ವಿರಾಟ್ ಟೆಸ್ಟ್ ಕ್ರಿಕೆಟ್ ಬಿಟ್ಟು ಬಿಬಿಎಲ್ ಆಡಲ್ಲ; ಕೊಹ್ಲಿ ಹೊಗಳಿ ತನ್ನ ದೇಶದವರ ಬೆಂಡೆತ್ತಿದ ಮೆಕ್​ಮಿಲನ್
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಟೆಸ್ಟ್ ಕ್ರಿಕೆಟ್ ಬಿಟ್ಟು ಬಿಬಿಎಲ್ ಆಡಲ್ಲ; ಕೊಹ್ಲಿ ಹೊಗಳಿ ತನ್ನ ದೇಶದವರ ಬೆಂಡೆತ್ತಿದ ಮೆಕ್​ಮಿಲನ್

ವಿರಾಟ್ ಟೆಸ್ಟ್ ಕ್ರಿಕೆಟ್ ಬಿಟ್ಟು ಬಿಬಿಎಲ್ ಆಡಲ್ಲ; ಕೊಹ್ಲಿ ಹೊಗಳಿ ತನ್ನ ದೇಶದವರ ಬೆಂಡೆತ್ತಿದ ಮೆಕ್​ಮಿಲನ್

Brian McMillan on Virat kohli: ಟೆಸ್ಟ್ ಕ್ರಿಕೆಟ್​​​ಎ ಹೇಗೆ ಆದ್ಯತೆ ನೀಡಬೇಕು ಎಂಬುದನ್ನು ವಿವರಿಸಿದ ಬ್ರಿಯಾನ್ ಮೆಕ್​ಮಿಲನ್,​ ವಿರಾಟ್ ಕೊಹ್ಲಿ ಅವನ್ನು ಉದಾಹರಣೆಯಾಗಿ ನೀಡಿದ್ದಾರೆ.

ವಿರಾಟ್ ಕೊಹ್ಲಿ.
ವಿರಾಟ್ ಕೊಹ್ಲಿ. (PTI)

ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ (Virat Kohli) ಟೆಸ್ಟ್​ ಕ್ರಿಕೆಟ್ (Test Cricket) ಮೇಲಿರುವ ಪ್ರೀತಿ ಎಷ್ಟಿದೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ಟೆಸ್ಟ್​ ಕ್ರಿಕೆಟ್ ಆಡುವುದೆಂದರೆ ನನಗೆ ತುಂಬಾ ಇಷ್ಟವೆಂದು ಕೊಹ್ಲಿ ಅನೇಕ ಬಾರಿ ಹೇಳಿದ್ದೂ ಇದೆ. ನಾಯಕನಾಗಿ, ಬ್ಯಾಟ್ಸ್​ಮನ್​ ಆಗಿ ಟೆಸ್ಟ್​ಗೆ ಹೊಸ ರೂಪ ಕೊಟ್ಟ ಕೊಹ್ಲಿ, ಈ ಫಾರ್ಮೆಟ್​ ಉಳುವಿಗೆ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತೀಯ ತಂಡ ಅತ್ಯಂತ ಯಶಸ್ವಿ ತಂಡವಾಗಿ ರೂಪುಗೊಂಡಿತು.

