ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂದಿನ ಏಕದಿನ ವಿಶ್ವಕಪ್ ಯಾವಾಗ, ಎಲ್ಲಿ; ಭಾರತದಲ್ಲಿ ಮತ್ತೆ ಈ ಟೂರ್ನಿ ನಡೆಯುವುದೆಂದು? ಇಲ್ಲಿದೆ ವಿವರ

ಮುಂದಿನ ಏಕದಿನ ವಿಶ್ವಕಪ್ ಯಾವಾಗ, ಎಲ್ಲಿ; ಭಾರತದಲ್ಲಿ ಮತ್ತೆ ಈ ಟೂರ್ನಿ ನಡೆಯುವುದೆಂದು? ಇಲ್ಲಿದೆ ವಿವರ

Cricket World Cup hosts: ಅಕ್ಟೋಬರ್ 5ರಂದು ಆರಂಭವಾದ 2023ರ ವಿಶ್ವಕಪ್ ನವೆಂಬರ್​ 19ಕ್ಕೆ ಕೊನೆಗೊಂಡಿತು. ಇದೀಗ ಮುಂದಿನ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿ ಯಾವಾಗ? ಎಲ್ಲಿ ನಡೆಯುತ್ತದೆ? ಭಾರತದಲ್ಲಿ ಮತ್ತೆ ಯಾವಾಗ? ಎಂಬ ಚರ್ಚೆ ನಡೆಯುತ್ತಿದೆ. ಅದಕ್ಕೆ ಇಲ್ಲಿದೆ ಉತ್ತರ.

ಟ್ರೋಫಿಯೊಂದಿಗೆ ಸಂಭ್ರಮಿಸಿದ ಆಸ್ಟ್ರೇಲಿಯಾ ತಂಡ.
ಟ್ರೋಫಿಯೊಂದಿಗೆ ಸಂಭ್ರಮಿಸಿದ ಆಸ್ಟ್ರೇಲಿಯಾ ತಂಡ. (Bibhash Lodh)

ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯು (ODI Cricket World Cup 2023) ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆತಿಥೇಯ ಟೀಮ್ ಇಂಡಿಯಾ (India vs Australia) ರನ್ನರ್​ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಅಕ್ಟೋಬರ್ 5ರಂದು ಆರಂಭವಾದ ಕ್ರಿಕೆಟ್ ಹಬ್ಬವು ನವೆಂಬರ್​ 19ಕ್ಕೆ ಕೊನೆಗೊಂಡಿತು. ಇದೀಗ ಮುಂದಿನ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿ ಯಾವಾಗ? ಎಲ್ಲಿ ನಡೆಯುತ್ತದೆ? ಭಾರತದಲ್ಲಿ ಮತ್ತೆ ಯಾವಾಗ? ಎಂಬ ಚರ್ಚೆ ನಡೆಯುತ್ತಿದೆ. ಅದಕ್ಕೆ ಇಲ್ಲಿದೆ ಉತ್ತರ.

ಮುಂದಿನ ಏಕದಿ ವಿಶ್ವಕಪ್ ಯಾವಾಗ?

ಸದ್ಯ 13 ಆವೃತ್ತಿಯ ವಿಶ್ವಕಪ್​​ಗೆ ತೆರೆ ಬಿದ್ದಿದೆ. ಇದೀಗ ಮುಂದಿನ ವಿಶ್ವಕಪ್ ಟೂರ್ನಿಗೆ ಇನ್ನೂ ನಾಲ್ಕು ವರ್ಷಗಳ ಕಾಲ ಕಾಯಬೇಕು. ಪ್ರತಿ 4 ವರ್ಷಗಳಿಗೊಮ್ಮೆ ಈ ಕ್ರಿಕೆಟ್ ಜಾತ್ರೆ ನಡೆಯಲಿದೆ. ಇದೀಗ 14ನೇ ಆವೃತ್ತಿಯ ಟೂರ್ನಿ 2027ರಲ್ಲಿ ನಡೆಯಲಿದೆ.

2027ರ ಏಕದಿನ ವಿಶ್ವಕಪ್ ನಡೆಯವುದೆಲ್ಲಿ?

2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿತ್ತು. 2019ರಲ್ಲಿ ಇಂಗ್ಲೆಂಡ್, ವಿಶ್ವಕಪ್​ ಅನ್ನು ಆಯೋಜಿಸಿತ್ತು. 2027ರಲ್ಲಿ ನಡೆಯಲಿರುವ ಈ ಟೂರ್ನಿಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳು ಆತಿಥ್ಯ ವಹಿಸಲಿವೆ.

ಎಷ್ಟು ತಂಡಗಳು ಪಾಲ್ಗೊಳ್ಳಲಿವೆ?

ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಜರುಗುವ 2027ರ ವಿಶ್ವಕಪ್​ನಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿವೆ. ಟೂರ್ನಿಗೆ ಆತಿಥ್ಯ ವಹಿಸುವ ದೇಶಗಳು ನೇರವಾಗಿ ಅರ್ಹತೆ ಪಡೆಯಲಿವೆ. ಹಾಗಾಗಿ 14ನೇ ಆವೃತ್ತಿಗೆ ತಂಡಗಳ ಸಂಖ್ಯೆ ಏರಲಿದೆ.

ವಿಶ್ವಕಪ್​ಗೆ ತಂಡಗಳು ಅರ್ಹತೆ ಹೇಗೆ ಪಡೆಯಲಿವೆ?

ಆತಿಥ್ಯ ವಹಿಸುವ ಎರಡು ದೇಶಗಳ ಜೊತೆಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ 8 ಸ್ಥಾನ ಪಡೆದಿರುವ ತಂಡಗಳು ವಿಶ್ವಕಪ್ 2027ಕ್ಕೆ ನೇರವಾಗಿ ಅರ್ಹತೆ ಪಡೆಯಲಿವೆ. ಉಳಿದ 4 ಸ್ಥಾನಗಳಿಗೆ 2026ರಲ್ಲಿ ಅರ್ಹತಾ ಸುತ್ತಿನ ಟೂರ್ನಿ ನಡೆಯಲಿದೆ.

ನಮೀಬಿಯಾ ಯಾಕೆ ಅರ್ಹತೆ ಪಡೆದಿಲ್ಲ?

ನಮೀಬಿಯಾ ಕೂಡ 2027ರ ವಿಶ್ವಕಪ್​ಗೆ ಆತಿಥ್ಯ ವಹಿಸಲಿದೆ. ಆದರೂ ಟೂರ್ನಿಗೆ ಅರ್ಹತೆ ಪಡೆದಿಲ್ಲ. ನಮೀಬಿಯಾ ಭಾಗವಹಿಸುವಿಕೆ ಇನ್ನೂ ಖಚಿತವಾಗಿಲ್ಲ. ಏಕೆಂದರೆ ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿಲ್ಲ. ಹಾಗಾಗಿ ಅರ್ಹತಾ ಪಂದ್ಯಗಳನ್ನು ಆಡಬೇಕಾದ ಸಾಧ್ಯತೆ ಇದೆ.

ಎಷ್ಟು ಗುಂಪುಗಳಲ್ಲಿ ಟೂರ್ನಿ ನಡೆಯಲಿದೆ?

2027ರ ವಿಶ್ವಕಪ್ ಎರಡು ಗುಂಪುಗಳನ್ನು ಒಳಗೊಂಡಿರುತ್ತದೆ. ಎರಡು ಗುಂಪಿನಲ್ಲಿ 7 ತಂಡಗಳು ಇರಲಿವೆ. ಪ್ರತಿ ಗುಂಪಿನ ಮೊದಲ 3 ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶಿಸಲಿವೆ. ಆ ಬಳಿಕ ಸೆಮಿಫೈನಲ್ ಮತ್ತು ಫೈನಲ್‌ಗಳು ನಡೆಯಲಿವೆ. ಗುಂಪು ಹಂತದಲ್ಲಿ, ಪ್ರತಿ ತಂಡವು ತನ್ನ ಗುಂಪಿನ ಇತರ ತಂಡಗಳ ವಿರುದ್ಧ ಆಡಬೇಕು.

ವೇಳಾಪಟ್ಟಿ ಬಿಡುಗಡೆಯಾಗಿದೆಯೇ?

ಪಂದ್ಯಗಳ ಅಧಿಕೃತ ವೇಳಾಪಟ್ಟಿ ಐಸಿಸಿ ಇನ್ನೂ ಪ್ರಕಟಿಸಿಲ್ಲ. ಟೂರ್ನಿ ಹತ್ತಿರವಿದ್ದಾಗ ಪ್ರಕಟವಾಗುತ್ತದೆ.

