ಮೊದಲ ಟಿ20ಯಲ್ಲಿ ಆಸೀಸ್ ಪರ 2 ವಿಕೆಟ್ ಕಿತ್ತಿದ್ದ ಭಾರತ ಮೂಲದ ಬೌಲರ್ ಯಾರು; ಟ್ಯಾಕ್ಸಿ ಡ್ರೈವರ್ ಮಗನ ಕಥೆ ಇದು!
ಕನ್ನಡ ಸುದ್ದಿ  /  ಕ್ರಿಕೆಟ್  /  ಮೊದಲ ಟಿ20ಯಲ್ಲಿ ಆಸೀಸ್ ಪರ 2 ವಿಕೆಟ್ ಕಿತ್ತಿದ್ದ ಭಾರತ ಮೂಲದ ಬೌಲರ್ ಯಾರು; ಟ್ಯಾಕ್ಸಿ ಡ್ರೈವರ್ ಮಗನ ಕಥೆ ಇದು!

ಮೊದಲ ಟಿ20ಯಲ್ಲಿ ಆಸೀಸ್ ಪರ 2 ವಿಕೆಟ್ ಕಿತ್ತಿದ್ದ ಭಾರತ ಮೂಲದ ಬೌಲರ್ ಯಾರು; ಟ್ಯಾಕ್ಸಿ ಡ್ರೈವರ್ ಮಗನ ಕಥೆ ಇದು!

Who is Tanveer Sangha: ಭಾರತದ ಎದುರಿನ ಮೊದಲ ಟಿ20 ಪಂದ್ಯದಲ್ಲಿ 2 ವಿಕೆಟ್ ಕಬಳಿಸಿ ಮಿಂಚಿದ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ತನ್ವೀರ್ ಸಂಘ ಯಾರು? ಇಲ್ಲಿದೆ ವಿವರ.

ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ತನ್ವೀರ್ ಸಂಘ.
ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ತನ್ವೀರ್ ಸಂಘ.

ಆಸ್ಟ್ರೇಲಿಯಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ದಾಖಲೆಯ ಗೆಲುವು ಸಾಧಿಸಿತು. ಏಕದಿನ ವಿಶ್ವಕಪ್ ಗೆದ್ದ ಖುಷಿಯಲ್ಲಿದ್ದ ಆಸೀಸ್​ಗೆ ಭಾರತ ಅಚ್ಚರಿಯ ಸೋಲಿನ ರುಚಿ ತೋರಿಸಿ ಆಘಾತ ನೀಡಿತು. ಕಾಂಗರೂ ಪಡೆ ನೀಡಿದ್ದ 208 ರನ್​ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿದ ಮೆನ್ ಇನ್​ ಬ್ಲೂ, 19.5 ಓವರ್​ಗಳಲ್ಲೇ ಗೆಲುವಿನ ನಗೆ ಬೀರಿತು. ಸೂರ್ಯಕುಮಾರ್ ಪಡೆ ಪಂದ್ಯ ನಡೆದರೂ ಹೆಚ್ಚು ಚರ್ಚೆಯಾಗಿದ್ದು, ಆಸೀಸ್​ನ ಲೆಗ್ ಸ್ಪಿನ್ನರ್.

ಹೌದು, ಸೂಪರ್​ ಸ್ಟಾರ್​ ಆಟಗಾರರ ಮಧ್ಯೆ ಹೆಚ್ಚು ಚರ್ಚೆಯಾಗಿದ್ದು, ಸ್ಪಿನ್ನರ್ ತನ್ವೀರ್ ಸಂಘ (Tanveer Sangha). ಈತ ಭಾರತ ಮೂಲದ ಆಟಗಾರ ಎಂಬುದು ವಿಶೇಷ. ದೇಶದ ಹೊರಗಿದ್ದರೂ ಭಾರತೀಯರು ಕ್ರಿಕೆಟ್ ಆಟದ ಬಗ್ಗೆ ಹೆಚ್ಚು ಪ್ರಭಾವಿತರಾಗುತ್ತಾರೆ ಎಂಬುದಕ್ಕೆ ಈತನು ಕೂಡ ಉತ್ತಮ ಉದಾಹರಣೆ. ಈಗಾಗಲೇ ಹಲವು ದೇಶಗಳಲ್ಲಿ ಭಾರತ ಮೂಲದ ಆಟಗಾರರು ಇದ್ದಾರೆ. ಆ ಪಟ್ಟಿಯಲ್ಲಿ ತನ್ವೀರ್ ಸಂಘಾ ಕೂಡ ಒಬ್ಬರು. ಮೊದಲ ಟಿ20 ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸಿ ಮಿಂಚಿದರು.

ತನ್ವೀರ್‌ ಸಂಘ ಯಾರು?

ಭಾರತೀಯ ಮೂಲದ ಟ್ಯಾಕ್ಸಿ ಚಾಲಕನ ಮಗ ತನ್ವೀರ್‌ ಸಂಘ. ಹುಟ್ಟಿದ್ದು, ಬೆಳೆದಿದ್ದೆಲ್ಲಾ ಆಸ್ಟ್ರೇಲಿಯಾದಲ್ಲೇ. ಪಂಜಾಬ್‌ನ ಜಲಾಂಧರ್‌ನಿಂದ 1990ರ ಆಸುಪಾಸಿನಲ್ಲಿ ಕಾಂಗರೂ ನಾಡಿಗೆ ವಲಸೆ ಹೋದ ಭಾರತೀಯ ಕುಟುಂಬದಲ್ಲಿ ತನ್ವೀರ್‌ ಸಂಘ ಜನಿಸಿದನು. ಅವರ ತಂದೆ ಶಿಕ್ಷಣ ಪಡೆಯುವ ಉದ್ದೇಶದಿಂದ ಆಸೀಸ್​ಗೆ ತೆರಳಿದ್ದರು. ಇವರ ತಾಯಿ ಅಕೌಂಟೆಂಟ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. 

