ಐಪಿಎಲ್ ಇತಿಹಾಸದಲ್ಲಿ ಟಾಪ್-10 ಅತ್ಯಂತ ದುಬಾರಿ ಆಟಗಾರರು; ಅಧಿಕ ಮೊತ್ತಕ್ಕೆ ಸೇಲಾದ ಭಾರತದವರು ಯಾರು?
Who is the Most Expensive Player in IPL History: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲಾದ ಆಟಗಾರರು ಯಾರು? ಭಾರತದ ಪರ ದುಬಾರಿ ಕ್ರಿಕೆಟಿಗ ಯಾರು? 2008-2023ರವರೆಗೂ ಪ್ರತಿ ಆವೃತ್ತಿಯಲ್ಲೂ ದುಬಾರಿ ಆಟಗಾರ ಯಾರು? ಇಲ್ಲಿದೆ ಎಲ್ಲದರ ವಿವರ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ (IPL Mini Aucton 2024) ದಿನಗಣನೆ ಆರಂಭವಾಗಿದೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ವಿದೇಶದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 19ರಂದು ದುಬೈನಲ್ಲಿ ಜರುಗಲಿದೆ. ದೇಶ-ವಿದೇಶ ಸೇರಿದಂತೆ ಪ್ರಮುಖ ಮತ್ತು ಯುವ ಆಟಗಾರರು ಭರ್ಜರಿ ಮೊತ್ತವನ್ನು ಜೇಬಿಗಿಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.
ಏಕದಿನ ವಿಶ್ವಕಪ್ನಲ್ಲಿ ಅಬ್ಬರಿಸಿದ ಆಟಗಾರರು ಮತ್ತು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಿಂಚಿದ ಯುವ ಆಟಗಾರರ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ತಮ್ಮ ತಮ್ಮ ತಂಡಗಳಲ್ಲಿ ಬೇಕಾಗಿರುವ ಸ್ಲಾಟ್ಗಳನ್ನು ಭರ್ತಿ ಮಾಡಿಕೊಳ್ಳಲು ಅದಕ್ಕೆ ಸಂಬಂಧಿಸಿದ ಆಟಗಾರರನ್ನೇ ಹುಡುಕಾಟ ನಡೆಸುತ್ತಿವೆ. ಹಾಗಾಗಿ ಹಲವು ಆಟಗಾರರು ದುಬಾರಿ ಮೊತ್ತಕ್ಕೆ ಸೇಲಾಗುವ ಸಾಧ್ಯತೆ ಹೆಚ್ಚಿದೆ.
ಹಾಗಾದರೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲಾದ ಆಟಗಾರರು ಯಾರು? ಭಾರತದ ಪರ ದುಬಾರಿ ಕ್ರಿಕೆಟಿಗ ಎನಿಸಿದರು ಯಾರು? 2008 ರಿಂದ 2023ರವರೆಗೂ ಪ್ರತಿ ಆವೃತ್ತಿಯಲ್ಲೂ ದುಬಾರಿ ಆಟಗಾರ ಎನಿಸಿಕೊಂಡವರು ಯಾರು? ಇಲ್ಲಿದೆ ಎಲ್ಲದರ ವಿವರ.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ
ಶ್ರೇಣಿ | ಆಟಗಾರ | ತಂಡ | ಬೆಲೆ (ರೂಗಳಲ್ಲಿ) | ವರ್ಷ |
---|---|---|---|---|
1 | ಸ್ಯಾಮ್ ಕರನ್ | ಪಂಜಾಬ್ | 18.50 ಕೋಟಿ | 2023 |
2 | ಕ್ಯಾಮರೂನ್ ಗ್ರೀನ್ | ಮುಂಬೈ | 17.50 ಕೋಟಿ | 2023 |
3 | ಬೆನ್ ಸ್ಟೋಕ್ಸ್ | ಸಿಎಸ್ಕೆ | 16.25 ಕೋಟಿ | 2023 |
4 | ಕ್ರಿಸ್ ಮೋರಿಸ್ | ರಾಜಸ್ಥಾನ್ | 16.25 ಕೋಟಿ | 2022 |
5 | ನಿಕೋಲಸ್ ಪೂರನ್ | ಎಲ್ಎಸ್ಜಿ | 16 ಕೋಟಿ | 2021 |
6 | ಯುವರಾಜ್ ಸಿಂಗ್ | ಡೆಲ್ಲಿ | 16 ಕೋಟಿ | 2015 |
7 | ರೋಹಿತ್ ಶರ್ಮಾ | ಮುಂಬೈ | 16 ಕೋಟಿ | 2023 |
8 | ರವೀಂದ್ರ ಜಡೇಜಾ | ಸಿಎಸ್ಕೆ | 16 ಕೋಟಿ | 2023 |
9 | ರಿಷಬ್ ಪಂತ್ | ಡೆಲ್ಲಿ | 16 ಕೋಟಿ | 2023 |
10 | ಇಶಾನ್ ಕಿಶನ್ | ಮುಂಬೈ | 15.25 ಕೋಟಿ | 2022 |
ಐಪಿಎಲ್‌ನಲ್ಲಿ ವರ್ಷವಾರು ಅತ್ಯಂತ ದುಬಾರಿ ಆಟಗಾರರು
ವರ್ಷ | ಆಟಗಾರ ಮತ್ತು ತಂಡ | ಬೆಲೆ (ರೂ.ಗಳಲ್ಲಿ) |
---|---|---|
2023 | ಸ್ಯಾಮ್ ಕರನ್ (PBKS) | 18.50 ಕೋಟಿ |
2022 | ಇಶಾನ್ ಕಿಶನ್ (MI) | 15.25 ಕೋಟಿ |
2021 | ಕ್ರಿಸ್ ಮೋರಿಸ್ (RR) | 16.25 ಕೋಟಿ |
2020 | ಪ್ಯಾಟ್ ಕಮ್ಮಿನ್ಸ್ (KKR) | 15.5 ಕೋಟಿ |
2019 | ಉನದ್ಕತ್ (RR) | 8.4 ಕೋಟಿ |
2018 | ಬೆನ್ ಸ್ಟೋಕ್ಸ್ (RR) | 12.5 ಕೋಟಿ |
2017 | ಬೆನ್ ಸ್ಟೋಕ್ಸ್ (RPS) | 14.5 ಕೋಟಿ |
2016 | ಶೇನ್ ವ್ಯಾಟ್ಸನ್ (RCB) | 9.5 ಕೋಟಿ |
2015 | ಯುವರಾಜ್ ಸಿಂಗ್ (DD) | 16 ಕೋಟಿ |
2014 | ಯುವರಾಜ್ ಸಿಂಗ್ (RCB) | 14 ಕೋಟಿ |
2013 | ಗ್ಲೆನ್ ಮ್ಯಾಕ್ಸ್‌ವೆಲ್ (MI) | 6.3 ಕೋಟಿ |
2012 | ರವೀಂದ್ರ ಜಡೇಜಾ (CSK) | 12.8 ಕೋಟಿ |
2011 | ಗೌತಮ್ ಗಂಭೀರ್ (KKR) | 14.9 ಕೋಟಿ |
2010 | ಶೇನ್ ಬಾಂಡ್ (KKR) | 4.8 ಕೋಟಿ |
2009 | ಕೆವಿನ್ ಪೀಟರ್ಸನ್ (RCB) | 9.8 ಕೋಟಿ |
2008 | ಎಂಎಸ್ ಧೋನಿ (CSK) | 9.5 ಕೋಟಿ |
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಭಾರತೀಯ ಆಟಗಾರರು
ವರ್ಷ | ಆಟಗಾರ ಮತ್ತು ತಂಡ | ಬೆಲೆ (ರೂ.ಗಳಲ್ಲಿ) |
---|---|---|
2015 | ಯುವರಾಜ್ ಸಿಂಗ್ (DD) | 16 ಕೋಟಿ |
2023 | ರೋಹಿತ್ ಶರ್ಮಾ (MI) | 16 ಕೋಟಿ |
2023 | ರವೀಂದ್ರ ಜಡೇಜಾ (CSK) | 16 ಕೋಟಿ |
2023 | ರಿಷಭ್ ಪಂತ್ (DC) | 16 ಕೋಟಿ |
2022 | ಇಶಾನ್ ಕಿಶನ್ (MI) | 15.25 ಕೋಟಿ |
2020 | ದೀಪಕ್ ಚಹರ್ (CSK) | 14 ಕೋಟಿ |
2014 | ಯುವರಾಜ್ ಸಿಂಗ್ (RCB) | 14 ಕೋಟಿ |
2014 | ದಿನೇಶ್ ಕಾರ್ತಿಕ್ (DD) | 12.50 ಕೋಟಿ |
2022 | ಶ್ರೇಯಸ್ ಅಯ್ಯರ್ (KKR) | 12.25 ಕೋಟಿ |
ಐಪಿಎಲ್-2023ರ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರರು
ಆಟಗಾರ | ಬೆಲೆ (ರೂ.ಗಳಲ್ಲಿ) | ತಂಡ |
---|---|---|
ಸ್ಯಾಮ್ ಕರನ್ | 18.50 ಕೋಟಿ | PBKS |
ಕ್ಯಾಮರೂನ್ ಗ್ರೀನ್ | 17.50 ಕೋಟಿ | MI |
ಬೆನ್ ಸ್ಟೋಕ್ಸ್ | 16.25 ಕೋಟಿ | CSK |
ನಿಕೋಲಸ್ ಪೂರನ್ | 16 ಕೋಟಿ | LSG |
ಹ್ಯಾರಿ ಬ್ರೂಕ್ | 13.25 ಕೋಟಿ | SRH |
ಮಯಾಂಕ್ ಅಗರ್ವಾಲ್ | 8.25 ಕೋಟಿ | SRH |
ಶಿವಂ ಮಾವಿ | 6 ಕೋಟಿ | GT |
ಜೇಸನ್ ಹೋಲ್ಡರ್ | 5.75 ಕೋಟಿ | RR |
ಮುಕೇಶ್ ಕುಮಾರ್ | 5.5 ಕೋಟಿ | DC |
ಹೆನ್ರಿಚ್ ಕ್ಲಾಸೆನ್ | 5.25 ಕೋಟಿ | SRH |