ಕನ್ನಡ ಸುದ್ದಿ  /  Cricket  /  Wpl 2024 Up Warriorz Vs Gujarat Giants Womens Premier League 2024 Match Preview Upw Vs Gg Head To Head Records Jra

WPL 2024: ಅಂಕಪಟ್ಟಿಯ ಕೊನೆಯ ಸ್ಥಾನಿಗಳ ಕಾದಾಟ; ಯುಪಿ ವಿರುದ್ಧ ಮೊದಲ ಗೆಲುವಿಗೆ ಗುಜರಾತ್‌ ಜೈಂಟ್ಸ್‌ ಹುಡುಕಾಟ

ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಗುಜರಾತ್ ಜೈಂಟ್ಸ್ ವಿರುದ್ದ ಆಡಿದ ಎರಡೂ ಪಂದ್ಯಗಳಲ್ಲಿ ಯುಪಿ ಜಯ ಗಳಿಸಿದೆ. ವಿಶೇಷವೆಂದರೆ, ಈ ಎರಡೂ ಪಂದ್ಯಗಳಲ್ಲಿಯೂ ಒಂದು ಎಸೆತ ಬಾಕಿ ಇರುವಂತೆಯೇ ಯುಪಿ ಚೇಸಿಂಗ್‌ ಪೂರ್ಣಗೊಳಿಸಿದೆ. ಇದೀಗ ಅಜೇಯ ಓಟ ಮುಂದುವರೆಸಲು ಅಲಿಸ್ಸಾ ಹೀಲಿ ಸಜ್ಜಾಗಿದೆ. ಆಸ್ಟ್ರೇಲಿಯಾದ ಇಬ್ಬರು ಬಲಿಷ್ಠ ಆಟಗಾರ್ತಿಯರ ತಂಡಗಳು ಪೈಪೋಟಿ ನಡೆಸಲಿವೆ.

ಯುಪಿ ವಿರುದ್ಧ ಮೊದಲ ಗೆಲುವಿಗೆ ಗುಜರಾತ್‌ ಜೈಂಟ್ಸ್‌ ಹುಡುಕಾಟ
ಯುಪಿ ವಿರುದ್ಧ ಮೊದಲ ಗೆಲುವಿಗೆ ಗುಜರಾತ್‌ ಜೈಂಟ್ಸ್‌ ಹುಡುಕಾಟ

ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ (Womens Premier League 2024) ಎಂಟನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ಮತ್ತು ಗುಜರಾತ್ ಜೈಂಟ್ಸ್ (UP Warriorz vs Gujarat Giants) ತಂಡಗಳು ಮುಖಾಮುಖಿಯಾಗುತ್ತಿವೆ. ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಈ ಎರಡು ತಂಡಗಳು, ಟೂರ್ನಿಯಲ್ಲಿ ಜೀವಂತವಾಗಿ ಉಳಿಯಲು ಗೆಲ್ಲಲೇ ಬೇಕಾದ ಅನಿವಾರ್ಯವಿದೆ. ಅಲಿಸ್ಸಾ ಹೀಲಿ ನೇತೃತ್ವದ ಯುಪಿ ತಂಡವು, ಸತತ ಎರಡು ಸೋಲುಗಳ ಬಳಿಕ ಕೊನೆಯ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿದೆ. ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮಾರ್ಚ್ 1ರ ಶುಕ್ರವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಬೆತ್‌ ಮೂನಿ ನೇತೃತ್ವದ ತಂಡವನ್ನು ಎದುರಿಸಲಿದೆ.

ಗುಜರಾತ್ ಜೈಂಟ್ಸ್ ತಂಡವು ಸತತ ಎರಡು ಸೋಲಿನೊಂದಿಗೆ ಗೆಲುವಿಗಾಗಿ ಹಪಹಪಿಸುತ್ತಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್‌ಗಳ ಸೋಲಿನೊಂದಿಗೆ ತಮ್ಮ ಅಭಿಯಾನವನ್ನು ಆರಂಭಿಸಿದ ಜಿಜಿ, ಆ ಬಳಿಕ ಆರ್‌ಸಿಬಿ ವಿರುದ್ಧ ಎಂಟು ವಿಕೆಟ್‌ಗಳಿಂದ ಮುಗ್ಗರಿಸಿತು.

