ನನಗಿಂತ ಕೆಟ್ಟ ಪ್ರದರ್ಶನ ಕೊಟ್ಟಿರೋ ನೀನ್ಯಾವ ಕಿಂಗ್, ನೀನು ನಕಲಿ ಕಿಂಗ್; ಬಾಬರ್ ಅಜಮ್ ವಿರುದ್ಧ ಮಾಜಿ ಪಾಕ್ ಕ್ರಿಕೆಟಿಗ ಕಿಡಿ
Ahmed Shehzad on Babar Azam: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಮ್ ಅವರ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಿದ ಅಹ್ಮದ್ ಶೆಹಜಾದ್, ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡ ಟಿ20 ವಿಶ್ವಕಪ್ನಲ್ಲಿ (T20 World Cup 2024) ನಿರಾಶಾದಾಯಕ ಪ್ರದರ್ಶನ ನೀಡಿದೆ. ಸೂಪರ್ 8ಕ್ಕೆ ಅರ್ಹತೆ ಪಡೆದುಕೊಳ್ಳಲು ಇನ್ನೂ ಸ್ಪರ್ಧೆಯಲ್ಲಿದೆ. ಆದರೆ ತನ್ನ ಭವಿಷ್ಯ ಅಮೆರಿಕ vs ಐರ್ಲೆಂಡ್ ಫಲಿತಾಂಶದ ಮೇಲೆ ನಿರ್ಧಾರವಾಗಿದೆ. ಯುನೈಟೆಡ್ ಸ್ಟೇಟ್ಸ್ ಗೆದ್ದರೆ ಪಾಕ್ ಅಧಿಕೃತವಾಗಿ ಲೀಗ್ನಿಂದಲೇ ಹೊರಬೀಳಲಿದೆ. ಪ್ರಸ್ತುತ ಗುಂಪು ಹಂತದಲ್ಲಿ ಬಾಬರ್ ಪಡೆ ಆಡಿರುವ 3 ಪಂದ್ಯಗಳಲ್ಲಿ 2 ಸೋಲು, 1 ಗೆಲುವು ಸಾಧಿಸಲಿದೆ.
ಅಮೆರಿಕ ಮತ್ತು ಟೀಮ್ ಇಂಡಿಯಾ ವಿರುದ್ಧ ಸೋತಿರುವ ಪಾಕಿಸ್ತಾನ ಕೆನಡಾ ಎದುರು ಮಾತ್ರ ಗೆದ್ದಿದೆ. ಉಳಿದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಕಾದಾಟ ನಡೆಸಲಿದೆ. ಜೂನ್ 14 ರಂದು ಅಮೆರಿಕ ತನ್ನ ಕೊನೆಯ ಲೀಗ್ ಪಂದ್ಯವನ್ನಾಡುತ್ತಿದ್ದು, ಐರ್ಲೆಂಡ್ ಮಣಿಸುವ ಲೆಕ್ಕಾಚಾರದಲ್ಲಿದೆ. ಒಂದು ವೇಳೆ ಅಮೆರಿಕ ಗೆದ್ದರೆ, ಎ ಗುಂಪಿನಲ್ಲಿ ಭಾರತದ ನಂತರ ಎರಡನೇ ತಂಡವಾಗಿ ಸೂಪರ್-8 ಪ್ರವೇಶಿಸಲಿದೆ.
ಒಂದು ವೇಳೆ ಅಮೆರಿಕ ಸೋತರೆ, ಪಾಕ್ ತಂಡಕ್ಕೆ ಲಾಭವಾಗಲಿದೆ. ಬಾಬರ್ ಪಡೆ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಗೆದ್ದರೆ ಸೂಪರ್-8 ಪ್ರವೇಶಿಸುವ ಅವಕಾಶ ಪಡೆಯಲಿದೆ. ಇದರ ಮಧ್ಯೆ ನಾಯಕ ಬಾಬರ್ ಅಜಮ್ ನಾಯಕತ್ವ ಮತ್ತು ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಟೀಕೆ ವ್ಯಕ್ತವಾಗಿದೆ. ಆರಂಭಿಕನಾಗಿ ವಿಫಲವಾದ ಕಾರಣ ಮೂರನೇ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದರು.
