ರೋಹಿತ್​ ಶರ್ಮಾ ಗಾಯದ ಕುರಿತು ಹೊಸ ಅಪ್ಡೇಟ್; ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಅಲಭ್ಯ?
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್​ ಶರ್ಮಾ ಗಾಯದ ಕುರಿತು ಹೊಸ ಅಪ್ಡೇಟ್; ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಅಲಭ್ಯ?

ರೋಹಿತ್​ ಶರ್ಮಾ ಗಾಯದ ಕುರಿತು ಹೊಸ ಅಪ್ಡೇಟ್; ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಅಲಭ್ಯ?

Rohit Sharma: ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ನಂತರ ಮೈದಾನ ತೊರೆದ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅವರ ಗಾಯದ ಕುರಿತು ಹೊಸ ಅಪ್ಡೇಟ್ ಹೊರಬಿದ್ದಿದೆ.

ರೋಹಿತ್​ ಶರ್ಮಾ ಗಾಯದ ಕುರಿತು ಹೊಸ ಅಪ್ಡೇಟ್; ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಅಲಭ್ಯ?
ರೋಹಿತ್​ ಶರ್ಮಾ ಗಾಯದ ಕುರಿತು ಹೊಸ ಅಪ್ಡೇಟ್; ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಅಲಭ್ಯ?

ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ (T20 World Cup 2024) ಟೀಮ್ ಇಂಡಿಯಾ (Team India) ಆಡಿದ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಜೂನ್ 5ರಂದು ನಡೆದ ಐರ್ಲೆಂಡ್ ಎದುರಿನ ಪಂದ್ಯದಲ್ಲಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಭಾರತ, ಜೂನ್ 9ರಂದು ಜರುಗುವ ಪಾಕಿಸ್ತಾನ ವಿರುದ್ಧದ ಮೆಗಾ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆದರೆ, ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲೇ ನಡೆಯುವ ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಘಾತಕ್ಕೆ ಒಳಗಾಗಿದೆ. ನಾಯಕ ರೋಹಿತ್ ಶರ್ಮಾ (Rohit Sharma) ಮಹತ್ವದ ಪಂದ್ಯಕ್ಕೆ ಅಲಭ್ಯರಾಗುತ್ತಾರೆ ಎನ್ನಲಾಗುತ್ತಿದೆ.

ರೋಹಿತ್ ಶರ್ಮಾ ಇಂಜುರಿ ಅಪ್ಡೇಟ್

ಐರ್ಲೆಂಡ್ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ರೋಹಿತ್​ ಶರ್ಮಾ, ಭುಜದ ಗಾಯದ ಸಮಸ್ಯೆಗೆ ತುತ್ತಾದರು. 36 ಎಸೆತಗಳಲ್ಲಿ 50ರ ಗಡಿ ದಾಟಿದ ಹಿಟ್​ಮ್ಯಾನ್​ ತಾನು ಎದುರಿಸಿದ 37ನೇ ಎಸೆತವು ಭುಜಕ್ಕೆ ತಗುಲಿತು. ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್​ಗೆ ಮರಳಿದ್ದು ಅಭಿಮಾನಿಗಳು ಆತಂಕಕ್ಕೆ ದೂಡಿತ್ತು. ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಗಾಯಗೊಂಡಿದ್ದರ ಕುರಿತು ಹೊಸ ಅಪ್‌ಡೇಟ್ ಹೊರಬಿದ್ದಿದೆ. ಅವರು ಫಿಟ್ ಆಗಿದ್ದಾರಾ? ಮುಂದಿನ ಪಂದ್ಯ ಆಡುತ್ತಾರಾ?

