Virat Kohli: ವಿರಾಟ್ ಕೊಹ್ಲಿ ಔಟಾದ ಬೆನ್ನಲ್ಲೇ ನಾನಾ ಪಾಟೇಕರ್ ಮೀಮ್ಸ್ ಟ್ರೆಂಡ್ ಆಗಲು ಕಾರಣವೇನು?
ಕನ್ನಡ ಸುದ್ದಿ  /  ಕ್ರಿಕೆಟ್  /  Virat Kohli: ವಿರಾಟ್ ಕೊಹ್ಲಿ ಔಟಾದ ಬೆನ್ನಲ್ಲೇ ನಾನಾ ಪಾಟೇಕರ್ ಮೀಮ್ಸ್ ಟ್ರೆಂಡ್ ಆಗಲು ಕಾರಣವೇನು?

Virat Kohli: ವಿರಾಟ್ ಕೊಹ್ಲಿ ಔಟಾದ ಬೆನ್ನಲ್ಲೇ ನಾನಾ ಪಾಟೇಕರ್ ಮೀಮ್ಸ್ ಟ್ರೆಂಡ್ ಆಗಲು ಕಾರಣವೇನು?

Virat Kohli: ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾದ ಬೆನ್ನಲ್ಲೇ ನಾನಾ ಪಾಟೇಕರ್ ಮೀಮ್ಸ್ ಟ್ರೆಂಡಿಂಗ್ ಆಗಲು ಕಾರಣವೇನು? ಇಲ್ಲಿದೆ ವಿವರ.

ವಿರಾಟ್ ಕೊಹ್ಲಿ ಔಟಾದ ಬೆನ್ನಲ್ಲೇ ನಾನಾ ಪಾಟೇಕರ್ ಮೀಮ್ಸ್ ಟ್ರೆಂಡ್ ಆಗಲು ಕಾರಣವೇನು?
ವಿರಾಟ್ ಕೊಹ್ಲಿ ಔಟಾದ ಬೆನ್ನಲ್ಲೇ ನಾನಾ ಪಾಟೇಕರ್ ಮೀಮ್ಸ್ ಟ್ರೆಂಡ್ ಆಗಲು ಕಾರಣವೇನು?

ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಕಳಪೆ ಪ್ರದರ್ಶನ ಮುಂದುವರೆಯಿತು. ಮೊಣಕಾಲಿನ ಫಿಟ್​ನೆಸ್ ಸಮಸ್ಯೆಯಿಂದ ಮೊದಲ ಪಂದ್ಯವನ್ನು ತಪ್ಪಿಸಿಕೊಂಡು ಎರಡನೇ ಏಕದಿನಕ್ಕೆ ತಂಡಕ್ಕೆ ಮರಳಿದ್ದ ಕೊಹ್ಲಿ ಕೇವಲ 5 ರನ್‌ಗಳಿಗೆ ಆದಿಲ್ ರಶೀದ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಏಕದಿನ ಕ್ರಿಕೆಟ್​ನಲ್ಲಿ ಅಸಾಧಾರಣ ದಾಖಲೆ ಹೊಂದಿರುವ ಕೊಹ್ಲಿ ಮೇಲೆ ಅಪಾರ ಭರವಸೆ ಇತ್ತು. ಆದರೆ ಆಗಿದ್ದೇ ಬೇರೆ. ಗಮನಾರ್ಹ ಪರಿಣಾಮ ಬೀರಲು ವಿಫಲರಾದ ವಿರಾಟ್ ಕೊಹ್ಲಿ ಔಟಾದ ನಂತರ ನಾನಾ ಪಾಟೇಕರ್ ಮೀಮ್ಸ್ ಆಗುತ್ತಿದೆ. ಏಕೆ? ಇಲ್ಲಿದೆ ವಿವರ.

2ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾದ ತಕ್ಷಣ, ನಾನಾ ಪಾಟೇಕರ್ ಮೀಮ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದವು. ಕೊಹ್ಲಿ ಬೇಗನೇ ಔಟಾದಾಗಲೆಲ್ಲಾ ನಾನು ತಿನ್ನುವುದನ್ನು ನಿಲ್ಲಿಸುತ್ತೇನೆ ಎಂದು ಬಾಲಿವುಡ್ ನಟ ಮತ್ತು ನಿರ್ದೇಶಕ ನಾನಾ ಪಾಟೇಕರ್ ಇತ್ತೀಚೆಗೆ ಬಹಿರಂಗಪಡಿಸಿದ್ದರು. 'ವಿರಾಟ್ ನನ್ನ ನೆಚ್ಚಿನ ಆಟಗಾರ. ಅವರು ಬೇಗನೆ ಔಟಾದರೆ, ನನಗೆ ತಿನ್ನಲು ಮನಸು ಬರುವುದಿಲ್ಲ' ಎಂದು 74 ವರ್ಷದ ನಟ ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿ ಹೇಳಿದ್ದರು. ಇದೀಗ ಕೊಹ್ಲಿ ಒಂದಂಕಿಗೆ ಔಟಾದ ಬೆನ್ನಲ್ಲೇ ನಾನಾ ಪಾಟೇಕರ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಇವತ್ತು ಊಟ ಮಾಡೋದಿಲ್ಲ ಎಂದು ಬಗೆ ಬಗೆ ಮೀಮ್ಸ್​​ಗಳು ಸಂಚಲನ ಸೃಷ್ಟಿಸುತ್ತಿವೆ. ಇವತ್ತು ಹಸಿವಿನಿಂದ ಮಲಗಿ ಎಂದು ಗೇಲಿಯೂ ಮಾಡಿದ್ದಾರೆ.

ಬಾಲ್​ ಬಾಯ್​ಗೆ ಕೊಹ್ಲಿ ಶೇಕ್​ ಹ್ಯಾಂಡ್

ಪಂದ್ಯದ ನಡುವೆ ವಿರಾಟ್ ಕೊಹ್ಲಿ ಅವರು ಪುಟ್ಟ ಕ್ರಿಕೆಟ್ ಅಭಿಮಾನಿಯ ಬಳಿ ಹೋಗಿ ಶೇಕ್ ಹ್ಯಾಂಡ್ ಮಾಡಿದ್ದಾರೆ. ಇಂಗ್ಲೆಂಡ್‌ ಇನ್ನಿಂಗ್ಸ್ ಸಮಯದಲ್ಲಿ ವಿರಾಟ್ ಬೌಂಡರಿ ಗೆರೆ ಬಳಿ ಫಿಲ್ಡಿಂಗ್ ಮಾಡುತ್ತಿದ್ದರು. ಅಲ್ಲೇ ಇದ್ದ ಇಬ್ಬರು ಬಾಲ್ ಬಾಯ್​​ಗಳಿಗೆ ಶೇಕ್​ ಹ್ಯಾಂಡ್ ನೀಡಿದ್ದಾರೆ. ವಿರಾಟ್ ಅವರಿಂದ ಹಸ್ತಲಾಘವ ಪಡೆದ ಆ ಬಾಲ್​ಬಾಯ್​​ಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ತನ್ನ ಕೈಯನ್ನು ಎದೆಯ ಮೇಲಿಟ್ಟು ಆ ಹುಡುಗ ಸ್ವರ್ಗ ಸಿಕ್ಕಂತೆ ಖುಷಿಪಟ್ಟಿದ್ದಾನೆ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಕೊಹ್ಲಿ ವಿಫಲ, ಫಾರ್ಮ್​ಗೆ ಮರಳಿದ ರೋಹಿತ್​

ಕೊಹ್ಲಿ ಕಳಪೆ ಪ್ರದರ್ಶನ ಮುಂದುವರೆದರೆ, ರೋಹಿತ್ ಶರ್ಮಾ ಲಯಕ್ಕೆ ಮರಳಿದ್ದಾರೆ. ಸತತ ವೈಫಲ್ಯ ಅನುಭವಿಸಿ ಟೀಕೆಗೆ ಗುರಿಯಾಗಿದ್ದ ಹಿಟ್​ಮ್ಯಾನ್ ಏಕದಿನ ಕ್ರಿಕೆಟ್‌ನಲ್ಲಿ 32ನೇ ಶತಕ ಗಳಿಸಿ ದಾಖಲೆ ಬರೆದಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡಕ್ಕೆ ಹೊಸ ಎನರ್ಜಿ ಸಿಕ್ಕಂತಾಗಿದೆ. ಅದೇ ರೀತಿ ಕೊಹ್ಲಿ ಕೂಡ ಉಳಿದ ಪಂದ್ಯದಲ್ಲಿ ಲಯಕ್ಕೆ ಮರಳಿದರೆ ಮತ್ತಷ್ಟು ಬಲ ಬರಲಿದೆ. ರನ್ ಗಳಿಸಲು ಪರದಾಡುತ್ತಿದ್ದ ರೋಹಿತ್​, ಇಂಗ್ಲೆಂಡ್ ಬೌಲರ್‌ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದರು.

ಹಿಟ್​ಮ್ಯಾನ್ ಎದುರಿಸಿದ 90 ಎಸೆತಗಳಲ್ಲಿ 12 ಬೌಂಡರಿ ಮತ್ತು ಏಳು ಸಿಕ್ಸರ್‌ ಸಹಿತ 119 ರನ್ ಗಳಿಸಿ ಔಟಾದರು. ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಒಂದು ಏಕದಿನ ಪಂದ್ಯ ಬಾಕಿ ಇದ್ದು, 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ರನ್ ಗಳಿಸಿ ಟೀಮ್ ಮ್ಯಾನೇಜ್​ಮೆಂಟ್ ಒತ್ತಡ ಕಡಿಮೆ ಮಾಡಬೇಕಿದೆ. ಅಭಿಮಾನಿಗಳು ಸಹ ಕೊಹ್ಲಿ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೊಹ್ಲಿ, ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಯಾವ ರೀತಿ ನೆರವಾಗುತ್ತಾರೋ ಕಾದುನೋಡೋಣ.

Whats_app_banner