ಟಿ20 ವಿಶ್ವಕಪ್ನಲ್ಲಿ ಬಾಬರ್ ಕಳಪೆ ಪ್ರದರ್ಶನದ ನಂತರ ತಮ್ಮದೇ ದೇಶದ ಆಟಗಾರ ಶಹಜಾದ್ ಅಹ್ಮದ್ ಅವರಿಂದ ತೀವ್ರ ವಾಗ್ದಾಳಿಗೆ ಒಳಗಾಗಿದ್ದಾರೆ. ಪಾಕಿಸ್ತಾನದ ಸುದ್ದಿ ಸಂಸ್ಥೆಯೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅಹ್ಮದ್, ಟಿ20 ವಿಶ್ವಕಪ್ನಲ್ಲಿ ಬಾಬರ್ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಬರ್ಗೆ ಹೋಲಿಸಿದರೆ, ನನ್ನ ಸ್ಟ್ರೈಕ್ರೇಟ್ ಮತ್ತು ಸರಾಸರಿ ಅಂಕಿ-ಅಂಶಗಳು ಅದ್ಭುತವಾಗಿವೆ ಎಂದು ಕಿಡಿಕಾರಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಸ್ಟ್ರೈಕ್ರೇಟ್ 104.65 ಮತ್ತು ಸರಾಸರಿ 30 ಇದೆ. ಪವರ್ ಪ್ಲೇನಲ್ಲಿ ನೀವು ಎದುರಿಸಿದ 207 ಎಸೆತಗಳಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ. 8 ವರ್ಷಗಳ ಹಿಂದೆ ನನ್ನ ಸ್ವಂತ ಪ್ರದರ್ಶನದಲ್ಲಿ ನಾನು ಸುಧಾರಿಸಬಹುದಿತ್ತು. ಆದರೆ ಸಾಧ್ಯವಾಗಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ನಿಮ್ಮ ಅಂಕಿಅಂಶಗಳು ನನಗಿಂತಲೂ ಕೆಟ್ಟದಾಗಿವೆ. ನಿನ್ಯಾವ ರಾಜ. ನೀನು ನಕಲಿ ರಾಜ ಎಂದು ಶೆಹಜಾದ್ ಹೇಳಿದ್ದಾರೆ.
'ಪಾಕಿಸ್ತಾನಕ್ಕೆ ಕ್ಷಮೆಯಾಚಿಸಿ'
ಬಾಬರ್ ವಿರುದ್ಧ ವಾಗ್ದಾಳಿ ನಡೆಸುವುದನ್ನು ಮುಂದುವರೆಸಿದ ಶೆಹಜಾದ್, ದೇಶದ ದೇಶೀಯ ರಚನೆಯನ್ನು ಪಾಕ್ ನಾಯಕ ಹಾಳು ಮಾಡಿದ್ದಾರೆ. ಐಸಿಸಿ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಿಸಿಕೊಡಲು ಸಾಧ್ಯವಾಗದಿದ್ದಕ್ಕೆ ದೇಶದ ಕ್ಷಮೆಯಾಚಿಸಬೇಕು ಎಂದಿದ್ದಾರೆ. ಅವರು ಪಾಕಿಸ್ತಾನಕ್ಕೆ ಯಾವುದೇ ಟ್ರೋಫಿಯನ್ನು ಗೆದ್ದುಕೊಡಲು ಸಾಧ್ಯವಾಗಲಿಲ್ಲ. ನೀವು ಇಡೀ ದೇಶೀಯ ಕ್ರಿಕೆಟ್ ರಚನೆಯನ್ನೇ ಹಾಳು ಮಾಡಿದ್ದೀರಿ ಎಂದು ಹೇಳಿದ್ದಾರೆ.
ನೀವು ಏನನ್ನೂ ಮಾಡಲು ಸಾಧ್ಯವಾಗದಿದ್ದರೆ, ನೀವು ಈಗ ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ನನಗೆ ಎಲ್ಲಾ ಬೆಂಬಲವಿದೆ ಎಂದು ಹೇಳಬೇಕು. ಪಿಸಿಬಿ ನನಗೆ ಎಲ್ಲವನ್ನೂ ನೀಡಿತು. ಆದರೆ, ನಾನು ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾನು ಆಯ್ಕೆಯ ಆಟಗಾರರನ್ನು ಪಡೆದಿದ್ದೇನೆ. ಆದರೆ, ನಾನು ಪಾಕಿಸ್ತಾನ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾನು ನಿಜವಾಗಿಯೂ ವಿಷಾದಿಸುತ್ತೇನೆ. ಇದಕ್ಕೆ ನಾನೇ ಜವಾಬ್ದಾರಿ ಎಂದು ಹೇಳಿದ್ದಾರೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
