೋಬರ್ 15, 20232:00 PMದೆಹಲಿ
ಆಸ್ಟ್ರೇಲಿಯಾ vs ಶ್ರೀಲಂಕಾಅಕ್ಟೋಬರ್ 16, 20232:00 PMಲಕ್ನೋ
ದಕ್ಷಿಣ ಆಫ್ರಿಕಾ vs ನೆದರ್ಲ್ಯಾಂಡ್ಸ್ಅಕ್ಟೋಬರ್ 17, 20232:00 PMಧರ್ಮಶಾಲಾ
ನ್ಯೂಜಿಲೆಂಡ್ vs ಅಫ್ಘಾನಿಸ್ತಾನಅಕ್ಟೋಬರ್ 18, 20232:00 PMಚೆನ್ನೈ
ಭಾರತ vs ಬಾಂಗ್ಲಾದೇಶಅಕ್ಟೋಬರ್ 19, 20232:00 PMಪುಣೆ
ಆಸ್ಟ್ರೇಲಿಯಾ vs ಪಾಕಿಸ್ತಾನಅಕ್ಟೋಬರ್ 20, 20232:00 PMಬೆಂಗಳೂರು
ನೆದರ್ಲ್ಯಾಂಡ್ಸ್ vs ಶ್ರೀಲಂಕಾಅಕ್ಟೋಬರ್ 21, 202310:30 AMಲಕ್ನೋ
ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾಅಕ್ಟೋಬರ್ 21, 20232:00 PMಮುಂಬೈ
ಭಾರತ vs ನ್ಯೂಜಿಲೆಂಡ್ಅಕ್ಟೋಬರ್ 22, 20232:00 PMಧರ್ಮಶಾಲಾ
ಪಾಕಿಸ್ತಾನ vs ಅಫ್ಘಾನಿಸ್ತಾನಅಕ್ಟೋಬರ್ 23, 20232:00 PMಚೆನ್ನೈ
ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶಅಕ್ಟೋಬರ್ 24, 20232:00 PMಮುಂಬೈ
ಆಸ್ಟ್ರೇಲಿಯಾ vs ನೆದರ್ಲ್ಯಾಂಡ್ಸ್ಅಕ್ಟೋಬರ್‌ 25, 20232:00 PMದೆಹಲಿ
ಇಂಗ್ಲೆಂಡ್ vs ಶ್ರೀಲಂಕಾಅಕ್ಟೋಬರ್ 26, 20232:00 PMಬೆಂಗಳೂರು
ಪಾಕಿಸ್ತಾನ vs ದಕ್ಷಿಣ ಆಫ್ರಿಕಾಅಕ್ಟೋಬರ್ 27, 20232:00 PMಚೆನ್ನೈ
ಆಸ್ಟ್ರೇಲಿಯಾ vs ನ್ಯೂಜಿಲೆಂಡ್ಅಕ್ಟೋಬರ್ 28, 202310:30 AMಧರ್ಮಶಾಲಾ
ನೆದರ್ಲ್ಯಾಂಡ್ಸ್ vs ಬಾಂಗ್ಲಾದೇಶಅಕ್ಟೋಬರ್ 28, 20232:00 PMಕೋಲ್ಕತ್ತಾ
ಭಾರತ vs ಇಂಗ್ಲೆಂಡ್ಅಕ್ಟೋಬರ್ 29, 20232:00 PMಲಕ್ನೋ
ಅಫ್ಘಾನಿಸ್ತಾನ vs ಶ್ರೀಲಂಕಾಅಕ್ಟೋಬರ್ 30, 20232:00 PMಪುಣೆ
ಪಾಕಿಸ್ತಾನ vs ಬಾಂಗ್ಲಾದೇಶಅಕ್ಟೋಬರ್ 31, 20232:00 PMಕೋಲ್ಕತ್ತಾ
ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾನವೆಂಬರ್ 1, 20232:00 PMಪುಣೆ
ಭಾರತ vs ಶ್ರೀಲಂಕಾನವೆಂಬರ್ 2, 20232:00 PMಮುಂಬೈ
ನೆದರ್ಲ್ಯಾಂಡ್ಸ್ vs ಅಫ್ಘಾನಿಸ್ತಾನನವೆಂಬರ್ 3, 20232:00 PMಲಕ್ನೋ
ನ್ಯೂಜಿಲೆಂಡ್ vs ಪಾಕಿಸ್ತಾನನವೆಂಬರ್ 4, 202310:30 AMಬೆಂಗಳೂರು
ಇಂಗ್ಲೆಂಡ್ vs ಆಸ್ಟ್ರೇಲಿಯಾನವೆಂಬರ್ 4, 20232:00 PMಅಹಮದಾಬಾದ್
ಭಾರತ vs ದಕ್ಷಿಣ ಆಫ್ರಿಕಾನವೆಂಬರ್ 5, 20232:00 PMಕೋಲ್ಕತ್ತಾ
ಬಾಂಗ್ಲಾದೇಶ vs ಶ್ರೀಲಂಕಾನವೆಂಬರ್ 6, 20232:00 PMದೆಹಲಿ
ಆಸ್ಟ್ರೇಲಿಯಾ vs ಅಫ್ಘಾನಿಸ್ತಾನನವೆಂಬರ್ 7, 20232:00 PMಮುಂಬೈ
ಇಂಗ್ಲೆಂಡ್ vs ನೆದರ್ಲ್ಯಾಂಡ್ಸ್ನವೆಂಬರ್ 8, 20232:00 PMಪುಣೆ
ನ್ಯೂಜಿಲೆಂಡ್ vs ಶ್ರೀಲಂಕಾನವೆಂಬರ್ 9, 20232:00 PMಬೆಂಗಳೂರು
ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನನವೆಂಬರ್‌ 10, 20232:00 PMಅಹಮದಾಬಾದ್
ಆಸ್ಟ್ರೇಲಿಯಾ vs ಬಾಂಗ್ಲಾದೇಶನವೆಂಬರ್ 11, 202310:30 AMಪುಣೆ
ಇಂಗ್ಲೆಂಡ್ vs ಪಾಕಿಸ್ತಾನನವೆಂಬರ್ 11, 20232:00 PMಕೋಲ್ಕತ್ತಾ
ಭಾರತ vs ನೆದರ್ಲ್ಯಾಂಡ್ಸ್ನವೆಂಬರ್ 12, 20232:00 PMಬೆಂಗಳೂರು
ಮೊದಲ ಸೆಮಿ ಫೈನಲ್ನವೆಂಬರ್ 15, 20232:00 PMಮುಂಬೈ
ಎರಡನೇ ಸೆಮಿಫೈನಲ್ನವೆಂಬರ್ 16, 20232:00 PMಕೋಲ್ಕತ್ತಾ
ಫೈನಲ್ನವೆಂಬರ್ 19, 20232:00 PMಅಹಮದಾಬಾದ್

ಭಾರತದ ಪಂದ್ಯಗಳು ಎಲ್ಲಿಲ್ಲಿ ನಡೆಯಲಿವೆ?

ಭಾರತ ತನ್ನ ಪಂದ್ಯಗಳನ್ನು ಚೆನ್ನೈ, ದೆಹಲಿ, ಅಹಮದಾಬಾದ್, ಪುಣೆ, ಧರ್ಮಶಾಲಾ, ಲಖನೌ, ಮುಂಬೈ, ಕೋಲ್ಕತ್ತಾ, ಬೆಂಗಳೂರು ಮತ್ತು ಅಹಮದಾಬಾದ್ ಮೈದಾನಗಳಲ್ಲಿ ಆಡಲಿದೆ. ಏಕದಿನ ವಿಶ್ವಕಪ್‌ನಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಬಾರಿಯ ಏಕದಿನ ವಿಶ್ವಕಪ್‌ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ. ಕಳೆದ ಆವೃತ್ತಿಯ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಭಾಗವಹಿಸಲಿರುವ ಎಲ್ಲಾ 10 ತಂಡಗಳು ಅಂತಿಮ ಹಂತದ ತಯಾರಿ ನಡೆಸುತ್ತಿವೆ. ಟೂರ್ನಿಯ ಫೈನಲ್‌ ಪಂದ್ಯವು ನವೆಂಬರ್ 19ರಂದು ನಡೆಯಲಿದೆ.

Whats_app_banner