ಡಬ್ಲ್ಯುಟಿಸಿ ಫೈನಲ್​ಗೂ ಮುನ್ನ ಬಹುಮಾನ ಮೊತ್ತ ಪ್ರಕಟ; ವಿಜೇತರಿಗೆ 30+ ಕೋಟಿ ರೂ, ಭಾರತ ತಂಡಕ್ಕೂ ಸಿಗಲಿದೆ ಭರ್ಜರಿ ಹಣ!
ಕನ್ನಡ ಸುದ್ದಿ  /  ಕ್ರಿಕೆಟ್  /  ಡಬ್ಲ್ಯುಟಿಸಿ ಫೈನಲ್​ಗೂ ಮುನ್ನ ಬಹುಮಾನ ಮೊತ್ತ ಪ್ರಕಟ; ವಿಜೇತರಿಗೆ 30+ ಕೋಟಿ ರೂ, ಭಾರತ ತಂಡಕ್ಕೂ ಸಿಗಲಿದೆ ಭರ್ಜರಿ ಹಣ!

ಡಬ್ಲ್ಯುಟಿಸಿ ಫೈನಲ್​ಗೂ ಮುನ್ನ ಬಹುಮಾನ ಮೊತ್ತ ಪ್ರಕಟ; ವಿಜೇತರಿಗೆ 30+ ಕೋಟಿ ರೂ, ಭಾರತ ತಂಡಕ್ಕೂ ಸಿಗಲಿದೆ ಭರ್ಜರಿ ಹಣ!

ಡಬ್ಲ್ಯುಟಿಸಿ 2023-25ರ ಫೈನಲ್ ಪಂದ್ಯಕ್ಕೆ ಐಸಿಸಿ ಒಟ್ಟು 5.76 ಮಿಲಿಯನ್ ಡಾಲರ್ ಅಂದರೆ ಸುಮಾರು 49.29 ಕೋಟಿಗೂ ಹೆಚ್ಚು ಬಹುಮಾನದ ಮೊತ್ತವನ್ನು ಘೋಷಿಸಿದೆ. ವಿಜೇತರಿಗೆ, ರನ್ನರ್​ಅಪ್ ತಂಡಕ್ಕೆ ಸಿಗುವ ಮೊತ್ತವೆಷ್ಟು? ಇಲ್ಲಿದೆ ಮಾಹಿತಿ.

ಡಬ್ಲ್ಯುಟಿಸಿ ಫೈನಲ್​ಗೂ ಮುನ್ನ ಬಹುಮಾನ ಮೊತ್ತ ಪ್ರಕಟ; ವಿಜೇತರಿಗೆ 30+ ಕೋಟಿ ರೂ, ಭಾರತ ತಂಡಕ್ಕೂ ಸಿಗಲಿದೆ ಭರ್ಜರಿ ಹಣ!
ಡಬ್ಲ್ಯುಟಿಸಿ ಫೈನಲ್​ಗೂ ಮುನ್ನ ಬಹುಮಾನ ಮೊತ್ತ ಪ್ರಕಟ; ವಿಜೇತರಿಗೆ 30+ ಕೋಟಿ ರೂ, ಭಾರತ ತಂಡಕ್ಕೂ ಸಿಗಲಿದೆ ಭರ್ಜರಿ ಹಣ! (AFP)

ಜೂನ್ 11ರಿಂದ 15ರ ತನಕ ಲಾರ್ಡ್ಸ್‌ನಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ 2025ರ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ (WTC 2025) ಫೈನಲ್‌ಗೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಬಾಕಿ ಇರುವಾಗ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಈ ಆವೃತ್ತಿಯಲ್ಲಿ ವಿಜೇತರು ಪಡೆಯುವ ಬಹುಮಾನ ಮೊತ್ತ ಪ್ರಕಟಿಸಿದೆ. ಹಾಗಿದ್ದರೆ ವಿಜೇತರ ಜೊತೆಗೆ ರನ್ನರ್​ಅಪ್ ಮತ್ತು ಭಾರತ ತಂಡಕ್ಕೆ ಸಿಗಲಿರುವ ಪ್ರೈಜ್ ಮನಿ ಎಷ್ಟು? ಇಲ್ಲಿದೆ ಮಾಹಿತಿ.

ದುಪ್ಪಟ್ಟು ಬಹುಮಾನ ಮೊತ್ತ

ಡಬ್ಲ್ಯುಟಿಸಿ 2023-25ರ ಆವೃತ್ತಿಗೆ ಒಟ್ಟು ಬಹುಮಾನ ಹಣ 5.76 ಮಿಲಿಯನ್ ಯುಎಸ್ ಡಾಲರ್​ ಆಗಿದ್ದು, ಇದು ಹಿಂದಿನ ಎರಡು ಆವೃತ್ತಿಗಳಿಗಿಂತ ಈಗಾಗಲೇ ಎರಡು ಪಟ್ಟು ಹೆಚ್ಚಾಗಿದೆ. ಅಂದರೆ ಭಾರತದ ರೂಪಾಯಿಯಲ್ಲಿ ಸುಮಾರು 49.29 ಕೋಟಿಗೂ ಹೆಚ್ಚು. ವಿಜೇತ ತಂಡವು 3.6 ಮಿಲಿಯನ್ ಡಾಲರ್ ಅಂದರೆ ಸುಮಾರು 30.79 ಕೋಟಿ ರೂಪಾಯಿ ಪಡೆಯಲಿದೆ. ಇದು 2021 ಮತ್ತು 2023ರ ಆವೃತ್ತಿಗಳಲ್ಲಿ ಪಡೆದ ವಿಜೇತರಿಗಿಂತ ದುಪ್ಪಟ್ಟು.

ಈ ಎರಡು ಆವೃತ್ತಿಗಳಲ್ಲಿ ಪಡೆದ ಬಹುಮಾನ ಮೊತ್ತ 1.6 ಮಿಲಿಯನ್​ ಅಂದರೆ, ಸುಮಾರು 13.69 ಕೋಟಿ ರೂಪಾಯಿ ಆಗಿತ್ತು. ಇನ್ನು ರನ್ನರ್​​ಅಪ್ ತಂಡವು 2.16 ಮಿಲಿಯನ್ ಡಾಲರ್ ಅಂದರೆ ಸುಮಾರು 18.47 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು. ವಿಜೇತ-ರನ್ನರ್​ಅಪ್ ಮಾತ್ರವಲ್ಲ, ಮೂರನೇ ಸ್ಥಾನಿಯಾದ ಭಾರತ ತಂಡಕ್ಕೂ ಭರ್ಜರಿ ಬಹುಮಾನ ದೊರೆಯಲಿದೆ. ಭಾರತಕ್ಕೆ 1.44 ಮಿಲಿಯನ್ ಡಾಲರ್ ಅಂದರೆ ಸುಮಾರು 12.32 ಕೋಟಿ ರೂ ಬಹುಮಾನದ ಹಣ ಸಿಗಲಿದೆ.

ಯಾವ ತಂಡಕ್ಕೆ ಎಷ್ಟು ಸಿಗಲಿದೆ?

  • ವಿಜೇತ- ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾ - 3.6 ಮಿಲಿಯನ್ ಡಾಲರ್ (ಸುಮಾರು 30.79 ಕೋಟಿ ರೂ)
  • ರನ್ನರ್-ಅಪ್ - ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾ - 2.16 ಮಿಲಿಯನ್ ಡಾಲರ್ (ಸುಮಾರು 18.47 ಕೋಟಿ ರೂ)
  • ಮೂರನೇ ಸ್ಥಾನ - ಭಾರತ - 1.44 ಮಿಲಿಯನ್ ಡಾಲರ್ (ಸುಮಾರು 12.32 ಕೋಟಿ ರೂ)
  • 4ನೇ ಸ್ಥಾನ - ನ್ಯೂಜಿಲೆಂಡ್ - 1.20 ಮಿಲಿಯನ್ ಡಾಲರ್ (ಸುಮಾರು 10.26 ಕೋಟಿ ರೂ)
  • ಐದನೇ ಸ್ಥಾನ- ಇಂಗ್ಲೆಂಡ್ - 9.60 ಮಿಲಿಯನ್ ಡಾಲರ್ (ಸುಮಾರು 8.21 ಕೋಟಿ ರೂಪಾಯಿ)
  • ಆರನೇ ಸ್ಥಾನ - ಶ್ರೀಲಂಕಾ - 8.40 ಮಿಲಿಯನ್ ಡಾಲರ್ (ಸುಮಾರು 7.18 ಕೋಟಿ ರೂಪಾಯಿ)

ಇದನ್ನೂ ಓದಿ: ಇಶಾನ್ ಕಿಶನ್ ವನವಾಸ ಕೊನೆಗೊಳ್ಳುವುದೇ? ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ‘ಎ’ ಶೀಘ್ರದಲ್ಲೇ ಪ್ರಕಟ, ಸಂಭಾವ್ಯ ತಂಡ ಹೀಗಿದೆ

  • ಏಳನೇ ಸ್ಥಾನ - ಬಾಂಗ್ಲಾದೇಶ - 7.20 ಮಿಲಿಯನ್ ಡಾಲರ್ (ಸುಮಾರು 6.15 ಕೋಟಿ ರೂ)
  • ಎಂಟನೇ ಸ್ಥಾನ - ವೆಸ್ಟ್ ಇಂಡೀಸ್ - 6 ಮಿಲಿಯನ್ ಡಾಲರ್ (ಸುಮಾರು 5.13 ಕೋಟಿ ರೂಪಾಯಿ)
  • ಒಂಬತ್ತನೇ ಸ್ಥಾನ- ಪಾಕಿಸ್ತಾನ - 4.80 ಮಿಲಿಯನ್ ಡಾಲರ್ (ಸುಮಾರು 4.10 ಕೋಟಿ ರೂಪಾಯಿ)

ನ್ಯೂಜಿಲೆಂಡ್, ಆಸ್ಟ್ರೇಲಿಯಾ ಚಾಂಪಿಯನ್

2019-2021ರ ಆವೃತ್ತಿ ಮತ್ತು 2021-2023ರ ಎರಡೂ ಆವೃತ್ತಿಗಳಲ್ಲಿ ಭಾರತ ತಂಡ ಫೈನಲ್​ಗೆ ಪ್ರವೇಶಿಸಿತ್ತು. ಆದರೆ ಎರಡೂ ಬಾರಿಯೂ ರನ್ನರ್​​ಅಪ್ ಆಯಿತು. ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್ ಚಾಂಪಿಯನ್ ಆಗಿತ್ತು. ಎರಡನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಪ್ರಶಸ್ತಿ ಜಯಿಸಿತ್ತು. ಇದೀಗ ಪ್ರಶಸ್ತಿ ಉಳಿಸಿಕೊಳ್ಳಲು ಆಸೀಸ್ ಪ್ರಯತ್ನಿಸುತ್ತಿದೆ.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.