ನಂಬಿದರೂ ನಂಬದಿದ್ದರೂ ಇದೇ ಸತ್ಯ; ಆರ್​ಸಿಬಿ ವಿರುದ್ಧ ಸಿಎಸ್​ಕೆ ಸೋತು ಪ್ಲೇಆಫ್​ನಿಂದ ಹೊರಬಿದ್ದರೆ ಎಂಎಸ್ ಧೋನಿಗೆ ಅದೇ ವಿದಾಯದ ಪಂದ್ಯ
ಕನ್ನಡ ಸುದ್ದಿ  /  ಕ್ರಿಕೆಟ್  /  ನಂಬಿದರೂ ನಂಬದಿದ್ದರೂ ಇದೇ ಸತ್ಯ; ಆರ್​ಸಿಬಿ ವಿರುದ್ಧ ಸಿಎಸ್​ಕೆ ಸೋತು ಪ್ಲೇಆಫ್​ನಿಂದ ಹೊರಬಿದ್ದರೆ ಎಂಎಸ್ ಧೋನಿಗೆ ಅದೇ ವಿದಾಯದ ಪಂದ್ಯ

ನಂಬಿದರೂ ನಂಬದಿದ್ದರೂ ಇದೇ ಸತ್ಯ; ಆರ್​ಸಿಬಿ ವಿರುದ್ಧ ಸಿಎಸ್​ಕೆ ಸೋತು ಪ್ಲೇಆಫ್​ನಿಂದ ಹೊರಬಿದ್ದರೆ ಎಂಎಸ್ ಧೋನಿಗೆ ಅದೇ ವಿದಾಯದ ಪಂದ್ಯ

MS Dhoni: ಮೇ 18ರಂದು ನಡೆಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ ಸೋತು ಪ್ಲೇಆಫ್​ನಿಂದ ಹೊರಬಿದ್ದರೆ ಎಂಎಸ್ ಧೋನಿ ಅವರಿಗೆ ಅದೇ ವಿದಾಯ ಪಂದ್ಯವಾಗಿರಲಿದೆ.

ನಂಬಿದರೂ ನಂಬದಿದ್ದರೂ ಇದೇ ಸತ್ಯ; ಆರ್​ಸಿಬಿ ವಿರುದ್ಧ ಸಿಎಸ್​ಕೆ ಸೋತರೆ ಎಂಎಸ್ ಧೋನಿಗೆ ಅದೇ ವಿದಾಯದ ಪಂದ್ಯ
ನಂಬಿದರೂ ನಂಬದಿದ್ದರೂ ಇದೇ ಸತ್ಯ; ಆರ್​ಸಿಬಿ ವಿರುದ್ಧ ಸಿಎಸ್​ಕೆ ಸೋತರೆ ಎಂಎಸ್ ಧೋನಿಗೆ ಅದೇ ವಿದಾಯದ ಪಂದ್ಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ತಂಡಗಳ ನಡುವಿನ ಹೈವೋಲ್ಟೇಜ್​​ ಕಾದಾಟಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ (Chinnaswamy Cricket Stadium) ಸಜ್ಜಾಗಿ ನಿಂತಿದೆ. ಮೇ 18ರಂದು ಶನಿವಾರ ನಡೆಯುವ ಬಹುನಿರೀಕ್ಷಿತ ಪಂದ್ಯಕ್ಕೆ ಇಡೀ ಜಗತ್ತೇ ಕಾದುಕುಳಿತಿದೆ. ಈ ಪಂದ್ಯ ಉಭಯ ತಂಡಗಳ ಪ್ಲೇಆಫ್​ ಭವಿಷ್ಯ ನಿರ್ಧರಿಸಲಿರುವ ಕಾರಣ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. ಆರ್​ಸಿಬಿ ವಿರುದ್ಧ ಸೋತು ಪ್ಲೇಆಫ್​ನಿಂದ ಹೊರಬಿದ್ದರೆ ಸಿಎಸ್​ಕೆ ಅಭಿಮಾನಿಗಳ ಆರಾಧ್ಯ ದೈವ ಎಂಎಸ್ ಧೋನಿ (MS Dhoni) ಅವರಿಗೆ ಅದೇ ವಿದಾಯದ ಪಂದ್ಯವಾಗಿರಲಿದೆ.

2008 ರಿಂದ ಇಲ್ಲಿಯವರೆಗೂ 263 ಐಪಿಎಲ್ ಪಂದ್ಯಗಳನ್ನು ಆಡಿ 5218 ರನ್ ಗಳಿಸಿರುವ ಧೋನಿ ಕುರಿತು ಆಘಾತಕಾರಿ ಸುದ್ದಿ ಕೇಳಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ನಂಬಿದರೂ, ನಂಬದಿದ್ದರೂ ಇದೇ ಸತ್ಯ. ಹೌದು, ಎಂಎಸ್ ಧೋನಿ ಅವರಿಗೆ ಇದೇ ಅಂತಿಮ ಐಪಿಎಲ್. ಜುಲೈನಲ್ಲಿ 42ನೇ ವರ್ಷಕ್ಕೆ ಕಾಲಿಡಲಿರುವ ಧೋನಿ, 2024ರ ಐಪಿಎಲ್ ಆರಂಭಕ್ಕೂ ಮುನ್ನ ತನ್ನ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್​ಗೆ ಹಸ್ತಾಂತರಿಸುವ ಮೂಲಕ ನಿವೃತ್ತಿಯ ಸುಳಿವು ಕೊಟ್ಟಿದ್ದಾರೆ. ಒಂದು ವೇಳೆ ಆರ್​ಸಿಬಿ ವಿರುದ್ಧ ಚೆನ್ನೈ ಸೋತು ಪ್ಲೇಆಫ್​ನಿಂದ ಹೊರಬಿದ್ದರೆ, ಎಂಎಸ್ ಪಾಲಿಗೆ ಅದೇ ಕೊನೆಯ ಪಂದ್ಯವಾಗಲಿದೆ.

ಟಿಕೆಟ್​ಗಾಗಿ ಮುಗಿಬಿದ್ದ ಫ್ಯಾನ್ಸ್​

ಮೇ 18ರಂದು ಆರ್​ಸಿಬಿ ವಿರುದ್ಧ ಚೆನ್ನೈ ಸೆಣಸಾಟ ನಡೆಸಲಿದೆ. ಪ್ಲೇ ಆಫ್​ ಪ್ರವೇಶಿಸಲು ಉತ್ತಮ ಅವಕಾಶ ಇರುವ ಕಾರಣ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಉಭಯ ತಂಡಗಳಿಗೂ ಅನಿವಾರ್ಯ. ಸಿಎಸ್​ಕೆ 14 ಅಂಕ ಪಡೆದಿದ್ದರೆ, ಆರ್​​ಸಿಬಿ 12 ಅಂಕ ಪಡೆದಿದೆ. ನೆಟ್​ರನ್​ರೇಟ್​ನಲ್ಲೂ ಸಿಎಸ್​ಕೆ ಕೊಂಚ ಮುಂದಿದೆ. ಯಲ್ಲೋ ಆರ್ಮಿ ಮತ್ತು ರೆಡ್​ ಆರ್ಮಿಗೆ ಇದು ಅಂತಿಮ ಲೀಗ್ ಪಂದ್ಯ. ಫಾಫ್ ಪಡೆಯು ಋತುರಾಜ್ ಪಡೆಯನ್ನು ಸೋಲಿಸಿದರೆ 14 ಅಂಕ ಪಡೆಯುತ್ತದೆ. ಆಗ ನೆಟ್ ರನ್ ರೇಟ್ ಮುಂದಿರುವ ತಂಡ ಪ್ಲೇಆಫ್​ಗೆ ಬರುತ್ತದೆ.

ಒಂದು ವೇಳೆ ಸೋತರೆ ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಮತ್ತೆ ಅವಕಾಶ ಸಿಗುವುದಿಲ್ಲ ಎಂಬ ಉದ್ದೇಶದಿಂದ ಅಭಿಮಾನಿಗಳು ಟಿಕೆಟ್ ಖರೀದಿಗೆ ಮುಗಿಬೀಳುತ್ತಿದ್ದಾರೆ. ಆರ್​ಸಿಬಿ ಅಧಿಕೃತ ವೆಬ್​ಸೈಟ್​​ನಲ್ಲಿ ಈಗಾಗಲೇ ಎಲ್ಲಾ ಟಿಕೆಟ್​ಗಳು ಮಾರಾಟವಾಗಿವೆ. ಆದರೆ ಜಿದ್ದಾಜಿದ್ದಿನ ಕಾದಾಟದ ಟಿಕೆಟ್​ಗಳಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ. ಎಕ್ಸ್​ ಖಾತೆಯಲ್ಲೂ #RCBvsCSKtickets ಹ್ಯಾಶ್​ಟ್ಯಾಗ್​ನಲ್ಲಿ ಟ್ರೆಂಡ್ ಆಗ್ತಿದೆ. ಆರ್​ಸಿಬಿ ಫಾರ್ಮ್​ನಲ್ಲಿರುವುದು ಗಮನಿಸಿದರೆ, ಸಿಎಸ್​ಕೆ ಸೋಲುವುದು ಖಚಿತ ಎಂದು ಅನೇಕರು ಭಾವಿಸಿದ್ದಾರೆ. ಇದೇ ಕಾರಣಕ್ಕೆ ಚೆನ್ನೈ ಫ್ಯಾನ್ಸ್ ಟಿಕೆಟ್​ಗಾಗಿ ಮುಗಿಬೀಳುತ್ತಿದ್ದಾರೆ.

ಪ್ಲೇಆಫ್ ಲೆಕ್ಕಾಚಾರ ಹೇಗಿದೆ?

ಆರ್​​ಸಿಬಿ ಪ್ಲೇಆಫ್​ ಪ್ರವೇಶಿಸಲು ಈ ಪಂದ್ಯದ ಗೆಲುವು ಅತ್ಯಗತ್ಯ. ಅಲ್ಲದೆ, ನೆಟ್​ರನ್​ರೇಟ್​ನಲ್ಲೂ ಚೆನ್ನೈ ತಂಡವನ್ನು ಮೀರಿಸಬೇಕು. ಆರ್​ಸಿಬಿ +0.528, ಆರ್​ಸಿಬಿ +0.387 ರನ್ ರೇಟ್ ಹೊಂದಿದೆ. ಆದರೆ ಫಾಫ್ ಪಡೆ ಈ ಪಂದ್ಯದಲ್ಲಿ ರನ್ ರೇಟ್​ನಲ್ಲೂ ಮುಂದೆ ಬರಬೇಕು. ಆಗ ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಆರ್​ಸಿಬಿ ಗೆದ್ದು ಸಿಎಸ್​ಕೆಗಿಂತ ಕಡಿಮೆ ನೆಟ್ ರನ್ ರೇಟ್ ಪಡೆದರೆ, ಲೀಗ್​ನಿಂದಲೇ ಹೊರಬೀಳಿದೆ. ಬೆಂಗಳೂರು ತಂಡ 18.1 ಓವರ್​​ಗಳೊಳಗೆ ಚೇಸಿಂಗ್ ಮಾಡಬೇಕು, ಇಲ್ಲವಾದಲ್ಲಿ 18 ರನ್​ಗಳಿಂದ ಗೆಲ್ಲಬೇಕು. ಆದರೆ ಸಿಎಸ್​ಕೆ ಗೆದ್ದರೆ ಸಾಕು ಪ್ಲೇಆಫ್ ಪ್ರವೇಶಿಸಲಿದೆ.

Whats_app_banner