ಕನ್ನಡ ಸುದ್ದಿ  /  Cricket  /  Yashasvi Jaiswal 120 Runs Away From Creating History Becoming Indias Highest Runs For India In Bilateral Test Series Prs

ಸುನಿಲ್ ಗವಾಸ್ಕರ್​​ 54 ವರ್ಷಗಳ ದಾಖಲೆ ಮೇಲೆ ಕಣ್ಣಿಟ್ಟ ಯಶಸ್ವಿ ಜೈಸ್ವಾಲ್; ಇಷ್ಟು ರನ್ ಗಳಿಸಿದರೆ ಸಾಕು

Yashasvi Jaiswal : ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಇನ್ನೂ 120 ರನ್ ಗಳಿಸಿದರೆ ಧರ್ಮಶಾಲಾದಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ. ಇದರೊಂದಿಗೆ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದ್ದಾರೆ.

ಸುನಿಲ್ ಗವಾಸ್ಕರ್​​ 54 ವರ್ಷಗಳ ದಾಖಲೆ ಮೇಲೆ ಕಣ್ಣಿಟ್ಟ ಯಶಸ್ವಿ ಜೈಸ್ವಾಲ್
ಸುನಿಲ್ ಗವಾಸ್ಕರ್​​ 54 ವರ್ಷಗಳ ದಾಖಲೆ ಮೇಲೆ ಕಣ್ಣಿಟ್ಟ ಯಶಸ್ವಿ ಜೈಸ್ವಾಲ್

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಅದ್ಭುತ ಫಾರ್ಮ್​ನಲ್ಲಿದ್ದು, ರನ್ ಮಳೆ ಸುರಿಸುತ್ತಿದ್ದು, 4 ಪಂದ್ಯಗಳಲ್ಲಿ 655 ರನ್ ಗಳಿಸುವ ಮೂಲಕ ಸರಣಿಯ ಗರಿಷ್ಠ ಸ್ಕೋರರ್ ಆಗಿದ್ದಾರೆ. ಜೈಸ್ವಾಲ್ ಟೆಸ್ಟ್‌ನಲ್ಲಿ ಇನ್ನೂ 120 ರನ್ ಗಳಿಸಿದರೆ, ಧರ್ಮಶಾಲಾದಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದು, ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದ್ದಾರೆ.

ಗವಾಸ್ಕರ್​ ದಾಖಲೆ ಮುರಿಯಲು ಬೇಕು 120 ರನ್

ಪ್ರಸ್ತುತ ಸುನಿಲ್ ಗವಾಸ್ಕರ್ (Sunil Gavaskar) ಅವರು ಭಾರತದ ಪರ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. 1970-71ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 774 ರನ್ ಗಳಿಸಿದ್ದ ಗವಾಸ್ಕರ್, 1978ರಲ್ಲಿ ವಿಂಡೀಸ್ ವಿರುದ್ಧವೇ ತವರಿನ ಟೆಸ್ಟ್ ಸರಣಿಯಲ್ಲಿ 4 ಶತಕ ಸೇರಿದಂತೆ 732 ರನ್‌ ಗಳಿಸಿ ಮತ್ತೆ ಅದ್ಭುತ ಪ್ರದರ್ಶನ ನೀಡಿದ್ದರು. ಆ ಮೂಲಕ ಮೊದಲ 2 ಸ್ಥಾನಗಳಲ್ಲಿ ಸನ್ನಿ ಸ್ಥಾನ ಪಡೆದಿದ್ದಾರೆ. ಜೈಸ್ವಾಲ್ 120 ರನ್ ಬಾರಿಸಿದ್ದೇ ಆದರೆ ಗವಾಸ್ಕರ್ ದಾಖಲೆ ಚಿಂದಿ ಉಡಾಯಿಸಲಿದ್ದಾರೆ.

974 ರನ್ ಗಳಿಸಿದ್ದ ಬ್ರಾಡ್ಮನ್

ಇನ್ನು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಕ್ರಮವಾಗಿ 692 ಮತ್ತು 655 ರನ್ ಗಳಿಸಿರುವ ವಿರಾಟ್ ಕೊಹ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಆಕ್ರಮಿಸಿಕೊಂಡಿದ್ದಾರೆ. ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯು ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. 1930ರಲ್ಲಿ ಇಂಗ್ಲೆಂಡ್ ವಿರುದ್ಧ 974 ರನ್ ಗಳಿಸಿದ್ದರು. ಜೈಸ್ವಾಲ್ ಅವರ ಫಾರ್ಮ್ ಗಮನಿಸಿದರೆ, ಎರಡು ಇನ್ನಿಂಗ್ಸ್‌ಗಳಲ್ಲಿ 120 ರನ್ ಗಳಿಸುವುದು ಯುವ ಆಟಗಾರನಿಗೆ ಹೆಚ್ಚು ಕಷ್ಟವಾಗುವುದಿಲ್ಲ.

ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಮಾರ್ಚ್ 7 ರಂದು ನಡೆಯಲಿದೆ. ಭಾರತ ಸರಣಿಯಲ್ಲಿ ಅಜೇಯ 3-1ರ ಮುನ್ನಡೆ ಸಾಧಿಸಿದೆ. ಇದೀಗ ಸರಣಿಯ ಕೊನೆಯ ಪಂದ್ಯದಲ್ಲೂ ಗೆದ್ದು 4-1ರಲ್ಲಿ ಸರಣಿ ಮುನ್ನಡೆ ಪಡೆಯಲು ಭಾರತ ತುದಿಗಾಲಲ್ಲಿ ನಿಂತಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ 28 ರನ್​ಗಳಿಂದ ಸೋತಿದ್ದ ಭಾರತ ಇದೀಗ ಮೂರು ಪಂದ್ಯಗಳಲ್ಲಿ ಗೆದ್ದು ಸರಣಿ ವಶಪಡಿಸಿಕೊಂಡಿದೆ.

ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ರಜತ್ ಪಾಟೀದಾರ್​ ಅವರನ್ನು ಸರಣಿಯ ಐದನೇ ಪಂದ್ಯದಿಂದ ಕೈಬಿಡಲು ಬಿಸಿಸಿಐ ನಿರ್ಧರಿಸಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಕೆಎಲ್ ರಾಹುಲ್ ಸಹ ಈ ಪಂದ್ಯವನ್ನು ಕಳೆದುಕೊಳ್ಳಲು ಸಿದ್ಧರಾಗಿದ್ದಾರೆ. ಗಾಯದ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲು ರಾಹುಲ್ ಲಂಡನ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ರಾಹುಲ್ ತಪ್ಪಿಸಿಕೊಂಡರೆ, ಪಾಟೀದಾರ್ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತೊಂದು ಅವಕಾಶ ಪಡೆದರೂ ಅಚ್ಚರಿ ಇಲ್ಲ. ಅಥವಾ ದೇವದತ್​ ಪಡಿಕ್ಕಲ್​ಗೆ ಅವಕಾಶ ನೀಡಬಹುದು.

IPL_Entry_Point