ಕನ್ನಡ ಸುದ್ದಿ  /  ಕ್ರಿಕೆಟ್  /  ಪ್ಲೇಆಫ್ ಪ್ರವೇಶಿಸಲು ಆರ್‌ಸಿಬಿ ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು; ನೇರವಾಗಿ ಫೈನಲ್ ಪ್ರವೇಶಿಸಲು ಏನು ಮಾಡಬೇಕು?

ಪ್ಲೇಆಫ್ ಪ್ರವೇಶಿಸಲು ಆರ್‌ಸಿಬಿ ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು; ನೇರವಾಗಿ ಫೈನಲ್ ಪ್ರವೇಶಿಸಲು ಏನು ಮಾಡಬೇಕು?

ಡಬ್ಲ್ಯೂಪಿಎಲ್‌ 2024ರ ಪ್ಲೇಆಫ್ ಖಚಿತಪಡಿಸಿಕೊಳ್ಳಲು ಉಳಿದ ಮೂರು ಪಂದ್ಯಗಳು ರಾಯಲ್ ಚಾಲೆಂಜರ್ಸ್ ಪಾಲಿಗೆ ಮಹತ್ವದ್ದಾಗಿವೆ. ಕಳೆದ ಬಾರಿ ಆರ್‌ಸಿಬಿ, ಲೀಗ್ ಹಂತದಲ್ಲೇ ಟೂರ್ನುಯಿಂದ ಹೊರ ಬಿದ್ದಿತ್ತು. ಆದರೆ ಈ ಬಾರಿ ಪ್ಲೇ ಆಫ್ ಪ್ರವೇಶಿಸಲು ಉತ್ತಮ ಅವಕಾಶವಿದೆ. ಸ್ಮೃತಿ ಮಂಧಾನ ಪಡೆಯ ಪ್ಲೇ ಆಫ್‌ ಲೆಕ್ಕಾಚಾರ ಹೀಗಿದೆ ನೋಡಿ.

ಪ್ಲೇಆಫ್ ಪ್ರವೇಶಿಸಲು ಆರ್‌ಸಿಬಿ ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು
ಪ್ಲೇಆಫ್ ಪ್ರವೇಶಿಸಲು ಆರ್‌ಸಿಬಿ ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು (PTI)

ಎರಡನೇ ಆವೃತ್ತಿಯ ವಿಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ (Womens Premier League 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ (Royal Challengers Bangalore Women) ತಂಡವು ಕಳೆದ ಋತುವಿಗೆ ಹೋಲಿಸಿದರೆ ಉತ್ತಮ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುತ್ತಿದೆ. ಇಲ್ಲಿಯವರೆಗೆ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಎರಡು ಪಂದ್ಯಗಳಲ್ಲಿ ಸೋತಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಟೂರ್ನಿಯ ‌ಆರಂಭಿಕ‌ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ನಂತರದ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ‌ ಸೋಲು ಅನುಭವಿಸಿತ್ತು. ಇದೀಗ ಯುಪಿ ವಾರಿಯರ್ಸ್ ತಂಡವನ್ನು ಮಣಿಸಿ ಜಯದ ಲಯಕ್ಕೆ‌ ಮರಳಿದೆ.‌ ಮಾರ್ಚ್ 7ರಂದು ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರಿ ಅಂತರದ ಗೆಲುವು ಸಾಧಿಸಿದರೆ ಅಗ್ರಸ್ಥಾನ ಪಡೆಯಲು ಸಾಧ್ಯವಾಗುತ್ತದೆ.

ಯುಪಿ ಮತ್ತು ಗುಜರಾತ್ ಎದುರು ನಂತರ ಕ್ಯಾಪಿಟಲ್ಸ್ ಮತ್ತು ಮುಂಬೈ ತಂಡಗಳ ವಿರುದ್ಧ ಸೋತಿತ್ತು. ಇದೀಗ ಮತ್ತೆ ಗೆಲುವಿನ ಲಯಕ್ಕೆ ಮರಳಿರುವ ಬೆಂಗಳೂರು, ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಇದರೊಂದಿಗೆ ಪ್ಲೇ ಆಫ್ ಸನಿಹದಲ್ಲಿದೆ. ಹಾಗಾಗಿ ಪ್ಲೇಆಫ್ ಖಚಿತಪಡಿಸಿಕೊಳ್ಳಲು ಉಳಿದ ಮೂರು ಪಂದ್ಯಗಳು ರಾಯಲ್ ಚಾಲೆಂಜರ್ಸ್ ಪಾಲಿಗೆ ಮಹತ್ವದ್ದಾಗಿವೆ. ಕಳೆದ ಬಾರಿ ಆರ್‌ಸಿಬಿ, ಲೀಗ್ ಹಂತದಲ್ಲೇ ಹೊರ ಬಿದ್ದಿತ್ತು. ಆದರೀಗ ಪ್ಲೇ ಆಫ್ ಪ್ರವೇಶಿಸಲು ಉತ್ತಮ ಅವಕಾಶವನ್ನು ಹೊಂದಿದೆ.

ಟ್ರೆಂಡಿಂಗ್​ ಸುದ್ದಿ

ಆರ್‌ಸಿಬಿ ಪ್ಲೇಆಫ್ ಲೆಕ್ಕಾಚಾರ

ಇಂದಿನ ಪಂದ್ಯ (ಮಾರ್ಚ್ 6) ಸೇರಿ ಮುಂದಿನ‌ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆಲುವು ಸಾಧಿಸಿದರೆ ಅಧಿಕೃತವಾಗಿ ಅರ್ಹತೆ ಪಡೆಯಲಿದೆ. ಅಲ್ಲದೆ ನೇರವಾಗಿ ಫೈನಲ್ ಪ್ರವೇಶಿಸುವ ಅವಕಾಶವೂ ಆರ್‌ಸಿಬಿ ಮುಂದಿದೆ. ಅದಕ್ಕಾಗಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಸೋಲಿಸಲೇಬೇಕು. ಅಲ್ಲದೆ, ಗುಜರಾತ್ ತಂಡವು ಮುಂಬೈ ಮತ್ತು ಡೆಲ್ಲಿಯನ್ನು ಸೋಲಿಸಬೇಕು. ಆಗ ಮಾತ್ರ ಅಗ್ರಸ್ಥಾನಕ್ಕೇರಲಿದೆ.‌

ಇದನ್ನೂ ಓದಿ | WPL 2024: ಆರ್‌ಸಿಬಿ vs ಗುಜರಾತ್‌ ಜೈಂಟ್ಸ್‌ ಎರಡನೇ ಹಣಾಹಣಿ; ಮುಖಾಮುಖಿ ದಾಖಲೆ, ಆಡುವ ಬಳಗ ಹೀಗಿದೆ

ಆರ್‌ಸಿಬಿಗೆ ಉಳಿದ ಪಂದ್ಯಗಳು

  • ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್ - ಮಾರ್ಚ್ 6 (ಅರುಣ್ ಜೇಟ್ಲಿ ಮೈದಾನ, ದೆಹಲಿ)
  • ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ - ಮಾರ್ಚ್ 10 (ಅರುಣ್ ಜೇಟ್ಲಿ ಮೈದಾನ, ದೆಹಲಿ)
  • ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ - ಮಾರ್ಚ್ 12 (ಅರುಣ್ ಜೇಟ್ಲಿ ಮೈದಾನ, ದೆಹಲಿ)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಆಶಾ ಶೋಭನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ನಡಿನ್ ಡಿ ಕ್ಲರ್ಕ್, ಇಂದ್ರಾಣಿ ರಾಯ್, ರೇಣುಕಾ ಸಿಂಗ್, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಜಾರ್ಜಿಯಾ ವೇರ್‌ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಬಿಷ್ತ್, ಶುಭಾ ಸತೀಶ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್, ಸಿಮ್ರಾನ್ ಬಹದ್ದೂರ್.

ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)