ಮಹಿಳೆಯರ ಏಷ್ಯಾಕಪ್​; ಭಾರತ ತಂಡ, ವೇಳಾಪಟ್ಟಿ, ಜುಲೈ 19ರಂದು ಇಂಡೋ-ಪಾಕ್ ಹಣಾಹಣಿ, ಫ್ಯಾನ್ಸ್​ಗೆ ಉಚಿತ ಪ್ರವೇಶ
ಕನ್ನಡ ಸುದ್ದಿ  /  ಕ್ರಿಕೆಟ್  /  ಮಹಿಳೆಯರ ಏಷ್ಯಾಕಪ್​; ಭಾರತ ತಂಡ, ವೇಳಾಪಟ್ಟಿ, ಜುಲೈ 19ರಂದು ಇಂಡೋ-ಪಾಕ್ ಹಣಾಹಣಿ, ಫ್ಯಾನ್ಸ್​ಗೆ ಉಚಿತ ಪ್ರವೇಶ

ಮಹಿಳೆಯರ ಏಷ್ಯಾಕಪ್​; ಭಾರತ ತಂಡ, ವೇಳಾಪಟ್ಟಿ, ಜುಲೈ 19ರಂದು ಇಂಡೋ-ಪಾಕ್ ಹಣಾಹಣಿ, ಫ್ಯಾನ್ಸ್​ಗೆ ಉಚಿತ ಪ್ರವೇಶ

Womens Asia Cup 2024: ಮಹಿಳೆಯರ ಏಷ್ಯಾಕಪ್ 2024 ಟೂರ್ನಿ ಜುಲೈ 19ರಂದು ಪ್ರಕಟಗೊಂಡಿದೆ. ಭಾರತ ಮತ್ತು ಪಾಕಿಸ್ತಾನ ಪಂದ್ಯ ಯಾವಾಗ? ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಮಹಿಳೆಯರ ಏಷ್ಯಾಕಪ್​; ಭಾರತ ತಂಡ, ವೇಳಾಪಟ್ಟಿ, ಜುಲೈ 19ರಂದು ಇಂಡೋ-ಪಾಕ್ ಹಣಾಹಣಿ, ಫ್ಯಾನ್ಸ್​ಗೆ ಉಚಿತ ಪ್ರವೇಶ
ಮಹಿಳೆಯರ ಏಷ್ಯಾಕಪ್​; ಭಾರತ ತಂಡ, ವೇಳಾಪಟ್ಟಿ, ಜುಲೈ 19ರಂದು ಇಂಡೋ-ಪಾಕ್ ಹಣಾಹಣಿ, ಫ್ಯಾನ್ಸ್​ಗೆ ಉಚಿತ ಪ್ರವೇಶ

ಬಹುನಿರೀಕ್ಷಿತ ಮಹಿಳಾ ಏಷ್ಯಾ ಕಪ್ ಟೂರ್ನಿ 2024 ಜುಲೈ 19 ರಿಂದ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನೇಪಾಳ ಮಹಿಳಾ ತಂಡಗಳು ಸೆಣಸಾಟ ನಡೆಸಲಿವೆ. ಅದೇ ದಿನ ರಾತ್ರಿ 7 ಗಂಟೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವು ಆರಂಭಿಕ ಎರಡೂ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿದೆ. ಎಲ್ಲಾ ಪಂದ್ಯಗಳಿಗೂ ಪ್ರೇಕ್ಷಕರಿಗೆ ಉಚಿತ ಪ್ರವೇಶ ಇರಲಿದೆ.

ಆತಿಥೇಯ ಶ್ರೀಲಂಕಾ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಒಂದು ದಿನದ ನಂತರ ಆಡಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಶುಕ್ರವಾರ ಪ್ರಕಟಿಸಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ತಂಡವನ್ನು ಹೊರತುಪಡಿಸಿ ಥೈಲ್ಯಾಂಡ್, ಯುಎಇ, ನೇಪಾಳ ಮತ್ತು ಮಲೇಷ್ಯಾ ನಾಲ್ಕು ತಂಡಗಳು ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ನಿರೀಕ್ಷೆಯಿದೆ. 2 ಸೆಮಿಫೈನಲ್, ಫೈನಲ್ ಸೇರಿದಂತೆ ಎಲ್ಲಾ 15 ಪಂದ್ಯಗಳು ನಡೆಯಲಿವೆ.

ಎ ಗುಂಪು: ಭಾರತ, ಪಾಕಿಸ್ತಾನ, ಯುಎಇ ಮತ್ತು ನೇಪಾಳ.

ಬಿ ಗುಂಪು: ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ ಮತ್ತು ಥೈಲ್ಯಾಂಡ್.

ಮಹಿಳಾ ಏಷ್ಯಾಕಪ್ 2024 ಪೂರ್ಣ ವೇಳಾಪಟ್ಟಿ

ಜುಲೈ 19

ಯುಎಇ vs ನೇಪಾಳ, ಮಧ್ಯಾಹ್ನ 2.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಭಾರತ vs ಪಾಕಿಸ್ತಾನ, ರಾತ್ರಿ 7.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಜುಲೈ 20

ಮಲೇಷ್ಯಾ vs ಥೈಲ್ಯಾಂಡ್, ಮಧ್ಯಾಹ್ನ 2.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಶ್ರೀಲಂಕಾ vs ಬಾಂಗ್ಲಾದೇಶ, ರಾತ್ರಿ 7.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಜುಲೈ 21

ಭಾರತ vs ಯುಎಇ, ಮಧ್ಯಾಹ್ನ 2.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಪಾಕಿಸ್ತಾನ vs ನೇಪಾಳ, ರಾತ್ರಿ 7.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಜುಲೈ 22

ಶ್ರೀಲಂಕಾ vs ಮಲೇಷ್ಯಾ, ಮಧ್ಯಾಹ್ನ 2.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಬಾಂಗ್ಲಾದೇಶ vs ಥೈಲ್ಯಾಂಡ್, ರಾತ್ರಿ 7.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಜುಲೈ 23

ಪಾಕಿಸ್ತಾನ vs ಯುಎಇ, ಮಧ್ಯಾಹ್ನ 2.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಭಾರತ vs ನೇಪಾಳ, ರಾತ್ರಿ 7.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಜುಲೈ 24

ಬಾಂಗ್ಲಾದೇಶ vs ಮಲೇಷ್ಯಾ, ಮಧ್ಯಾಹ್ನ 2.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಶ್ರೀಲಂಕಾ vs ಥೈಲ್ಯಾಂಡ್, ರಾತ್ರಿ 7.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಜುಲೈ 26

ಸೆಮಿಫೈನಲ್ 1: ಮಧ್ಯಾಹ್ನ 2.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಸೆಮಿಫೈನಲ್ 2: ರಾತ್ರಿ 7.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

ಜುಲೈ 28

ಫೈನಲ್: ರಾತ್ರಿ 7.00, ರಂಗಿರಿ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣ

2024ರ ಮಹಿಳಾ ಏಷ್ಯಾಕಪ್‌ಗೆ ಭಾರತ ತಂಡ

ಹರ್ಮನ್​ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್-ಕೀಪರ್), ಉಮಾ ಚೆಟ್ರಿ (ವಿಕೆಟ್-ಕೀಪರ್), ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್. ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಸಜನಾ ಸಜೀವನ್.

ಮೀಸಲು ಆಟಗಾರರು: ಶ್ವೇತಾ ಸೆಹ್ರಾವತ್, ಸೈಕಾ ಇಶಾಕ್, ತನುಜಾ ಕನ್ವರ್, ಮೇಘನಾ ಸಿಂಗ್.