ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಹೊಸ ವ್ಯವಸ್ಥೆ ಜಾರಿಗೆ ಐಸಿಸಿ ಚಿಂತನೆ; ಈ ತಂಡಗಳಿಗೆ ಸಿಗಲಿದೆ ಬೋಸನ್ ಅಂಕ?
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಹೊಸ ವ್ಯವಸ್ಥೆ ಜಾರಿಗೆ ಐಸಿಸಿ ಚಿಂತನೆ; ಈ ತಂಡಗಳಿಗೆ ಸಿಗಲಿದೆ ಬೋಸನ್ ಅಂಕ?

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಹೊಸ ವ್ಯವಸ್ಥೆ ಜಾರಿಗೆ ಐಸಿಸಿ ಚಿಂತನೆ; ಈ ತಂಡಗಳಿಗೆ ಸಿಗಲಿದೆ ಬೋಸನ್ ಅಂಕ?

World Test Championship: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಆವೃತ್ತಿಯಲ್ಲಿ ಐಸಿಸಿ ಹೊಸ ಬೋನಸ್ ಅಂಕ ಜಾರಿಗೆ ತರಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಚಿಂತನೆ ನಡೆಸಿದೆ.

Team India players during the Border-Gavaskar Trophy 2024/25
Team India players during the Border-Gavaskar Trophy 2024/25 (AFP)

2025ರ ಜೂನ್​​ 20ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ನಾಲ್ಕನೇ ಆವೃತ್ತಿಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಚಿಂತನೆ ನಡೆಸಿದೆ. ಹೊಸ ಬೋನಸ್ ಅಂಕಗಳ ವ್ಯವಸ್ಥೆಯನ್ನು ಅಳವಡಿಸಲು ಐಸಿಸಿ ಚರ್ಚೆ ನಡೆಸುತ್ತಿದೆ. ಏಪ್ರಿಲ್​ನಲ್ಲಿ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೊಸ ವ್ಯವಸ್ಥೆಯ ಪ್ರಕಾರ ದೊಡ್ಡ ಅಂತರದಿಂದ ಗೆಲ್ಲುವ ತಂಡಗಳಿಗೆ ಬೋನಸ್ ಅಂಕ ನೀಡುವುದಾಗಿದೆ.

ಡಬ್ಲ್ಯುಟಿಸಿಯ ಮೂರನೇ ಆವೃತ್ತಿಯು ಇಂಗ್ಲೆಂಡ್​ನ ಲಾರ್ಡ್ಸ್​ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್​ನೊಂದಿಗೆ ಕೊನೆಗೊಳ್ಳಲಿದೆ. ಆದಾಗ್ಯೂ, ಲೀಗ್ ಹಂತದಲ್ಲಿ ಅಪಾರದರ್ಶಕ ಮತ್ತು ಅನ್ಯಾಯದ ವ್ಯವಸ್ಥೆಯಿಂದಾಗಿ ಐಸಿಸಿ ಟೀಕೆಗೆ ಗುರಿಯಾಗಿತ್ತು. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ 2025 ರಿಂದ 2027ರ ಅವಧಿ ಹೊಂದಿದೆ. ಜೂನ್​ನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ 4ನೇ ಆವೃತ್ತಿಯು ಆರಂಭವಾಗಲಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ತಂಡವು, ಗೆದ್ದರೆ 12 ಅಂಕ ಪಡೆಯುತ್ತವೆ. ಟೈ ಆದರೆ 6 ಅಂಕ, ಡ್ರಾ ಆದರೆ ತಂಡಗಳು ತಲಾ 4 ಅಂಕಗಳು ಪಡೆಯುತ್ತವೆ. ಆದರೀಗ ಟೆಲಿಗ್ರಾಫ್ ವರದಿ ಪ್ರಕಾರ, ಐಸಿಸಿ ಈ ನಿಮಯಗಳಲ್ಲಿ ಬದಲಾವಣೆ ತರಲು ಚಿಂತನೆ ನಡೆಸಿದೆ. ಇದರಂತೆ ತಂಡವು ಇನ್ನಿಂಗ್ಸ್ ಗೆಲುವು ಅಥವಾ 100 ರನ್​ಗಳ ದೊಡ್ಡ ಅಂತರದಿಂದ ಗೆಲ್ಲುವ ತಂಡಕ್ಕೆ ಬೋನಸ್ ಅಂಕ ನೀಡುವ ವಿಷಯ ಪರಿಗಣನೆಯಲ್ಲಿದೆ. ಆದರೆ ಈ ನಿಯಮ ಡಬ್ಲ್ಯುಟಿಸಿ ಆರಂಭದಿಂದಲೇ ನಿರಂತರ ಚರ್ಚೆಯಲ್ಲಿದೆ.

