ಐಪಿಎಲ್ ಹರಾಜಿನಲ್ಲಿ ಹೊಸ ದಾಖಲೆ ಬರೆದ ಯುಜ್ವೇಂದ್ರ ಚಹಲ್; ಇಷ್ಟೊಂದು ಹಣ ಬರುತ್ತೆ ಅಂದುಕೊಂಡಿರಲಿಲ್ಲ ಎಂದ ಸ್ಪಿನ್ನರ್
ಐಪಿಎಲ್ 2025 ಮೆಗಾ ಹರಾಜಿನಲ್ಲಿ 18 ಕೋಟಿ ಬೃಹತ್ ಮೊತ್ತ ಪಡೆದು ಪಂಜಾಬ್ ಕಿಂಗ್ಸ್ ಪಾಲಾದ ಬಳಿಕ ಯುಜ್ವೇಂದ್ರ ಚಹಲ್ ಪ್ರತಿಕ್ರಿಯಿಸಿದ್ದು, ನಾನು ಇಷ್ಟು ಮೊತ್ತ ಪಡೆಯುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ ಸ್ಪಿನ್ನರ್ ಯಜ್ವೇಂದ್ರ ಚಹಲ್ (Yuzvendra Chahal) ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್ 2025 ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಚಹಲ್ ಅವರನ್ನು 18 ಕೋಟಿ ರೂಪಾಯಿಗೆ ಖರೀದಿಸಿತು. ಹರಾಜಿನಲ್ಲಿ ಬಹತ್ ಮೊತ್ತ ಪಡೆದ ಬಳಿಕ ಚಹಲ್ ಪ್ರತಿಕ್ರಿಯಿಸಿದ್ದು, ನಾನು ಇಷ್ಟು ಮೊತ್ತ ಪಡೆಯುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಈ ಬೆಲೆಗೆ ನಾನು ಅರ್ಹರು ಎಂದೂ ಹೇಳಿದ್ದಾರೆ. ಜಿಯೋ ಸಿನಿಮಾ ಜೊತೆಗೆ ಮಾತನಾಡಿದ ಚಹಲ್, ತನಗೆ 12 ರಿಂದ 13 ಕೋಟಿ ರೂಪಾಯಿ ಸಿಗುತ್ತದೆ ಎಂದು ಭಾವಿಸಿದ್ದೆ. ಆದರೆ ಈಗ ನಾನು ತುಂಬಾ ಹಣವನ್ನು ಪಡೆದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದೊಂದು ವಿಶೇಷ ಕ್ಷಣ. ನನ್ನನ್ನು ಪಂಜಾಬ್ ತಂಡಕ್ಕೆ ಖರೀದಿಯಾಗುತ್ತೀರಿ ಎಂದು ನನ್ನ ಬಹಳಷ್ಟು ಸ್ನೇಹಿತರು ಭಾವಿಸಿದ್ದರು ಎಂದು ಹೇಳಿದ ಚಹಲ್, ಕೊನೆಗೆ ಅವರು ಹೇಳಿದಂತೆಯೇ ಆಗಿದೆ ಎಂದಿದ್ದಾರೆ. ಹರಾಜು ಆರಂಭವಾದಾಗ ಮತ್ತು ನನ್ನ ಹೆಸರು ಹರಾಜಿಗೆ ಬಂದಾಗ ತುಂಬಾ ಸ್ವಲ್ಪ ಆತಂಕ ಇತ್ತು. ನಾನು ಈಗ ಹೊಸ ತಂಡಕ್ಕೆ ಹೋಗುತ್ತಿದ್ದೇನೆ. ನಾನು ಇಲ್ಲಿಯವರೆಗೆ ಐಪಿಎಲ್ನಲ್ಲಿ ಪ್ರದರ್ಶನ ನೀಡಿದ ರೀತಿಯನ್ನೇ ಮುಂದುವರಿಸುತ್ತೇನೆ ಎಂದರು. ಪ್ರಸ್ತುತ ಪಂಜಾಬ್ ಸೇರಿರುವ ಆಟಗಾರರೊಂದಿಗಿನ ಬಾಂಧವ್ಯದ ಬಗ್ಗೆಯೂ ಮಾತನಾಡಿದ ಚಹಲ್, ಶ್ರೇಯಸ್ ಅಯ್ಯರ್ ಮತ್ತು ಅರ್ಷ್ದೀಪ್ ಸಿಂಗ್ ಅವರೊಂದಿಗೆ ಉತ್ತಮ ಬಾಂಧವ್ಯವಿದೆ ಎಂದು ಹೇಳಿದ್ದಾರೆ. ಇದಲ್ಲದೆ, ರಿಕಿ ಪಾಂಟಿಂಗ್ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುವ ಅವಕಾಶವಿದೆ ಎಂದರು.
