ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಕನಸಿಗೆ ಅಡ್ಡಿಯಾದ ಡೆಲ್ಲಿ; ಮಂಧಾನ ಪಡೆ ವಿರುದ್ಧ ಅಜೇಯ ಯಾತ್ರೆ ಮುಂದುವರೆಸಿದ ಕ್ಯಾಪಿಟಲ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಕನಸಿಗೆ ಅಡ್ಡಿಯಾದ ಡೆಲ್ಲಿ; ಮಂಧಾನ ಪಡೆ ವಿರುದ್ಧ ಅಜೇಯ ಯಾತ್ರೆ ಮುಂದುವರೆಸಿದ ಕ್ಯಾಪಿಟಲ್ಸ್

ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಕನಸಿಗೆ ಅಡ್ಡಿಯಾದ ಡೆಲ್ಲಿ; ಮಂಧಾನ ಪಡೆ ವಿರುದ್ಧ ಅಜೇಯ ಯಾತ್ರೆ ಮುಂದುವರೆಸಿದ ಕ್ಯಾಪಿಟಲ್ಸ್

WPL 2024: ಮೆಗ್‌ ಲ್ಯಾನಿಂಗ್‌ ನೇತೃತ್ವದ ‌ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಆರ್‌ಸಿಬಿ ವನಿತೆಯರ ತಂಡ ಸೋತಿದೆ. ಎರಡನೇ ಆವೃತ್ತಿಯ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮೊದಲ ಸೋಲು ಕಂಡ ಸ್ಮೃತಿ ಮಂಧಾನ ಪಡೆ, ಹ್ಯಾಟ್ರಿಕ್‌ ಗೆಲುವಿನ ಕನಸು ಕೈಚೆಲ್ಲಿದೆ.

ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಕನಸಿಗೆ ಅಡ್ಡಿಯಾದ ಡೆಲ್ಲಿ
ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಕನಸಿಗೆ ಅಡ್ಡಿಯಾದ ಡೆಲ್ಲಿ (WPL twitter)

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಎರಡನೇ ಆವೃತ್ತಿಯಲ್ಲಿ ಆರ್‌ಸಿಬಿ ತಂಡವು ಮೊದಲ ಸೋಲು ಎದುರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ರನ್ನರ್‌ ಅಪ್ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ವಿರುದ್ಧದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore Women) ವನಿತೆಯರ ತಂಡವು 25 ರನ್‌ ಅಂತರದಿಂದ ಸೋಲು ಕಂಡಿದೆ. ಆ ಮೂಲಕ ಮೆಗ್‌ ಲ್ಯಾನಿಂಗ್‌ ಪಡೆಯು ಸತತ ಎರಡನೇ ಗೆಲುವು ಕಂಡಿದೆ. ಅತ್ತ ಡೆಲ್ಲಿ ವಿರುದ್ಧ ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಆರ್‌ಸಿಬಿ ಸೋತಿದೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್, ಭರ್ಜರಿ ಬ್ಯಾಟಿಂಗ್‌ ನಡೆಸಿತು. ಆ ಮೂಲಕ ಆರ್‌ಸಿಬಿಗೆ 195 ರನ್‌ಗಳ ಬೃಹತ್‌ ಗುರಿ ನೀಡಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡವು, ಸ್ಫೋಟಕ ಆರಂಭದ ಹೊರತಾಗಿಯೂ ಕೊನೆಯ ಹಂತದಲ್ಲಿ ಮುಗ್ಗರಿಸಿತು. ಸ್ಮೃತಿ ಮಂಧಾನ ವೀರೋಚಿತ ಹೋರಾಟ ನಡೆಸಿದರೂ ತಂಡದ ಗೆಲುವು ಸಾಧ್ಯವಾಗಲಿಲ್ಲ. ಅಂತಿಮವಾಗಿ ತಂಡವು 169 ರನ್‌ಗಳಿಗೆ ಇನ್ನಿಂಗ್ಸ್‌ ಮುಗಿಸಿತು.

ಬೃಹತ್‌ ಮೊತ್ತ ಚೇಸಿಂಗ್‌ಗಿಳಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಕ್ಕಿತು. ನಾಯಕಿ ಸ್ಮೃತಿ ಮಂಧಾನ ಡಬ್ಲ್ಯೂಪಿಎಲ್‌ನಲ್ಲಿ ತಮ್ಮ ಮೊದಲ ಅರ್ಧಶತಕ ಸಿಡಿಸಿದರು. ಆರಂಭದಿಂದಲೂ ದೊಡ್ಡ ಹೊಡೆತಗಳನ್ನಾಡಿದ ಮಂಧಾನ ತಂಡದ ಮೊತ್ತ ಹೆಚ್ಚಿಸುತ್ತಾ ಹೋದರು. ಈ ನಡುವೆ ಸತತ ಎರಡು ಭರ್ಜರಿ ಸಿಕ್ಸರ್‌ ಸಿಡಿಸಿದ ಸೋಫಿ ಡಿವೈನ್‌, ಅದರ ಬೆನ್ನಲ್ಲೇ ಅರುಂಧತಿ ರೆಡ್ಡಿಗೆ ಕ್ಯಾಚ್‌ ನೀಡಿ ಔಟಾದರು.

ಇದನ್ನೂ ಓದಿ | ಇಂಗ್ಲೆಂಡ್‌ ವಿರುದ್ಧದ 5ನೇ ಟೆಸ್ಟ್‌ಗೆ ಭಾರತ ತಂಡ ಪ್ರಕಟ; ತಂಡಕ್ಕೆ ಮರಳಿದ ಬುಮ್ರಾ, ಕೆಎಲ್ ರಾಹುಲ್ ಹೊರಕ್ಕೆ

ಅಬ್ಬರ ಮುಂದುವರೆಸಿದ ಸ್ಮೃತಿ ತಮ್ಮ ಮೊತ್ತವನ್ನು 74ಕ್ಕೆ ಹೆಚ್ಚಿಸಿದರು. ಮಾರಕ ಬೌಲರ್‌ ಮಾರಿಜಾನೆ ಕಪ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆಗಿ ಪೆವಿಲಿಯನ್‌ ಸೇರಿಕೊಂಡರು. ಮೊದಲ ಶತಕದ ನಿರೀಕ್ಷೆಯಲ್ಲಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ನಿರಾಶೆಯಾಯ್ತು. 2 ಸಿಕ್ಸರ್‌ ಸಹಿತ ಅಬ್ಬರಿಸುವ ಸೂಚನೆ ಬೀಡಿದ ರಿಚಾ ಘೋಷ್‌, ಜೋಶ್‌ನಿಂದ ಹೊಡೆಯಲು ಹೋಗಿ 19 ರನ್‌ ವೇಳೆ ಔಟಾದರು. ಜಾರ್ಜಿಯಾ ವೇರ್‌ಹ್ಯಾಮ್‌ 6 ರನ್‌ ಗಳಿಸಿದರೆ, ಸಬ್ಬಿನೇನಿ ಮಮೇಘನಾ ಆಟ 36 ರನ್‌ಗೆ ಅಂತ್ಯವಾಯ್ತು. ಡೆತ್‌ ಓವರ್‌ಗಳಲ್ಲಿ ತಂಡದ ಗೆಲುವಿಗೆ ಪ್ರಯತ್ನಗಳು ನಡೆಯಲಿಲ್ಲ. ಕೊನೆಗೆ ಮೇಲೆಇಂದ ಮೇಲೆ ವಿಕೆಟ್‌ ಕಳೆದುಕೊಂಡು ಬೆಂಗಳೂರು, ಟೂರ್ನಿಯಲ್ಲಿ ಮೊದಲ ಸೋಲು ಕಂಡಿತು.

