ಐಪಿಎಲ್ 2019ರಲ್ಲಿ ಗೆಲುವು ಪಡೆದ ತಂಡ ಯಾವುದು? ಐಪಿಎಲ್ 2024 ಫೈನಲ್ ದಿನದಂದು ಈ ಮಾಹಿತಿ ತಿಳಿದಿರಿ
Which team won the ipl title in 2019: ಇಂಡಿಯನ್ ಪ್ರೀಮಿಯರ್ ಲೀಗ್-2019ರಲ್ಲಿ ಚಾಂಪಿಯನ್ ಆಗಿದ್ದ ತಂಡ ಯಾವುದು? 17ನೇ ಆವೃತ್ತಿಯ ಐಪಿಎಲ್ ಫೈನಲ್ ದಿನದಂದು ಈ ಮಾಹಿತಿ ತಿಳಿಯಿರಿ.

Indian Premier League 2024: ಇಂಡಿಯನ್ ಪ್ರೀಮಿಯರ್ ಲೀಗ್-2024ರ ಫೈನಲ್ಗೆ ಕ್ಷಣಗಣನೆ ಶುರುವಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು (KKR vs SRH) ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನವು (MA Chidambaram Cricket Stadium) ಈ ಹೈವೋಲ್ಟೇಜ್ ಕಾದಾಟಕ್ಕೆ ಸಾಕ್ಷಿಯಾಗಲಿದೆ.ಆದರೆ, 17ನೇ ಆವೃತ್ತಿಯ ಫೈನಲ್ ಗುಂಗಿನಲ್ಲಿರುವ ಕ್ರಿಕೆಟ್ ಪ್ರೇಮಿಗಳು 2019ರ ಸೀನಸ್ನಲ್ಲಿ ಐಪಿಎಲ್ ಯಾವ ತಂಡ ಚಾಂಪಿಯನ್ ಆಗಿತ್ತು ಎಂಬುದು ನಿಮಗೆ ಗೊತ್ತಾ? ಇಲ್ಲಿದೆ ಮಾಹಿತಿ.
2019ರ ಐಪಿಎಲ್ ಫೈನಲ್ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆದಿತ್ತು. ಆದರೆ, ಅಂದು ಎಂಎಸ್ ಧೋನಿ ನಾಯಕತ್ವದ ಸಿಎಸ್ಕೆ ತಂಡದ ವಿರುದ್ಧ ರೋಹಿತ್ ಶರ್ಮಾ ನೇತೃತ್ವದ ಎಂಐ ತಂಡ 1 ರನ್ನಿಂದ ರೋಚಕ ಗೆಲುವು ಸಾಧಿಸಿ ನಾಲ್ಕನೇ ಟ್ರೋಫಿಗೆ ಮುತ್ತಿಕ್ಕಿತು. ಆ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ 4 ಓವರ್ಗಳಲ್ಲಿ ಕೇವಲ 14 ರನ್ ನೀಡಿ 2 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆರಂಭಿಕ ಆಟಗಾರ ಶೇನ್ ವ್ಯಾಟ್ಸನ್ 80 ರನ್ ಗಳಿಸಿದ್ದರೂ ಸಿಎಸ್ಕೆ ಚಾಂಪಿಯನ್ ಆಗಲು ಸಾಧ್ಯವಾಗಿರಲಿಲ್ಲ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿತ್ತು. 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು. ಕಿರನ್ ಪೊಲಾರ್ಡ್ 25 ಎಸೆತಗಳಲ್ಲಿ 41 ರನ್ ಗಳಿಸಿ ಮಿಂಚಿದ್ದರು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ, ಸುಲಭ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿತ್ತು. ಆದರೆ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ 1 ರನ್ನಿಂದ ಶರಣಾಯಿತು.
ಕೊನೆಯ ಓವರ್ನಲ್ಲಿ 9 ರನ್ ಬೇಕಿತ್ತು
ಸಿಎಸ್ಕೆ ಗೆಲ್ಲಲು ಅಂತಿಮ ಓವರ್ನಲ್ಲಿ ಚೆನ್ನೈ ತಂಡಕ್ಕೆ 9 ರನ್ ಬೇಕಿತ್ತು. ಈ ವೇಳೆ ಮುಂಬೈ ಕಟ್ಟುನಿಟ್ಟಿನ ಬೌಲಿಂಗ್ ನಡೆಸಿತು. ಲಸಿತ್ ಮಾಲಿಂಗ ಕೊನೆಯ ಓವರ್ ಬೌಲಿಂಗ್ ಮಾಡಿದರೆ, ಆರಂಭಿಕ ಆಟಗಾರ ಶೇನ್ ವ್ಯಾಟ್ಸನ್ ಸ್ಟ್ರೈಕ್ನಲ್ಲಿದ್ದರು. ಅದಾಗಲೇ ಅವರು 76 ರನ್ ಸಿಡಿಸಿದ್ದರು. ಮೊದಲ ಮೂರು ಎಸೆತಗಳಲ್ಲಿ 4 ರನ್ ಬಂತು. ನಾಲ್ಕನೇ ಎಸೆತದಲ್ಲಿ 2 ರನ್ ಓಡಲು ಯತ್ನಿಸಿದ ವ್ಯಾಟ್ಸನ್ ರನೌಟ್ ಆದರು. ನಂತರ ಶಾರ್ದೂಲ್ ಐದನೇ ಎಸೆತದಲ್ಲಿ 2 ರನ್ ಗಳಿಸಿದರು. ಹೀಗಾಗಿ ಕೊನೆಯ ಬಾಲ್ಗೆ 2 ರನ್ ಬೇಕಿತ್ತು. ಆದರೆ ಶಾರ್ದೂಲ್ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಹೀಗಾಗಿ ಮುಂಬೈ ರೋಚಕ ಗೆಲುವು ದಾಖಲಿಸಿತು.
ಐಪಿಎಲ್ ತಂಡ | ಎಷ್ಟು ಬಾರಿ | ಟ್ರೋಫಿ ಗೆದ್ದ ವರ್ಷ |
---|---|---|
ಮುಂಬೈ ಇಂಡಿಯನ್ಸ್ | 5 ಬಾರಿ | 2013, 2015, 2017, 2019, 2020 |
ಚೆನ್ನೈ ಸೂಪರ್ ಕಿಂಗ್ಸ್ | 5 ಬಾರಿ | 2010, 2011, 2018, 2021, 2023 |
ಕೋಲ್ಕತ್ತಾ ನೈಟ್ ರೈಡರ್ಸ್ | 2 ಬಾರಿ | 2012, 2014 |
ಸನ್ರೈಸರ್ಸ್ ಹೈದರಾಬಾದ್ | 1 ಬಾರಿ | 2016 |
ರಾಜಸ್ಥಾನ್ ರಾಯಲ್ಸ್ | 1 ಬಾರಿ | 2008 |
ಡೆಕ್ಕನ್ ಚಾರ್ಜರ್ಸ್ | 1 ಬಾರಿ | 2009 |
ಗುಜರಾತ್ ಟೈಟಾನ್ಸ್ | 1 ಬಾರಿ | 2022 |
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