ಆಸ್ಟ್ರೇಲಿಯಾದಲ್ಲಿ ಜನಿಸಿದರೂ ತನ್ವೀರ್​ ಏಕದಿನ ವಿಶ್ವಕಪ್​ನಲ್ಲೂ ಅವಕಾಶ ಪಡೆದಿದ್ದರು. ಆ ಮೂಲಕ ತನ್ನ ಪೂರ್ವಜರ ನೆಲದಲ್ಲಿ ಆಡುವ ಅವಕಾಶ ಪಡೆದಿದ್ದರು. ಆದರೆ ಕಣಕ್ಕಿಳಿಯಲು ಸಾಧ್ಯವಾಗಿರಲಿಲ್ಲ. ಇದೀಗ ಟಿ20ಯಲ್ಲಿ ಆಡುವ ಮೂಲಕ ಗಮನ ಸೆಳೆದಿದ್ದಾರೆ. 2020ರಲ್ಲಿ ದೇಶೀಯ ಕ್ರಿಕೆಟ್‌ ಆಡಲು ಆರಂಭಿಸಿದ ಸಂಘ, ತನ್ನ ಅಮೋಘ ಪ್ರದರ್ಶನದ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯುವಲ್ಲಿ ಯಶಸ್ವಿಯಾದರು. 

ನ್ಯೂಜಿಲೆಂಡ್‌ ವಿರುದ್ಧ ತನ್ನ 19ನೇ ವಯಸ್ಸಿನಲ್ಲಿ ಟಿ20 ಸರಣಿ ಕ್ರಿಕೆಟ್‌ ಆಡಿದ್ದ ಗರಿ ಈತಗಿದೆ. ಈತ ಒಂದು ವಿಶೇಷ ದಾಖಲೆಗೂ ಪಾತ್ರನಾಗಿದ್ದಾನೆ. ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದ 5ನೇ ಭಾರತೀಯ ಮೂಲದ ಆಟಗಾರ ಎಂಬ ಕೀರ್ತಿಗೆ ಪಾತ್ರವಾಗಿದ್ದಾನೆ. ಇದಕ್ಕೂ ಮುನ್ನ ಈತನಂತೆ ಗುರಿಂದರ್‌ ಸಂಧು, ಸ್ಟುವರ್ಟ್‌ ಕ್ಲಾರ್ಕ್‌ ಮತ್ತು ಬ್ರಾನ್ಸ್‌ಬೈ ಕೂಪರ್‌ ಈ ಅವಕಾಶ ಪಡೆದಿದ್ದರು ಎಂಬುದು ವಿಶೇಷ.

ಬಿಬಿಎಲ್​​ನಿಂದಲೇ ಅಬ್ಬರ

ಬಿಗ್ ಬ್ಯಾಷ್ ಲೀಗ್‌ನಲ್ಲಿ ತನ್ನ ಚೊಚ್ಚಲ ಆವೃತ್ತಿಯಲ್ಲೇ 21 ವಿಕೆಟ್‌ ಉರುಳಿಸಿದ ಕೀರ್ತಿಯನ್ನು ತನ್ವೀರ್‌ ಹೊಂದಿದ್ದಾರೆ. ಹದಿಹರೆಯದಲ್ಲಿ ಹುಮ್ಮಸ್ಸಿನಿಂದ ಆಡುತ್ತಿದ್ದ ಇವರ ಪ್ರತಿಭೆಯನ್ನು ಮೊದಲು ಸ್ಪಿನ್ನರ್ ಫವಾರ್ಡ್ ಅಹ್ಮದ್ ಗುರುತಿಸಿದ್ದರು. ತನ್ನ ಹದಿಹರೆಯದಲ್ಲಿ ಗಮನಾರ್ಹ ಸ್ಪಿನ್​ ಬೌಲಿಂಗ್​ ಮೂಲಕ ಗಮನ ಸೆಳೆದರು.

2020ರ ಅಂಡರ್-19 ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದವರ ಪೈಕಿ ಒಬ್ಬರಾಗಿ ಗುರುತಿಸಿಕೊಂಡರು. ಕಳೆದ ಒಂದು ವರ್ಷದಿಂದ ಅವರು ಕೆಳ ಬೆನ್ನು ನೋವಿನಿಂದ ಆಟವಾಡಿರಲಿಲ್ಲ. ಈಗ ಚೇತರಿಸಿಕೊಂಡಿದ್ದು, ಭಾರತದಲ್ಲಿ ನಡೆಯುತ್ತಿರುವ ಟಿ20 ಸರಣಿಯಲ್ಲಿ ತನ್ನ ಪ್ರತಿಭೆಯನ್ನು ಜಗತ್ತಿನ ಮುಂದಿಡಲು ಕಾಯುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 4 ಓವರ್​ಗಳಲ್ಲಿ 47 ರನ್ ನೀಡಿ 2 ವಿಕೆಟ್ ಪಡೆದಿದ್ದರು.

Whats_app_banner