ಕನ್ನಡ ಸುದ್ದಿ  /  ಕ್ರಿಕೆಟ್  /  ಕೇವಲ 100 ರೂಪಾಯಿಗೆ ಡಬ್ಲ್ಯೂಪಿಎಲ್ ಪಂದ್ಯ ವೀಕ್ಷಿಸಿ; ಆನ್‌ಲೈನ್ ಟಿಕೆಟ್ ಬುಕ್‌ ಮಾಡಲು ಇಲ್ಲಿದೆ ಟಿಪ್ಸ್

ಕೇವಲ 100 ರೂಪಾಯಿಗೆ ಡಬ್ಲ್ಯೂಪಿಎಲ್ ಪಂದ್ಯ ವೀಕ್ಷಿಸಿ; ಆನ್‌ಲೈನ್ ಟಿಕೆಟ್ ಬುಕ್‌ ಮಾಡಲು ಇಲ್ಲಿದೆ ಟಿಪ್ಸ್

WPL 2024 Tickets: ಈ ಬಾರಿಯ ಡಬ್ಲ್ಯೂಪಿಎಲ್‌ ಪಂದ್ಯಾವಳಿಯ ಮೊದಲ 11 ಪಂದ್ಯಗಳ ಟಿಕೆಟ್‌ಗಳು ಬುಕ್‌ಮೈಶೋನಲ್ಲಿ ಲಭ್ಯವಿದೆ. ಬುಕ್‌ಮೈಶೋ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಟಿಕೆಟ್‌ ಖರೀದಿಸಬಹುದು. ವಿಮೆನ್ಸ್ ಪ್ರೀಮಿಯರ್‌ ಲೀಗ್‌ ಪಂದ್ಯಗಳ ಈ ಟೆಕೆಟ್ ಬೆಲೆ ಕೇವಲ 100 ರೂಪಾಯಿ ಮಾತ್ರ.

ಕೇವಲ 100 ರೂಪಾಯಿಗೆ ಡಬ್ಲ್ಯೂಪಿಎಲ್ ಪಂದ್ಯ ವೀಕ್ಷಿಸಿ
ಕೇವಲ 100 ರೂಪಾಯಿಗೆ ಡಬ್ಲ್ಯೂಪಿಎಲ್ ಪಂದ್ಯ ವೀಕ್ಷಿಸಿ

ಎರಡನೇ ಆವೃತ್ತಿಯ ವಿಮೆನ್ಸ್ ಪ್ರೀಮಿಯರ್‌ ಲೀಗ್‌ (Women's Premier League 2024) ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ಟೂರ್ನಿ ಫೆಬ್ರುವರಿ 23 ಶುಕ್ರವಾರದಿಂದ ಆರಂಭವಾಗಲಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆರಂಭಿಕ ಹಂತದ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ ​ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಲಿವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿದೆ. ಅಂಕಪಟ್ಟಿಯ ಅಗ್ರ ತಂಡ ನೇರವಾಗಿ ಫೈನಲ್‌ ಪ್ರವೇಶಿಸಿದರೆ, 2 ಮತ್ತು 3ನೇ ಸ್ಥಾನಿ ತಂಡಗಳು ಎಲಿಮಿನೇಟರ್‌ನಲ್ಲಿ ಆಡಲಿವೆ. ಟೂರ್ನಿಯು ಬೆಂಗಳೂರು ಮತ್ತು ದೆಹಲಿಯಲ್ಲಿ ನಡೆಯಲಿದ್ದು, ಮೊದಲ ಹಂತದ 11 ಪಂದ್ಯಗಳು ಉದ್ಯಾನ ನಗರಿಯಲ್ಲಿ ನಡೆದರೆ, ಉಳಿದ 11 ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ: ಅತಿ ಹೆಚ್ಚು ರನ್, ಗರಿಷ್ಠ ವಿಕೆಟ್, ವೇಗದ ಅರ್ಧಶತಕ; ಮಹಿಳಾ ಪ್ರೀಮಿಯರ್ ಲೀಗ್ ದಾಖಲೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಕೇವಲ 100 ರೂಪಾಯಿ ಟಿಕೆಟ್‌

ಪಂದ್ಯಾವಳಿಯ ಬೆಂಗಳೂರು ಹಂತದ ಪಂದ್ಯಗಳ ಟಿಕೆಟ್‌ಗಳನ್ನು ಮಾರಾಟಕ್ಕೆ ಬಿಡಲಾಗಿದೆ. ಪಂದ್ಯಗಳನ್ನು ಹೆಚ್ಚಿನ ಸಂಖ್ಯೆಯ ವೀಕ್ಷಕರು ಸುಲಭವಾಗಿ ವೀಕ್ಷಿಸಬೇಕು ಎಂಬ ನಿಟ್ಟಿನಲ್ಲಿ ಟೆಕೆಟ್‌ ದರವನ್ನು ಕಡಿಮೆ ಇಡಲಾಗಿದೆ. ಏರಡನೇ ಆವೃತ್ತಿಯು ಹೆಚ್ಚಿನ ಪ್ರೇಕ್ಷಕರನ್ನು ತಲುಪಬೇಕೆಂಬ ಉದ್ದೇಶದಿಂದ ಬಿಸಿಸಿಐ ಟಿಕೆಟ್ ಬೆಲೆಗಳನ್ನು 100 ರೂಪಾಯಿಗೆ ಸೀಮಿತಗೊಳಿಸಿದೆ. ಹೀಗಾಗಿ ಈ ಬಾರಿ ಪಂದ್ಯಗಳನ್ನು ಹೆಚ್ಚಿನ ಸಂಖ್ಯೆಯೆ ಅಭಿಮಾನಿಗಳು ವೀಕ್ಷಿಸುವ ಸಾಧ್ಯತೆ ಇದೆ.

WPL 2024 ಆನ್‌ಲೈನ್ ಟಿಕೆಟ್‌ ಮಾರಾಟ

ಈ ಬಾರಿಯ ಋತುವಿನ ಮೊದಲ 11 ಪಂದ್ಯಗಳ ಟಿಕೆಟ್‌ಗಳು ಬುಕ್‌ಮೈಶೋನಲ್ಲಿ ಲಭ್ಯವಿದೆ. ಅಭಿಮಾನಿಗಳು ಬುಕ್‌ಮೈಶೋ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಟಿಕೆಟ್‌ ಖರೀದಿ ಮಾಡಬಹುದು. ಈ ಬೆಲೆ 100 ರೂಪಾಯಿ ಮಾತ್ರ.

WPL ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?

  • ಹಂತ 1: bookmyshow ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ ಓಪನ್‌ ಮಾಡಿ. ಲೊಕೇಶನ್‌ ಬೆಂಗಳೂರು ಎಂದು ಆಯ್ಕೆಮಾಡಿ.
  • ಹಂತ 2: ಮೇಲಿನ ಮೆನುವಿನಲ್ಲಿ ಸ್ಪೋರ್ಟ್ಸ್ ವಿಭಾಗಕ್ಕೆ ಹೋಗಿ.‌ ಅಲ್ಲಿ ವಿಮೆನ್ಸ್ ಪ್ರೀಮಿಯರ್ ಲೀಗ್ ಅನ್ನು ಆಯ್ಕೆಮಾಡಿ.
  • ಹಂತ 3: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯ್ಕೆಮಾಡಿ. ನೀವು ವೀಕ್ಷಿಸಲು ಬಯಸುವ ಪಂದ್ಯವನ್ನು ಆಯ್ಕೆಮಾಡಿ.

ಇದನ್ನೂ ಓದಿ | ಡಬ್ಲ್ಯುಪಿಎಲ್ 2ನೇ ಆವೃತ್ತಿಗೆ ದಿನಗಣನೆ; ಪಂದ್ಯ ನಡೆಯುವ ಸ್ಥಳ, ಯಾವಾಗ, ವೇಳಾಪಟ್ಟಿ ಬಗ್ಗೆ ಸಂಪೂರ್ಣ ವಿವರ ಹೀಗಿದೆ

  • ಹಂತ 4: ನಿಮ್ಮ ಮೆಚ್ಚಿನ ಸ್ಟ್ಯಾಂಡ್‌ಗಳನ್ನು ಆಯ್ಕೆಮಾಡಿ. ಇಲ್ಲಿ ನೀವು ಆಸನಗಳನ್ನು ಆಯ್ಕೆ ಮಾಡುವ ಆಯ್ಕೆ ಇಲ್ಲ. ಪಂದ್ಯದ ದಿನ ಮೈದಾನ ಪ್ರವೇಶಿಸಿದ ನಂತರ ನೀವು ಆಯ್ಕೆ ಮಾಡಿದ ಸ್ಟ್ಯಾಂಡ್‌ನಲ್ಲಿ ಖಾಲಿ ಇರುವ ಯಾವುದೇ ಸ್ಥಳದಲ್ಲಿ ಕುಳಿತುಕೊಳ್ಳಬಹುದು.
  • ಹಂತ 5: ನಿಮ್ಮ ಸ್ಟ್ಯಾಂಡ್‌ ಅಂತಿಮಗೊಳಿಸಿದ ನಂತರ, ಪೇಮೆಂಟ್‌‌ ವಿಧಾನ ಆಯ್ಕೆ ಮಾಡಿ. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಯಾವುದೇ ವಿಧಾನದ ಮೂಲಕ ಪಾವತಿ ಮಾಡಬಹುದು.
  • ಹಂತ 6: ಪಾವತಿಯ ನಂತರ ಇಮೇಲ್ ಮೂಲಕ ನಿಮಗೆ ಇ ಟಿಕೆಟ್‌ ಬರುತ್ತದೆ. ಮೈದಾನ ಪ್ರವೇಶದ ವೇಳೆ ಇದನ್ನು ತೋರಿಸಬಹುದು. ಯಾವುದೇ ಭೌತಿಕ ಟಿಕೆಟ್ ಅಗತ್ಯವಿಲ್ಲ.

ಇದನ್ನೂ ಓದಿ | PKL 2024: ಪ್ರೊ ಕಬಡ್ಡಿ ಪ್ಲೇ ಆಫ್​ಗೆ 6 ತಂಡಗಳು ಫಿಕ್ಸ್; ನಾಕೌಟ್​ಗೇರದೆ ಔಟ್ ಆದ ಬೆಂಗಳೂರು ಬುಲ್ಸ್

(This copy first appeared in Hindustan Times Kannada website. To read more like this please logon to kannada.hindustantimes.com)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