ಋತುರಾಜ್ ಬದಲಿಗೆ 17 ವರ್ಷದ ಆಟಗಾರನಿಗೆ ಅವಕಾಶ? ಸಿಎಸ್​ಕೆ ತಂಡದ 5 ಸಮಸ್ಯೆಗಳಿಗೆ ಈತನಿಂದ ಪರಿಹಾರ ನಿರೀಕ್ಷಿಸಬಹುದೇ?
ಕನ್ನಡ ಸುದ್ದಿ  /  ಕ್ರಿಕೆಟ್  /  ಋತುರಾಜ್ ಬದಲಿಗೆ 17 ವರ್ಷದ ಆಟಗಾರನಿಗೆ ಅವಕಾಶ? ಸಿಎಸ್​ಕೆ ತಂಡದ 5 ಸಮಸ್ಯೆಗಳಿಗೆ ಈತನಿಂದ ಪರಿಹಾರ ನಿರೀಕ್ಷಿಸಬಹುದೇ?

ಋತುರಾಜ್ ಬದಲಿಗೆ 17 ವರ್ಷದ ಆಟಗಾರನಿಗೆ ಅವಕಾಶ? ಸಿಎಸ್​ಕೆ ತಂಡದ 5 ಸಮಸ್ಯೆಗಳಿಗೆ ಈತನಿಂದ ಪರಿಹಾರ ನಿರೀಕ್ಷಿಸಬಹುದೇ?

ಋತುರಾಜ್ ಗಾಯಕ್ವಾಡ್ ಅವರ ಬದಲಿಯಾಗಿ 17 ವರ್ಷದ ಆಟಗಾರ ಆಯುಷ್ ಮಾತ್ರೆಗೆ ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ. ಆದರೆ ತಂಡದ ಸಮಸ್ಯೆಗಳಿಗೆ ಈತನಿಂದ ಪರಿಹಾರ ನಿರೀಕ್ಷಿಸಬಹುದೇ?

ಋತುರಾಜ್ ಬದಲಿಗೆ 17 ವರ್ಷದ ಆಟಗಾರನಿಗೆ ಅವಕಾಶ? ಸಿಎಸ್​ಕೆ ತಂಡದ ಈ 5 ಸಮಸ್ಯೆಗಳಿಗೆ ಈತನಿಂದ ಪರಿಹಾರ ನಿರೀಕ್ಷಿಸಬಹುದೇ?
ಋತುರಾಜ್ ಬದಲಿಗೆ 17 ವರ್ಷದ ಆಟಗಾರನಿಗೆ ಅವಕಾಶ? ಸಿಎಸ್​ಕೆ ತಂಡದ ಈ 5 ಸಮಸ್ಯೆಗಳಿಗೆ ಈತನಿಂದ ಪರಿಹಾರ ನಿರೀಕ್ಷಿಸಬಹುದೇ?

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಗಾಯದ ಸಮಸ್ಯೆ ಕಾರಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಹೊರಬಿದ್ದಿದ್ದಾರೆ. ಪರಿಣಾಮ ಋತುರಾಜ್ ಅನುಪಸ್ಥಿತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವಹಿಸಿದ್ದಾರೆ. ಆದರೆ ಗಾಯಕ್ವಾಡ್​ಗೆ ಬದಲಿಯಾಗಿ​ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ವರದಿಗಳ ಪ್ರಕಾರ, ಗಾಯಕ್ವಾಡ್ ಬದಲಿಗೆ 17 ವರ್ಷದ ಆಯುಷ್ ಮಾತ್ರೆ ಅವರನ್ನು ಸಿಎಸ್​ಕೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ ಅವರನ್ನು ಎರಡು ವಾರಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದ್ದು, ಅದರ ನಂತರವೇ ತಂಡಕ್ಕೆ ಸೇರಲಿದ್ದಾರೆ.

ಆಯುಷ್ ಇಲ್ಲಿಯವರೆಗೆ ಒಂದೇ ಒಂದು ವೃತ್ತಿಪರ ಟಿ20 ಪಂದ್ಯವಾಡಿಲ್ಲ. ಹೀಗಿದ್ದಾಗ, ಯುವಕನಿಂದ ಹೆಚ್ಚು ನಿರೀಕ್ಷಿಸುವುದು ವ್ಯರ್ಥ. ದೇಶೀಯ ಕ್ರಿಕೆಟ್​​ನಲ್ಲಿ 16 ಪಂದ್ಯಗಳು ಆಡಿರುವ ಈತನ ಅಂಕಿ ಅಂಶಗಳು ಅತ್ಯುತ್ತಮವಾಗಿವೆ. ಆದರೆ ಆತನ ಮೇಲೆ ಹೆಚ್ಚು ನಿರೀಕ್ಷೆ ಇಡದೆ ತಂಡದಲ್ಲಿ ತಲೆದೋರಿರುವ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಕೆಲಸ ಮಾಡಬೇಕು. ಆಗ ಮಾತ್ರ ಈ ಋತುವಿನಲ್ಲಿ ಏನನ್ನಾದರೂ ಮಾಡಲು ಸಾಧ್ಯವಾಗುತ್ತದೆ, ಇಲ್ಲದಿದ್ದರೆ ಅದು ಪಾಯಿಂಟ್ಸ್ ಟೇಬಲ್​ನಲ್ಲಿ ಕಳೆದುಹೋಗುತ್ತದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಸಿಎಸ್​ಕೆ ಕೊನೆಯ ಸ್ಥಾನದಲ್ಲಿದೆ.

ಓಪನಿಂಗ್ ಸಮಸ್ಯೆ

ಚೆನ್ನೈ ಸೂಪರ್ ಕಿಂಗ್ಸ್​ ದೊಡ್ಡ ಸಮಸ್ಯೆಯೆಂದರೆ ತಂಡದ ಆರಂಭಿಕ ಜೋಡಿ. ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೆ ಮುಕ್ತರಾಗಿದ್ದಾರೆ. ಆದರೆ ಇಬ್ಬರಿಂದಲೂ ಮ್ಯಾಚ್ ವಿನ್ನಿಂಗ್ಸ್ ಪ್ರದರ್ಶನ ಬಂದೇ ಇಲ್ಲ. ಕೆಲವು ಪಂದ್ಯಗಳಲ್ಲಿ ಉತ್ತಮ ಆರಂಭ ನೀಡಿದ್ದರೂ ಇಬ್ಬರೂ ಒಂದೇ ಶೈಲಿಯ ಬ್ಯಾಟ್ಸ್​ಮನ್​​ಗಳು. ವೇಗವಾಗಿ ರನ್ ಗಳಿಸುವುದಿಲ್ಲ. ಪ್ರಸ್ತುತ ಲಕ್ನೋ ವಿರುದ್ಧದ ಪಂದ್ಯಕ್ಕೆ ಡೆವೊನ್ ಕಾನ್ವೆಯನ್ನು ಡ್ರಾಪ್ ಮಾಡಿದ್ದಾರೆ. ಆರಂಭಿಕ ಸ್ಥಾನಕ್ಕೆ ಶೇಕ್ ರಶೀದ್ ಆಯ್ಕೆಯಾಗಿದ್ದು, ಅವರೂ ಆಕ್ರಮಣಕಾರಿ ಆಡವಾಡದಿದ್ದರೆ ಒಂದೋ ಆರಂಭಿಕ ಜೋಡಿಯಲ್ಲಿ ಬದಲಾವಣೆ ಮಾಡಬೇಕು ಅಥವಾ ಒಬ್ಬರು ನಿಧಾನವಾಗಿ ಆಡಬೇಕು, ಇನ್ನೊಬ್ಬರು ಸ್ಫೋಟಕ ಇನ್ನಿಂಗ್ಸ್ ಕಟ್ಟಬೇಕು.

ಸ್ಪಿನ್​ ಸಮಸ್ಯೆ

ಸೂಪರ್ ಕಿಂಗ್ಸ್ ಪ್ರಸ್ತುತ ನೂರ್ ಅಹ್ಮದ್, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸ್ಪಿನ್ನರ್​ಗಳನ್ನು ಹೊಂದಿದೆ. ಇದೀಗ ಲಕ್ನೋ ಪಂದ್ಯಕ್ಕೆ ಅಶ್ವಿನ್​ರನ್ನು ಕೈಬಿಡಲಾಗಿದೆ. ಸದ್ಯಕ್ಕೆ ನೂರ್​ ಅಹ್ಮದ್ ಅಬ್ಬರಿಸುತ್ತಿದ್ದಾರೆ. ಆದರೆ ಅಶ್ವಿನ್ ಮತ್ತು ಜಡೇಜಾ ಸ್ಥಿತಿ ಏನು ಎಂಬುದನ್ನು ವಿಶೇಷವಾಗಿ ಬಿಡಿಸಿ ಹೇಳಬೇಕಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಜಡೇಜಾ ಅಥವಾ ಅಶ್ವಿನ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿದರೆ ಮಾತ್ರ ಈ ಸಮಸ್ಯೆ ಬಗೆಹರಿಯುತ್ತದೆ. ಸದ್ಯ ಈ ಪ್ರಯೋಗ ಮಾಡಲಾಗಿದ್ದು, ಯಶಸ್ಸು ಕಂಡರೆ ಇದನ್ನೇ ಮುಂದುವರೆಸಬಹುದು.

ಮಧ್ಯಮ ಕ್ರಮಾಂಕ ವೈಫಲ್ಯ

ಚೆನ್ನೈ ಸೂಪರ್ ಕಿಂಗ್ಸ್​ ದೊಡ್ಡ ಸಮಸ್ಯೆಗಳಲ್ಲಿ ಒಂದು ಮಧ್ಯಮ ಕ್ರಮಾಂಕದ ವೈಫಲ್ಯ. ರಾಹುಲ್ ತ್ರಿಪಾಠಿ, ವಿಜಯ್ ಶಂಕರ್ ಮತ್ತು ಶಿವಂ ದುಬೆ ಒಂದು ಪಂದ್ಯದಲ್ಲೂ ಪರಿಣಾಮ ಬೀರಲಿಲ್ಲ. ಹಿಟ್ಟರ್​ ದುಬೆ ಇದುವರೆಗೂ ಫೈಯರ್ ಆಗಲೇ ಇಲ್ಲ. ವಿಜಯ್ ಶಂಕರ್ ಮತ್ತು ರಾಹುಲ್ ತ್ರಿಪಾಠಿ ಕಳಪೆ ಫಾರ್ಮ್​​ನಲ್ಲಿದ್ದಾರೆ. ತಂಡವು ಇದುವರೆಗೆ 7 ಪಂದ್ಯಗಳನ್ನು ಆಡಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಮುಂದಿನ ಪಂದ್ಯಗಳಲ್ಲಾದರೂ ಬದಲಾವಣೆಗಳು ಕಾಣಬೇಕು. ಇದರಿಂದ ಸರಿಯಾದ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ.