ಅವನತಿಯತ್ತ ಟೆಸ್ಟ್ ಎಂದಿದ್ದ ಸ್ಟೀವ್​ ವಾ

ಮಹತ್ತರವಾದ ಎತ್ತರವನ್ನು ತಲುಪಿದ ಭಾರತೀಯ ಕ್ರಿಕೆಟ್ ತಂಡ, ಸತತ 5 ವರ್ಷಗಳ ಕಾಲ ನಂಬರ್​​ 1 ರ್ಯಾಂಕಿಂಗ್​​ನಲ್ಲಿತ್ತು. ಕೊಹ್ಲಿ ನೇತೃತ್ವದ ಭಾರತ ತಂಡ ಸಂಪೂರ್ಣ ವಿಭಿನ್ನವಾಗಿ ರೂಪುಗೊಂಡಿತು. ಭಾರತದಲ್ಲಿ ಟೆಸ್ಟ್​ ಕ್ರಿಕೆಟ್​ ಪ್ರವರ್ಧಮಾನಕ್ಕೆ ಬಂದಿದ್ದೇ ಕೊಹ್ಲಿ ನೇತೃತ್ವದಲ್ಲಿ. ಆದರೆ ಈಗ ಟಿ20 ಕ್ರಿಕೆಟ್​​ನ ಹಾವಳಿಗಳಿಂದ ಟೆಸ್ಟ್​ ಕ್ರಿಕೆಟ್​ ಅವನತಿಯತ್ತ ಸಾಗುತ್ತಿದೆ ಎಂದು ಈ ಹಿಂದೆ ಆಸ್ಟ್ರೇಲಿಯಾದ ಶ್ರೇಷ್ಠ ಮತ್ತು ಮಾಜಿ ನಾಯಕ ಸ್ಟೀವ್​ ವಾ ಹೇಳಿದ್ದರು.

ಸ್ಟೀವ್​ ವಾಗೆ ಬೆಂಬಲಿಸಿದ ಮೆಕ್​ಮಿಲನ್

ಟೆಸ್ಟ್ ಕ್ರಿಕೆಟ್‌ನ ಸಾವಿನ ಮೊದಲ ಹೆಜ್ಜೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಇದೀಗ ದಕ್ಷಿಣ ಆಫ್ರಿಕಾದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಬ್ರಿಯಾನ್ ಮೆಕ್​ಮಿಲನ್, ಸ್ಟೀವ್ ವಾಗೆ ಬೆಂಬಲ ನೀಡಿದ್ದಾರೆ. ವಿರಾಟ್ ಕೊಹ್ಲಿಗೆ ಟೆಸ್ಟ್ ಮೇಲಿರುವ ಪ್ರೀತಿ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಭವಿಷ್ಯದಲ್ಲಿ ಟೆಸ್ಟ್ ಕ್ರಿಕೆಟ್​​ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ. ಆಟಗಾರರು ಟಿ20 ಕ್ರಿಕೆಟ್​ನತ್ತ ವಾಲುತ್ತಿರುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನ ಎಂದೂ ಸೋಲಿಸುವುದಿಲ್ಲ ಎಂದು 1990ರ ದಶಕದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಮೆಕ್​ಮಿಲನ್, ಆಟಗಾರರಿಗೆ ಟಿ20 ಮುಖ್ಯವಾಗಿದೆ. ಆಧುನಿಕ ಆಟಗಾರರು ಸಾಕಷ್ಟು ಹಣ ಗಳಿಸುವುದರ ಹಿಂದೆ ಓಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಮ್ಮ ಹುಡುಗರಲ್ಲಿ ಒಬ್ಬ (ಹೆನ್ರಿಚ್ ಕ್ಲಾಸೆನ್) ಈಗ ನಿವೃತ್ತರಾಗಿದ್ದಾರೆ. ಟಿ20 ಲೀಗ್​​ಗಳಲ್ಲೇ ಹೆಚ್ಚಿನದಾಗಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ. ದೇಶಗಳು ತಮ್ಮ ಆಟಗಾರರನ್ನು ಮೂಲಭೂತವಾಗಿ ನಡೆಸಬೇಕು. ಜನರು ಸತ್ವದ ಮೇಲೆ ಹೆಸರು ಮಾಡುತ್ತಾರೆ ಎಂದು ಮೆಕ್‌ಮಿಲನ್ ಪಿಟಿಐಗೆ ಜೊತೆ ಮಾತನಾಡುವಾಗ ಅಭಿಪ್ರಾಯಪಟ್ಟಿದ್ದಾರೆ.

'ಕೊಹ್ಲಿಯನ್ನು ನೋಡಿ'

78 ಏಕದಿನ ಮತ್ತು 38 ಟೆಸ್ಟ್‌ ಆಡಿರುವ ಅನುಭವಿ ಮೆಕ್‌ಮಿಲನ್, ಕೊಹ್ಲಿ ಉದಾಹರಣೆ ಉಲ್ಲೇಖಿಸಿದ್ದಾರೆ. ಅವರು ಯಾವಾಗಲೂ ಟೆಸ್ಟ್ ಕ್ರಿಕೆಟ್‌ಗೆ ಹೊರತುಪಡಿಸಿ ಬೇರೆ ಯಾವುದಕ್ಕೂ ಆದ್ಯತೆ ನೀಡುವುದಿಲ್ಲ. ಪ್ರತಿ ಬಾರಿಯೂ ದೊಡ್ಡ ಸರಣಿಯ ಸಮೀಪಿಸುತ್ತಿದ್ದರೆ, ಕೊಹ್ಲಿ ಸ್ವತಃ ವಿಶ್ರಾಂತಿ ಪಡೆದು ಆಟವನ್ನು ಆರಂಭಿಸುತ್ತಾರೆ. ಟೆಸ್ಟ್ ಸವಾಲನ್ನು ಪ್ರಾರಂಭಿಸುವ ಮೊದಲು ಉನ್ನತ ಹಂತಗಳಲ್ಲಿ ತೊಡಗುತ್ತಾರೆ. ಕೊಹ್ಲಿಯನ್ನು ನೋಡಿ ಕಲಿಯುವುದು ಬಹಳಷ್ಟಿದೆ ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಕೊಹ್ಲಿ, ಅಫ್ಘಾನಿಸ್ತಾನ ವಿರುದ್ಧದ ಸರಣಿ ನಂತರ ಜನವರಿ 25ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ಟೆಸ್ಟ್‌ ಸರಣಿಗೆ ಮರಳಲಿದ್ದಾರೆ.

ನೀವು ತಮ್ಮ ದೇಶಕ್ಕೆ ಆದ್ಯತೆ ನೀಡಬೇಕು ಎಂಬುದು ಎಲ್ಲರ ಭಾವನೆ ಎಂದು ನಾನು ಭಾವಿಸುತ್ತೇನೆ. ಭಾರತ ತಂಡ ಅದನ್ನು ಚೆನ್ನಾಗಿ ಮಾಡುತ್ತಿದೆ. ಕೊಹ್ಲಿ ಮತ್ತು ಭಾರತದ ತಂಡದ ಆಟಗಾರರು ಟೆಸ್ಟ್ ಕ್ರಿಕೆಟ್ ಆಡುತ್ತಿರುವುದು ಅದ್ಭುತ ಎನಿಸುತ್ತದೆ. ಕೊಹ್ಲಿ ಟೆಸ್ಟ್​ ಕ್ರಿಕೆಟ್​ ಹೊರತುಪಡಿಸಿ ಬಿಬಿಎಲ್ ಆಡಿರುವುದನ್ನು ನೋಡಿದ್ದೀರಾ? ಬಿಬಿಎಲ್ ಆಡಲು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಅನ್ನು ಬಿಟ್ಟುಬಿಡುವುದನ್ನು ನೀವು ಎಂದಿಗೂ ನೋಡಲು ಸಾಧ್ಯವಿಲ್ಲ. ಅದು ಅವರಿಗೆ ಟೆಸ್ಟ್ ಕ್ರಿಕೆಟ್ ಮೇಲಿರುವ ಬದ್ಧತೆ. ಟೆಸ್ಟ್​ ಕ್ರಿಕೆಟ್​​ ಶಾಶ್ವತವಾಗಿ ಉಳಿಯುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

Whats_app_banner