ಕನ್ನಡ ಸುದ್ದಿ  /  Cricket  /  Wpl 2024 Royal Challengers Bangalore Women Win Toss To Field Against Delhi Capitals Womens Premier League 2024 Jra

ಡೆಲ್ಲಿ ವಿರುದ್ಧ ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ; ಕ್ವೀನ್‌ ಎಲಿಸ್‌ ಪೆರ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಬೆಂಗಳೂರು

WPL 2024: ಆರ್‌ಸಿಬಿ ವಿರುದ್ಧ ಮೆಗ್‌ ಲ್ಯಾನಿಂಗ್‌ ನೇತೃತ್ವದ ‌ಡೆಲ್ಲಿ ಕ್ಯಾಪಿಟಲ್ಸ್‌ ತಂಡವೇ ಮೇಲುಗೈ ಸಾಧಿಸಿದೆ. ಡಬ್ಲ್ಯೂಪಿಎಲ್‌ ಮೊದಲ ಆವೃತ್ತಿಯಲ್ಲಿ ಉಭಯ ತಂಡಗಳು ಎರಡು ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಈ ಎರಡೂ ಪಂದ್ಯಗಳಲ್ಲಿ ಡಿಸಿ ಗೆದ್ದಿದೆ. ಇದೀಗ ಎರಡನೇ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಡೆಲ್ಲಿ ವಿರುದ್ಧ ಮೊದಲ ಗೆಲುವಿಗೆ ಸಜ್ಜಾಗಿದೆ.

ಡೆಲ್ಲಿ ವಿರುದ್ಧ ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ
ಡೆಲ್ಲಿ ವಿರುದ್ಧ ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ

ಡಬ್ಲ್ಯೂಪಿಎಲ್‌ (Women's Premier League 2024) ಎರಡನೇ ಆವೃತ್ತಿಯಲ್ಲಿ ಸತತ ಮೂರನೇ ಗೆಲುವಿಗೆ ಆರ್‌ಸಿಬಿ ವನಿತೆಯರ ತಂಡ ಹಾತೊರೆಯುತ್ತಿದೆ. ಚಿನ್ನಸ್ವಾಮಿ ಅಂಗಳದಲ್ಲಿ ಫೆಬ್ರವರಿ 29ರ ಗುರುವಾರ ನಡೆಯುತ್ತಿರುವ ಪಂದ್ಯದಲ್ಲಿ ಹಾಲಿ ರನ್ನರ್‌ ಅಪ್ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore Women) ವನಿತೆಯರ ತಂಡವು ಚೇಸಿಂಗ್‌ ಆಯ್ಕೆ ಮಾಡಿಕೊಂಡಿದೆ. ಈ ಬಾರಿಯೂ‌ ಮಂಧಾನ ಟಾಸ್ ಗೆಲ್ಲುತ್ತಿದ್ದಂತೆಯೇ ಚಿನ್ನಸ್ವಾಮಿ ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳ ಘೋಷಣೆ ಜೋರಾಗಿತ್ತು.

ಪ್ರಮುಖ ಪಂದ್ಯಕ್ಕೆ ಉಭಯ ತಂಡಗಳಲ್ಲೂ ತಲಾ ಒಂದು ಬದಲಾವಣೆ ಮಾಡಲಾಗಿದೆ. ಆರ್‌ಸಿಬಿ ತಂಡದ ಕ್ವೀನ್‌ ಎಲಿಸ್‌ ಪೆರ್ರಿ ಇಂದು ಆಡುತ್ತಿಲ್ಲ. ಅವರ ಬದಲಿಗೆ ನಾಡಿನ್ ಡಿ ಕ್ಲರ್ಕ್ ಆಡುವ ಬಳಗ ಸೇರಿಕೊಂಡಿದ್ದಾರೆ. ಇದು ಇವರ ಪಾಲಿಗೆ ಮೊದಲ ಪಂದ್ಯ. ಅತ್ತ ಡೆಲ್ಲಿ ತಂಡಕ್ಕೆ ಅನ್ನಾಬೆಲ್ ಸದರ್‌ಲ್ಯಾಂಡ್‌ ಬದಲಿಗೆ ಜೆಸ್ ಜೊನಾಸ್ಸೆನ್ ಆಡುವ ಬಳಗ ಸೇರಿಕೊಂಡಿದ್ದಾರೆ.

ಯುಪಿ ವಾರಿಯರ್ಸ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ತಂಡವು ಹ್ಯಾಟ್ರಿಕ್‌ ಗೆಲುವಿನ ಉತ್ಸಾಹದಲ್ಲಿದೆ.

ಇದನ್ನೂ ಓದಿ | ಆರ್‌ಸಿಬಿಗೆ ಹ್ಯಾಟ್ರಿಕ್‌ ಗೆಲುವಿನ ಗುರಿ; ಸ್ಮೃತಿ ಮಂಧಾನ ಪಡೆ ವಿರುದ್ಧ ಅಜೇಯ ಓಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಸಜ್ಜು

ಮುಖಾಮುಖಿ ದಾಖಲೆ

ಡೆಲ್ಲಿ ವಿರುದ್ಧ ಆರ್‌ಸಿಬಿಯು ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಕಳೆದ ಆವೃತ್ತಿಯಲ್ಲಿ ಉಭಯ ತಂಡಗಳು ಎರಡು ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಈ ಎರಡೂ ಪಂದ್ಯಗಳಲ್ಲಿ ಮೆಗ್‌ ಲ್ಯಾನಿಂಗ್‌ ಪಡೆ ಗೆದ್ದು ಬೀಗಿದೆ.

ಚಿನ್ನಸ್ವಾಮಿ ಮೈದಾನದ ಪಿಚ್ ವರದಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್‌ ಮಳೆ ಹರಿಯುವುದು ಹೊಸದೇನಲ್ಲ. ಈ ಬಾರಿಯ ಡಬ್ಲ್ಯೂಪಿಎಲ್‌ ಆವೃತ್ತಿಯಲ್ಲಿ ಇದುವರೆಗೆ ಮೈದಾನದಲ್ಲಿ 6 ಪಂದ್ಯಗಳು ನಡೆದಿವೆ. ಟಾಸ್‌ ಗೆದ್ದ ತಂಡಗಳು ಬೌಲಿಂಗ್‌ಗೆ ಆದ್ಯತೆ ನೀಡಿವೆ. ಈ ಪಿಚ್‌ ಚೇಸಿಂಗ್‌ ವೇಳೆ ಬ್ಯಾಟರ್‌ಗಳಿಗೆ ನೆರವಾಗುತ್ತದೆ. ಮೈದಾನದಲ್ಲಿ ನಡೆದ 6ರಲ್ಲಿ 5 ಪಂದ್ಯಗಳಲ್ಲಿ ಚೇಸಿಂಗ್‌ ನಡೆಸಿದ ತಂಡವೇ ಗೆದ್ದು ಬೀಗಿದೆ. ಆರ್‌ಸಿಬಿ ತಂಡ ಮಾತ್ರ ತಾನಾಡಿದ ಮೊದಲ ಪಂದ್ಯದಲ್ಲಿ ಕೇವಲ 2 ರನ್‌ ಅಂತರದಿಂದ ಯುಪಿ ತಂಡವನ್ನು ಮಣಿಸಿದೆ.

ಇನ್ನಷ್ಟು ಕ್ರಿಕೆಟ್‌ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಆರ್‌ಸಿಬಿ ಆಡುವ ಬಳಗ

ಸ್ಮೃತಿ ಮಂಧಾನ (ನಾಯಕೊ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ನಾಡಿನ್ ಡಿ ಕ್ಲರ್ಕ್, ರಿಚಾ ಘೋಷ್ (ವಿಕೆಟ್‌ ಕೀಪರ್), ಜಾರ್ಜಿಯಾ ವೇರ್ಹ್ಯಾಮ್, ಸೋಫಿ ಮೊಲಿನೆಕ್ಸ್, ಶ್ರೇಯಾಂಕಾ ಪಾಟೀಲ್, ಸಿಮ್ರಾನ್ ಬಹದ್ದೂರ್, ಆಶಾ ಸೋಭನ, ರೇಣುಕಾ ಠಾಕೂರ್ ಸಿಂಗ್.

ಡೆಲ್ಲಿ ಕ್ಯಾಪಿಟಲ್ಸ್‌ ಆಡುವ ಬಳಗ

ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್, ಮರಿಝನ್ನೆ ಕಪ್, ಜೆಸ್ ಜೊನಾಸ್ಸೆನ್, ಅರುಂಧತಿ ರೆಡ್ಡಿ, ಮಿನ್ನು ಮಣಿ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್), ರಾಧಾ ಯಾದವ್, ಶಿಖಾ ಪಾಂಡೆ.

ಡಬ್ಲ್ಯೂಪಿಎಲ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point