ಮುಖಾಮುಖಿ ದಾಖಲೆ

ಡಬ್ಲ್ಯೂಪಿಎಲ್ 2023ರ ಮೊದಲ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ವಿರುದ್ದದ ಎರಡೂ ಪಂದ್ಯಗಳಲ್ಲಿಯೂ ಯುಪಿ ಮೂರು ವಿಕೆಟ್‌ಗಳಿಂದ ಜಯ ಗಳಿಸಿತ್ತು. ವಿಶೇಷವೆಂದರೆ, ಈ ಎರಡೂ ಪಂದ್ಯಗಳಲ್ಲಿಯೂ ಒಂದು ಎಸೆತ ಬಾಕಿ ಇರುವಂತೆಯೇ ಯುಪಿ ಚೇಸಿಂಗ್‌ ಪೂರ್ಣಗೊಳಿಸಿತ್ತು. ಮತ್ತೊಂದೆಡೆ ಗ್ರೇಸ್ ಹ್ಯಾರಿಸ್ ಎರಡೂ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಚಿನ್ನಸ್ವಾಮಿ ಮೈದಾನದ ಪಿಚ್‌ ವರದಿ

ಪ್ರಸಕ್ತ ಆವೃತ್ತಿಯ ಡಬ್ಲ್ಯೂಪಿಎಲ್‌‌ ಪಂದ್ಯಾವಳಿಯಲ್ಲಿ ಕೇವಲ ಎರಡು ಬಾರಿ ಮಾತ್ರ ಮೊದಲು ಬ್ಯಾಟಿಂಗ್‌ ಮಾಡಿದ ತಂಡಗಳು ಗೆದ್ದಿವೆ. ಉಳಿದ ಐದು ಪಂದ್ಯಗಳಲ್ಲಿ ಚೇಸಿಂಗ್‌ ನಡೆಸಿದ ತಂಡ ಗೆದ್ದಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ಬ್ಯಾಟಿಂಗ್ ಮಾಡಲು ಟ್ರ್ಯಾಕ್ ಹೇಳಿ ಮಾಡಿಸಿದಂತಿರುತ್ತದೆ. ಆದರೆ, 150ಕ್ಕೂ ಅಧಿಕ ಟಾರ್ಗೆಟ್‌ ಇದ್ದರೆ, ಚೇಸಿಂಗ್‌ ಕೂಡಾ ಕಠಿಣವಾಗುವ ಸಾಧ್ಯತೆ ಇದೆ. 150-160 ಟಾರ್ಗೆಟ್‌ ಸಿಕ್ಕರೆ, ಸ್ಪರ್ಧಾತ್ಮಕ ಪೈಪೋಟಿ ನಿರೀಕ್ಷಿಸಬಹುದು.

ಲೈವ್‌ ಸ್ಟ್ರೀಮಿಂಗ್‌ ವಿವರ

ಗುಜರಾತ್‌ ಜೈಂಟ್ಸ್‌ ಮತ್ತು ಯುಪಿ ವಾರಿಯರ್ಸ್‌ ತಂಡಗಳ ನಡುವಿನ ಡಬ್ಲ್ಯೂಪಿಎಲ್‌ ಪಂದ್ಯವನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಪಂದ್ಯವನ್ನು ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದು. ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು. ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು ಇಲ್ಲಿ ನೋಡಬಹುದು.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಗುಜರಾತ್‌ ಜೈಂಟ್ಸ್‌ ಸಂಭಾವ್ಯ ಆಡುವ ಬಳಗ: ಬೆತ್ ಮೂನಿ (ವಿಕೆಟ್‌ ಕೀಪರ್), ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಫೋಬ್ ಲಿಚ್‌ಫೀಲ್ಡ್, ಆಶ್ಲೀಗ್ ಗಾರ್ಡ್ನರ್, ಡಿ ಹೇಮಲತಾ, ಶಬ್ನಿಮ್ ಎಂಡಿ ಶಕಿಲ್, ಸ್ನೇಹ ರಾಣಾ, ಕ್ಯಾಥರಿನ್ ಬ್ರೈಸ್, ತನುಜಾ ಕನ್ವರ್, ಮೇಘನಾ ಸಿಂಗ್.

ಯುಪಿ ವಾರಿಯರ್ಸ್‌ ಸಂಭಾವ್ಯ ಆಡುವ ಬಳಗ: ಅಲಿಸ್ಸಾ ಹೀಲಿ (ನಾಯಕಿ ಮತ್ತು ವಿಕೆಟ್‌ ಕೀಪರ್), ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್, ಪೂನಂ ಖೇಮ್ನಾರ್, ಸೋಫಿ ಎಕ್ಲೆಸ್ಟನ್, ಅಂಜಲಿ ಸರ್ವಾಣಿ, ಗೌಹರ್ ಸುಲ್ತಾನಾ, ರಾಜೇಶ್ವರಿ ಗಾಯಕ್ವಾಡ್.

ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point