ಕನ್ನಡ ಸುದ್ದಿ  /  Cricket  /  Wpl 2024 Mumbai Indians Women Vs Up Warriorz Womens Premier League Preview Harmanpreet Kaur Alyssa Healy Miw Vs Upw Jra

WPL 2024: ಅಜೇಯ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಕನಸಲ್ಲಿ‌ ಯುಪಿ ವಾರಿಯರ್ಸ್;‌ ಸಂಭಾವ್ಯ ತಂಡ, ಲೈವ್‌ ವಿವರ ಹೀಗಿದೆ

MIW vs UPW: ವಿಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮುಂಬೈ‌ ಇಂಡಿಯನ್ಸ್ ಮತ್ತು ಯುಪಿ‌ ವಾರಿಯರ್ಸ್‌ ವನಿತೆಯರ ತಂಡಗಳು ಈವರೆಗೆ 3 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಮೇಲುಗೈ ಸಾಧಿಸಿದೆ. ಇದೀಗ ಮತ್ತೆ ಉಭಯ ತಂಡಗಳು ಮುಖಾಮುಖೀಯಾಗುತ್ತಿವೆ.

ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಕನಸಲ್ಲಿ‌ ಯುಪಿ ವಾರಿಯರ್ಸ್
ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಕನಸಲ್ಲಿ‌ ಯುಪಿ ವಾರಿಯರ್ಸ್

ಮಹಿಳಾ ಪ್ರೀಮಿಯರ್ ಲೀಗ್‌ನ (Womens Premier League 2024) ಆರನೇ ಪಂದ್ಯದಲ್ಲಿ ಅಜೇಯ ಮುಂಬೈ ಇಂಡಿಯನ್ಸ್ ತಂಡಕ್ಕೆ, ಗೆಲುವು ಕಾಣದ ಯುಪಿ ವಾರಿಯರ್ಸ್‌ (Mumbai Indians Women vs UP Warriorz) ಸವಾಲೆಸೆಯಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು (ಫೆ.28 ಬುಧವಾರ) ನಡೆಯುವ ಪಂದ್ಯದಲ್ಲಿ, ಗೆಲುವಿನ ಖಾತೆ ತೆರೆಯಲು ಅಲಿಸ್ಸಾ ಹೀಲಿ ಬಳಗ ಹವಣಿಸುತ್ತಿದೆ.

ಹರ್ಮನ್‌ಪ್ರೀತ್‌ ಕೌರ್‌ ಬಳಗವು ಆಡಿದ ಕಳೆದೆರಡು ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ಯುಪಿ ವಾರಿಯರ್ಸ್ ತಂಡವು ಆಡಿದ ಎರಡೂ ಪಂದ್ಯಗಳನ್ನು ಸೋತು, ಅಂಕಪಟ್ಟಿಯಲ್ಲಿ‌ ಕೊನೆಯ ಸ್ಥಾನ ಪಡೆದಿದೆ.

ಮುಖಾಮುಖಿ ದಾಖಲೆ

ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮುಂಬೈ ಮತ್ತು ಯುಪಿ ತಂಡಗಳು ಈವರೆಗೆ ಪರಸ್ಪರ 3 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ ತಂಡವು ಎರಡು ಪಂದ್ಯಗಳನ್ನು ಗೆದ್ದರೆ, ಒಂದು ಪಂದ್ಯದಲ್ಲಿ ಯುಪಿ ಜಯದ ನಗೆ ಬೀರಿದೆ.

ಇದನ್ನೂ ಓದಿ | Ranji Trophy: 10, 11ನೇ ಕ್ರಮಾಂಕದ ಬ್ಯಾಟರ್‌ಗಳ ಶತಕ ವೈಭವ; ಕೊನೆಯ ವಿಕೆಟ್‌ಗೆ ತುಷಾರ್-ತನುಷ್ ದಾಖಲೆಯ 232 ರನ್ ಜೊತೆಯಾಟ

ಚಿನ್ನಸ್ವಾಮಿ ಮೈದಾನದ ಪಿಚ್ ವರದಿ

ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟರ್‌ಗಳ ಅಬ್ಬರಕ್ಕೆ ಹೇಳಿ ಮಾಡಿಸಿದ ಮೈದಾನ. ಮೈದಾನದಲ್ಲಿ ದೊಡ್ಡ ಮೊತ್ತ ಕಲೆಹಾಕಬಹುದಾದರೂ, ಈ ಬಾರಿಯ ಆವೃತ್ತಿಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡಗಳು ವೇಗದ ಆಟವಾಡುವಲ್ಲಿ ವಿಫಲವಾಗಿವೆ. ಇಬ್ಬನಿಯಿಂದಾಗಿ ಚೇಸಿಂಗ್‌ ಮಾಡುವ ತಂಡಗಳು ಪಂದ್ಯದ ಲಾಭ ಪಡೆದಿವೆ. ಹೀಗಾಗಿ ಟಾಸ್‌ ಗೆದ್ದ ತಂಡವು ಚೇಸಿಂಗ್‌ ಆಯ್ಕೆ ಮಾಡುವ ಸಾಧ್ಯತೆಯೇ ಹೆಚ್ಚು.

ಲೈವ್‌ ಸ್ಟ್ರೀಮಿಂಗ್‌ ವಿವರ

ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್‌ ವನಿತೆಯರ ತಂಡಗಳ ನಡುವಿನ ಡಬ್ಲ್ಯೂಪಿಎಲ್‌ ಪಂದ್ಯವನ್ನು ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಸಂಪೂರ್ಣ ಉಚಿತವಾಗಿ ಪಂದ್ಯವನ್ನು ವೀಕ್ಷಿಸಬಹುದು. ಅಲ್ಲದೆ ನಮ್ಮ ಇಂಟರ್ನೆಟ್‌ ವೇಗಕ್ಕೆ ಅನುಗುಣವಾಗಿ ಗುಣಮಟ್ಟದ ವಿಡಿಯೋ ವೀಕ್ಷಿಸಬಹುದು. ಲೀಗ್‌ನ ಎಲ್ಲಾ ಪಂದ್ಯಗಳು ಇಲ್ಲಿಯೇ ನೇರಪ್ರಸಾರವಾಗಲಿದೆ.

ಸಂಭಾವ್ಯ ಆಡುವ ಬಳಗ

ಮುಂಬೈ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್‌ ಕೀಪರ್), ನಟಾಲಿ ಸಿವರ್ ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಅಮನ್ಜೋತ್ ಕೌರ್, ಎಸ್ ಸಜನಾ, ಶಬ್ನಿಮ್ ಇಸ್ಮಾಯಿಲ್, ಕೀರ್ತನಾ ಬಾಲಕೃಷ್ಣನ್, ಸೈಕಾ ಇಶಾಕ್.

ಯುಪಿ ವಾರಿಯರ್ಜ್: ಅಲಿಸ್ಸಾ ಹೀಲಿ (ನಾಯಕಿ ಮತ್ತು ವಿಕೆಟ್‌ ಕೀಪರ್), ಶ್ವೇತಾ ಸೆಹ್ರಾವತ್, ವೃಂದಾ ದಿನೇಶ್, ತಹ್ಲಿಯಾ ಮೆಗ್ರಾತ್, ಕಿರಣ್ ನವಗಿರೆ, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟನ್, ಪೂನಮ್ ಖೇನ್ಮಾರ್, ಸೊಪ್ಪದನ್ಹಿ ಯಶಸ್ರಿ, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್ವಾಡ್.

ಇದನ್ನೂ ಓದಿ | WPL 2024: ಗುಜರಾತ್‌ ಜೈಂಟ್ಸ್‌ಗೆ ಗುಮ್ಮಿದ ಮಂಧಾನ ಪಡೆ; ಆರ್‌ಸಿಬಿಗೆ ಸತತ ಎರಡನೇ ಗೆಲುವು

ಡಬ್ಲ್ಯೂಪಿಎಲ್‌ ಎರಡನೇ ಆವೃತ್ತಿಯ ಐದನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಸ್ಮೃತಿ ಮಂಧಾನ ಬಳಗವು 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌, 7 ವಿಕೆಟ್‌ ಕಳೆದುಕೊಂಡು ಕೇವಲ 107 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ವನಿತೆಯರ ತಂಡವು, ನಾಯಕ ಸ್ಮೃತಿ ಮಂಧಾನ ಸ್ಫೋಟಕ ಆಟದ ನರವಿಂದ ಕೇವಲ 12.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 110 ರನ್‌ ಗಳಿಸಿ ಸುಲಭ ಜಯ ಸಾಧಿಸಿತು.

ಇದನ್ನೂ ಓದಿ | T20 Record: ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ; ರೋಹಿತ್ ಶರ್ಮಾ ದಾಖಲೆ ಮುರಿದ ನಮೀಬಿಯಾ ಆಟಗಾರ

(This copy first appeared in Hindustan Times Kannada website. To read more like this please logon to kannada.hindustantimes.com)