ಅಶ್ವಿನ್ ಒಬ್ಬ ಲೆಜೆಂಡ್
ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಪರ ಆಡಿದ ನಂತರ ದೊಡ್ಡ ಕ್ರೀಡಾಂಗಣದಲ್ಲಿ ಆಡುವ ಭಯ ದೂರವಾಗಿದೆ. ನಾನು ಅಶ್ವಿನ್ ಅವರೊಂದಿಗೆ 3 ವರ್ಷಗಳ ಕಾಲ ಆಡಿದ್ದೇನೆ ಮತ್ತು ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರು ಒಬ್ಬ ದಂತಕಥೆ. ನೀವು ಯಾವುದೇ ತಂಡದಲ್ಲಿದ್ದರೂ ನಿಮಗೆ ಮತ್ತೊಂದು ತುದಿಯಿಂದ ಸ್ಪಿನ್ನರ್ ಬೆಂಬಲ ಬೇಕು. ಅಶ್ವಿನ್ ಹಾಗೆಯೇ ಇದ್ದರು. ಕ್ರಿಕೆಟ್ ಎಂಬುದು ತಂಡದ ಕ್ರೀಡೆಯಾಗಿದೆ. ಇಲ್ಲಿ ವಿಷಯಗಳನ್ನು ಹಂಚಿಕೊಳ್ಳಬೇಕು. ಈ ವೇಳೆ 2ನೇ ಸ್ಪಿನ್ನರ್ ನಿಮಗೆ ಸಹಾಯ ಮಾಡುತ್ತಾರೆ ಎಂದು ಹೇಳಿದ್ದಾರೆ.
ಹೊಸ ಮನೆ, ಕಾರು ಖರೀದಿಸುತ್ತೀರಾ?
ಇಷ್ಟು ಹಣವನ್ನು ಏನು ಮಾಡುತ್ತೀರಿ? ನೀವು ಹೊಸ ಕಾರು ಅಥವಾ ಪೆಂಟ್ ಹೌಸ್ ಖರೀದಿಸುವಿರಾ ಎಂದು ಇದೇ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಚಹಲ್, ಕಾರು ಮತ್ತು ಮನೆ ಈಗಾಗಲೇ ಇರುವ ಕಾರಣ ಅವುಗಳ ಮೇಲೆ ಆಸಕ್ತಿ ಇಲ್ಲ ಎಂದರು.
ಭಾರತೀಯ ಆಟಗಾರರ ದುಬಾರಿ ಮಾರಾಟದ ಬಗ್ಗೆ ಮಾತನಾಡಿದ ಚಹಲ್, ಪ್ರತಿಯೊಬ್ಬರೂ ಈ ಬೆಲೆಗೆ ಅರ್ಹರು. ಕೆಲವೊಮ್ಮೆ ತಂಡಗಳ ಜೇಬಿನಲ್ಲಿ ಹಣ ಇರುವುದಿಲ್ಲ. ಆದಾಗ್ಯೂ, ಅವರು ಮುಖ್ಯ ಹರಾಜಿನಲ್ಲಿ ಇಡೀ ತಂಡವನ್ನು ನಿರ್ಮಿಸುವತ್ತ ಗಮನ ಹರಿಸಬೇಕು. ಮುಂದಿನ 2 ತಿಂಗಳು ನನಗೆ ಬಹಳ ನಿರ್ಣಾಯಕವಾಗಿದೆ. ಈ ಸಮಯದಲ್ಲಿ ನಾನು ನನ್ನ ಆಟವನ್ನು ಸುಧಾರಿಸುವತ್ತ ಗಮನ ಹರಿಸುತ್ತೇನೆ. ನೀವು ಜೂನಿಯರ್ ಆಗಿರಲಿ ಅಥವಾ ಹಿರಿಯರಾಗಿರಲಿ, ನೀವು ಕಲಿಯಲು ಬಹಳಷ್ಟು ಇದೆ ಎಂದು ಹೇಳಿದ್ದಾರೆ.