ಡೆಲ್ಲಿ ಸ್ಫೋಟಕ ಆಟ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ತಂಡವು ಉತ್ತಮ ಆರಂಭ ಪಡೆಯಿತು. ನಾಯಕಿ ಮೆಗ್‌ ಲ್ಯಾನಿಂಗ್‌ ಮತ್ತು ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ ಸ್ಫೋಟಕ ಆರಂಭ ಕೊಟ್ಟರು. ಲ್ಯಾನಿಂಗ್‌ 11 ರನ್‌ ಗಳಿಸಿ ಔಟಾದರೆ, ಶಫಾಲಿ ಜೊತೆಗೂಡಿದ ಅಲಿಸ್‌ ಕ್ಯಾಪ್ಸೆ ಉತ್ತಮ ಜೊತೆಯಾಟವಾಡಿದರು. 4 ಸ್ಫೋಟಕ ಸಿಕ್ಸರ್‌ ಸಹಿತ ಅರ್ಧಶತಕ ಸಿಡಿಸಿದ ಶಫಾಲಿ, ಶ್ರೇಯಾಂಕಾಗೆ ವಿಕೆಟ್‌ ಒಪ್ಪಿಸಿದರು. ಜೆಮಿಮ ರೋಡ್ರಿಗಸ್‌ ಶೂನ್ಯಕ್ಕೆ ನಿರ್ಗಮಿಸಿದರು. ಈ ವೇಳೆ ಬಂದ ಮಾರಿಜಾನೆ ಕಪ್‌ ಸ್ಫೋಟಕ 32 ರನ್‌ ಸಿಡಿಸಿದರು. ಡೆತ್‌ ಓವರ್‌ಗಳಲ್ಲಿ ಅಬ್ಬರಿಸಿದ ಜೊನಾಸೆನ್‌ 36 ರನ್‌ ಗಳಿಸಿ ತಂಡದ ಮೊತ್ತ ಹಿಗ್ಗಿಸಿದರು.

ಆರ್‌ಸಿಬಿ ಪರ ಸೋಫಿ ಡಿವೈನ್‌ ಮತ್ತು ಕ್ಲಾರ್ಕ್‌ ತಲಾ 2 ವಿಕೆಟ್‌ ಪಡೆದರು.

ಇಂದಿನ ಪಂದ್ಯದಲ್ಲಿ ಉಭಯ ತಂಡಗಳಲ್ಲೂ ತಲಾ ಒಂದು ಬದಲಾವಣೆ ಮಾಡಲಾಗಿತ್ತು. ಆರ್‌ಸಿಬಿಯಲ್ಲಿ ಎಲಿಸ್‌ ಪೆರ್ರಿ ಅನುಪಸ್ಥಿತಿಯಲ್ಲಿ ನಾಡಿನ್ ಡಿ ಕ್ಲರ್ಕ್ ಆಡುವ ಬಳಗ ಸೇರಿಕೊಂಡಿದ್ದಾರೆ. ಅತ್ತ ಡೆಲ್ಲಿ ತಂಡದಲ್ಲಿ ಅನ್ನಾಬೆಲ್ ಸದರ್‌ಲ್ಯಾಂಡ್‌ ಬದಲಿಗೆ ಜೆಸ್ ಜೊನಾಸ್ಸೆನ್ ಆಡಿದ್ದಾರೆ.

ಇನ್ನಷ್ಟು ಕ್ರಿಕೆಟ್‌ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಆರ್‌ಸಿಬಿ ತಂಡ

ಸ್ಮೃತಿ ಮಂಧಾನ (ನಾಯಕೊ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ನಾಡಿನ್ ಡಿ ಕ್ಲರ್ಕ್, ರಿಚಾ ಘೋಷ್ (ವಿಕೆಟ್‌ ಕೀಪರ್), ಜಾರ್ಜಿಯಾ ವೇರ್ಹ್ಯಾಮ್, ಸೋಫಿ ಮೊಲಿನೆಕ್ಸ್, ಶ್ರೇಯಾಂಕಾ ಪಾಟೀಲ್, ಸಿಮ್ರಾನ್ ಬಹದ್ದೂರ್, ಆಶಾ ಸೋಭನ, ರೇಣುಕಾ ಠಾಕೂರ್ ಸಿಂಗ್.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ

ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್, ಮರಿಝನ್ನೆ ಕಪ್, ಜೆಸ್ ಜೊನಾಸ್ಸೆನ್, ಅರುಂಧತಿ ರೆಡ್ಡಿ, ಮಿನ್ನು ಮಣಿ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್), ರಾಧಾ ಯಾದವ್, ಶಿಖಾ ಪಾಂಡೆ.

ಡಬ್ಲ್ಯೂಪಿಎಲ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner