ಒಂದೇ ಒಂದು ವಿಕೆಟ್​ ಪಡೆದ ಬೌಲರ್​ಗೆ ಆರ್​ಸಿಬಿ ಬೌಲಿಂಗ್ ಕೋಚ್ ಹುದ್ದೆ; ರಣಜಿಯಲ್ಲಿ ಮುಂಬೈ ಚಾಂಪಿಯನ್ ಆಗಿದ್ದೇ ಇವರಿಂದ!
ಕನ್ನಡ ಸುದ್ದಿ  /  ಕ್ರಿಕೆಟ್  /  ಒಂದೇ ಒಂದು ವಿಕೆಟ್​ ಪಡೆದ ಬೌಲರ್​ಗೆ ಆರ್​ಸಿಬಿ ಬೌಲಿಂಗ್ ಕೋಚ್ ಹುದ್ದೆ; ರಣಜಿಯಲ್ಲಿ ಮುಂಬೈ ಚಾಂಪಿಯನ್ ಆಗಿದ್ದೇ ಇವರಿಂದ!

ಒಂದೇ ಒಂದು ವಿಕೆಟ್​ ಪಡೆದ ಬೌಲರ್​ಗೆ ಆರ್​ಸಿಬಿ ಬೌಲಿಂಗ್ ಕೋಚ್ ಹುದ್ದೆ; ರಣಜಿಯಲ್ಲಿ ಮುಂಬೈ ಚಾಂಪಿಯನ್ ಆಗಿದ್ದೇ ಇವರಿಂದ!

RCB 2025: ಐಪಿಎಲ್ 2025 ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಕೋಚಿಂಗ್ ಸಿಬ್ಬಂದಿಯೊಂದಿಗೆ ಮತ್ತೊಬ್ಬರನ್ನು ಸೇರ್ಪಡರಗೊಳಿಸಿದೆ. ಅವರು ಕಳೆದ ರಣಜಿ ಆವೃತ್ತಿಯಲ್ಲಿ ಮುಂಬೈ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಒಂದೇ ಒಂದು ವಿಕೆಟ್​ ಪಡೆದ ಬೌಲರ್​ಗೆ ಆರ್​ಸಿಬಿ ಬೌಲಿಂಗ್ ಕೋಚ್ ಹುದ್ದೆ; ರಣಜಿಯಲ್ಲಿ ಮುಂಬೈ ಚಾಂಪಿಯನ್ ಆಗಿದ್ದೇ ಇವರಿಂದ!
ಒಂದೇ ಒಂದು ವಿಕೆಟ್​ ಪಡೆದ ಬೌಲರ್​ಗೆ ಆರ್​ಸಿಬಿ ಬೌಲಿಂಗ್ ಕೋಚ್ ಹುದ್ದೆ; ರಣಜಿಯಲ್ಲಿ ಮುಂಬೈ ಚಾಂಪಿಯನ್ ಆಗಿದ್ದೇ ಇವರಿಂದ!

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಪ್ರಾರಂಭದಿಂದಲೂ ಎದುರಿಸುತ್ತಿರುವ ಸಮಸ್ಯೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರಿಹಾರ ಕಂಡುಕೊಳ್ಳಲು ಮತ್ತು ಚೊಚ್ಚಲ ಟ್ರೋಫಿ ಗೆಲ್ಲುವ ಕನಸಿನೊಂದಿಗೆ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ನವೆಂಬರ್ 24, 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುವ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ, ನೂತನ ಬೌಲಿಂಗ್​ ನೇಮಕ ಮಾಡಿದೆ. ರಣಜಿಯಲ್ಲಿ ಮುಂಬೈ ತಂಡವನ್ನು ಚಾಂಪಿಯನ್ ಮಾಡಿದ್ದ ಓಂಕಾರ್ ಸಾಲ್ವಿ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿದೆ ಎಂದು ವರದಿಯಾಗಿದೆ.

ಪ್ರಸ್ತುತ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈನ ಹಿರಿಯ ಪುರುಷರ ತಂಡದ ಪರ ಸೇವೆ ಸಲ್ಲಿಸುತ್ತಿರುವ ಓಂಕಾರ್ ಸಾಲ್ವಿ, ಭಾರತೀಯ ದೇಶೀಯ ಸರ್ಕ್ಯೂಟ್‌ನಲ್ಲಿ ಅತ್ಯುತ್ತಮ ಕೋಚ್​ಗಳಲ್ಲಿ ಒಬ್ಬರಾಗಿದ್ದಾರೆ. ಮುಂಬೈ ರಾಜ್ಯ ತಂಡದ ಯಶಸ್ವಿ ಓಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರು ಐಪಿಎಲ್‌ನಲ್ಲಿ ಆರ್​​ಸಿಬಿ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲಲು ಪ್ರಮುಖ ಪಾತ್ರವಹಿಸಲು ಸಜ್ಜಾಗಿದ್ದಾರೆ. ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದರು. ಬಳಿಕ ಅವರು ಮತ್ತೆ ಐಪಿಎಲ್​ನಲ್ಲಿ ಸೇವೆ ಸಲ್ಲಿಸಿಲ್ಲ. ಪ್ರಸ್ತುತ ಆರ್​ಸಿಬಿಗೆ ಬೌಲಿಂಗ್ ಕೋಚ್ ಆಗಿ ನೇಮಕವಾದ ಕುರಿತು ಆರ್‌ಸಿಬಿ ನಿಕಟ ಮೂಲವೊಂದು ತಿಳಿಸಿದೆ.

ಓಂಕಾರ್ ಸಾಲ್ವಿ ಯಾರು?

