ಕನ್ನಡ ಸುದ್ದಿ  /  ಕ್ರಿಕೆಟ್  /  ದೇಶದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗಿಂತ ಉತ್ತಮರಿಲ್ಲ; ಮಾಜಿ ಚೀಫ್ ಸೆಲೆಕ್ಟರ್ ಎಂಎಸ್ ಪ್ರಸಾದ್ ಬೆಂಬಲ

ದೇಶದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗಿಂತ ಉತ್ತಮರಿಲ್ಲ; ಮಾಜಿ ಚೀಫ್ ಸೆಲೆಕ್ಟರ್ ಎಂಎಸ್ ಪ್ರಸಾದ್ ಬೆಂಬಲ

MSK Prasad on Hardik Pandya : ಟಿ20 ವಿಶ್ವಕಪ್ ಟೂರ್ನಿಗೆ ಹಾರ್ದಿಕ್ ಪಾಂಡ್ಯ ಅವರ ಆಯ್ಕೆಯನ್ನು ಮಾಜಿ ಸೆಲೆಕ್ಟರ್ ಎಂಎಸ್​ಕೆ ಪ್ರಸಾದ್ ಬೆಂಬಲಿಸಿದ್ದಾರೆ.

ದೇಶದಲ್ಲಿ ಹಾರ್ದಿಕ್ ಪಾಂಡ್ಯಗಿಂತ ಅತ್ಯುತ್ತಮ ಆಲ್​ರೌಂಡರ್ ಇಲ್ಲವೇ ಇಲ್ಲ; ವಿಶ್ವಕಪ್ ಆಯ್ಕೆ ಸಮರ್ಥಿಸಿದ ಮಾಜಿ ಚೀಫ್ ಸೆಲೆಕ್ಟರ್
ದೇಶದಲ್ಲಿ ಹಾರ್ದಿಕ್ ಪಾಂಡ್ಯಗಿಂತ ಅತ್ಯುತ್ತಮ ಆಲ್​ರೌಂಡರ್ ಇಲ್ಲವೇ ಇಲ್ಲ; ವಿಶ್ವಕಪ್ ಆಯ್ಕೆ ಸಮರ್ಥಿಸಿದ ಮಾಜಿ ಚೀಫ್ ಸೆಲೆಕ್ಟರ್

ಏಪ್ರಿಲ್ 30ರಂದು ಬಿಸಿಸಿಐ (BCCI) ಪ್ರಕಟಿಸಿದ ಟೀಮ್ ಇಂಡಿಯಾ (Team India) 15 ಸದಸ್ಯರ ಟಿ20 ವಿಶ್ವಕಪ್ ತಂಡದಲ್ಲಿ ಸ್ಟಾರ್ ಆಲ್​​ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರ ಆಯ್ಕೆಯನ್ನು ಭಾರತದ ಮಾಜಿ ಮುಖ್ಯ ಆಯ್ಕೆಗಾರ ಎಂಎಸ್​ಕೆ ಪ್ರಸಾದ್ (MSK Prasad) ಬೆಂಬಲಿಸಿದ್ದಾರೆ. ಮೂವತ್ತು ವರ್ಷದ ಕ್ರಿಕೆಟಿಗನನ್ನು ಮಹತ್ವದ ಟೂರ್ನಿಗೆ ಆಯ್ಕೆ ಮಾಡಿದ್ದಕ್ಕೆ ಕ್ರಿಕೆಟ್ ತಜ್ಞರು, ಮಾಜಿ ಕ್ರಿಕೆಟರ್ಸ್ ಮತ್ತು ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. 2024ರ ಐಪಿಎಲ್ ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದಕ್ಕೆ ಹಾರ್ದಿಕ್ ಆಯ್ಕೆಯನ್ನು ಪ್ರಶ್ನಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರು ಟೆಸ್ಟ್ ಮತ್ತು 17 ಏಕದಿನ ಪಂದ್ಯಗಳನ್ನಾಡಿರುವ ಮಾಜಿ ಮುಖ್ಯ ಆಯ್ಕೆಗಾರ ಎಂಎಸ್​ಕೆ ಪ್ರಸಾದ್, ಹಾರ್ದಿಕ್ ಪಾಂಡ್ಯ ಅವರನ್ನು ಬೆಂಬಲಿಸಿದ್ದಾರೆ. ಪ್ರಸ್ತುತ ಹಾರ್ದಿಕ್​ಗಿಂತ ಉತ್ತಮ ವೇಗದ ಆಲ್​ರೌಂಡರ್ ಯಾರಿದ್ದಾರೆ? ದೇಶದಲ್ಲಿ ಯಾರೂ ಇಲ್ಲ ಎಂದು ಹೇಳಿದ್ದಾರೆ. ಟಿ20 ವಿಶ್ವಕಪ್ ಟೂರ್ನಿ ಜೂನ್ 1 ರಿಂದ 29ರ ತನಕ ನಡೆಯಲಿದೆ. ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಈ ಮೆಗಾ ಟೂರ್ನಿ ಜರುಗಲಿದೆ. 20 ತಂಡಗಳು ಒಂದು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ಹಾರ್ದಿಕ್ ಆಯ್ಕೆ ಉತ್ತಮವಾಗಿದೆ ಎಂದ ಎಂಎಸ್​ಕೆ ಪ್ರಸಾದ್

ಹಾರ್ದಿಕ್ ಪಾಂಡ್ಯ ಕುರಿತು ಮಾತನಾಡಿರುವ ಎಂಎಸ್​ಕೆ ಪ್ರಸಾದ್, ಹಾರ್ದಿಕ್ ಪಾಂಡ್ಯ ಅವರು ತಂಡಕ್ಕೆ ಸೇರ್ಪಡೆಯಾಗಿದ್ದು ಹಾಗೂ ಅವರಿಗೆ ಉಪನಾಯಕತ್ವ ನೀಡಿದ್ದು ಉತ್ತಮ ಆಲೋಚನೆ ಎಂದು ನಾನು ಭಾವಿಸುತ್ತೇನೆ. ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಹಾರ್ದಿಕ್​ಗೆ ನಾಯಕತ್ವದ ಕಿರೀಟ ನೀಡಲಾಗಿದೆ. ಇದು ಅವರು ಭಾರತ ತಂಡದ ಮುಂದಿನ ನಾಯಕರೂ ಹೌದು ಎಂಬುದನ್ನು ಸೂಚಿಸುತ್ತದೆ. ಅವರನ್ನು ಆಯ್ಕೆ ಮಾಡುವ ಮೂಲಕ ಆಯ್ಕೆದಾರರು ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಸಾದ್ ತಿಳಿಸಿದ್ದಾರೆಂದು ರೆವ್ ಸ್ಪೋರ್ಟ್ಸ್ ವರದಿ ಮಾಡಿದೆ‌.

ಪಾಂಡ್ಯಗಿಂತ ಉತ್ತಮ ಆಲ್​ರೌಂಡರ್​ ಯಾರಿಲ್ಲ ಎಂದ ಮಾಜಿ ಸೆಲೆಕ್ಟರ್​

ಹಾರ್ದಿಕ್ ಆಯ್ಕೆ ಬಗ್ಗೆ ತುಂಬಾ ಪ್ರಶ್ನೆಗಳು ಕೇಳಿ ಬರುತ್ತಿವೆ. ಆದರೆ, ಪ್ರಸ್ತುತ ಪಾಂಡ್ಯ ಅವರಿಗಿಂತ ಉತ್ತಮ ವೇಗದ ಆಲ್​ರೌಂಡರ್ ಯಾರಿದ್ದಾರೆ? ನೀವೇ ಹೇಳಿ. ನಿಜ, ಇತ್ತೀಚಿನ ದಿನಗಳಲ್ಲಿ ಅವರು ಫಾರ್ಮ್​​ಗೆ ಮರಳಲು ಹೋರಾಟ ನಡೆಸುತ್ತಿದ್ದಾರೆ. ಆದರೆ ಅದಕ್ಕೆ ಕಾರಣಗಳು ತುಂಬಾ ಇವೆ. ಮುಂಬೈ ನಾಯಕತ್ವ ಬದಲಾವಣೆ ಅವರ ಫಾರ್ಮ್ ಮೇಲೂ ಪರಿಣಾಮ ಬೀರಿದೆ. ಆದರೆ ಪಾಂಡ್ಯ ಒಮ್ಮೆ ಟೀಮ್ ಇಂಡಿಯಾ ಜೆರ್ಸಿ ಧರಿಸಿದರೆ ಆ ಕೆಟ್ಟ ಫಾರ್ಮ್ ದೂರವಾಗಬಹುದು. ಪಂಡಿತರು, ತಜ್ಞರು ಹೀಗೆ ಯಾರು ಏನೇ ಹೇಳಿದರೂ ಹಾರ್ದಿಕ್ ಪಾಂಡ್ಯ ಅವರಿಗಿಂತ ಉತ್ತಮ ಆಲ್​ರೌಂಡರ್ ಪ್ರಸ್ತುತ‌ ದೇಶದಲ್ಲಿ ಇಲ್ಲವೇ ಇಲ್ಲ. ಪ್ರಸ್ತುತ ಅವರೇ ದೇಶದ ಅತ್ಯುತ್ತಮ ಆಲ್​ರೌಂಡರ್ ಎಂಬುದನ್ನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ ಎಂದು ಪ್ರಸಾದ್ ಹೇಳಿದ್ದಾರೆ.

ಪ್ರಸ್ತುತ ಐಪಿಎಲ್​ನಲ್ಲಿ ಹಾರ್ದಿಕ್ ಮೈದಾನದಲ್ಲಿ ಮೂರು ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲುವು ತಂದುಕೊಡಲು ಎಡವಿದ್ದಾರೆ. ಎಂಐ ಪರ 11 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದು, 3ರಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. 8 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಕೇವಲ 198 ರನ್ ಗಳಿಸಿದ್ದರೆ, ಬೌಲಿಂಗ್‌ನಲ್ಲಿ 8 ವಿಕೆಟ್ ಪಡೆದಿದ್ದಾರೆ. ಐಪಿಎಲ್ 2024ರ ಟೂರ್ನಿಗೆ‌ ಟ್ರೇಡ್ ಮೂಲಕ ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್ ಸೇರಿದ್ದರು. ಬಳಿಕ ನಾಯಕನಾಗಿ ನೇಮಕಗೊಂಡರು. ಆದರೆ ಅವರ ಮೇಲಿದ್ದ ನಂಬಿಕೆ ಹುಸಿಯಾಯಿತು. ಐದು ಬಾರಿಯ ಚಾಂಪಿಯನ್ ತಂಡದ ಅಭಿಮಾನಿಗಳಿಗೆ ನಿರಾಸೆಯಾಯಿತು.

 

IPL_Entry_Point