ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಇತಿಹಾಸದಲ್ಲೇ ಅತಿವೇಗದ ಅರ್ಧಶತಕದ ದಾಖಲೆ ಯಾರ ಹೆಸರಲ್ಲಿದೆ; ಈ ಬಾರಿ ಈತನನ್ನು ಮೀರಿಸಲು ಸಾಧ್ಯವಾಗಿಲ್ಲ!

ಐಪಿಎಲ್ ಇತಿಹಾಸದಲ್ಲೇ ಅತಿವೇಗದ ಅರ್ಧಶತಕದ ದಾಖಲೆ ಯಾರ ಹೆಸರಲ್ಲಿದೆ; ಈ ಬಾರಿ ಈತನನ್ನು ಮೀರಿಸಲು ಸಾಧ್ಯವಾಗಿಲ್ಲ!

Fastest Fifty in IPL History: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕದ ದಾಖಲೆ ಯಾರ ಹೆಸರಿನಲ್ಲಿದೆ? ಇಲ್ಲಿದೆ ಸಂಪೂರ್ಣ ವಿವರ.

Fastest Fifty: ಐಪಿಎಲ್ ಇತಿಹಾಸದಲ್ಲೇ ಅತಿ ವೇಗದ ಅರ್ಧಶತಕದ ದಾಖಲೆ ಯಾರ ಹೆಸರಲ್ಲಿದೆ; ಭಾರತೀಯನಿಗೆ ಅಗ್ರಸ್ಥಾನ
Fastest Fifty: ಐಪಿಎಲ್ ಇತಿಹಾಸದಲ್ಲೇ ಅತಿ ವೇಗದ ಅರ್ಧಶತಕದ ದಾಖಲೆ ಯಾರ ಹೆಸರಲ್ಲಿದೆ; ಭಾರತೀಯನಿಗೆ ಅಗ್ರಸ್ಥಾನ

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್ ಕೊನೆಗೂ​​ ಮುಕ್ತಾಯಗೊಂಡಿದೆ. ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಬಾರಿಗೆ ಐಪಿಎಲ್​ ಟ್ರೋಫಿಗೆ ಮುತ್ತಿಕ್ಕಿದೆ. 2024ರ ಐಪಿಎಲ್​ನಲ್ಲಿ ಹಲವರು ವೇಗದ ಅರ್ಧಶತಕಗಳನ್ನು ದಾಖಲಿಸಿದರೂ, ಯಶಸ್ವಿ ಜೈಸ್ವಾಲ್ ದಾಖಲೆ ಮುರಿಯಲು ಸಾಧ್ಯವಾಗಿಲ್ಲ. ಐಪಿಎಲ್ ಇತಿಹಾಸದಲ್ಲಿ ವೇಗದ ಅರ್ಧಶತಕ ಸಿಡಿಸಿದವರು ಯಾರು? ಇಲ್ಲಿದೆ ಪಟ್ಟಿ.

ಟ್ರೆಂಡಿಂಗ್​ ಸುದ್ದಿ

ಯಶಸ್ವಿ ಜೈಸ್ವಾಲ್​ಗೆ ಅಗ್ರಸ್ಥಾನ

ರಾಜಸ್ಥಾನ್ ರಾಯಲ್ಸ್‌ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಮೇ 11, 2023ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೇವಲ 13 ಎಸೆತಗಳಲ್ಲಿ 50 ಪೂರೈಸಿದ್ದರು.

ಕೆಎಲ್ ರಾಹುಲ್​-ಪ್ಯಾಟ್ ಕಮಿನ್ಸ್

ಲಕ್ನೋ ಸೂಪರ್ ಜೈಂಟ್ಸ್ ನಾಯಕ ಮತ್ತು ಮಾಜಿ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಐಪಿಎಲ್ ಇತಿಹಾಸದಲ್ಲಿ 2ನೇ ಅತಿವೇಗದ ಅರ್ಧಶತಕ ಸಿಡಿಸಿದ್ದಾರೆ. ರಾಹುಲ್ 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಹಿಂದೆ ಡೆಲ್ಲಿ ಡೇರ್ ಡೆವಿಲ್ಸ್) ವಿರುದ್ಧ 14 ಎಸೆತಗಳಲ್ಲಿ 51 ರನ್ ಗಳಿಸಿದ್ದರು.

ನಂತರದ ಸ್ಥಾನದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಇದ್ದಾರೆ. ಕೆಎಲ್ ರಾಹುಲ್ ಜೊತೆಗೆ ಐಪಿಎಲ್‌ನಲ್ಲಿ ವೇಗದ ಫಿಫ್ಟಿ ಬಾರಿಸಿದ ಜಂಟಿ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2022ರ ಐಪಿಎಲ್‌ನಲ್ಲಿ ಎಂಐ ವಿರುದ್ಧ ಕೆಕೆಆರ್​ ಪರ ಆಡುತ್ತಿದ್ದ ಕಮಿನ್ಸ್ 14 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದ್ದರು.

ಮೂರನೇ ಸ್ಥಾನದಲ್ಲಿದ್ದಾರೆ ಮೂವರು

ಕೆಕೆಆರ್‌ ತಂಡದ ಯೂಸುಫ್ ಪಠಾಣ್ ಮತ್ತು ಸುನಿಲ್ ನರೈನ್ 15 ಎಸೆತಗಳಲ್ಲಿ ಅರ್ಧಶತಕಗಳನ್ನು ಗಳಿಸಿದ್ದಾರೆ. ಪಠಾಣ್ 2014ರಲ್ಲಿ ಎಸ್​ಆರ್​ಹೆಚ್ ವಿರುದ್ಧ, ನರೈನ್ 2017ರಲ್ಲಿ ಆರ್​ಸಿಬಿ ವಿರುದ್ಧ ಈ ಸಾಧನೆ ಮಾಡಿದ್ದರು. ಎಲ್​ಎಸ್​ಜಿ ಆಟಗಾರ ನಿಕೋಲಸ್ ಪೂರನ್ ಆರ್​​ಸಿಬಿ ವಿರುದ್ಧ 2023 ಐಪಿಎಲ್​ನಲ್ಲಿ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಈ ಮೂವರು ಸಹ ಜಂಟಿ 3ನೇ ಸ್ಥಾನ ಪಡೆದಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ನಾಲ್ವರು

16 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ನಾಲ್ವರು ಆಟಗಾರರು ಜಂಟಿ 4ನೇ ಸ್ಥಾನ ಪಡೆದಿದ್ದಾರೆ. ಟ್ರಾವಿಸ್ ಹೆಡ್ (ಡಿಸಿ ವಿರುದ್ಧ 2024ರಲ್ಲಿ), ಸುರೇಶ್ ರೈನಾ (ಪಂಜಾಬ್ ಕಿಂಗ್ಸ್ ವಿರುದ್ಧ 2014ರಲ್ಲಿ), ಇಶಾನ್ ಕಿಶನ್ (ಎಸ್​ಆರ್​ಹೆಚ್ ವಿರುದ್ಧ 2021ರಲ್ಲಿ), ಅಭಿಷೇಕ್ ಶರ್ಮಾ (ಎಂಐ ವಿರುದ್ಧ 2024ರಲ್ಲಿ) ಈ ಸಾಧನೆ ಮಾಡಿದ್ದರು.

ಐದನೇ ಸ್ಥಾನದಲ್ಲಿ ಮೂವರು

ನಂತರದಲ್ಲಿ ಸ್ಥಾನದಲ್ಲಿ 17 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಆಟಗಾರರಲ್ಲಿ ಮೂವರು ಸ್ಥಾನ ಪಡೆದಿದ್ದಾರೆ. ಮುಂಬೈನ ಸೂರ್ಯಕುಮಾರ್ ಯಾದವ್ (ಆರ್​ಸಿಬಿ ವಿರುದ್ಧ 2024ರಲ್ಲಿ), ಆರ್​ಸಿಬಿಯ ಕ್ರಿಸ್​ ಗೇಲ್ (ಪುಣೆ ವಾರಿಯರ್ಸ್ ವಿರುದ್ಧ 2013ರಲ್ಲಿ), ಡೆಕ್ಕನ್ ಚಾರ್ಜರ್ಸ್ ಪರ ಆ್ಯಡಮ್ ಗಿಲ್​​ಕ್ರಿಸ್ಟ್ (ಡೆಲ್ಲಿ ಡೇರ್​ಡೆವಿಲ್ಸ್ ವಿರುದ್ಧ 2009ರಲ್ಲಿ) ವೇಗದ ಅರ್ಧಶತಕ ಸಿಡಿಸಿದ್ದರು.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