ಸಿಎಸ್‌ಕೆ vs ಆರ್‌ಸಿಬಿ: ಭಾರತದಾದ್ಯಂತ ಹೆಚ್ಚು ಅಭಿಮಾನಿಗಳು ಇರುವುದು ಯಾವ ತಂಡಕ್ಕೆ; ಸೋಷಿಯಲ್ ಮೀಡಿಯಾ ಟ್ರೆಂಡ್ ಹೇಳುವುದೇನು
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್‌ಕೆ Vs ಆರ್‌ಸಿಬಿ: ಭಾರತದಾದ್ಯಂತ ಹೆಚ್ಚು ಅಭಿಮಾನಿಗಳು ಇರುವುದು ಯಾವ ತಂಡಕ್ಕೆ; ಸೋಷಿಯಲ್ ಮೀಡಿಯಾ ಟ್ರೆಂಡ್ ಹೇಳುವುದೇನು

ಸಿಎಸ್‌ಕೆ vs ಆರ್‌ಸಿಬಿ: ಭಾರತದಾದ್ಯಂತ ಹೆಚ್ಚು ಅಭಿಮಾನಿಗಳು ಇರುವುದು ಯಾವ ತಂಡಕ್ಕೆ; ಸೋಷಿಯಲ್ ಮೀಡಿಯಾ ಟ್ರೆಂಡ್ ಹೇಳುವುದೇನು

ಐಪಿಎಲ್‌ನಲ್ಲಿ 5 ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಸಿಎಸ್‌ಕೆ, ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು. ಹೀಗಾಗಿ ತಂಡದಕ್ಕೆ ರಾಶಿ ರಾಶಿ ಅಭಿಮಾನಿಗಳಿದ್ದಾರೆ. ಆದರೆ, ಒಮ್ಮೆಯೂ ಕಪ್‌ ಗೆಲ್ಲದಿದ್ದರೂ ಆರ್‌ಸಿಬಿ ತಂಡ ಕೂಡಾ ದೊಡ್ಡ ಪ್ರಮಾಣದ ನಿಷ್ಠಾವಂತ ಅಭಿಮಾನಿ ಬಳಗವನ್ನು ಹೊಂದಿದೆ. ಇದು ತುಂಬಾ ವಿಶೇಷ.

ಸಿಎಸ್‌ಕೆ vs ಆರ್‌ಸಿಬಿ: ಭಾರತದಾದ್ಯಂತ ಹೆಚ್ಚು ಅಭಿಮಾನಿಗಳು ಇರುವುದು ಯಾವ ತಂಡಕ್ಕೆ
ಸಿಎಸ್‌ಕೆ vs ಆರ್‌ಸಿಬಿ: ಭಾರತದಾದ್ಯಂತ ಹೆಚ್ಚು ಅಭಿಮಾನಿಗಳು ಇರುವುದು ಯಾವ ತಂಡಕ್ಕೆ

ಐಪಿಎಲ್‌ 2025ರ ಆವೃತ್ತಿಯಲ್ಲಿ ಇಂದು ಬಲುರೋಚಕ ಪಂದ್ಯ ನಡೆಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸವಾಲು ಹಾಕುತ್ತಿದೆ. ಹೈವೋಲ್ಟೇಜ್‌ ಪಂದ್ಯಕ್ಕೆ ಚೆನ್ನೈನ ಚೆಪಾಕ್‌ ಮೈದಾನ ಸಜ್ಜಾಗಿದ್ದು, ಅಭಿಮಾನಿಗಳು ಕ್ಷಣಗಣನೆ ಮಾಡುತ್ತಾ ಕುಳಿತಿದ್ದಾರೆ. ಉಭಯ ತಂಡಗಳು ಐಪಿಎಲ್‌ನಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದೆ. 5 ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಸಿಎಸ್‌ಕೆ, ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು. ಆದರೆ, ಒಮ್ಮೆಯೂ ಕಪ್‌ ಗೆಲ್ಲದಿದ್ದರೂ ಆರ್‌ಸಿಬಿ ತಂಡ ಕೂಡಾ ದೊಡ್ಡ ಪ್ರಮಾಣದ ನಿಷ್ಠಾವಂತ ಅಭಿಮಾನಿ ಬಳಗವನ್ನು ಹೊಂದಿದೆ.

ಉಭಯ ತಂಡಗಳ ಪಂದ್ಯ ಸಮೀಪಿಸುತ್ತಿದ್ದಾಗ ಸೋಷಿಯಲ್‌ ಮೀಡಿಯಾದಲ್ಲೂ ದೊಡ್ಡ ಮಟ್ಟದ ಫ್ಯಾನ್‌ವಾರ್‌ ನಡೆಯುವುದು ಸಾಮಾನ್ಯ. ಈ ಬಾರಿಯೂ ಅಭಿಮಾನಿಗಳ ನಡುವೆ ಟ್ರೋಲ್‌ಗಳು, ನಮ್ಮ ತಂಡವೇ ಗ್ರೇಟ್‌ ಎಂಬ ವಾದಗಳು ಸಾಗುತ್ತಿವೆ. ಹಾಗಿದ್ದರೆ ನಿಜಕ್ಕೂ ಯಾವ ತಂಡದ ಅಭಿಮಾನಿಗಳು ಹೆಚ್ಚಿದ್ದಾರೆ ಎಂಬುದನ್ನು ನೋಡೋಣ.

ಡಿಸ್ಟಿಲರಿಯ ಡೇಟಾವನ್ನು ಬಳಸಿಕೊಂಡು ಐಪಿಎಲ್‌ನ ಅಧಿಕೃತ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ನಡೆಸಿದ ಇತ್ತೀಚಿನ ಸಾಮಾಜಿಕ ಬಝ್ ಟ್ರೆಂಡ್‌ (social buzz) ವಿಶ್ಲೇಷಣೆಯ ಪ್ರಕಾರ, ಆರ್‌ಸಿಬಿಗಿಂತ ಸಿಎಸ್‌ಕೆ ತಂಡ ಆನ್‌ಲೈನ್‌ನಲ್ಲಿ ತುಸು ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ. ಪ್ರಸ್ತುತ ಆನ್‌ಲೈನ್ ಚರ್ಚೆಗಳಲ್ಲಿ ಸಿಎಸ್‌ಕೆ 51 ಪ್ರತಿಶತ ಪಾಲನ್ನು ಹೊಂದಿದ್ದು, ಆರ್‌ಸಿಬಿ ಕೂಡಾ 49 ಶೇಕಡಾ ಚರ್ಚೆಯ ವಿಷಯವಾಗಿದೆ. ಒಂದೂ ಕಪ್‌ ಗೆಲ್ಲದಿದ್ದರೂ ಆರ್‌ಸಿಬಿಯ ಜನಪ್ರಿಯತೆ ದೊಡ್ಡ ಪ್ರಮಾಣದಲ್ಲಿದೆ.

ಈ ನಡುವೆ ಭಾರತದ ಯಾವ ರಾಜ್ಯಗಳಲ್ಲಿ ಎರಡು ಫ್ರಾಂಚೈಸಿಗಳ ನಡುವೆ ಅಭಿಮಾನಿಗಳ ಪ್ರಾಬಲ್ಯ ಇದೆ ಎಂಬುದನ್ನು ನೋಡೋಣ. ರಾಜ್ಯವಾರು ಹೆಚ್ಚು ಸಂಖ್ಯೆಯೆ ಅಭಿಮಾನಿಗಳಿರುವ ತಂಡಗಳ ಪಟ್ಟಿ ಇಲ್ಲಿದೆ.

ಸಿಎಸ್‌ಕೆ ಪ್ರಾಬಲ್ಯ ಇರುವ ರಾಜ್ಯಗಳು

  • ತಮಿಳುನಾಡು
  • ಕೇರಳ
  • ಆಂಧ್ರಪ್ರದೇಶ
  • ತೆಲಂಗಾಣ
  • ಪಶ್ಚಿಮ ಬಂಗಾಳ
  • ಒಡಿಶಾ
  • ಜಾರ್ಖಂಡ್
  • ಬಿಹಾರ
  • ಅಸ್ಸಾಂ
  • ಈಶಾನ್ಯ ರಾಜ್ಯಗಳು

ಆರ್‌ಸಿಬಿ ಪ್ರಾಬಲ್ಯ ಇರುವ ರಾಜ್ಯಗಳು

  • ಕರ್ನಾಟಕ
  • ಮಹಾರಾಷ್ಟ್ರ
  • ಗುಜರಾತ್
  • ರಾಜಸ್ಥಾನ
  • ಪಂಜಾಬ್
  • ಹರಿಯಾಣ
  • ಮಧ್ಯಪ್ರದೇಶ
  • ಉತ್ತರ ಪ್ರದೇಶ
  • ದೆಹಲಿ

ಇನ್ನು ಸೋಷಿಯಲ್‌ ಮೀಡಿಯಾದಲ್ಲೀ ನೋಡುವುದಾದರೆ, ಇಲ್ಲಿಯೂ ಸಿಎಸ್‌ಕೆ ಫ್ರಾಂಚೈಸಿಗೆ ಫಾಲೊವರ್‌ಗಳ ಸಂಖ್ಯೆ ಜಾಸ್ತಿ ಇದೆ. ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಫಾಲೊವರ್‌ಗಳ ಸಂಖ್ಯೆಯಲ್ಲಿ ಸಿಎಸ್‌ಕೆ ಮೊದಲ ಸ್ಥಾನದಲ್ಲಿದ್ದರೆ, ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್‌ ಇದೆ.

ಆರ್‌ಸಿಬಿ ತಂಡ ಒಮ್ಮೆಯೂ ಐಪಿಎಲ್‌ ಟ್ರೋಫಿ ಗೆದ್ದಿಲ್ಲ. ಇದೇ ವೇಳೆ ಸಿಎಸ್‌ಕೆ ತಂಡ ದಾಖಲೆಯ ಐದು ಬಾರಿ ಟ್ರೋಫಿ ಗೆಲುವು ಸಾಧಿಸಿದೆ. ತನ್ನ ಯಶಸ್ವಿ ಅಭಿಯಾನಕ್ಕೆ ಸರಿಯಾಗಿ ಅಭಿಮಾನಿಗಳನ್ನೂ ಸಂಪಾದಿಸಿದೆ. ಒಮ್ಮೆಯೂ ಟ್ರೋಫಿ ಗೆಲ್ಲದ ತಂಡವಾದ ಆರ್‌ಸಿಬಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿರುವುದು ನಿಜಕ್ಕೂ ವಿಶೇಷ. ಒಂದು ವೇಳೆ ಕಪ್‌ ಗೆದ್ದರೆ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆಯು ಇತರ ತಂಡಗಳನ್ನು ಮೀರಿಸಬಹುದು. ಸೋಷಿಯಲ್‌ ಮೀಡಿಯಾದಲ್ಲೂ ಉಭಯ ತಂಡಗಳ ಫಾಲೊವರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner