ಗವಾಸ್ಕರ್‌, ದ್ರಾವಿಡ್‌, ಕೊಹ್ಲಿಯಂಥ ದಿಗ್ಗಜರ ದಾಖಲೆ ಪಟ್ಟಿ ಸೇರಿದ ಯಶಸ್ವಿ ಜೈಸ್ವಾಲ್; ಈ ಸಾಧನೆ ಮಾಡಿದ ಐದನೇ ಭಾರತೀಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಗವಾಸ್ಕರ್‌, ದ್ರಾವಿಡ್‌, ಕೊಹ್ಲಿಯಂಥ ದಿಗ್ಗಜರ ದಾಖಲೆ ಪಟ್ಟಿ ಸೇರಿದ ಯಶಸ್ವಿ ಜೈಸ್ವಾಲ್; ಈ ಸಾಧನೆ ಮಾಡಿದ ಐದನೇ ಭಾರತೀಯ

ಗವಾಸ್ಕರ್‌, ದ್ರಾವಿಡ್‌, ಕೊಹ್ಲಿಯಂಥ ದಿಗ್ಗಜರ ದಾಖಲೆ ಪಟ್ಟಿ ಸೇರಿದ ಯಶಸ್ವಿ ಜೈಸ್ವಾಲ್; ಈ ಸಾಧನೆ ಮಾಡಿದ ಐದನೇ ಭಾರತೀಯ

Yashasvi Jaiswal: ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಈವರೆಗೆ 618 ರನ್ ‌ಕಲೆ ಹಾಕಿದ್ದಾರೆ. ಆ ಮೂಲಕ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ 600ಕ್ಕಿಂತ ಅಧಿಕ ರನ್ ಗಳಿಸಿದ ಭಾರತದ ಕೇವಲ ಐದನೇ ಬ್ಯಾಟರ್ ಎಂಬ ದಾಖಲೆಯನ್ನು ಜೈಸ್ವಾಲ್‌ ನಿರ್ಮಿಸಿದ್ದಾರೆ.

ಗವಾಸ್ಕರ್‌, ದ್ರಾವಿಡ್‌, ಕೊಹ್ಲಿಯಂಥ ದಿಗ್ಗಜರ ದಾಖಲೆ ಪಟ್ಟಿ ಸೇರಿದ ಯಶಸ್ವಿ ಜೈಸ್ವಾಲ್
ಗವಾಸ್ಕರ್‌, ದ್ರಾವಿಡ್‌, ಕೊಹ್ಲಿಯಂಥ ದಿಗ್ಗಜರ ದಾಖಲೆ ಪಟ್ಟಿ ಸೇರಿದ ಯಶಸ್ವಿ ಜೈಸ್ವಾಲ್ (ANI )

ಇಂಗ್ಲೆಂಡ್ ವಿರುದ್ಧದ (India vs England) ಟೆಸ್ಟ್‌ ಸರಣಿಯಲ್ಲಿ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಸತತ ಎರಡು ದ್ವಿಶತಕ ಸೇರಿದಂತೆ ಸರಾಗವಾಗಿ ರನ್ ಗಳಿಸುತ್ತಿದ್ದಾರೆ. ಸತತ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು, ರಾಂಚಿಯ ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿಯೂ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಅಲ್ಲದೆ ಮಹತ್ವದ ದಾಖಲೆಯ ಪುಟದಲ್ಲಿ ತಮ್ಮ ಹೆಸರನ್ನೂ ದಾಖಲಿಸಿದ್ದಾರೆ.

ಆಂಗ್ಲರ ವಿರುದ್ಧ ಎರಡನೇ ದಿನದಾಟದಲ್ಲಿ, ಜೈಸ್ವಾಲ್‌ ಅರ್ಧಶತಕ ಗಳಿಸಿದರು. ಪ್ರಸಕ್ತ ಸರಣಿಯಲ್ಲಿ ಇದು ಅವರ ನಾಲ್ಕನೇ ಅರ್ಧಶತಕ. ಈ ಅರ್ಧಶತಕದೊಂದಿಗೆ ಎಡಗೈ ಆರಂಭಿಕ ಆಟಗಾರ ವಿರಾಟ್ ಕೊಹ್ಲಿ ಮತ್ತು ಸುನಿಲ್ ಗವಾಸ್ಕರ್ ಅವರಂಥ ಘಟಾನುಘಟಿ ಬ್ಯಾಟರ್‌ಗಳು ಇರುವ ಗಣ್ಯ ಸಾಧಕರ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ ಟೀಮ್‌ ಇಂಡಿಯಾದ ಕಾಯಂ ಸದಸ್ಯನಾಗುವತ್ತ ದೃಢ ಹೆಜ್ಜೆ ಇಡುತ್ತಿದ್ದಾರೆ.

ಇದನ್ನೂ ಓದಿ | ‌IND vs ENG: ರೂಟ್‌-ರಾಬಿನ್ಸನ್‌ ಆಕರ್ಷಕ ಜೊತೆಯಾಟ; ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್‌ ಗಳಿಸಿ ಇಂಗ್ಲೆಂಡ್‌ ಆಲೌಟ್

ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಈವರೆಗೆ 618 ರನ್ ‌ಕಲೆ ಹಾಕಿದ್ದಾರೆ. ಆ ಮೂಲಕ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ 600ಕ್ಕಿಂತ ಅಧಿಕ ರನ್ ಗಳಿಸಿದ ಭಾರತದ ಕೇವಲ ಐದನೇ ಬ್ಯಾಟರ್ ಎಂಬ ದಾಖಲೆಯನ್ನು ಜೈಸ್ವಾಲ್‌ ನಿರ್ಮಿಸಿದ್ದಾರೆ. ಈ ಹಿಂದೆ ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ದಿಲೀಪ್ ಸರ್ದೇಸಾಯಿ ಈ ಸಾಧನೆ ಮಾಡಿದ್ದಾರೆ.

ಸುನಿಲ್‌ ಗವಾಸ್ಕರ್‌ ನಂಬರ್‌ ವನ್

ಒಂದೇ ಟೆಸ್ಟ್‌ ಸರಣಿಯಲ್ಲಿ ಅಧಿಕ ರನ್‌ ಕಲೆ ಹಾಕಿದ ದಾಖಲೆ ಸುನಿಲ್ ಗವಾಸ್ಕರ್ ಹೆಸರಲ್ಲಿದೆ. ಈ ಹಿಂದೆ ವೆಸ್ಟ್‌ ಇಂಡೀಸ್‌ ವಿರುದ್ಧ ಅವರು 774 ರನ್‌ ಗಳಿಸಿದ್ದರು. ಎರಡನೇ ಸ್ಥಾನದಲ್ಲಿಯೂ ಸನ್ನಿ ಸ್ಥಾನ ಪಡೆದಿದ್ದು, ಅವರು 732 ರನ್‌ ಕಲೆ ಹಾಕಿದ್ದಾರೆ. ಮೂರನೇ ಸ್ಥಾನದಲ್ಲಿರುವ ವಿರಾಟ್‌ ಕೊಹ್ಲಿ 692 ರನ್‌ ಗಳಿಸಿದ್ದಾರೆ. 618 ರನ್‌ ಕಲೆ ಹಾಕಿರುವ ಯಶಸ್ವಿ ಜೈಸ್ವಾಲ್‌ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಇದನ್ನೂ ಓದಿ | ಬೌಲಿಂಗ್-ಬ್ಯಾಟಿಂಗ್ ನಡೆಸದೆಯೇ ವಿಶ್ವದಾಖಲೆ ನಿರ್ಮಿಸಿದ ಜೇಮ್ಸ್ ಆಂಡರ್ಸನ್; ವಿವಿಯನ್ ರಿಚರ್ಡ್ಸ್ ಹಿಂದಿಕ್ಕಿದ ವೇಗಿ

ಟೆಸ್ಟ್‌ ಸರಣಿಯಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ ಭಾರತದ ಬ್ಯಾಟರ್‌ಗಳು

  • ಸುನಿಲ್ ಗವಾಸ್ಕರ್- 774 ರನ್ (ವೆಸ್ಟ್ ಇಂಡೀಸ್ ವಿರುದ್ಧ)
  • ಸುನಿಲ್ ಗವಾಸ್ಕರ್- 732 ರನ್ (ವೆಸ್ಟ್ ಇಂಡೀಸ್ ವಿರುದ್ಧ)
  • ವಿರಾಟ್ ಕೊಹ್ಲಿ- 692 ರನ್ (ವಿರುದ್ಧ ಆಸ್ಟ್ರೇಲಿಯಾ)
  • ವಿರಾಟ್ ಕೊಹ್ಲಿ - 655 ರನ್ (ವಿರುದ್ಧ ಇಂಗ್ಲೆಂಡ್)
  • ದಿಲೀಪ್ ಸರ್ದೇಸಾಯಿ- 642 ರನ್ (ವೆಸ್ಟ್ ಇಂಡೀಸ್ ವಿರುದ್ಧ)
  • ರಾಹುಲ್ ದ್ರಾವಿಡ್- 619 (ವಿರುದ್ಧ ಆಸ್ಟ್ರೇಲಿಯಾ)
  • ಯಶಸ್ವಿ ಜೈಸ್ವಾಲ್- 618 (ವಿರುದ್ಧ ಇಂಗ್ಲೆಂಡ್)
  • ವಿರಾಟ್ ಕೊಹ್ಲಿ- 610 (ಶ್ರೀಲಂಕಾ ವಿರುದ್ಧ)
  • ರಾಹುಲ್ ದ್ರಾವಿಡ್- 602 (ವಿರುದ್ಧ ಇಂಗ್ಲೆಂಡ್)

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ, ಮೊದಲ ಇನ್ನಿಂಗ್ಸ್‌ನಲ್ಲಿ ಬೆನ್ ಸ್ಟೋಕ್ಸ್ ಬಳಗವು 104.5 ಓವರ್‌ಗಳಲ್ಲಿ 353 ರನ್‌ ಗಳಿಸಿ ಆಲೌಟ್‌ ಆಗಿದೆ. ಇದಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್‌ ಭಾರತವು, ಎರಡನೇ ದಿನದಾಟದ ಅಂತ್ಯಕ್ಕೆ ಕೇವಲ 219 ರನ್‌ ವೇಳೆಗೆ 7 ವಿಕೆಟ್‌ ಕಳೆದುಕೊಂಡಿದೆ. ಭಾರತವು ಇನ್ನೂ 134 ರನ್‌ ಹಿಂದಿದೆ.

Whats_app_banner