ಕನ್ನಡ ಸುದ್ದಿ  /  Cricket  /  Yuzvendra Chahal Needs 13 Wickets In Ipl 2024 To Become First Cricketer In History To Take 200 Wickets In The Ipl Prs

ಐಪಿಎಲ್​ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಲು ಯುಜ್ವೇಂದ್ರ ಚಹಲ್​ಗೆ ಬೇಕು ಕೇವಲ 13 ವಿಕೆಟ್​!

Yuzvendra Chahal IPL record: 145 ಐಪಿಎಲ್ ಪಂದ್ಯಗಳಲ್ಲಿ 187 ವಿಕೆಟ್​ ಪಡೆದಿರುವ ರಾಜಸ್ಥಾನ್ ರಾಯಲ್ಸ್ ಸ್ಪಿನ್ನರ್ ಯುಜ್ವೇಂದ್ರ ಚಹಲ್, ಈಗ ಹೊಸ ಇತಿಹಾಸ ನಿರ್ಮಿಸಲು ಮುಂದಾಗಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಲು ಯುಜ್ವೇಂದ್ರ ಚಹಲ್​ಗೆ ಬೇಕು ಕೇವಲ 13 ವಿಕೆಟ್​!
ಐಪಿಎಲ್​ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಲು ಯುಜ್ವೇಂದ್ರ ಚಹಲ್​ಗೆ ಬೇಕು ಕೇವಲ 13 ವಿಕೆಟ್​!

2024ರ ಇಂಡಿಯನ್ ಪ್ರೀಮಿಯರ್ ಲೀಗ್​​ (Indian Premier League) ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಲು ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಲೆಗ್​ಸ್ಪಿನ್ನರ್​ ಯುಜ್ವೇಂದ್ರ ಚಹಲ್‌ (Yuzvendra Chahal) ಸಜ್ಜಾಗಿದ್ದಾರೆ. 16 ವರ್ಷಗಳ ಐಪಿಎಲ್​​ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಎನಿಸಿರುವ ಚಹಲ್, ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿದ್ದಾರೆ. ಈವರೆಗೂ 145 ಐಪಿಎಲ್ ಪಂದ್ಯಗಳಲ್ಲಿ 187 ವಿಕೆಟ್​ ಕಿತ್ತಿರುವ ಯುಜಿ, ಈಗ ಹೊಸ ಇತಿಹಾಸ ನಿರ್ಮಿಸಲು ಮುಂದಾಗಿದ್ದಾರೆ.

ಮುಂಬೈ ಇಂಡಿಯನ್ಸ್ ಪರ ತನ್ನ ಐಪಿಎಲ್ ವೃತ್ತಿಜೀವನ ಆರಂಭಿಸಿದ ಯುಜ್ವೇಂದ್ರ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಭದ್ರವಾಗಿ ನೆಲೆಯೂರಿದರು. ಈಗ ರಾಜಸ್ಥಾನ್ ರಾಯಲ್ಸ್ ತಂಡದಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ಚಹಲ್ ಐಪಿಎಲ್‌ನಲ್ಲಿ 200 ವಿಕೆಟ್​​ಗಳನ್ನು ಪಡೆದ ಮೊದಲ ಬೌಲರ್ ಆಗುವ ಅವಕಾಶ ಹೊಂದಿದ್ದಾರೆ. 33ರ ಹರೆಯದ ಸ್ಪಿನ್ನರ್​ ಈ ಋತುವಿನಲ್ಲಿ 13 ವಿಕೆಟ್ ಪಡೆದರೆ ದೊಡ್ಡ ಮೈಲಿಗಲ್ಲನ್ನು ತಲುಪಲಿದ್ದಾರೆ.

ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಎರಡನೇ ಸ್ಥಾನ ಪಡೆದಿರುವ ಡ್ವೇನ್ ಬ್ರಾವೋ ಅವರಿಗೂ ಈ ಅವಕಾಶ ಇತ್ತು. ಆದರೆ ಅವರು ನಿವೃತ್ತಿ ಹೊಂದಿದ್ದು, ಚೆನ್ನೈ ಸೂಪರ್ ಕಿಂಗ್ಸ್​ ಕೋಚ್​ ಆಗಿ ನೇಮಕಗೊಂಡಿದ್ದಾರೆ. ಸದ್ಯ ಸಕ್ರಿಯ ಬೌಲರ್​ಗಳ ಪೈಕಿ ಪಿಯೂಷ್ ಚಾವ್ಲಾ ಮುಂಬೈ ಇಂಡಿಯನ್ಸ್ ಪರ 21 ವಿಕೆಟ್‌ ಪಡೆದರೆ 200 ವಿಕೆಟ್​ಗಳ ಮೈಲಿಗಲ್ಲು ತಲುಪುವ ಅವಕಾಶವನ್ನು ಹೊಂದಿದ್ದಾರೆ.

ಹಾಗೆಯೇ ಸಕ್ರಿಯ ಆಟಗಾರರಲ್ಲಿ ಅಮಿತ್ ಮಿಶ್ರಾ, ರವಿಚಂದ್ರನ್ ಅಶ್ವಿನ್ ಮತ್ತು ಭುವನೇಶ್ವರ್ ಕುಮಾರ್ ಅವರು ಸಹ 2024ರ ಐಪಿಎಲ್​ನಲ್ಲಿ ವಿಕೆಟ್ ಬೇಟೆಯಾಡಿದರೆ ಶ್ರೀಮಂತ ಲೀಗ್​ನಲ್ಲಿ 200 ವಿಕೆಟ್‌ ಪೂರೈಸುವ ಅವಕಾಶವನ್ನು ತನ್ನದಾಗಿಸಿಕೊಳ್ಳಲಿದ್ದಾರೆ. 2022ರಲ್ಲಿ ಆರ್‌ಆರ್‌ಗೆ ಸೇರಿದ ಚಹಲ್ 2 ಋತುಗಳಲ್ಲಿ 48 ವಿಕೆಟ್‌ ಪಡೆದಿದ್ದಾರೆ. ಭಾರತೀಯ ತಾರೆ ಐಪಿಎಲ್ 2022ರಲ್ಲಿ 27 ವಿಕೆಟ್‌ಗಳ ಅದ್ಭುತ ಪ್ರದರ್ಶನದೊಂದಿಗೆ ಪರ್ಪಲ್ ಕ್ಯಾಪ್ ಗೆದ್ದಿದ್ದರು.

ಭಾರತ ತಂಡದಲ್ಲಿ ಕಾಣಿಸಿಕೊಳ್ಳದ ಚಹಲ್

ಯುಜ್ವೇಂದ್ರ ಚಹಲ್ ಭಾರತ ತಂಡದಲ್ಲಿ ಕಡೆಗಣನೆಗೆ ಒಳಗಾಗಿದ್ದಾರೆ. ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ಬಿಸಿಸಿಐ ಆಟಗಾರರ ವಾರ್ಷಿಕ ಒಪ್ಪಂದದಿಂದಲೂ ಅವರು ಹೊರ ಬಿದ್ದಿದ್ದಾರೆ. ಕುಲ್ದೀಪ್ ಯಾದವ್ ಮತ್ತು ರವಿ ಬಿಷ್ಣೋಯ್ ಅವರಂತೆಯೇ ಉತ್ತಮ ಪ್ರದರ್ಶನದ ನಡುವೆ ಚಹಲ್​ಗೆ ಅವಕಾಶ ನೀಡಲಾಗುತ್ತಿಲ್ಲ. ಐಪಿಎಲ್​ನಲ್ಲಿ ಅಬ್ಬರಿಸಿದರೆ ಅವಕಾಶ ಸಿಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಆಟಗಾರವಿಕೆಟ್‌ಪಂದ್ಯತಂಡಎಕಾನಮಿ
ಯುಜ್ವೇಂದ್ರ ಚಹಲ್187145ಆರ್​​ಆರ್​7.66
ಡ್ವೇನ್ ಬ್ರಾವೋ183161ಸಿಎಸ್​ಕೆ8.38
ಪಿಯೂಷ್ ಚಾವ್ಲಾ179181ಎಂಐ7.90
ಅಮಿತ್ ಮಿಶ್ರಾ173161ಎಲ್​ಎಸ್​ಜಿ7.36
ರವಿಚಂದ್ರನ್ ಅಶ್ವಿನ್171197ಆರ್​​ಆರ್​7.01
ಲಸಿತ್ ಮಾಲಿಂಗ170122ಎಂಐ7.14
ಭುವನೇಶ್ವರ್ ಕುಮಾರ್170160ಎಸ್​ಆರ್​ಹೆಚ್7.39
ಸುನಿಲ್ ನರೈನ್163162ಕೆಕೆಆರ್​​6.73
ರವೀಂದ್ರ ಜಡೇಜಾ152226ಸಿಎಸ್​ಕೆ7.560
ಹರ್ಭಜನ್ ಸಿಂಗ್150163ಕೆಕೆಆರ್7.07

IPL_Entry_Point