ಅಡಿಲೇಡ್ ಟೆಸ್ಟ್ನಲ್ಲಿ ಭಾರತ ತಂಡ ಗೆದ್ದರೆ ಅಥವಾ ಸೋತರೆ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ ಬೀರುವ ಪರಿಣಾಮ ಏನು?
WTC Points Table: ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾದ ಗೆಲುವು ಅಥವಾ ಸೋಲು ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.
![ಅಡಿಲೇಡ್ ಟೆಸ್ಟ್ನಲ್ಲಿ ಭಾರತ ತಂಡ ಗೆದ್ದರೆ ಅಥವಾ ಸೋತರೆ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ ಬೀರುವ ಪರಿಣಾಮ ಏನು? ಅಡಿಲೇಡ್ ಟೆಸ್ಟ್ನಲ್ಲಿ ಭಾರತ ತಂಡ ಗೆದ್ದರೆ ಅಥವಾ ಸೋತರೆ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ ಬೀರುವ ಪರಿಣಾಮ ಏನು?](https://images.hindustantimes.com/kannada/img/2024/12/06/550x309/Jasprit-Bumrah-celebrates-the-wicket-of-Travis-Hea_1733184806854_1733468159516.jpg)
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಡಿಲೇಡ್ನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಇದು ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದ್ದು, ಹಗಲು-ರಾತ್ರಿ ನಡೆಯಲಿದೆ. ಅಡಿಲೇಡ್ ಟೆಸ್ಟ್ ಜಯಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ಬಯಸುತ್ತಿರುವ ಭಾರತ ತಂಡ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸುವ ಕನಸನ್ನು ಹೊಂದಿದೆ. ಮತ್ತೊಂದೆಡೆ, ಭಾರತ ಸೋತರೆ, ನಂಬರ್ -1 ಕಿರೀಟವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಡಿಲೇಡ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾದ ಗೆಲುವು ಅಥವಾ ಸೋಲು ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.
ಭಾರತ ತಂಡ ಗೆದ್ದರೆ…
ಪ್ರಸ್ತುತ ಮೂರು ತಂಡಗಳ ನಡುವೆ ಡಬ್ಲ್ಯುಟಿಸಿ ಫೈನಲ್ಗೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ಈ ಪಟ್ಟಿಯಲ್ಲಿ ಭಾರತ ಶೇ 61.11 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ಶೇ 59.26 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಶೇ 57.69 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. ಈ ಮೂರು ತಂಡಗಳು ಫೈನಲ್ ಪ್ರವೇಶಿಸಲು ಪ್ರಬಲ ಪೈಪೋಟಿ ನೀಡುತ್ತಿವೆ. ಅಡಿಲೇಡ್ ಟೆಸ್ಟ್ನಲ್ಲಿ ಭಾರತ ಸೋತರೆ, ಸರಣಿಯಲ್ಲಿ ತನ್ನ ಮುನ್ನಡೆಯನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ನಂಬರ್ 1 ಸ್ಥಾನವನ್ನೂ ಕಳೆದುಕೊಳ್ಳುವುದರ ಜತೆಗೆ ಗೆಲುವಿನ ಶೇಕಡವಾರು 57.29 ಅಂಕಕ್ಕೆ ಕುಸಿಯಲಿದೆ. ಆಸ್ಟ್ರೇಲಿಯಾ ಗೆಲುವಿನ ಶೇಕಡವಾರು 60.71 ಅಂಕಕ್ಕೆ ಏರಿಕೆಯಾಗುವುದರ ಜೊತೆಗೆ ನಂಬರ್ ಒನ್ ಪಟ್ಟಕ್ಕೂ ಏರಲಿದೆ.
ಭಾರತ ತಂಡ ಸೋತರೆ…
ಮತ್ತೊಂದೆಡೆ, ಅಡಿಲೇಡ್ನಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದರೆ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಲಿದೆ. ಹಾಗೆಯೇ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಳ್ಳಲಿದೆ. 2ನೇ ಟೆಸ್ಟ್ನಲ್ಲಿ ಕಾಂಗರೂ ಪಡೆ ಸೋಲಿಸಿದ ಬಳಿಕ ತಮ್ಮ ಖಾತೆಯಲ್ಲಿ 63.54 ಶೇಕಡಾ ಅಂಕ ಪಡೆಯಲಿದೆ. ಅದೇ ಸಮಯದಲ್ಲಿ ಆಸ್ಟ್ರೇಲಿಯಾ ಗೆಲುವಿನ ಶೇಕಡವಾರು 53.57ಕ್ಕೆ ಕುಸಿಯಲಿದೆ. ಮತ್ತೊಂದೆಡೆ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ಜಯಿಸಿದರೆ ಗೆಲುವಿನ ಶೇಕಡವಾರು 63.33 ರೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ನಂ.1 ಸ್ಥಾನ ಪಡೆಯಲಿದೆ. ಒಂದು ವೇಳೆ ಶ್ರೀಲಂಕಾ ಗೆದ್ದರೆ ಶೇಕಡಾ 54.54ಕ್ಕೆ ಕುಸಿದು ಅಗ್ರ -3 ರಲ್ಲಿ ಸ್ಥಾನ ಪಡೆಯಬಹುದು. ಆಗ ದಕ್ಷಿಣ ಆಫ್ರಿಕಾ ಶೇಕಡಾ 53.33 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿಯಬಹುದು.
ಅಡಿಲೇಡ್ನಲ್ಲಿ ಕಳೆದ ಬಾರಿ ಭಾರತ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಅನುಭವಿಸಿತ್ತು. ಇಡೀ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 36 ರನ್ ಗಳಿಸಿತ್ತು. ಪ್ರಸ್ತುತ ಆಡುತ್ತಿರುವ ಪಿಂಕ್ ಬಾಲ್ ಟೆಸ್ಟ್ನಲ್ಲೂ ಭೋಜನ ವಿರಾಮಕ್ಕೆ ಭಾರತ ತಂಡ 4 ವಿಕೆಟ್ಗಳನ್ನು ಕಳೆದುಕೊಂಡಿದೆ. ಯಶಸ್ವಿ ಜೈಸ್ವಾಲ್ ಗೋಲ್ಡನ್ ಡಕ್, ವಿರಾಟ್ ಕೊಹ್ಲಿ 7 ರನ್ ಗಳಿಸಿ ನಿರಾಸೆ ಮೂಡಿಸಿದರು. ಕೆಎಲ್ ರಾಹುಲ್ 37 ರನ್, ಶುಭ್ಮನ್ ಗಿಲ್ 31 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಮಿಚೆಲ್ ಸ್ಟಾರ್ಕ್ ಪ್ರಮುಖ ಮೂರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಭೋಜನ ವಿರಾಮಕ್ಕೆ ಭಾರತ 82-4. ಪ್ರಸ್ತುತ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಕ್ರೀಸ್ನಲ್ಲಿದ್ದಾರೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)