9ನೇ ಓವರ್​​ನಲ್ಲಿ ಚೆಂಡು ಬೌನ್ಸ್ ಆಯಿತು. ಅಚ್ಚರಿಯ ಎಸೆತ ಕಂಡು ಆಶ್ಚರ್ಯಗೊಂಡ ರೋಹಿತ್​, ಬ್ಯಾಕ್-ಆಫ್-ದಿ-ಲೈನ್ ಎಸೆತವನ್ನು ಸ್ಮ್ಯಾಶ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಅವರ ಭುಜಕ್ಕೆ ಬಡಿಯಿತು. ತಕ್ಷಣ ವೈದ್ಯಕೀಯ ಸಿಬ್ಬಂದಿ ಮೈದಾನಕ್ಕೆ ಆಗಮಿಸಿದರು. ಜೋಶುವಾ ಲಿಟಲ್ ಎಸೆತದಲ್ಲಿ ಗಾಯಗೊಂಡ ರೋಹಿತ್​, ಮತ್ತೆ ಬ್ಯಾಟಿಂಗ್ ಮಾಡಿದರೆ ಗಾಯ ಮತ್ತಷ್ಟು ಹೆಚ್ಚಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದರು. ಪಂದ್ಯವೂ ಸಹ ಗೆಲುವಿನ ಸನಿಹಕ್ಕೆ ಬಂದಿದ್ದ ಕಾರಣ ಮತ್ತೆ ಬ್ಯಾಟಿಂಗ್ ನಡೆಸುವ ನಿರ್ಧಾರ ಕೈಗೊಂಡಿಲ್ಲ.

ಪಂದ್ಯದ ನಂತರ ಭುಜದ ನೋವಿನ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ, ಪಾಕಿಸ್ತಾನ ವಿರುದ್ಧದದ ಪಂದ್ಯಕ್ಕೆ ಲಭ್ಯರಾಗುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುವಂತೆ ಮಾಡಿದೆ. ರೋಹಿತ್​​ ರಿಟೈರ್ಡ್ ಹರ್ಟ್ ನಂತರ ಸೂರ್ಯಕುಮಾರ್ ಕಣಕ್ಕಿಳಿದರು. ಆದರೆ ನಿರಾಸೆ ಮೂಡಿಸಿದರು. ಮತ್ತೊಂದೆಡೆ ರಿಷಭ್ ಪಂತ್​ ಸೊಗಸಾದ ಬ್ಯಾಟಿಂಗ್ ನಡೆಸಿ ರೋಹಿತ್​ಗೆ ಉತ್ತಮವಾದ ಸಾಥ್ ಕೊಟ್ಟರು. ಇನ್ನೂ 46 ಎಸೆತಗಳನ್ನು ಉಳಿಸಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟರು. ಟೀಮ್ ಇಂಡಿಯಾ ಆಲ್​ರೌಂಡ್ ಪ್ರದರ್ಶನ ನೀಡಿತು.

ಪಾಕ್ ಪಂದ್ಯಕ್ಕೆ ಫಿಟ್ ಆಗುವುದು ಖಚಿತ

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್​ ಶರ್ಮಾ ಭುಜ ನೋಯುತ್ತಿದೆ. ಆದರೆ, ಆತಂಕಪಡುವಂತದ್ದೇನು ಇಲ್ಲ ಎಂದು ಖಚಿತಪಡಿಸಿದ್ದರು. ವೈದ್ಯಕೀಯ ಸಿಬ್ಬಂದಿಯೂ ಅವರ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದು, ಪಾಕ್ ಕದನಕ್ಕೆ ಸಿದ್ಧಪಡಿಸಲು ಎಲವನ್ನೂ ಮಾಡುತ್ತಿದ್ದಾರೆ. ಆದರೆ ಅಭಿಮಾನಿಗಳು ರೋಹಿತ್, ರಿಟೈರ್ಡ್ ಹರ್ಟ್ ಆಗುತ್ತಿದ್ದಂತೆ ಆತಂಕಕ್ಕೆ ಒಳಗಾಗಿದ್ದರು. ಆದರೀಗ ಅಭಿಮಾನಿಗಳಿಗೆ ಗುಡ್​ನ್ಯೂಸ್ ಸಿಕ್ಕಿದೆ. ಜೂನ್ 9ರಂದು ನಡೆಯುವ ಪಂದ್ಯದಲ್ಲಿ ರೋಹಿತ್​ ಕಣಕ್ಕಿಳಿಯುವುದು ಖಚಿತವಾಗಿದೆ.

ಇನ್ನಷ್ಟು ಟಿ20 ವಿಶ್ವಕಪ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner