ಸಾನಿಯಾ ಮಿರ್ಜಾಗೂ ಮೊದಲು ಶೋಯೆಬ್ ಮಲಿಕ್ ಮದುವೆಯಾಗಿದ್ದ ಭಾರತದ ಮಹಿಳೆ ಯಾರು?
Ayesha Siddiqui: ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ಸಾನಿಯಾ ಮಿರ್ಜಾ ಅವರನ್ನು ವರಿಸುವುದಕ್ಕೂ ಮುನ್ನ ಭಾರತದ ಮಹಿಳೆಯೊಬ್ಬರನ್ನು ಮೊದಲು ಮದುವೆಯಾಗಿದ್ದರು ಎಂಬ ವರದಿ ಇದೆ. ಆಕೆ ಯಾರು? ಇಲ್ಲಿದೆ ವಿವರ.
ಸಾನಿಯಾ ಮಿರ್ಜಾ (Sania Mirza) ಜೊತೆಗಿನ ವಿಚ್ಛೇದನ ವದಂತಿಗಳ ನಡುವೆ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik), ನಟಿ ಸನಾ ಜಾವೆದ್ (Sana Javed) ಅವರನ್ನು ಮದುವೆಯಾಗಿದ್ದಾರೆ. 2021ರಿಂದಲೇ ಸಾನಿಯಾ ಮತ್ತು ಮಲಿಕ್ ಬೇರ್ಪಟ್ಟಿದ್ದಾರೆ ಎಂದು ವರದಿಯಲ್ಲಿದೆ.
ಮಲಿಕ್ ಅವರೇ ಸಾನಿಯಾಗೆ ವಿಚ್ಛೇದನ ನೀಡಿದ್ದಾರೆ ಎಂಬ ಸುದ್ದಿ ಇದೆ. ಆದರೆ ಭಾರತದ ಟೆನಿಸ್ ತಾರೆಯ ತಂದೆ ಇಮ್ರಾನ್ ಅವರು ಇದು ಖುಲಾ ಎಂದು ಹೇಳಿದ್ದಾರೆ. ಅಂದರೆ ಇದು ಮುಸ್ಲಿಂ ಮಹಿಳೆ ತನ್ನ ಪತಿಗೆ ಏಕಪಕ್ಷೀಯವಾಗಿ ವಿಚ್ಛೇದನ ನೀಡುವ ಹಕ್ಕು.
2010ರ ಏಪ್ರಿಲ್ 12ರಂದು ಮದುವೆಯಾದ ಸಾನಿಯಾ-ಮಲಿಕ್ 14 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ. ಮಲಿಕ್, ಸನಾ ಅವರೊಂದಿಗೆ ಹೊಸ ಜೀವನ ಆರಂಭಿಸಲಿದ್ದಾರೆ. ಆದರೆ ಮಲಿಕ್ಗೆ ಇದು ಮೂರನೇ ಮದುವೆ. ಹಾಗಾದರೆ ಮೊದಲ ಪತ್ನಿ ಯಾರು?
ಮೊದಲ ಪತ್ನಿ ಯಾರು?
ಶೋಯೆಬ್ ಮಲಿಕ್ ಅವರು ಸಾನಿಯಾ ಅವರನ್ನು ವರಿಸುವುದಕ್ಕೂ ಮುನ್ನ ಭಾರತದ ಮಹಿಳೆಯನ್ನೇ ಮೊದಲು ಮದುವೆಯಾಗಿದ್ದರು ಎಂಬ ವರದಿ ಇದೆ. ಆಕೆಯ ಹೆಸರು ಆಯೇಶಾ ಸಿದ್ದಿಕಿ. ಆಕೆಯನ್ನೂ ಮಹಾ ಸಿದ್ಧಿಕಿ ಎಂದು ಸಹ ಕರೆಯಲಾಗುತ್ತಿತ್ತು.
ಸಾನಿಯಾ ಅವರನ್ನು ಮದುವೆಯಾಗುವ ಅವಧಿಯಲ್ಲಿ ಆಯೇಶಾ ಸಿದ್ದಿಕಿ, ಮಲಿಕ್ ತನ್ನನ್ನು ಈಗಾಗಲೇ ಮದುವೆಯಾಗಿದ್ದಾನೆ ಎಂದು ಹೇಳಿಕೊಂಡಿದ್ದರು. ತದನಂತರ ದೊಡ್ಡ ವಿವಾದವಾಯಿತು. ಆಯೇಶಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು. ಹೈದರಾಬಾದ್‌ನವರು.
ಶೋಯೆಬ್ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೆ ಸಾನಿಯಾ ಅವರನ್ನು ಮದುವೆಯಾಗಲು ಹೊರಟಿದ್ದಾರೆ ಎಂದು ವರದಿಯಾಗಿತ್ತು. 2002ರಲ್ಲಿ ವಿವಾಹವಾಗಿದ್ದರ ಬಗ್ಗೆ ಪುರಾವೆಯಾಗಿ ತಮ್ಮ ಮದುವೆಯ ವೀಡಿಯೊ ತುಣುಕುಗಳನ್ನು ಹಂಚಿಕೊಂಡಿದ್ದರು.
ನಂತರ ಆಯೇಶಾ, ಶೋಯೆಬ್ ವಿರುದ್ಧ ತನಗೆ ಮೋಸ ಮಾಡಿದ್ದಕ್ಕಾಗಿ ಪೊಲೀಸ್ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ತಾನು ಶೋಯೆಬ್ ಮಲಿಕ್‌ನಿಂದ ವಿಚ್ಛೇದನ ಪಡೆಯಲು ಬಯಸಿದ್ದೆನೆಂದು ಹೇಳಿದ್ದಳು. ನಂತರ 15 ಕೋಟಿ ಜೀವನಾಂಶವನ್ನು ಪಡೆದಳು ಎನ್ನಲಾಗಿದೆ.
ಈ ಸುದ್ದಿಯನ್ನು ನಿರಾಕರಿಸುತ್ತಲೇ ಬಂದಿದ್ದ ಮಲಿಕ್, 2010ರಲ್ಲಿ ಸಾನಿಯಾರನ್ನು ವರಿಸುವುದಕ್ಕೂ ಕೆಲವು ದಿನಗಳ ಹಿಂದೆ ವಿಚ್ಛೇದನ ಪಡೆದರು. ಇದೀಗ ವಿಚ್ಛೇದನ ಪಡೆದಿದ್ದ ಸನಾ ಜಾವೇದ್ ಅವರನ್ನು ಮದುವೆಯಾಗಿದ್ದಾರೆ ಮಲಿಕ್.