ವಿಲ್ ಜಾಕ್ಸ್-ಗ್ರೀನ್ಗೆ ಸ್ಥಾನ; ಮ್ಯಾಕ್ಸ್ವೆಲ್ ಹೊರಕ್ಕೆ; SRH ಪಂದ್ಯಕ್ಕೆ ಆರ್ಸಿಬಿ ಬಲಿಷ್ಠ ಪ್ಲೇಯಿಂಗ್ XI
RCB Playing XI : ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಏಪ್ರಿಲ್ 15ರಂದು ನಡೆಯುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದನ್ನು ಮುಂದೆ ತಿಳಿಯೋಣ.
2024ರ ಐಪಿಎಲ್ನ 30ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು (RCB vs SRH) ಪರಸ್ಪರ ಮುಖಾಮುಖಿಯಾಗುತ್ತಿವೆ. 6 ಪಂದ್ಯಗಳಲ್ಲಿ 5ರಲ್ಲಿ ಸೋತಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದು, ಮೇಲೇರಲು ಭಾರಿ ಕಸರತ್ತು ನಡೆಸುತ್ತಿದೆ. ಮತ್ತೊಂದೆಡೆ ಆಡಿರುವ 5ರಲ್ಲಿ 3 ಗೆದ್ದಿರುವ ಸನ್‌ರೈಸರ್ಸ್, ಟೇಬಲ್ನಲ್ಲಿ 4 ರಿಂದ 2ನೇ ಸ್ಥಾನಕ್ಕೇರಲು ಸಜ್ಜಾಗಿದೆ.
ಪ್ಲೇಆಫ್ ದೃಷ್ಟಿಯಿಂದ ಆರ್ಸಿಬಿ ಈ ಪಂದ್ಯದಲ್ಲಿ ಜಯಿಸುವುದು ಅನಿವಾರ್ಯ. ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಏಳು ವಿಕೆಟ್‌ಗಳ ಭಾರೀ ಸೋಲು ಅನುಭವಿಸಿದ ಬೆಂಗಳೂರು ಕೆಳ ಸ್ಥಾನಕ್ಕೆ ಕುಸಿದಿತ್ತು. ಉಳಿದ 8 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಅಗ್ರ 4ರಲ್ಲಿ ಸ್ಥಾನ ಪಡೆಯಲು ಭಾರಿ ಯೋಜನೆ ರೂಪಿಸಬೇಕಿದೆ. ಅಲ್ಲದೆ, ಪ್ಲೇಆಫ್‌ಗಾಗಿ ತಮ್ಮ ಭರವಸೆಯನ್ನು ಜೀವಂತವಾಗಿರಿಸಲು ಹೈದರಾಬಾದ್ ವಿರುದ್ಧ ಗೆಲುವು ಅತ್ಯಗತ್ಯ.
ಗ್ಲೆನ್ ಮ್ಯಾಕ್ಸ್ವೆಲ್ ಔಟ್
ಎಸ್ಆರ್ಹೆಚ್ ಎದುರಿನ ಪಂದ್ಯಕ್ಕೆ ಆರ್ಸಿಬಿ ಪ್ರಮುಖ ಬದಲಾವಣೆ ಮಾಡಲು ನಿರ್ಧರಿಸಿದೆ. ಮುಂಬೈ ವಿರುದ್ಧ ಗಾಯಗೊಂಡಿರುವ ಗ್ಲೆನ್ ಮ್ಯಾಕ್ಸ್ವೆಲ್ ಈ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಹಾಗಾಗಿ ಕ್ಯಾಮರೂನ್ ಗ್ರೀನ್ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ವಿಲ್ ಜಾಕ್ಸ್ ಈ ಪಂದ್ಯದಲ್ಲೂ ಅವಕಾಶ ಪಡೆಯುವುದು ಖಚಿತ. ಬೌಲಿಂಗ್ನಲ್ಲಿ ರೀಸ್ ಟೋಪ್ಲಿ ಬದಲಿಗೆ ಲಾಕಿ ಫರ್ಗುಸನ್ ಕಣಕ್ಕಿಳಿದರೂ ಅಚ್ಚರಿ ಇಲ್ಲ. ಉಳಿದಂತೆ ಯಾವುದೇ ಬದಲಾವಣೆ ಮಾಡುವ ನಿರೀಕ್ಷೆ ಇಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟೀದಾರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ರೀಸ್ ಟೋಪ್ಲಿ/ಲಾಕಿ ಫರ್ಗುಸನ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
ಆರ್ಸಿಬಿ ಇಂಪ್ಯಾಕ್ಟ್ ಪ್ಲೇಯರ್ಸ್: ಸುಯೇಶ್ ಪ್ರಭುದೇಸಾಯಿ, ಸೌರವ್ ಚೌಹಾನ್, ಸ್ವಪ್ನಿಲ್ ಸಿಂಗ್, ರಾಜನ್ ಕುಮಾರ್, ಕರ್ಣ್ ಶರ್ಮಾ
ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ಏಡನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕತ್, ಟಿ ನಟರಾಜನ್.
ಎಸ್ಆರ್ಹೆಚ್ ಇಂಪ್ಯಾಕ್ಟ್ ಪ್ಲೇಯರ್ಸ್: ಉಮ್ರಾನ್ ಮಲಿಕ್, ಮಯಾಂಕ್ ಮಾರ್ಕಾಂಡೆ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ರಾಹುಲ್ ತ್ರಿಪಾಠಿ.
ಆರ್ಸಿಬಿ vs ಎಸ್ಆರ್ಹೆಚ್ ಪಂದ್ಯದ ವಿವರ
ಪಂದ್ಯ: ಐಪಿಎಲ್ 2024, 30ನೇ ಟಿ20 ಪಂದ್ಯ
ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ದಿನಾಂಕ ಮತ್ತು ಸಮಯ: ಸೋಮವಾರ, ಏಪ್ರಿಲ್ 15 ರಂದು ಸಂಜೆ 7:30ಕ್ಕೆ (ರಾತ್ರಿ 7:00 ಗಂಟೆಗೆ ಟಾಸ್)
ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ ವೆಬ್‌ಸೈಟ್ ಮತ್ತು ಅಪ್ಲಿಕೇಶನ್.
ಮುಖಾಮುಖಿ ದಾಖಲೆ
ಒಟ್ಟು ಪಂದ್ಯಗಳು - 23
ಆರ್ಸಿಬಿ ಗೆಲುವು - 10
ಎಸ್ಆರ್ಹೆಚ್ ಗೆಲುವು - 13