ಪೇಸರ್​​​ಗಳ ಸಮಸ್ಯೆ

ಖಲೀಲ್ ಅಹ್ಮದ್ ಚೆನ್ನೈ ಪರ ಬೌಲಿಂಗ್​​ನ ಒಂದು ತುದಿಯನ್ನು ನಿರ್ವಹಿಸುತ್ತಿದ್ದಾರೆ, ಆದರೆ ಬೌಲರ್​​​ಗಳು ಇನ್ನೊಂದು ತುದಿಯಿಂದ ನಿರಂತರವಾಗಿ ಬದಲಾಗುತ್ತಿದ್ದಾರೆ. ಕೆಲವೊಮ್ಮೆ ಸ್ಯಾಮ್ ಕರನ್, ಕೆಲವೊಮ್ಮೆ ಅನ್ಶುಲ್ ಕಾಂಬೋಜ್ ಮತ್ತು ಕೆಲವೊಮ್ಮೆ ಜೇಮಿ ಓವರ್ಟನ್ ಇನ್ನೊಂದು ತುದಿಯಿಂದ ಬರುತ್ತಿದ್ದಾರೆ. ಆದರಿದು ನಿರಂತರವಾಗಿ ಬದಲಾಗುತ್ತಿದೆ. ಬೌಲರ್​ಗಳಲ್ಲಿ ಒಬ್ಬರೊಂದಿಗೆ ಅಂಟಿಕೊಂಡರೆ ಇದು ಫಲಿತಾಂಶ ಬದಲಾವಣೆಗೆ ಸಾಧ್ಯವಾಗಬಹುದು. ಇನ್ನು ಮತೀಶಾ ಪತಿರಾಣ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಇವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುತ್ತಿದ್ದಾರೆ.

ಮ್ಯಾಚ್ ಫಿನಿಶರ್

ನಿಜ, ಎಂಎಸ್ ಧೋನಿ ಈ ಹಿಂದೆ ಮ್ಯಾಚ್ ಫಿನಿಶರ್ ಆಗಿದ್ದರು. ಆದರೆ ಈಗ ಅವರು 43ನೇ ವಯಸ್ಸಿನಲ್ಲಿಯೂ ಪಂದ್ಯಗಳನ್ನು ಮುಗಿಸುತ್ತಾರೆ ಎಂದು ನಿರೀಕ್ಷಿಸುವುದು ತಪ್ಪು. ಧೋನಿ ಅವರಿಂದ ಬೌಂಡರಿ, ಸಿಕ್ಸರ್​​ಗಳಿಗೆ ಆತ್ಮವಿಶ್ವಾಸ ಇಡಬಹುದು, ಗೆಲ್ಲಿಸುತ್ತಾರೆ ಎಂದು ನಿರೀಕ್ಷೆ ಇಡಲಾಗದು. ಕಳೆದ ಪಂದ್ಯಗಳಲ್ಲೂ ಫಿನಿಷ್ ಮಾಡಲಾಗಲು ವಿಫಲರಾದರು. ಈ ಋತುವಿನಲ್ಲಿ ಇದುವರೆಗೆ ಯಾರೂ ನಿರ್ವಹಿಸದ ಈ ಜವಾಬ್ದಾರಿಯನ್ನು ಇನ್ನೊಬ್ಬ ಆಟಗಾರ ವಹಿಸಿಕೊಳ್ಳಬೇಕಾಗುತ್ತದೆ.

ಈ ಐದು ಸಮಸ್ಯೆಗಳು ಚೆನ್ನೈ ಸೂಪರ್ ಕಿಂಗ್ಸ್​​ನೊಂದಿಗೆ ಉಳಿದಿವೆ. ಆದರೆ, ಆಯುಷ್ ಮಾತ್ರೆ ಅವರು ಈ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆಯೇ ಎಂಬ ಪ್ರಶ್ನೆ ಹುಡುಕಿದರೂ ಅದಕ್ಕೆ ಉತ್ತರ ಇಲ್ಲ ಎಂದೇ ಹೇಳಬಹುದು. ಏಕೆಂದರೆ ಆಯುಷ್​​ಗಿಂತ ಮುಂಚೆಯೇ, ತಂಡದಲ್ಲಿ ಅನೇಕ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಅವರಿಗೆ ಅವಕಾಶ ಸಿಗದಿದ್ದರೆ, ಆಯುಷ್ ಕೂಡ ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner