ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್​ನಲ್ಲಿ ಅಟ್ಟರ್​ಫ್ಲಾಪ್; ಟಿ20 ವಿಶ್ವಕಪ್​ಗೂ ಮುನ್ನ ಸೆಲೆಕ್ಟರ್ಸ್ ಚಿಂತೆ ಹೆಚ್ಚಿಸಿದ ಭಾರತ ಸಂಭಾವ್ಯ ತಂಡದಲ್ಲಿದ್ದ ಯುವ ಆಟಗಾರ

ಐಪಿಎಲ್​ನಲ್ಲಿ ಅಟ್ಟರ್​ಫ್ಲಾಪ್; ಟಿ20 ವಿಶ್ವಕಪ್​ಗೂ ಮುನ್ನ ಸೆಲೆಕ್ಟರ್ಸ್ ಚಿಂತೆ ಹೆಚ್ಚಿಸಿದ ಭಾರತ ಸಂಭಾವ್ಯ ತಂಡದಲ್ಲಿದ್ದ ಯುವ ಆಟಗಾರ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಯಶಸ್ವಿ ಜೈಸ್ವಾಲ್ ಅವರ ಸ್ಥಾನ ಅಪಾಯದಲ್ಲಿದೆ. ಪ್ರಸ್ತುತ ಐಪಿಎಲ್​ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಜೈಸ್ವಾಲ್​ ಮೇಲೆ ರೋಹಿತ್ ಶರ್ಮಾ, ದ್ರಾವಿಡ್, ಅಗರ್ಕರ್ ತೀವ್ರ ನಿಗಾ ಇಟ್ಟಿದ್ದಾರೆ.

ಟಿ20 ವಿಶ್ವಕಪ್​ಗೂ ಮುನ್ನ ಸೆಲೆಕ್ಟರ್ಸ್ ಚಿಂತೆ ಹೆಚ್ಚಿಸಿದ ಯಶಸ್ವಿ ಜೈಸ್ವಾಲ್
ಟಿ20 ವಿಶ್ವಕಪ್​ಗೂ ಮುನ್ನ ಸೆಲೆಕ್ಟರ್ಸ್ ಚಿಂತೆ ಹೆಚ್ಚಿಸಿದ ಯಶಸ್ವಿ ಜೈಸ್ವಾಲ್

ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್​​​ ಸೆಮಿಫೈನಲ್​ನಲ್ಲಿ (T20 World Cup) ಮುಗ್ಗರಿಸಿದ ಭಾರತ ತಂಡ, ಈ ಬಾರಿ ಟ್ರೋಫಿ ಗೆಲ್ಲುವ ಲೆಕ್ಕಾಚಾರದಲ್ಲಿದೆ. ಅದಕ್ಕಾಗಿ 17ನೇ ಆವೃತ್ತಿಯ ಐಪಿಎಲ್ (IPL 2024) ಮಧ್ಯೆಯೇ ಟಿ20 ವಿಶ್ವಕಪ್​ಗೆ​ ಭಾರತ ತಂಡದ (Team India) ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕೆಲವೊಂದಿಷ್ಟು ಆಟಗಾರರ ಹೆಸರನ್ನು ಫೈನಲ್ ಮಾಡಿರುವ ಬಿಸಿಸಿಐ ಸೆಲೆಕ್ಟರ್​ಗಳು ಅಬ್ಬರಿಸುತ್ತಿರುವ ಯುವ ಆಟಗಾರರ ಮೇಲೆ ಕಣ್ಣಿಡುತ್ತಿದೆ. ತಂಡದಲ್ಲಿ ಹಿರಿಯ ಆಟಗಾರರು ಇರಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆಟಗಾರರ ಆಯ್ಕೆಯ ಮಧ್ಯೆ ಬಿಸಿಸಿಐ ಸೆಲೆಕ್ಟರ್​​ಗಳಿಗೆ ಚಿಂತೆಯೊಂದು ಶುರುವಾಗಿದೆ. ಟಿ20 ವಿಶ್ವಕಪ್​ ಯೋಜನೆಯಲ್ಲಿರುವ ಯಶಸ್ವಿ ಜೈಸ್ವಾಲ್ (Yashasvi Jaiswal) ಕಳಪೆ ಫಾರ್ಮ್​​ ಆಯ್ಕೆದಾರರ ಚಿಂತೆಯನ್ನು ಹೆಚ್ಚಿಸಿದೆ. ಹೌದು, ಭಾರತ ತಂಡದಲ್ಲಿ ಈಗಾಗಲೇ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಜೈಸ್ವಾಲ್ ಅವರ ಫಾರ್ಮ್​, ಐಪಿಎಲ್​ನಲ್ಲಿ ಆಘಾತಕಾರಿಯಾಗಿ ಕುಸಿತ ಕಂಡಿದೆ. ಸೆಲೆಕ್ಟರ್​​ಗಳು ನಿರ್ಮಿಸಿರುವ 15 ಸದಸ್ಯರ ಸಂಭಾವ್ಯ ತಂಡದಲ್ಲಿ ಎಡಗೈ ಆರಂಭಿಕ ಆಟಗಾರನಿಗೂ ಅವಕಾಶ ನೀಡಲಾಗಿತ್ತು.

ಆರಂಭಿಕ ಸ್ಥಾನಕ್ಕೆ ರೋಹಿತ್​ ಶರ್ಮಾ ಮತ್ತು ಶುಭ್ಮನ್ ಗಿಲ್​​ಗೆ ಬ್ಯಾಕಪ್​ ಓಪನರ್​ ಆಗಿ ತಂಡದಲ್ಲಿ ಯಶಸ್ವಿ ಸ್ಥಾನ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಇದರ ನಡುವೆ ಆತನ ಪ್ರದರ್ಶನವು ಕಳವಳ ವ್ಯಕ್ತಪಡಿಸುವಂತೆ ಮಾಡಿದೆ. ಮಾರ್ಚ್​​ನಲ್ಲಿ ಮುಗಿದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಜೈಸ್ವಾಲ್ ಎರಡು ದ್ವಿಶತಕ ಸೇರಿ 712 ರನ್ ಗಳಿಸಿದ್ದರು. ಇದರೊಂದಿಗೆ ವಿರಾಟ್ ಕೊಹ್ಲಿ ದಾಖಲೆ ಮುರಿದು ಸುನಿಲ್ ಗವಾಸ್ಕರ್​ ದಾಖಲೆ ಸರಿಗಟ್ಟಿದ್ದರು.

ಪ್ರಸ್ತುತ ಐಪಿಎಲ್​ನಲ್ಲಿ ಜೈಸ್ವಾಲ್ ಪ್ರದರ್ಶನ

ಕಳೆದ ಐಪಿಎಲ್​ನಲ್ಲಿ ಆರ್ಭಟಿಸಿದ್ದ ಜೈಸ್ವಾಲ್, ರಾಜಸ್ಥಾನ್ ಪರ ಜೈಸ್ವಾಲ್ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. 21 ವರ್ಷ 123 ದಿನಗಳ ವಯಸ್ಸಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಪ್ರಸ್ತುತ ಐಪಿಎಲ್​ನಲ್ಲಿ ಸಿಡಿಯಲು ವಿಫಲರಾಗುತ್ತಿದ್ದಾರೆ. ಇನ್ನಿಂಗ್ಸ್​​​ನಿಂದ ಇನ್ನಿಂಗ್ಸ್​ಗೆ ವೈಫಲ್ಯದಲ್ಲೇ ಪೆವಿಲಿಯನ್ ಸೇರುತ್ತಿದ್ದಾರೆ. ದೊಡ್ಡ ಇನ್ನಿಂಗ್ಸ್ ಕಟ್ಟಲು ಅವರಿಂದ ಸಾಧ್ಯವಾಗುತ್ತಿಲ್ಲ.

ಈವರೆಗೂ ಆಡಿರುವ 5 ಪಂದ್ಯಗಳಲ್ಲಿ 63 ರನ್ ಮಾತ್ರ ಗಳಿಸಿದ್ದಾರೆ. 12.60ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದು, ಅವರ ಗರಿಷ್ಠ ಸ್ಕೋರ್ 24 ಆಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧ 24 ರನ್ ಗಳಿಸಿದ್ದರು. ಸದ್ಯ ಅವರ ಫಾರ್ಮ್​​ ಭಾರತೀಯ ಸೆಲೆಕ್ಟರ್​ಗಳ ಜೊತೆಗೆ ರಾಜ್ಥಾನ್ ರಾಯಲ್ಸ್ ಮ್ಯಾನೇಜ್ಮೆಂಟ್​ಗೂ ದೊಡ್ಡ ತಲೆನೋವಾಗಿದೆ. ಹಾಗಾಗಿ ತಂಡ ಪ್ರಕಟಿಸಲು ಇನ್ನೂ ಸಾಕಷ್ಟು ಸಮಯ ಇರುವ ಕಾರಣ ಆಯ್ಕೆದಾರರ ನಿರ್ಧಾರ ಬದಲಾಗುವುದಕ್ಕೂ ಮುನ್ನ ಅವರ ನಂಬಿಕೆ ಉಳಿಸಿಕೊಳ್ಳಲು ಜೈಸ್ವಾಲ್ ಪ್ರಯತ್ನಿಸಬೇಕು.

ಜೈಸ್ವಾಲ್ ಇದೇ ರೀತಿ ಕಳಪೆ ಫಾರ್ಮ್​ ಮುಂದುವರೆಸಿದರೆ, ಐಪಿಎಲ್​ನಲ್ಲಿ ಅಬ್ಬರಿಸುತ್ತಿರುವ ಮತ್ತೊಬ್ಬ ಎಡಗೈ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ರಿಪ್ಲೇಸ್ ಮಾಡಲಾಗುತ್ತದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಜೈಸ್ವಾಲ್ ಅವರ ಸ್ಥಾನ ಮಾತ್ರ ಗಂಭೀರ ಅಪಾಯದಲ್ಲಿದೆ. ಸದ್ಯ ಮುಖ್ಯಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಆತನ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಜೈಸ್ವಾಲ್ ಭರವಸೆ ಹೆಚ್ಚಿಸಲು ಅದೇ ತಂಡದಲ್ಲಿರುವ ರವಿಚಂದ್ರನ್ ಅಶ್ವಿನ್ ಮೇಲಿದೆ.

IPL_Entry_Point