ಅಗ್ರಸ್ಥಾನಕ್ಕಾಗಿ ಡೆಲ್ಲಿ-ಮುಂಬೈ ನಡುವೆ ಫೈಟ್; ಸಂಕಷ್ಟದಲ್ಲಿ ಆರ್​ಸಿಬಿ, 3ನೇ ಸ್ಥಾನಕ್ಕಾಗಿ 3 ತಂಡಗಳ ಮಧ್ಯೆ ಪೈಪೋಟಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಗ್ರಸ್ಥಾನಕ್ಕಾಗಿ ಡೆಲ್ಲಿ-ಮುಂಬೈ ನಡುವೆ ಫೈಟ್; ಸಂಕಷ್ಟದಲ್ಲಿ ಆರ್​ಸಿಬಿ, 3ನೇ ಸ್ಥಾನಕ್ಕಾಗಿ 3 ತಂಡಗಳ ಮಧ್ಯೆ ಪೈಪೋಟಿ

ಅಗ್ರಸ್ಥಾನಕ್ಕಾಗಿ ಡೆಲ್ಲಿ-ಮುಂಬೈ ನಡುವೆ ಫೈಟ್; ಸಂಕಷ್ಟದಲ್ಲಿ ಆರ್​ಸಿಬಿ, 3ನೇ ಸ್ಥಾನಕ್ಕಾಗಿ 3 ತಂಡಗಳ ಮಧ್ಯೆ ಪೈಪೋಟಿ

wpl points table 2024 : ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್​ ಪ್ರವೇಶಿಸಿವೆ. ಆದರೆ ಆರ್​ಸಿಬಿ, ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್ ತಂಡಗಳು 3ನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ.

ಅಗ್ರಸ್ಥಾನಕ್ಕಾಗಿ ಡೆಲ್ಲಿ-ಮುಂಬೈ ನಡುವೆ ಫೈಟ್
ಅಗ್ರಸ್ಥಾನಕ್ಕಾಗಿ ಡೆಲ್ಲಿ-ಮುಂಬೈ ನಡುವೆ ಫೈಟ್ (PTI)

ವುಮೆನ್ಸ್ ಪ್ರೀಮಿಯರ್​ ಲೀಗ್​-2024 ಕೊನೆಯ ಹಂತಕ್ಕೆ ಬಂದು ನಿಂತಿದೆ. ಲೀಗ್​ ದಿನೇ ದಿನೇ ರೋಚಕತೆಯಿಂದ ಸಾಗುತ್ತಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ನಾಕೌಟ್​ಗೇರುವಲ್ಲಿ ಯಶಸ್ವಿಯಾಗಿವೆ. ಆದರೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಹಾಗಾದರೆ ಯಾವ ತಂಡಗಳಿಗೆ ಏನೆಲ್ಲಾ ಅವಕಾಶ ಇದೆ ಎಂಬುದನ್ನು ಈ ಮುಂದೆ ನೋಡೋಣ.

ಅಗ್ರಸ್ಥಾನಕ್ಕಾಗಿ ಡೆಲ್ಲಿ-ಮುಂಬೈ ನಡುವೆ ಫೈಟ್

ಆರ್​ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 1 ರನ್ನಿಂದ ರೋಚಕ ಗೆಲುವು ಸಾಧಿಸಿ ಡಬ್ಲ್ಯುಪಿಎಲ್​ನಲ್ಲಿ ಎರಡನೇ ತಂಡವಾಗಿ ಪ್ಲೇಆಫ್​ಗೆ ಪ್ರವೇಶಿಸಿದೆ. ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿದ 7 ಪಂದ್ಯಗಳಲ್ಲಿ 5 ಗೆಲುವು, 2 ಸೋಲು ಕಂಡಿದೆ. 10 ಅಂಕ ಪಡೆದಿದ್ದು, +0.918 ನೆಟ್​ ರನ್ ರೇಟ್ ಹೊಂದಿದೆ.

ಪ್ಲೇಆಫ್​ ಪ್ರವೇಶಿಸಿದ ಮುಂಬೈ ಇಂಡಿಯನ್ಸ್ ಕೂಡ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 2 ಸೋಲಿನೊಂದಿಗೆ 10 ಅಂಕ ಪಡೆದಿದೆ. ಆದರೆ ನೆಟ್ ರನ್ ರೇಟ್ ವಿಚಾರದಲ್ಲಿ ಡೆಲ್ಲಿಗಿಂತ ಕೊಂಚ ಹಿಂದಿದೆ. ಹಾಗಾಗಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಪ್ಲೇಆಫ್​ಗೆ ಮೊದಲ ತಂಡವಾಗಿ ಪ್ರವೇಶಿಸಿತ್ತು.

ಆದರೆ ಈ ಉಭಯ ತಂಡಗಳ ನಡುವೆ ಅಗ್ರಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಮುಂಬೈ ಮತ್ತು ಡೆಲ್ಲಿ ತಂಡಗಳಿಗೆ ತಲಾ 1 ಪಂದ್ಯ ಬಾಕಿ ಉಳಿದಿವೆ. ಮುಂಬೈ ಆರ್​ಸಿಬಿ ವಿರುದ್ಧ ಗೆದ್ದು ರನ್ ರೇಟ್ ಹೆಚ್ಚಿಸಿಕೊಂಡು ಅಗ್ರಸ್ಥಾನಕ್ಕೇರಲು ಚಿಂತನೆ ನಡೆಸಿದೆ. ಮತ್ತೊಂದೆಡೆ ಡೆಲ್ಲಿ, ಗುಜರಾತ್ ಅನ್ನು ಸೋಲಿಸಿ ಅಗ್ರಸ್ಥಾನ ಉಳಿಸಿಕೊಳ್ಳಲು ಸಜ್ಜಾಗುತ್ತಿದೆ. ಏಕೆಂದರೆ ಅಗ್ರಸ್ಥಾನ ಪ್ರವೇಶಿಸಿದ ತಂಡವು ನೇರವಾಗಿ ಫೈನಲ್​ಗೆ ಲಗ್ಗೆ ಇಡಲಿವೆ.

ಮೂರನೇ ಸ್ಥಾನಕ್ಕೇರಲು 3 ತಂಡಗಳ ಮಧ್ಯೆ ಪೈಪೋಟಿ

ಡೆಲ್ಲಿ ರೋಚಕವಾಗಿ ಡೆಲ್ಲಿ ವಿರುದ್ಧ ಸೋತರೂ ಆರ್​ಸಿಬಿ ಮೂರನೇ ಸ್ಥಾನದಲ್ಲೇ ಇದೆ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಾದಿ ದುರ್ಗಮವಾಗಿದೆ. ಆಡಿದ 7ರಲ್ಲಿ 3 ಗೆಲುವು, 4 ಸೋಲು ಕಂಡಿದೆ. 6 ಅಂಕ ಪಡೆದಿದೆ. ಉಳಿದಿರುವ ಒಂದು ಪಂದ್ಯದಲ್ಲಿ ಗೆದ್ದು ಪ್ಲೇಆಫ್​​ ಕನಸನ್ನು ಜೀವಂತವಾಗಿಟ್ಟುಕೊಳ್ಳಲು ನಿರ್ಧರಿಸಿದೆ.

ಆರ್​ಸಿಬಿಗೆ ಪೈಪೋಟಿಯಾಗಿ ಯುಪಿ ವಾರಿಯರ್ಸ್ ಕೂಡ ಇದೆ. ಅಷ್ಟೇ ಸೋಲು, ಗೆಲುವು, ಅಂಕ ಪಡೆದಿರುವ ಯುಪಿ, ತನ್ನ ಕೊನೆಯ ಪಂದ್ಯದಲ್ಲಿ ಗೆದ್ದು ಪ್ಲೇಆಫ್​​ ಪ್ರವೇಶಿಸಲು ಸಜ್ಜಾಗಿದೆ. ಪ್ರಸ್ತುತ ನೆಟ್​​ ರನ್ ರೇಟ್​ ವಿಚಾರದಲ್ಲಿ ಆರ್​ಸಿಬಿಗಿಂತ (+0.027) ಯುಪಿ (-0.365) ಹಿಂದಿದೆ.

ಒಂದು ವೇಳೆ ಯುಪಿ ತನ್ನ ಮುಂದಿನ ಪಂದ್ಯದಲ್ಲಿ ಗೆದ್ದರೆ, ಆರ್​ಸಿಬಿ ಕೊನೆಯ ಪಂದ್ಯದಲ್ಲಿ ಸೋತರೆ ಯುಪಿ ಪ್ಲೇಆಫ್​ಗೆ ಲಗ್ಗೆ ಇಡಲಿದೆ. ಈ ಎರಡೂ ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಜಯಸಿದರೆ, ತಲಾ 8 ಅಂಕ ಪಡೆಯಲಿವೆ. ಆಗ ನೆಟ್ ರನ್ ರೇಟ್​ ಯಾರದ್ದು ಉತ್ತಮವಾಗಿರುತ್ತದೋ ಅವರು ಪ್ಲೇ ಆಫ್​​ಗೆ ಎಂಟ್ರಿಕೊಡಲಿದ್ದಾರೆ.

ಇನ್ನು ಕೊನೆಯ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್​​ ತಂಡಕ್ಕೆ ಇನ್ನೂ ಒಂದು ಅವಕಾಶ ಇದೆ. ಗುಜರಾತ್ ಉಳಿದ ಎರಡಲ್ಲಿ ಗೆಲ್ಲುವುದರ ಜೊತೆಗೆ ನೆಟ್ ರನ್ ರೇಟ್​ ಹೆಚ್ಚಿಸಿಕೊಳ್ಳಬೇಕು. ಮತ್ತೊಂದೆಡೆ ಆರ್​ಸಿಬಿ ಮತ್ತು ಯುಪಿ ತಮ್ಮ ಕೊನೆಯ ಪಂದ್ಯದಲ್ಲಿ ಸೋತರೆ, 6 ಅಂಕಗಳೊಂದಿಗೆ ಪ್ಲೇಆಫ್​ ಪ್ರವೇಶಿಸುವ ಸಾಧ್ಯತೆ ಇದೆ. ಒಂದು ವೇಳೆ ಒಂದು ಪಂದ್ಯ ಸೋತರೂ ಟೂರ್ನಿಯಿಂದ ಹೊರಬೀಳಲಿದೆ.

ತಂಡಪಂದ್ಯಗೆಲುವುಸೋಲುಅಂಕರನ್ ರೇಟ್
ಡೆಲ್ಲಿ ಕ್ಯಾಪಿಟಲ್ಸ್75210+0.918
ಮುಂಬೈ ಇಂಡಿಯನ್ಸ್75210+0.343
ಆರ್​ಸಿಬಿ7346+0.027
ಯುಪಿ ವಾರಿಯರ್ಜ್7346-0.365
ಗುಜರಾತ್ ಜೈಂಟ್ಸ್6152-1.111

Whats_app_banner