ಕ್ರಿಕೆಟ್ ಪ್ರಿಯರೇ ಗಮನಿಸಿ, ಬಂದೇ ಬಿಡ್ತು ಡಬ್ಲ್ಯುಪಿಎಲ್; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ, ತಂಡಗಳು, ನೇರ ಪ್ರಸಾರದ ವಿವರ
WPL 2025 Schedule: ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ ಆರಂಭ ಯಾವಾಗ? ಉದ್ಘಾಟನಾ ಪಂದ್ಯದಲ್ಲಿ ಯಾವ ತಂಡಗಳ ನಡುವೆ ಕಾದಾಟ ನಡೆಯಲಿದೆ ಸೇರಿದಂತೆ ತಂಡಗಳು, ನೇರ ಪ್ರಸಾರ ಸೇರಿದಂತೆ ಸಂಪೂರ್ಣ ವಿವರ ಇಂತಿದೆ.

ಮಹಿಳಾ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯು ಪ್ರೇಮಿಗಳ ದಿನ ಫೆಬ್ರವರಿ 14 ರಿಂದ ಆರಂಭವಾಗಲಿದ್ದು, ಮುಂದಿನ ತಿಂಗಳು ಮಾರ್ಚ್ 15ರಂದು ಫೈನಲ್ ಪಂದ್ಯ ನಡೆಯಲಿದೆ. ಮೊದಲ ಸೀಸನ್ ಅನ್ನು ಮುಂಬೈನಲ್ಲಿ ಆಯೋಜಿಸಲಾಗಿತ್ತು. ನಂತರ ಎರಡನೇ ಆವೃತ್ತಿಯ ಪಂದ್ಯಗಳನ್ನು ಬೆಂಗಳೂರು ಮತ್ತು ದೆಹಲಿಯಲ್ಲಿ ಆಯೋಜನೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ನಾಲ್ಕು ನಗರಗಳಲ್ಲಿ ಟೂರ್ನಿ ನಡೆಯಲಿದೆ.
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಕಾದಾಟ ನಡೆಸುವ ಮೂಲಕ ಅಭಿಯಾನ ಆರಂಭಿಸಲಿವೆ. ಬರೋಡಾದ ಕೊಟಂಬಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. 3ನೇ ಆವೃತ್ತಿಗೆ ವಡೋದರಾ, ಬೆಂಗಳೂರು, ಲಕ್ನೋ, ಮುಂಬೈ ನಗರಗಳು ಫೈನಲ್ ಸೇರಿ 22 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ನಾಕೌಟ್ ಪಂದ್ಯಗಳಿಗೂ ಮುಂಬೈನ ಬ್ರಬೋರ್ನ್ ಆತಿಥ್ಯ ವಹಿಸಲಿದೆ.
ವಡೋದರಾದಲ್ಲಿ ಜರುಗುವ ಪಂದ್ಯಗಳು
14 ಫೆಬ್ರವರಿ 2025: ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
15 ಫೆಬ್ರವರಿ 2025: ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್
16 ಫೆಬ್ರವರಿ 2025: ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್
17 ಫೆಬ್ರವರಿ 2025: ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
18 ಫೆಬ್ರವರಿ 2025: ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್
19 ಫೆಬ್ರವರಿ 2025: ಯುಪಿ ವಾರಿಯರ್ಸ್ vs ಡೆಲ್ಲಿ ಕ್ಯಾಪಿಟಲ್ಸ್
ಬೆಂಗಳೂರಿನಲ್ಲಿ ಜರುಗುವ ಪಂದ್ಯಗಳು
21 ಫೆಬ್ರವರಿ 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್
22 ಫೆಬ್ರವರಿ 2025: ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್
23 ಫೆಬ್ರವರಿ 2025: ಯಾವುದೇ ಪಂದ್ಯಗಳಿಲ್ಲ.
24 ಫೆಬ್ರವರಿ 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್
25 ಫೆಬ್ರವರಿ 2025: ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್
26 ಫೆಬ್ರವರಿ 2025: ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್
27 ಫೆಬ್ರವರಿ 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್
28 ಫೆಬ್ರವರಿ 2025: ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್
1 ಮಾರ್ಚ್ 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್
2 ಮಾರ್ಚ್ 2025: ಯಾವುದೇ ಪಂದ್ಯಗಳಿಲ್ಲ.
ಲಕ್ನೋದಲ್ಲಿ ನಡೆಯುವ ಪಂದ್ಯಗಳು
3 ಮಾರ್ಚ್ 2025: ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್
4 ಮಾರ್ಚ್ 2025: ಯಾವುದೇ ಪಂದ್ಯಗಳಿಲ್ಲ.
5 ಮಾರ್ಚ್ 2025: ಯಾವುದೇ ಪಂದ್ಯಗಳಿಲ್ಲ.
6 ಮಾರ್ಚ್ 2025: ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್
7 ಮಾರ್ಚ್ 2025: ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್
8 ಮಾರ್ಚ್ 2025: ಯುಪಿ ವಾರಿಯರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
9 ಮಾರ್ಚ್ 2025: ಯಾವುದೇ ಪಂದ್ಯಗಳಿಲ್ಲ.
ಮುಂಬೈನಲ್ಲಿ ಜರುಗುವ ಪಂದ್ಯಗಳು
10 ಮಾರ್ಚ್ 2025: ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್,
11 ಮಾರ್ಚ್ 2025: ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
12 ಮಾರ್ಚ್ 2025: ಯಾವುದೇ ಪಂದ್ಯಗಳಿಲ್ಲ.
13 ಮಾರ್ಚ್ 2025: ಎಲಿಮಿನೇಟರ್
14 ಮಾರ್ಚ್ 2025: ಯಾವುದೇ ಪಂದ್ಯಗಳಿಲ್ಲ.
15 ಮಾರ್ಚ್ 2025: ಫೈನಲ್
ಐದು ತಂಡಗಳ ವಿವರ ಹೀಗಿದೆ
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಜೆಮಿಮಾ ರೊಡ್ರಿಗಸ್, ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಸ್ನೇಹ ದೀಪ್ತಿ, ಆಲಿಸ್ ಕ್ಯಾಪ್ಸಿ, ಅನ್ನಾಬೆಲ್ ಸದರ್ಲ್ಯಾಂಡ್, ಜೆಸ್ ಜೊನಾಸ್ಸೆನ್, ಅರುಂಧತಿ ರೆಡ್ಡಿ, ಮರಿಜಾನ್ನೆ ಕಪ್, ಮಿನ್ನು ಮಣಿ, ರಾಧಾ ಯಾದವ್, ಶಿಖಾ ಪಾಂಡೆ, ತಾನಿಯಾ ಭಾಟಿಯಾ, ಟಿಟಾಸ್ ಸಾಧು, ಶ್ರೀ ಚರಣಿ, ನಂದಿನಿ ಕಶ್ಯಪ್, ಸಾರಾ ಬ್ರೈಸ್, ನಿಕಿ ಪ್ರಸಾದ್.
ಗುಜರಾತ್ ಜೈಂಟ್ಸ್ ತಂಡ: ಭಾರತಿ ಫುಲ್ಮಾಲಿ, ಲಾರಾ ವೋಲ್ವಾರ್ಡ್, ಫೋಬೆ ಲಿಚ್‌ಫೀಲ್ಡ್, ಪ್ರಿಯಾ ಮಿಶ್ರಾ, ಆ್ಯಶ್ಲೇ ಗಾರ್ಡ್ನರ್, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಸಯಾಲಿ ಸತ್‌ಘರೆ, ತನುಜಾ ಕನ್ವರ್, ಬೆತ್ ಮೂನಿ (ನಾಯಕಿ), ಶಬ್ನಮ್ ಶಕಿಲ್, ಮನ್ನತ್ ಕಶ್ಯಪ್, ಮೇಘನಾ ಸಿಂಗ್, ಕಾಶ್ವೀ ಗೌತಮ್, ಡಿಯಾಂಡ್ರಾ ಡಾಟಿನ್, ಸಿಮ್ರಾನ್ ಶೇಖ್, ಡೇನಿಯಲ್ ಗಿಬ್ಸನ್, ಪ್ರಕಾಶಿಕಾ ನಾಯಕ್.
ಮುಂಬೈ ಇಂಡಿಯನ್ಸ್ ತಂಡ: ಅಮನ್‌ದೀಪ್ ಕೌರ್, ಅಮನ್‌ಜೋತ್ ಕೌರ್, ಅಮೇಲಿಯಾ ಕೆರ್, ಕ್ಲೋಯ್ ಟ್ರಯಾನ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹೇಲಿ ಮ್ಯಾಥ್ಯೂಸ್, ಜಿಂಟಿಮಣಿ ಕಲಿತಾ, ಸತ್ಯಮೂರ್ತಿ ಕೀರ್ತನಾ, ನಟಾಲಿ ಸ್ಕಿವರ್, ಪೂಜಾ ವಸ್ತ್ರಕರ್, ಸಜೀವನ್ ಸಜನಾ, ಯಾಸ್ತಿಕಾ ಭಾಟಿಯಾ, ಸೈಕಾ ಇಶಾಕ್, ಶಬ್ನಿಮ್ ಇಸ್ಮಾಯಿಲ್, ನಾಡಿನ್ ಡಿ ಕ್ಲರ್ಕ್, ಜಿ ಕಮಲಿನಿ, ಸಂಸ್ಕೃತಿ ಗುಪ್ತಾ, ಅಕ್ಷಿತಾ ಮಹೇಶ್ವರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಡೇನಿಯಲ್ ವ್ಯಾಟ್, ಸಬ್ಭಿನೇನಿ ಮೇಘನಾ, ಸ್ಮೃತಿ ಮಂಧಾನ (ನಾಯಕಿ), ಆಶಾ ಶೋಭನಾ, ಎಲ್ಲಿಸ್ ಪೆರಿ, ಜಾರ್ಜಿಯಾ ವೇರ್‌ಹ್ಯಾಮ್, ಕನಿಕಾ ಅಹುಜಾ, ಶ್ರೇಯಂಕಾ ಪಾಟೀಲ್, ಕಿಮ್ ಗಾರ್ತ್, ರಿಚಾ ಘೋಷ್, ರೇಣುಕಾ ಸಿಂಗ್, ಏಕ್ತಾ ಬಿಶ್ತ್, ಹೀದರ್ ಗ್ರಹಾಂ, ಚಾರ್ಲಿ ಡೀನ್, ಪ್ರಮೀಳಾ ರಾವತ್, ವಿಜೆ ಜೋಶಿತಾ, ರಾಘವಿ ಬಿಸ್ಟ್, ಜಾಗ್ರವಿ ಪವಾರ್.
ಯುಪಿ ವಾರಿಯರ್ಸ್ ತಂಡ: ಕಿರಣ್ ನವಗಿರೆ, ಶ್ವೇತಾ ಸೆಹ್ರಾವತ್, ವೃಂದಾ ದಿನೇಶ್, ಚಾಮರಿ ಅಟ್ಟಪಟ್ಟು, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಪೂನಂ ಖೇಮ್ನಾರ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಕ್‌ಗ್ರಾತ್, ಉಮಾ ಚೆಟ್ರಿ, ಸೈಮಾ ಠಾಕೋರ್, ಗೌಹೆರ್ ಸುಲ್ತಾನ, ಅಂಜಲಿ ಸರ್ವಾನಿ, ರಾಜೇಶ್ವರಿ ಗಾಯಕ್ವಾಡ್, ಆರುಷಿ ಗೋಯೆಲ್, ಕ್ರಾಂತಿ ಗೌಡ್ , ಅಲಾನಾ ಕಿಂಗ್, ಚಿನೆಲ್ಲೆ ಹೆನ್ರಿ.
ನೇರ ಪ್ರಸಾರ ವೀಕ್ಷಿಸುವುದೆಲ್ಲಿ?
ಭಾರತದಲ್ಲಿ ಸ್ಪೋರ್ಟ್ಸ್ 18 HD/SD ಚಾನೆಲ್ಗಳಲ್ಲಿ ಲೈವ್ ಟೆಲಿಕಾಸ್ಟ್ ಇರಲಿದೆ. ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದ್ದು, ಉಚಿತವಾಗಿ ವೀಕ್ಷಿಸಬಹುದು.
