WPL: ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌; ಡೆಲ್ಲಿಯಲ್ಲೂ ಆರ್‌ಸಿಬಿಗೆ ಭರ್ಜರಿ ಬೆಂಬಲ
ಕನ್ನಡ ಸುದ್ದಿ  /  ಕ್ರಿಕೆಟ್  /  Wpl: ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌; ಡೆಲ್ಲಿಯಲ್ಲೂ ಆರ್‌ಸಿಬಿಗೆ ಭರ್ಜರಿ ಬೆಂಬಲ

WPL: ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌; ಡೆಲ್ಲಿಯಲ್ಲೂ ಆರ್‌ಸಿಬಿಗೆ ಭರ್ಜರಿ ಬೆಂಬಲ

RCB vs DC 2024 WPL Final: ವಿಮೆನ್ಸ್ ಪ್ರೀಮಿಯರ್​​ ಲೀಗ್ ಫೈನಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವನಿತೆಯರ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೇಸಿಂಗ್‌ ಮಾಡಲಿದೆ. ಟಾಸ್‌ ಗೆದ್ದ ಮೆಗ್‌ ಲ್ಯಾನಿಂಗ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌
ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌ (WPL-X)

ವಿಮೆನ್ಸ್ ಪ್ರೀಮಿಯರ್ ಲೀಗ್ (Womens Premier League 2024)‌ ಎರಡನೇ ಆವೃತ್ತಿಯ ರೋಚಕ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಚೊಚ್ಚಲ ಫೈನಲ್‌ ಪಂದ್ಯ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ, ಹಾಲಿ ರನ್ನರ್‌ ಅಪ್‌ ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರ (Royal Challengers Bangalore vs Delhi capitals) ಸವಾಲೆಸೆಯಲು ಸಜ್ಜಾಗಿದೆ. ಮಾರ್ಚ್ 17ರ ಭಾನುವಾರ ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಶಸ್ತಿ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ನಾಯಕಿ ಮೆಗ್‌ ಲ್ಯಾನಿಂಗ್‌ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಡೆಲ್ಲಿ ತಂಡವು ಕೊನೆಯ ಪಂದ್ಯದಲ್ಲಿ ಕಣಕ್ಕಿಳಿಸಿದ ತಂಡವನ್ನೇ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಸಿದೆ. ಅತ್ತ ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ದಿಶಾ ಕಸತ್‌ ಬದಲಿಗೆ ಸಬ್ಬಿನೇನಿ ಮೇಘನಾ ಕಣಕ್ಕಿಳಿದಿದ್ದಾರೆ.

ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಎರಡನೇ ಆವೃತ್ತಿಯಲ್ಲಿ ಚೊಚ್ಚಲ ಟ್ರೋಫಿಯ ಕನಸಿನಲ್ಲಿದೆ. ಕೊನೆಯ ಸತತ ಎರಡು ಪಂದ್ಯಗಳಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ರೋಚಕವಾಗಿ ಬಗ್ಗುಬಡಿದು ಫೈನಲ್‌ಗೆ ಬಂದಿರುವ ಆರ್‌ಸಿಬಿ, ಕೊನೆಯ ಸವಾಲನ್ನು ಯಶಸ್ವಿಯಾಗಿ ಎದುರಿಸುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ | ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ ಜೊತೆ ಇನ್ನಿಂಗ್ಸ್‌ ಆರಂಭಿಸುವ ಕುರಿತು ನಾಯಕ ಫಾಫ್ ಡು ಪ್ಲೆಸಿಸ್ ಮಾತು

ಡಬ್ಲ್ಯುಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ 5 ರನ್​ಗಳ ಗೆಲುವು ದಾಖಲಿಸಿರುವ ಆರ್​​ಸಿಬಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಅದಕ್ಕೂ ಮುನ್ನ, ಡೆಲ್ಲಿ ತಂಡವು ಗುಂಪು ಹಂತದಿಂದ ನೇರವಾಗಿ ಫೈನಲ್‌ಗೆ ಬಂದಿದೆ.

ಅರುಣ್ ಜೇಟ್ಲಿ ಸ್ಟೇಡಿಯಂ ಪಿಚ್ ವರದಿ

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂ ಬ್ಯಾಟಿಂಗ್ ಸ್ನೇಹಿ ಪಿಚ್‌ ಆಗಿದ್ದು, ಈ ಬಾರಿ ರನ್‌ ಮಳೆ ಹರಿದಿವೆ. ಕಿರಿದಾದ ಬೌಂಡರಿಗಳಿದ್ದು, ಪವರ್‌ ಹಿಟ್ಟರ್​​ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಆದರೆ 2ನೇ ಹಂತದ ಡಬ್ಲ್ಯುಪಿಎಲ್‌ನ ಕೊನೆಯ ಪಂದ್ಯಗಳಲ್ಲಿ, ಇಲ್ಲಿ ತಂಡಗಳು ಬ್ಯಾಟ್‌ ಬೀಸಲು ಪರದಾಡಿವೆ. ಬಹುತೇಕ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳೇ ಹೆಚ್ಚು ಗೆದ್ದಿವೆ.

ಡೆಲ್ಲಿ ಆಡುವ ಬಳಗ ತಂಡ: ಮೆಗ್‌ ಲ್ಯಾನಿಂಗ್‌ (ನಾಯಕಿ), ಶಫಾಲಿ ವರ್ಮಾ, ಅಲೀಸ್​ ಕ್ಯಾಪ್ಸಿ, ಜೆಮಿಮಾ ರೊಡ್ರಿಗಸ್‌, ಮಾರಿಜಾನ್ನೆ ಕಾಪ್‌, ಜೆಸ್ ಜೋನಾಸನ್‌, ಅರುಂಧತಿ ರೆಡ್ಡಿ, ರಾಧಾ ಯಾದವ್, ಮಿನ್ನು ಮಣಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಶಿಖಾ ಪಾಂಡೆ.

ಆರ್​​ಸಿಬಿ ಆಡುವ ಬಳಗ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್‌ ಕೀಪರ್), ಸೋಫಿ ಮೊಲಿನ್ಯೂ, ಜಾರ್ಜಿಯಾ ವೇರ್‌ಹ್ಯಾಮ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನಾ, ಶ್ರದ್ಧಾ ಪೋಖರ್ಕರ್, ರೇಣುಕಾ ಠಾಕೂರ್ ಸಿಂಗ್.

(This copy first appeared in Hindustan Times Kannada website. To read more stories logon to kannada.hindustantimes.com)

Whats_app_banner