ಭಾರತದಲ್ಲಿ ವಿಶ್ವಕಪ್ ಯಾವಾಗ?

ಭಾರತದಲ್ಲಿ ಮತ್ತೆ 8 ವರ್ಷಗಳ ನಂತರ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. 2023ರಲ್ಲಿ ಭಾರತ ಮಾತ್ರ ಟೂರ್ನಿಯನ್ನು ಆಯೋಜನೆ ಮಾಡಿತ್ತು. ಆದರೆ, 2031ರ ವಿಶ್ವಕಪ್​ ಟೂರ್ನಿಯು ಭಾರತ ಮತ್ತು ಬಾಂಗ್ಲಾದೇಶ ದೇಶಗಳು ಜಂಟಿ ಆತಿಥ್ಯದಲ್ಲಿ ಜರುಗಲಿದೆ.

ವಿಶ್ವಕಪ್​ಗೆ ಆತಿಥ್ಯ ವಹಿಸಿದ ದೇಶಗಳು, ವರ್ಷ, ವಿಜೇತರು, ರನ್ನರ್​ಅಪ್ ಪಟ್ಟಿ.

ವರ್ಷಟೂರ್ನಿಗೆ ಆತಿಥ್ಯ ವಹಿಸಿದ ದೇಶಗಳುವಿಜೇತರನ್ನರ್ ಅಪ್
1975ಇಂಗ್ಲೆಂಡ್ವೆಸ್ಟ್ ಇಂಡೀಸ್ಆಸ್ಟ್ರೇಲಿಯಾ
1979ಇಂಗ್ಲೆಂಡ್ವೆಸ್ಟ್ ಇಂಡೀಸ್ಇಂಗ್ಲೆಂಡ್
1983ಇಂಗ್ಲೆಂಡ್ಭಾರತ
ವೆಸ್ಟ್ ಇಂಡೀಸ್
1987ಭಾರತ, ಪಾಕಿಸ್ತಾನಆಸ್ಟ್ರೇಲಿಯಾಇಂಗ್ಲೆಂಡ್
1992ಆಸ್ಟ್ರೇಲಿಯಾ, ನ್ಯೂಜಿಲೆಂಡ್ಪಾಕಿಸ್ತಾನಇಂಗ್ಲೆಂಡ್
1996ಭಾರತ, ಪಾಕಿಸ್ತಾನ, ಶ್ರೀಲಂಕಾಶ್ರೀಲಂಕಾಆಸ್ಟ್ರೇಲಿಯಾ
1999ಇಂಗ್ಲೆಂಡ್, ಐರ್ಲೆಂಡ್, ನೆದರ್ಲೆಂಡ್ಸ್ ಸ್ಕಾಟ್ಲೆಂಡ್, ವೇಲ್ಸ್ಆಸ್ಟ್ರೇಲಿಯಾಪಾಕಿಸ್ತಾನ
2003ದಕ್ಷಿಣ ಆಫ್ರಿಕಾ, ಕೀನ್ಯಾ, ಜಿಂಬಾಬ್ವೆಆಸ್ಟ್ರೇಲಿಯಾಭಾರತ
2007ವೆಸ್ಟ್ ಇಂಡೀಸ್ಆಸ್ಟ್ರೇಲಿಯಾಶ್ರೀಲಂಕಾ
2011ಭಾರತ, ಬಾಂಗ್ಲಾದೇಶ, ಶ್ರೀಲಂಕಾಭಾರತಶ್ರೀಲಂಕಾ
2015ಆಸ್ಟ್ರೇಲಿಯಾ, ನ್ಯೂಜಿಲೆಂಡ್ಆಸ್ಟ್ರೇಲಿಯಾ
ನ್ಯೂಜಿಲೆಂಡ್
2019ಇಂಗ್ಲೆಂಡ್, ವೇಲ್ಸ್ಇಂಗ್ಲೆಂಡ್
ನ್ಯೂಜಿಲೆಂಡ್
2023ಭಾರತಆಸ್ಟ್ರೇಲಿಯಾಭಾರತ
2027ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾ------------
2031ಭಾರತ, ಬಾಂಗ್ಲಾದೇಶ------------

IPL_Entry_Point