ಬೋನಸ್ ಅಂಕ ನೀಡುವ ಪ್ರಕ್ರಿಯೆ ರಣಜಿ ಟ್ರೋಫಿ ಅಥವಾ ಶೆಫೀಲ್ಡ್​ ಶೀಲ್ಡ್​ನಂತಹ ಪ್ರಥಮ ದರ್ಜೆ ದೇಶೀಯ ಕ್ರಿಕೆಟ್​ನಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಡಬ್ಲ್ಯುಟಿಸಿ ಕ್ರಮಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ದೊಡ್ಡ ತಂಡಗಳನ್ನು ಸೋಲಿಸುವುದರಿಂದ ತಮಗೆ ಹೆಚ್ಚಿನ ಪ್ರತಿಫಲ ಸಿಗುತ್ತಿಲ್ಲ ಎಂದು ಬಹಳಷ್ಟು ತಂಡಗಳು ಭಾವಿಸುತ್ತವೆ. ಇದಲ್ಲದೆ, ಎಲ್ಲಾ 10 ತಂಡಗಳು ಪರಸ್ಪರ ಆಡದ ವಿಚಿತ್ರ ರಚನೆಯಿಂದ ಟೀಕೆಗೆ ಒಳಗಾಗಿತ್ತು. ದೊಡ್ಡ ತಂಡಗಳ ವಿರುದ್ಧ ಬೋನಸ್ ನೀಡುವ ಬಗ್ಗೆಯೂ ಒತ್ತಾಯ ಕೇಳಿ ಬಂದಿತ್ತು.

ಪ್ರಸ್ತುತ ವ್ಯವಸ್ಥೆಯನ್ನು ಟೀಕಿಸಿದ ಇಸಿಬಿ

ಇಂಗ್ಲೆಂಡ್​ನ ಇಸಿಬಿ ಪ್ರಸ್ತುತ ರಚನೆಯನ್ನು ಕಟುವಾಗಿ ಟೀಕಿಸಿದೆ. ಇಲ್ಲಿಯವರೆಗೆ ಎಲ್ಲಾ ಮೂರು ಆವೃತ್ತಿಗಳಲ್ಲೂ ಫೈನಲ್ ತಲುಪಲು ವಿಫಲವಾಗಿರುವ ಇಂಗ್ಲೆಂಡ್ ನಾಯಕ ಮತ್ತು ಆಟಗಾರರು ಡಬ್ಲ್ಯುಟಿಸಿ ಬಗ್ಗೆ ಐಸಿಸಿಗೆ ದೂರು ನೀಡಿದ್ದಾರೆ. ನಾಯಕ ಬೆನ್ ಸ್ಟೋಕ್ಸ್ ಅವರು ಇದು ‘ಸಂಪೂರ್ಣವಾಗಿ ಗೊಂದಲಮಯ’ ಎಂದು ಹೇಳಿದ್ದಾರೆ. ಇದಲ್ಲದೆ, ಇಸಿಬಿ ಅಧ್ಯಕ್ಷ ರಿಚರ್ಡ್ ಥಾಂಪ್ಸನ್, "ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಉತ್ತಮ ಮತ್ತು ಹೆಚ್ಚು ಸ್ಪರ್ಧಾತ್ಮಕವಾಗಿರಬೇಕು. ಟೆಸ್ಟ್ ಕ್ರಿಕೆಟ್ ಆಡಲು ಬಯಸುವ ಇತರ ರಾಷ್ಟ್ರಗಳಿಗೆ ಟೆಸ್ಟ್ ಕ್ರಿಕೆಟ್ ಆಡಲು ಪ್ರೋತ್ಸಾಹಿಸುತ್ತದೆ ಎಂದು ಹೇಳಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner