ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್, ವಿಕೆಟ್, ಅರ್ಧಶತಕ, ಸಿಕ್ಸರ್ ಸಿಡಿಸಿದವರ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್, ವಿಕೆಟ್, ಅರ್ಧಶತಕ, ಸಿಕ್ಸರ್ ಸಿಡಿಸಿದವರ ಪಟ್ಟಿ ಇಲ್ಲಿದೆ

ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್, ವಿಕೆಟ್, ಅರ್ಧಶತಕ, ಸಿಕ್ಸರ್ ಸಿಡಿಸಿದವರ ಪಟ್ಟಿ ಇಲ್ಲಿದೆ

Women's Premier League 2025: ಮಹಿಳಾ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲಿ ಅತಿ ಹೆಚ್ಚು ರನ್, ವಿಕೆಟ್, ಅರ್ಧಶತಕ, ಸಿಕ್ಸರ್​​.. ಹೀಗೆ ಅಂಕಿ-ಅಂಶಗಳ ಇಣುಕು ನೋಟ ಇಲ್ಲಿದೆ.

ಡಬ್ಲ್ಯುಪಿಎಲ್​ 2025: ಅತಿ ಹೆಚ್ಚು ರನ್, ಗರಿಷ್ಠ ವಿಕೆಟ್, ಅಧಿಕ ಅರ್ಧಶತಕ, ಸಿಕ್ಸರ್ ಸಿಡಿಸಿದವರ ಪಟ್ಟಿ ಇಲ್ಲಿದೆ
ಡಬ್ಲ್ಯುಪಿಎಲ್​ 2025: ಅತಿ ಹೆಚ್ಚು ರನ್, ಗರಿಷ್ಠ ವಿಕೆಟ್, ಅಧಿಕ ಅರ್ಧಶತಕ, ಸಿಕ್ಸರ್ ಸಿಡಿಸಿದವರ ಪಟ್ಟಿ ಇಲ್ಲಿದೆ

ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL 2025)​ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಐದು ತಂಡಗಳು ಒಂದು ಟ್ರೋಫಿಗಾಗಿ ಸಮರ ಸಾರಿವೆ. ಐಪಿಎಲ್​ನಷ್ಟೇ ಜನಪ್ರಿಯತೆ ಪಡೆದಿರುವ ಡಬ್ಲ್ಯುಪಿಎಲ್​​ ಎರಡು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮೂರನೇ ಆವೃತ್ತಿಗೆ ದಾಪುಗಾಲಿಟ್ಟಿದೆ. ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ಅದ್ಧೂರಿ ಆರಂಭ ಪಡೆಯಲಿರುವ ಮಹಿಳಾ ಐಪಿಎಲ್, ಕ್ರಿಕೆಟ್ ಪ್ರಿಯರಿಗೆ ಒಂದು ತಿಂಗಳ ತನಕ ನಾನ್​ಸ್ಟಾಪ್ ಮನರಂಜನೆ ಒದಗಿಸಲಿದೆ.

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಕಾದಾಟ ನಡೆಸುವ ಮೂಲಕ 3ನೇ ಆವೃತ್ತಿಯ ಡಬ್ಲ್ಯುಪಿಎಲ್​ಗೆ ಭರ್ಜರಿ ಚಾಲನೆ ನೀಡಲಿವೆ. ಈ ಬಾರಿ 4 ನಗರಗಳಲ್ಲಿ ಟೂರ್ನಿ ನಡೆಯಲಿದೆ ಎಂಬುದು ವಿಶೇಷ. ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್, 2ನೇ ಆವೃತ್ತಿಯಲ್ಲಿ ಆರ್​ಸಿಬಿ ಚಾಂಪಿಯನ್ ಆಗಿದ್ದವು. ಇದೀಗ ಮೂರನೇ ಸೀಸನ್​ನಲ್ಲಿ ಯಾವ ತಂಡ ಟ್ರೋಫಿಗೆ ಮುತ್ತಿಕ್ಕಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಇದೀಗ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್, ವಿಕೆಟ್, ಅರ್ಧಶತಕ, ಸಿಕ್ಸರ್​​.. ಹೀಗೆ ಅಂಕಿ-ಅಂಶಗಳ ಇಣುಕ ನೋಟ ಇಲ್ಲಿದೆ.

ಅತಿ ಹೆಚ್ಚು ರನ್ ಗಳಿಸಿದ ಟಾಪ್​-5 ಬ್ಯಾಟರ್ಸ್

  • ಮೆಗ್ ಲ್ಯಾನಿಂಗ್ (ಡೆಲ್ಲಿ ಕ್ಯಾಪಿಟಲ್ಸ್): 676 ರನ್ (18 ಪಂದ್ಯ)
  • ಎಲಿಸ್ ಪೆರಿ (ಆರ್​ಸಿಬಿ): 600 ರನ್ (17 ಪಂದ್ಯ)
  • ಶಫಾಲಿ ವರ್ಮಾ (ಡೆಲ್ಲಿ): 561 ರನ್ (18 ಪಂದ್ಯ)
  • ಹರ್ಮನ್​ಪ್ರೀತ್ ಕೌರ್ (ಮುಂಬೈ): 549 (17 ಪಂದ್ಯ)
  • ನಟಾಲಿ ಸೀವರ್ (ಮುಂಬೈ): 504 ರನ್ (19 ಪಂದ್ಯ)

ಇದನ್ನೂ ಓದಿ: ಏಕದಿನ ಕ್ರಿಕೆಟ್: ರೋಹಿತ್ ಶರ್ಮಾ​ 134 ರನ್ ಸಿಡಿಸಿದರೆ ಸಚಿನ್​ರ ದೊಡ್ಡ ದಾಖಲೆ ಉಡೀಸ್; ಮೈಲ್ಲಿಗಲ್ಲು ತಲುಪಿದರೂ ಕೊಹ್ಲಿಯೇ ಟಾಪ್!

ಅತಿ ಹೆಚ್ಚು ವಿಕೆಟ್ ಪಡೆದ ಟಾಪ್​-5 ಬೌಲರ್ಸ್

  • ಸೋಫಿ ಎಕ್ಲೋಸ್ಟನ್ (ಯುಪಿ ವಾರಿಯರ್ಸ್)- 27 ವಿಕೆಟ್ (17 ಪಂದ್ಯ)
  • ಸೈಕಾ ಇಶಾಕ್ (ಮುಂಬೈ) - 24 ವಿಕೆಟ್ (19 ಪಂದ್ಯ)
  • ಹೀಲಿ ಮ್ಯಾಥ್ಯೂಸ್ (ಮುಂಬೈ) - 23 ವಿಕೆಟ್ (19 ಪಂದ್ಯ)
  • ಅಮೆಲಿಯಾ ಕೇರ್​ (ಮುಂಬೈ) - 22 ವಿಕೆಟ್ (19 ಪಂದ್ಯ)
  • ಮಾರಿಜನ್ ಕಪ್ (ಡೆಲ್ಲಿ) - 20 ವಿಕೆಟ್ (16 ಪಂದ್ಯ)

ವೈಯಕ್ತಿಕ ಗರಿಷ್ಠ ಸ್ಕೋರ್​ ಮಾಡಿದ ಟಾಪ್​-5 ಆಟಗಾರ್ತಿಯರು

  • ಸೋಫಿ ಡಿವೈನ್ - 95 ರನ್ (ಆರ್​ಸಿಬಿ)
  • ಅಲೀಸಾ ಹೀಲಿ - 96* ರನ್ (ಯುಪಿ)
  • ಹರ್ಮನ್​ಪ್ರೀತ್ ಕೌರ್​ - 95* ರನ್ (ಮುಂಬೈ)
  • ತಹಿಲಾ ಮೆಕ್​ಗ್ರಾಥ್ - 90 ರನ್ (ಯುಪಿ)
  • ದೀಪ್ತಿ ಶರ್ಮಾ - 88 ರನ್ (ಯುಪಿ)

ಇದನ್ನೂ ಓದಿ: ಕ್ರಿಕೆಟ್ ಪ್ರಿಯರೇ ಗಮನಿಸಿ, ಬಂದೇ ಬಿಡ್ತು ಡಬ್ಲ್ಯುಪಿಎಲ್; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ, ತಂಡಗಳು, ನೇರ ಪ್ರಸಾರದ ವಿವರ

ಅತಿ ಹೆಚ್ಚು ಅರ್ಧಶತಕ ಸಿಡಿಸಿದವರು

  • ಮೆಗ್​ ಲ್ಯಾನಿಂಗ್ - 06 (ಡೆಲ್ಲಿ)
  • ಹರ್ಮನ್​ಪ್ರೀತ್ ಕೌರ್ - 05 (ಮುಂಬೈ)
  • ಶಫಾಲಿ ವರ್ಮಾ - 05 (ಡೆಲ್ಲಿ)
  • ತಹಿಲಾ ಮೆಕ್​ಗ್ರಾಥ್ - 04 (ಯುಪಿ)
  • ಎಲಿಸ್ ಪೆರಿ - 04 (ಆರ್​ಸಿಬಿ)

ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ಟಾಪ್-5 ಬ್ಯಾಟರ್ಸ್

  • ಶಫಾಲಿ ವರ್ಮಾ - 33 (ಡೆಲ್ಲಿ)
  • ಸೋಫಿ ಡಿವೈನ್ - 20 (ಆರ್​ಸಿಬಿ)
  • ರಿಚಾ ಘೋಷ್ - 17 (ಆರ್​ಸಿಬಿ)
  • ಗ್ರೇಸ್ ಹ್ಯಾರಿಸ್ - 16 (ಯುಪಿ)
  • ಅಲೀಸ್ ಕ್ಯಾಪ್ಸಿ - 16 (ಡೆಲ್ಲಿ)

ಇದನ್ನೂ ಓದಿ: ಎಂಎಸ್ ಧೋನಿ ಶೀಘ್ರವೇ ರಾಜಕೀಯ ರಂಗ ಪ್ರವೇಶ? ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೊಟ್ರು ಉತ್ತರ

Whats_app_banner