ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಘೋಷಿಸಿದ ಪೋಸ್ಟ್​​ ಕೊನೆಯಲ್ಲಿ 269 ಸಂಖ್ಯೆ ಬರೆದಿದ್ದೇಕೆ? ಇದೇ ಈ ಹೊತ್ತಿನ ಟ್ರೆಂಡ್
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಘೋಷಿಸಿದ ಪೋಸ್ಟ್​​ ಕೊನೆಯಲ್ಲಿ 269 ಸಂಖ್ಯೆ ಬರೆದಿದ್ದೇಕೆ? ಇದೇ ಈ ಹೊತ್ತಿನ ಟ್ರೆಂಡ್

ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಘೋಷಿಸಿದ ಪೋಸ್ಟ್​​ ಕೊನೆಯಲ್ಲಿ 269 ಸಂಖ್ಯೆ ಬರೆದಿದ್ದೇಕೆ? ಇದೇ ಈ ಹೊತ್ತಿನ ಟ್ರೆಂಡ್

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ತನ್ನ ವಿದಾಯದ ಇನ್​ಸ್ಟಾಗ್ರಾಂ ಪೋಸ್ಟ್​​ನಲ್ಲಿ 269 ಎಂದು ಸಂಖ್ಯೆ ಬರೆದಿರುವುದು ಏಕೆ? ಇಲ್ಲಿದೆ ಮಾಹಿತಿ.

ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಘೋಷಿಸಿದ ಪೋಸ್ಟ್​​ ಕೊನೆಯಲ್ಲಿ 269 ಸಂಖ್ಯೆ ಬರೆದಿದ್ದೇಕೆ? ಇದೇ ಈ ಹೊತ್ತಿನ ಟ್ರೆಂಡ್
ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಘೋಷಿಸಿದ ಪೋಸ್ಟ್​​ ಕೊನೆಯಲ್ಲಿ 269 ಸಂಖ್ಯೆ ಬರೆದಿದ್ದೇಕೆ? ಇದೇ ಈ ಹೊತ್ತಿನ ಟ್ರೆಂಡ್

ಭಾರತೀಯ ಕ್ರಿಕೆಟ್‌ನ ಅತ್ಯಂತ ಪ್ರತಿಮಾರೂಪದ ವ್ಯಕ್ತಿಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ, ಅಧಿಕೃತವಾಗಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಇದರೊಂದಿಗೆ ಕ್ರೀಡೆಯ ದೀರ್ಘ ಮತ್ತು ಅತ್ಯಂತ ಸಾಂಪ್ರದಾಯಿಕ ಸ್ವರೂಪದ ಅಧ್ಯಾಯಕ್ಕೆ ಅಂತ್ಯ ಹಾಡಿದ್ದಾರೆ. 123 ಟೆಸ್ಟ್ ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ ರನ್ ಗಳಿಸಿರುವ ಕೊಹ್ಲಿ, 30 ಶತಕ, 31 ಅರ್ಧಶತಕ ಸಹಿತ 9,230 ರನ್ ಗಳಿಸಿದ್ದಾರೆ. ಅವರ ಸ್ಥಿರ ಪ್ರದರ್ಶನವು ಭಾರತದ ಶ್ರೇಷ್ಠ ರೆಡ್-ಬಾಲ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಗಳಿಸುವಂತೆ ಮಾಡಿದೆ. ವಿರಾಟ್ ಕೊಹ್ಲಿ ನಿವೃತ್ತಿಯ ಪೋಸ್ಟ್​​​ನಲ್ಲಿ ಹಾಕಿರುವ 269 ಸಂಖ್ಯೆ ತುಂಬಾ ಟ್ರೆಂಡ್ ಆಗುತ್ತಿದೆ. ಆ ಸಂಖ್ಯೆಯ ಅರ್ಥ ಏನಿರಬಹುದು ಎಂಬುದು ಅನೇಕರಿಗಿರುವ ಗೊಂದಲವಾಗಿದೆ.

ವಿರಾಟ್ ಕೊಹ್ಲಿ ಬರೆದಿರುವ ಪೋಸ್ಟ್ ಹೀಗಿದೆ.. ನಾನು ಟೆಸ್ಟ್ ಕ್ರಿಕೆಟ್​​ನಲ್ಲಿ ಮೊದಲ ಬಾರಿಗೆ ಬ್ಯಾಗಿ ಬ್ಲೂ (ಟೆಸ್ಟ್ ಕ್ಯಾಪ್) ಧರಿಸಿ 14 ವರ್ಷಗಳು ಕಳೆದಿವೆ. ನಿಜ ಹೇಳಬೇಕೆಂದರೆ ಈ ಸ್ವರೂಪವು ನನ್ನನ್ನು ಇಷ್ಟರಮಟ್ಟಿಗೆ ಕರೆದೊಯುತ್ತದೆ ಎಂದು ನಾನು ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿತು, ನನ್ನನ್ನು ರೂಪಿಸಿತು ಮತ್ತು ಅನೇಕ ಜೀವನಕ್ಕೆ ಬೇಕಾದ ಅನೇಕ ಪಾಠಗಳನ್ನೂ ಕಲಿಸಿತು ಎಂದು ಬರೆದಿದ್ದಾರೆ.

