ಕನ್ನಡ ಸುದ್ದಿ  /  Cricket  /  Wpl 2024 Delhi Capitals Women Vs Up Warriorz Toss Update Womens Premier League 2024 Meg Lanning Alyssa Healy Jra

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಟಾಸ್‌ ಗೆದ್ದ ಯುಪಿ ವಾರಿಯರ್ಸ್‌ ಬ್ಯಾಟಿಂಗ್‌; ಉಭಯ ತಂಡಗಳಲ್ಲೂ ಬದಲಾವಣೆ

ಡಬ್ಲ್ಯೂಪಿಎಲ್‌ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್‌ ತಂಡಗಳು ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ. ಈಗಗಾಲೇ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಲಿಸ್ಸಾ ಹೀಲಿ ಬಳಗದ ವಿರುದ್ಧ ಮೆಗ್‌ ಲ್ಯಾನಿಂಗ್‌ ಪಡೆಯು 9 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಟಾಸ್‌ ಗೆದ್ದ ಯುಪಿ ವಾರಿಯರ್ಸ್‌ ಬ್ಯಾಟಿಂಗ್‌
ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಟಾಸ್‌ ಗೆದ್ದ ಯುಪಿ ವಾರಿಯರ್ಸ್‌ ಬ್ಯಾಟಿಂಗ್‌ (Women's Premier League (WPL))

ವಿಮೆನ್ಸ್ ಪ್ರೀಮಿಯರ್ ಲೀಗ್ (WPL‌ 2024)ನಲ್ಲಿ ಟೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್‌ (Delhi Capitals Women vs UP Warriorz) ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಅಲಿಸ್ಸಾ ಹೀಲಿ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಗುರುವಾರವಷ್ಟೇ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ವಿರುದ್ಧ ಸೋತ ಅಲಿಸ್ಸಾ‌ ಹೀಲಿ ಬಳಗ, ಶುಕ್ರವಾರ ಮತ್ತೆ ವಿಶ್ರಾಂತಿ ಇಲ್ಲದೆ ಸತತ ಎರಡನೇ ದಿನವೂ ಪಂದ್ಯ ಆಡುತ್ತಿದೆ.

ಯುಪಿ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಡೆಲ್ಲಿ ತಂಡಕ್ಕೂ ಸದರ್ಲ್ಯಾಂಡ್ ಮರಳಿದ್ದಾರೆ. ಉಭಯ ತಂಡಗಳ ನಡುವೆ ಪ್ರಸಕ್ತ ಆವೃತ್ತಿಯಲ್ಲಿ ಇದು ಎರಡನೇ ಮುಖಾಮುಖಿಯಾಗಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 9 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು.

ಅಲಿಸ್ಸಾ ಹೀಲಿ ಬಳಗವು ಇದುವರೆಗೆ ಆಡಿದ 6 ಪಂದ್ಯಗಳಿಂದ ಎರಡು ಗೆಲುವು ಮಾತ್ರ ಕಂಡಿದೆ. ಕೇವಲ ನಾಲ್ಕು ಅಂಕ ಗಳಿಸಿರುವ ತಂಡವು ಟೂರ್ನಿಯಲ್ಲಿ ನಾಕೌಟ್‌ ಹಂತಕ್ಕೆ ಲಗ್ಗೆ ಹಾಕಲು ಮುಂದೆ ಗೆಲುವು ಕಾಣುವುದು ಅನಿವಾರ್ಯವಾಗಿದೆ. ಅತ್ತ ಡಬ್ಲ್ಯುಪಿಎಲ್ 2024ರ ಆವೃತ್ತಿಯಲ್ಲಿ ಕ್ಯಾಪಿಟಲ್ಸ್‌ ಭರ್ಜರಿ ಫಾರ್ಮ್‌ನಲ್ಲಿದೆ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿರುವ ತಂಡವು ಪ್ಲೇ ಆಫ್‌ಗೆ ಅಗ್ರಸ್ಥಾನಿಯಾಗಿ ಎಂಟ್ರಿ ಕೊಡುವ ಉತ್ಸಾಹದಲ್ಲಿದೆ. ಈಗಾಗಲೇ ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ, ಜಯದ ಓಟ ಮುಂದುವರೆಸುವ ನಿರೀಕ್ಷೆಯಲ್ಲಿದೆ. ಬಲಿಷ್ಠ ಆಟಗಾರರನ್ನು ಹೊಂದಿರುವ ಮೆಗ್ ಲ್ಯಾನಿಂಗ್ ಪಡೆ, ಫೀಲ್ಡಿಂಗ್‌ ವಿಭಾಗದಲ್ಲೂ ಬಲಿಷ್ಠವಾಗಿದೆ.

ದೆಹಲಿ ಪಿಚ್‌ ವರದಿ

ದೆಹಲಿಯಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಹೈಸ್ಕೋರಿಂಗ್‌ ಪಂದ್ಯಗಳು ನಡೆದಿವೆ. ಇಲ್ಲಿ ನಡೆದ ಮೊದಲ ಎರಡು ಪಂದ್ಯಗಳ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 196. ಇಲ್ಲಿ ಈವರೆಗೆ ನಡೆದ ಎಲ್ಲಾ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿವೆ. ಅಲ್ಲದೆ ಟಾಸ್‌ ಗೆದ್ದ ತಂಡವು ಬ್ಯಾಟಿಂಗ್‌ ಮಾಡಲು ಆದ್ಯತೆ ನೀಡಿವೆ. ಇಂದು ನಡೆಯಲಿರುವ ಪಂದ್ಯದಲ್ಲ ಡೆಲ್ಲಿ ಮತ್ತು ಯುಪಿ ತಂಡಗ‌ ಮೊದಲು ಬ್ಯಾಟಿಂಗ್‌ ನಡೆಸಿ ಅಧಿಕ ರನ್‌ ಕಲೆ ಹಾಕಲು ಆದ್ಯತೆ ನೀಡಲಿವೆ.

ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಡೆಲ್ಲಿ ಕ್ಯಾಪಿಟಲ್ಸ್‌ ಆಡುವ ಬಳಗ

ಮೆಗ್ ಲ್ಯಾನಿಂಗ್, ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರೋಡ್ರಿಗಸ್, ಮರಿಜಾನ್ನೆ ಕಪ್, ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ, ರಾಧಾ ಯಾದವ್, ಶಿಖಾ ಪಾಂಡೆ, ತನಿಯಾ ಭಾಟಿಯಾ, ಟಿಟಾಸ್ ಸಾಧು.

ಯುಪಿ ವಾರಿಯರ್ಸ್‌ ಆಡುವ ಬಳಗ

ಅಲಿಸ್ಸಾ ಹೀಲಿ, ಕಿರಣ್ ನವಗಿರೆ, ಚಾಮರಿ ಅಥಾಪತ್ತು, ಶ್ವೇತಾ ಸೆಹ್ರಾವತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಪೂನಂ ಖೇನ್ಮಾರ್, ಉಮಾ ಚೆಟ್ರಿ, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ/ಸೈಮಾ ಠಾಕೋರ್, ರಾಜೇಶ್ವರಿ ಗಾಯಕ್ವಾಡ್.

ಇದನ್ನೂ ಓದಿ | WPL 2024: ಯುಪಿ ವಿರುದ್ಧ ಗೆದ್ದು ಆರ್‌ಸಿಬಿಯನ್ನು ಕೆಳಕ್ಕೆ ತಳ್ಳಿದ ಮುಂಬೈ ಇಂಡಿಯನ್ಸ್;‌ ಹೀಗಿದೆ ಅಂಕಪಟ್ಟಿ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)