ಪ್ರೇಮಿಗಳ ದಿನದಂದು ಡಬ್ಲ್ಯುಪಿಎಲ್ ಆರಂಭ; ಆರ್​ಸಿಬಿ-ಗುಜರಾತ್ ನಡುವೆ ಉದ್ಘಾಟನಾ ಪಂದ್ಯ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಪ್ರೇಮಿಗಳ ದಿನದಂದು ಡಬ್ಲ್ಯುಪಿಎಲ್ ಆರಂಭ; ಆರ್​ಸಿಬಿ-ಗುಜರಾತ್ ನಡುವೆ ಉದ್ಘಾಟನಾ ಪಂದ್ಯ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಪ್ರೇಮಿಗಳ ದಿನದಂದು ಡಬ್ಲ್ಯುಪಿಎಲ್ ಆರಂಭ; ಆರ್​ಸಿಬಿ-ಗುಜರಾತ್ ನಡುವೆ ಉದ್ಘಾಟನಾ ಪಂದ್ಯ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

WPL 2025 Schedule: 3ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ ವೇಳಾಪಟ್ಟಿ ಪ್ರಕಟಗೊಂಡಿದೆ. ಫೆಬ್ರವರಿ 14ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ.

ಪ್ರೇಮಿಗಳ ದಿನದಂದು ಡಬ್ಲ್ಯುಪಿಎಲ್ ಆರಂಭ; ಆರ್​ಸಿಬಿ-ಗುಜರಾತ್ ನಡುವೆ ಉದ್ಘಾಟನಾ ಪಂದ್ಯ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಪ್ರೇಮಿಗಳ ದಿನದಂದು ಡಬ್ಲ್ಯುಪಿಎಲ್ ಆರಂಭ; ಆರ್​ಸಿಬಿ-ಗುಜರಾತ್ ನಡುವೆ ಉದ್ಘಾಟನಾ ಪಂದ್ಯ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

3ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.​ ಫೆಬ್ರವರಿ 14ರಂದು ಅಂದರೆ ಪ್ರೇಮಿಗಳ ದಿನದಂದು ಆರಂಭವಾಗಲಿದ್ದು, ಫೈನಲ್ ಪಂದ್ಯ ಮಾರ್ಚ್​ 15ರಂದು ನಡೆಯಲಿದೆ. ಡಬ್ಲ್ಯುಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕು ನಗರಗಳಲ್ಲಿ ಟೂರ್ನಿ ನಡೆಯಲಿದೆ. ಬರೋಡಾದ ಕೊಟಂಬಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ಜರುಗಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಮೂರನೇ ಆವೃತ್ತಿಯ ಟೂರ್ನಿಯಲ್ಲಿ ವಡೋದರಾ, ಬೆಂಗಳೂರು, ಲಕ್ನೋ ಮತ್ತು ಮುಂಬೈ ಒಟ್ಟು 22 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಎಲಿಮಿನೇಟರ್ ಮತ್ತು ಫೈನಲ್ ಎರಡೂ ನಾಕೌಟ್ ಪಂದ್ಯಗಳಿಗೂ ಮುಂಬೈ ಆತಿಥ್ಯ ವಹಿಸಲಿದೆ.

ವಡೋದರಾದಲ್ಲಿ ನಡೆಯುವ ಪಂದ್ಯಗಳು

14 ಫೆಬ್ರವರಿ 2025: ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು

15 ಫೆಬ್ರವರಿ 2025: ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್

16 ಫೆಬ್ರವರಿ 2025: ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್

17 ಫೆಬ್ರವರಿ 2025: ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು

18 ಫೆಬ್ರವರಿ 2025: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್

19 ಫೆಬ್ರವರಿ 2025: ಯುಪಿ ವಾರಿಯರ್ಸ್ vs ಡೆಲ್ಲಿ ಕ್ಯಾಪಿಟಲ್ಸ್

ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳು

21 ಫೆಬ್ರವರಿ 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್

22 ಫೆಬ್ರವರಿ 2025: ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್

23 ಫೆಬ್ರವರಿ 2025: ಯಾವುದೇ ಪಂದ್ಯಗಳಿಲ್ಲ.

24 ಫೆಬ್ರವರಿ 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್

25 ಫೆಬ್ರವರಿ 2025: ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್

26 ಫೆಬ್ರವರಿ 2025: ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್

27 ಫೆಬ್ರವರಿ 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್

28 ಫೆಬ್ರವರಿ 2025: ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್

1 ಮಾರ್ಚ್ 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್

2 ಮಾರ್ಚ್ 2025: ಯಾವುದೇ ಪಂದ್ಯಗಳಿಲ್ಲ.

ಲಕ್ನೋದಲ್ಲಿ ನಡೆಯುವ ಪಂದ್ಯಗಳು

3 ಮಾರ್ಚ್ 2025: ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್

4 ಮಾರ್ಚ್ 2025: ಯಾವುದೇ ಪಂದ್ಯಗಳಿಲ್ಲ.

5 ಮಾರ್ಚ್ 2025: ಯಾವುದೇ ಪಂದ್ಯಗಳಿಲ್ಲ.

6 ಮಾರ್ಚ್ 2025: ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್

7 ಮಾರ್ಚ್ 2025: ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್

8 ಮಾರ್ಚ್ 2025: ಯುಪಿ ವಾರಿಯರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು

9 ಮಾರ್ಚ್ 2025: ಯಾವುದೇ ಪಂದ್ಯಗಳಿಲ್ಲ.

ಮುಂಬೈನಲ್ಲಿ ನಡೆಯುವ ಪಂದ್ಯಗಳು

10 ಮಾರ್ಚ್ 2025: ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್,

11 ಮಾರ್ಚ್ 2025: ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು

12 ಮಾರ್ಚ್ 2025: ಯಾವುದೇ ಪಂದ್ಯಗಳಿಲ್ಲ.

13 ಮಾರ್ಚ್ 2025: ಎಲಿಮಿನೇಟರ್

14 ಮಾರ್ಚ್ 2025: ಯಾವುದೇ ಪಂದ್ಯಗಳಿಲ್ಲ.

15 ಮಾರ್ಚ್ 2025: ಫೈನಲ್​

Whats_app_banner