ವೈಟ್ ಜೆರ್ಸಿಯಲ್ಲಿ ಆಡುವುದರಲ್ಲಿ ಅದ್ಭುತ ಅನುಭವ ಹೊಂದಿದ್ದೇನೆ. ಶಾಂತವಾದ ಜಂಜಾಟ, ದೀರ್ಘ ದಿನಗಳು, ಯಾರೂ ನೋಡದ ಸಣ್ಣ ಕ್ಷಣಗಳು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ. ಈ ಸ್ವರೂಪದಿಂದ ಹಿಂದೆ ಸರಿಯುತ್ತಿರುವ ನಿರ್ಧಾರ ಸುಲಭವಾದದ್ದಲ್ಲ. ಆದರೂ ಅದು ಸರಿಯಾದ ನಿರ್ಧಾರ. ನಾನು ನನ್ನೆಲ್ಲಾ ಪರಿಶ್ರಮ ನೀಡಿದ್ದೇನೆ. ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನು ಕೊಟ್ಟಿದ್ದೇನೆ. ಹೃದಯ ತುಂಬಿ ಕೃತಜ್ಞತೆಗಳೊಂದಿಗೆ ಹೊರಡುತ್ತಿದ್ದೇನೆ ಎಂದು ಭಾವುಕರಾಗಿದ್ದಾರೆ.

ಮೈದಾನದಲ್ಲಿ ನನ್ನೊಂದಿಗೆ ಆಡಿದ ಪ್ರತಿಯೊಬ್ಬ ಆಟಗಾರನಿಗೂ, ಸಿಬ್ಬಂದಿಗೂ, ಎಲ್ಲರಿಗೂ ಕೃತಜ್ಞ. ನಾನು ಯಾವಾಗಲೂ ನನ್ನ ಟೆಸ್ಟ್ ವೃತ್ತಿಜೀವನವನ್ನು ನಗುವಿನೊಂದಿಗೆ ನೆನಪಿಸಿಕೊಳ್ಳುವೆ. #269, ಸೈನಿಂಗ್ ಆಫ್ ಎಂದು ಪೋಸ್ಟ್​​ನಲ್ಲಿ ಬರೆದಿದ್ದಾರೆ. ಹೀಗೆ ಕೊನೆಯಲ್ಲಿ 269 ಎಂದು ಬರೆದಿರುವ ಸಂಖ್ಯೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಂಖ್ಯೆಯನ್ನು ನಿವೃತ್ತಿ ಪೋಸ್ಟ್​​​ನ ಕೊನೆಯಲ್ಲಿ ಹಾಕಿದ್ದೇಕೆ ಎಂದು ಗೊಂದಲಕ್ಕೆ ಒಳಗಾಗಿದ್ದಾರೆ. ಅದಕ್ಕಿಲ್ಲಿದೆ ಉತ್ತರ.

ಕೊಹ್ಲಿ 269 ಸಂಖ್ಯೆ ಬರೆದಿದ್ದೇಕೆ?

ವಿರಾಟ್ ಕೊಹ್ಲಿಗೆ ನೀಡಲಾದ ಕ್ಯಾಪ್ ಸಂಖ್ಯೆ 269. ಈ ಕಾರಣಕ್ಕಾಗಿಯೇ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವಾಗ ಇನ್‌ಸ್ಟಾಗ್ರಾಮ್‌ನಲ್ಲಿ "#269 ಸೈನಿಂಗ್ ಆಫ್ ಎಂದು ಬರೆದಿದ್ದಾರೆ.

ನಾಯಕತ್ವದ ದಾಖಲೆ

2011ರಲ್ಲಿ ವೆಸ್ಟ್​ ಇಂಡೀಸ್ ವಿರುದ್ಧದ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, 2014ರಲ್ಲಿ ಧೋನಿ ಅವರಿಂದ ನಾಯಕತ್ವ ಹಸ್ತಾಂತರಿಸಿಕೊಂಡಿದ್ದಾರೆ. 68 ಪಂದ್ಯಗಳಲ್ಲಿ ಭಾರತೀಯ ಟೆಸ್ಟ್​ ತಂಡ ಮುನ್ನಡೆಸಿರುವ ಕೊಹ್ಲಿ, ಭಾರತದ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ 40ರಲ್ಲಿ ಗೆಲುವು, 17 ಸೋಲು ಅನುಭವಿಸಿದೆ. ಸೋಲಿನ ಶೇಕಡಾವಾರು 25% ರಷ್ಟಿತ್ತು. 11 ಡ್ರಾಗಳೊಂದಿಗೆ, ಕೊಹ್ಲಿ ಗೆಲುವಿನ ಶೇಕಡ 58.82ರಷ್ಟಿದೆ. 2019ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್​ ಸರಣಿ ಗೆಲುವಿನತ್ತ ಮುನ್ನಡೆಸಿದ್ದು ಐತಿಹಾಸಿಕ ದಾಖಲೆಯಾಗಿದೆ. ಇದು ಹಿಂದಿನ ಯಾವುದೇ ಭಾರತೀಯ ನಾಯಕ ಸಾಧಿಸದ ಸಾಧನೆಯಾಗಿದೆ.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.