ಓಂಕಾರ್ ಸಾಲ್ವಿ ಭಾರತದ ಮಾಜಿ ವೇಗದ ಬೌಲರ್ ಅವಿಷ್ಕರ್ ಸಾಲ್ವಿ ಅವರ ಸಹೋದರ. ಓಂಕಾರ್​ ಅವರಿಗೆ ಆಟಗಾರನಾಗಿ ಹೆಚ್ಚಿನ ಅನುಭವ ಇಲ್ಲ. ಆದರೆ ಕೋಚ್ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮುಂಬೈ ತಂಡ ಕಳೆದ ಆವೃತ್ತಿಯಲ್ಲಿ ರಣಜಿ ಟ್ರೋಫಿ ಗೆದ್ದಿತ್ತು. 2005 ರಲ್ಲಿ ಮಧ್ಯಪ್ರದೇಶ ವಿರುದ್ಧ ರೈಲ್ವೇಸ್‌ ಪರ ಮೊದಲ ಪಂದ್ಯವನ್ನು ಆಡಿದ್ದರು. ಆದರೆ ಅದೇ ಕೊನೆಯ ಪಂದ್ಯ. ಅವರು, ತಮ್ಮ ವೃತ್ತಿಜೀವನದಲ್ಲಿ ಪಡೆದಿರುವುದು 1 ವಿಕೆಟ್ ಮಾತ್ರ. ಕೆಕೆಆರ್​​ ಜೊತೆಗೆ ಒಪ್ಪಂದ ಮುಗಿದ ನಂತರ ಸಾಲ್ವಿ ಅವರನ್ನು ಮುಂಬೈ ರಾಜ್ಯ ತಂಡದ ಕೋಚ್ ಆಗಿ ನೇಮಿಸಲಾಯಿತು. ಈ ಒಪ್ಪಂದ 2025ರ ಮಾರ್ಚ್​​ಗೆ ಅಂತ್ಯವಾಗಲಿದೆ.

ಇದಕ್ಕೂ ಮೊದಲು, ಈ ವರ್ಷ ಆರ್​ಸಿಬಿ ದಿನೇಶ್ ಕಾರ್ತಿಕ್ ಅವರನ್ನು ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಿಸಿಕೊಂಡಿದೆ. ಕಾರ್ತಿಕ್ ಮತ್ತು ಸಾಲ್ವಿ ಕೆಕೆಆರ್ ತಂಡದ ಪರ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆರ್​ಸಿಬಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿ ಗೆಲ್ಲಲು ಹೊಸ ಬ್ಯಾಕ್‌ರೂಮ್ ಸಿಬ್ಬಂದಿ ನೇಮಿಸಿಕೊಳ್ಳುತ್ತಿದೆ. ಸಾಲ್ವಿ ನೇಮಕದ ಕುರಿತು ಇನ್ನೂ ಅಧಿಕೃತ ಘೋಷಣೆಯಾಗಿಲ್ಲ. ಹರಾಜಿಗೂ ಮುನ್ನವೇ ನೂತನ ಬೌಲಿಂಗ್ ಕೋಚ್ ಬಗ್ಗೆ ಅಪ್ಡೇಟ್ ನೀಡಲಿದೆ. ಆರ್​ಸಿಬಿ ಈ ಬಾರಿ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ. ಪರ್ಸ್​ನಲ್ಲಿ 83 ಕೋಟಿ ಇದ್ದು, ಯಾರನ್ನೆಲ್ಲಾ ಖರೀದಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಹಲವು ವರ್ಷಗಳಿಂದಲೂ ಕಾಡ್ತಿದೆ ಬೌಲಿಂಗ್ ಸಮಸ್ಯೆ

ಆರ್​ಸಿಬಿ ತಂಡವು ಹಲವು ವರ್ಷಗಳಿಂದಲೂ ಬೌಲಿಂಗ್ ಸಮಸ್ಯೆ ಎದುರಿಸುತ್ತಿದೆ. ಸಮರ್ಪಕ ಬೌಲರ್​ಗಳ ಕೊರತೆಯಿಂದ ಮತ್ತು ಕಳಪೆ ಬೌಲಿಂಗ್​ನಿಂದಾಗಿ ಗೆಲ್ಲಬೇಕಿದ್ದ ಅದೆಷ್ಟೋ ಪಂದ್ಯಗಳಲ್ಲಿ ಆರ್​ಸಿಬಿ ಸೋತಿದೆ. ಬ್ಯಾಟಿಂಗ್​ ವಿಭಾಗವನ್ನು ಬಲಪಡಿಸುವ ಟೀಮ್ ಮ್ಯಾನೇಜ್​ಮೆಂಟ್, ಬೌಲಿಂಗ್​ನಲ್ಲಿ ಅನಾನುಭವಿಗಳನ್ನೇ ಖರೀದಿಸಿ ತಂಡವನ್ನು ದುರ್ಬಲಗೊಳಿಸುತ್ತಿತ್ತು. ಸ್ಪೆಷಲಿಸ್ಟ್ ಸ್ಪಿನ್ನರ್ಸ್, ಡೆತ್ ಓವರ್ ಸ್ಪೆಷಲಿಸ್ಟ್​ಗಳನ್ನು ಮತ್ತು ಅನುಭವಿಗಳನ್ನು ಖರೀದಿಸದೆ ಅನಾನುಭವಿಗಳಿಗೆ ಮಣೆ ಹಾಕುತ್ತಿತ್ತು. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಆದರೆ ಈ ಬಾರಿ ಖಡಕ್ ಬೌಲರ್​ಗಳನ್ನೇ ಖರೀದಿಸಿ ಹಿಂದಿನ ತಪ್ಪುಗಳನ್ನು ಮರುಕಳಿಸದಂತೆ ನೋಡಿಕೊಳ್ಳಲು ಯೋಜನೆ ರೂಪಿಸಿದೆ.

Whats_app_banner